ನನ್ನ ಆಟದಲ್ಲಿ ನನ್ನನ್ನೇ ಸೋಲಿಸಿಬಿಟ್ರಿ; ಬೆತ್ತಲಾದ ರಣವೀರ್‌ಗೆ ಪೂನಂ ಪಾಂಡೆ ರಿಯಾಕ್ಷನ್
ರಣ್ವೀರ್ ಸಿಂಗಗ್ ಅವರ ಬೆತ್ತಲೆ ಅವತಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಕೆಲವರು ಈ ಬೆತ್ತಲೆ ಫೋಟೋಶೂಟ್ ಅನ್ನು ಆಕ್ಷೇಪಾರ್ಹವೆಂದು ಖಂಡಿಸಿದರೆ ಇನ್ನು ಕೆಲವರು ಹಾಟ್‌ನೆಸ್‌ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಟ್ ತಾರೆ ಪೂನಂ ಪಾಂಡೆ ಕೂಡ ರಣವೀರ್ ಸಿಂಗ್ ಫೋಟೋಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಬೆತ್ತಲಾಗಿ ಫೋಟೋ ಶೂಟ್ ಮಾಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದ್ದಾರೆ. ರಣವೀರ್ ಸಿಂಗ್ ಬೆತ್ತಲಾಗಿರುವ ಫೋಟೋಗಳು ಎಲ್ಲಾ ಕಡೆ ಹರಿದಾಡುತ್ತಿವೆ. ರಣವೀರ್‌ಗೆ ಏನಾಯ್ತು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ರಣವೀರ್ ಸಿಂಗ್ ಚಿತ್ರ ವಿಚಿತ್ರ ಬಟ್ಟೆಗಳ ಮೂಲಕ ಗಮನ ಸೆಳೆಯುತ್ತಿದ್ದರು. ಬಟ್ಟೆಗಳ ಆಯ್ಕೆ ವಿಚಾರವಾಗಿಯೇ ಸದ್ದು ಮಾಡುತ್ತಿದ್ದು ದೀಪಿಕಾ ಪತಿ ಇದೀಗ ಬೆತ್ತಲಾಗಿರುವುದು ಅಚ್ಚರಿ ಮೂಡಿಸಿದೆ. ಅಂದಹಾಗೆ ರಣವೀರ್ ಸಿಂಗ್ ಬೆತ್ತಲಾಗಿರುವುದು ಮ್ಯಾಗಜಿನ್ ಒಂದರ ಫೋಟೋಶೂಟ್ ನಲ್ಲಿ.
ಟರ್ಕಿ ದೇಶದ ಜನಪ್ರಿಯ ರಗ್‌ನ ನೆಲದ ಮೇಲೆ ರಣವೀರ್ ಸಿಂಗ್ ಬೆತ್ತಲಾಗಿ ಮಲಗಿಕೊಂಡಿದ್ದಾರೆ. ಜನಪ್ರಿಯ ಫ್ಯಾಷನ್ ವಾಚ್‌ಡಾಗ್ ಆಗಿರುವ ಡಯಟ್ ಸಬ್ಯಾ, ರಣವೀರ್‌ನ ಅಮೆರಿಕಾ ನಟ ಬುರ್ಟ್ ರೆನಾಲ್ಡ್‌ಗೆ ಹೊಲಿಸಿದ್ದಾರೆ. 1972ರಲ್ಲಿ ಬುರ್ಟ್ ರೆನಾಲ್ಡ್ ಕಾಸ್ಮೋಪಾಲಿಟನ್ ಮ್ಯಾಗಜಿನ್‌ಗೆ ಇದೇ ರೀತಿ ಪೋಸ್ ಕೊಟ್ಟು ಫೋಟೋಶೂಟ್ ಮಾಡಿಸಿದ್ದರಂತೆ. ಹೀಗಾಗಿ ರಣವೀರ್ ಕೂಡ ಇದೇ ಬೋಲ್ಡ್‌ನೆಸ್ ಫಾಲೋ ಮಾಡುತ್ತಿದ್ದಾರೆ ಎನ್ನಲಾಗಿದೆ.
ರಣ್ವೀರ್ ಸಿಂಗಗ್ ಅವರ ಬೆತ್ತಲೆ ಅವತಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಕೆಲವರು ಈ ಬೆತ್ತಲೆ ಫೋಟೋಶೂಟ್ ಅನ್ನು ಆಕ್ಷೇಪಾರ್ಹವೆಂದು ಖಂಡಿಸಿದರೆ ಇನ್ನು ಕೆಲವರು ಹಾಟ್‌ನೆಸ್‌ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂಡಸ್ಟ್ರಿಯ ಸೆಲೆಬ್ರಿಟಿಗಳು ಕೂಡ ರಣ್ವೀರ್ ಸಿಂಗ್ ಹಾಟ್‌ನೆಸ್‌ಗೆ ಬೋಲ್ಡ್ ಆಗಿದ್ದಾರೆ. ಇದೀಗ ನಟಿ, ಹಾಟ್ ತಾರೆ ಪೂನಂ ಪಾಂಡೆ ಕೂಡ ರಣವೀರ್ ಸಿಂಗ್ ಫೋಟೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಬೋಲ್ಡ್ ಲುಕ್ ಮೂಲಕ ಪಡ್ಡೆಗಳ ನಿದ್ದೆ ಗೆಡಿಸೋ ಪೂನಂ ಪಾಂಡೆ ರಣವೀರ್ ಸಿಂಗ್ ಫೋಟೋ
ಶೇರ್ ಮಾಡಿ 'ನನ್ನ ಸ್ವಂತ ಆಟದಲ್ಲಿ ನನ್ನನ್ನೇ ಸೋಲಿಸಿದ್ದೀರಿ' ಎಂದು ಹೇಳಿದರು.
ರಣವೀರ್ ರೀತಿ ನನ್ನ ಬಾಯ್‌ಫ್ರೆಂಡ್ ಬೆತ್ತಲಾದರೆ ಸಾಯಿಸಿ ಬಿಡುವೆ: ರಾಖಿ ಸಾವಂತ್
ಇನ್ನು ಬಾಲಿವುಡ್‌ನ ಅನೇಕ ಸ್ಟಾರ್ಸ್ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ, ಪರಿಣೀತಿ ಚೋಪ್ರಾ, ಅನುರಾಗ್ ಕಶ್ಯಪ್, ದಿಯಾ ಮಿರ್ಜಾ ಸೇರಿದಂತೆ ಅನೇಕರು ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಡಿಸಿದ್ದಾರೆ.
ನಗ್ನರಾದ ರಣವೀರ್ ಸಿಂಗ್, ಫೋಸ್ ನೋಡಿ ದೀಪಿಕಾ ಗಂಡಂಗೇನಾಯ್ತು ಅಂತಿದ್ದಾರೆ ನೆಟ್ಟಿಗರು!
ಕ್ಯಾಮರಾಗೆ ಬೆತ್ತಲೆಯಾಗಿ ಪೋಸ್ ಕೊಟ್ಟಿರುವ ಬಗ್ಗೆ ಮಾತನಾಡಿದ ರಣವೀರ್ ಸಾವಿರ ಜನರ ಮುಂದೆ ಬೆತ್ತಲೆಯಾಗಿ ನಿಲ್ಲುವ ಸಮಸ್ಯೆ ಇಲ್ಲ ಎಂದು ಹೇಳಿದರು. ಗಲ್ಲಿ ಬಾಯ್ ನಟ ಪೇಪರ್ ಮ್ಯಾಗಜೀನ್‌ಗೆ ಮಾತನಾಡಿ, 'ನಾನು ದೈಹಿಕವಾಗಿ ಬೆತ್ತಲೆಯಾಗಿರುವುದು ತುಂಬಾ ಸುಲಭ, ಆದರೆ ನನ್ನ ಕೆಲವು ಪ್ರದರ್ಶನಗಳಲ್ಲಿ ನಾನು ಬೆತ್ತಲೆಯಾಗಿದ್ದೇನೆ. ನನ್ನ ಬೆತ್ತಲಾದ ಆತ್ಮ ನೋಡಬಹುದು. ಅದು ನಿಜವಾಗಿ ಬೆತ್ತಲೆಯಾಗಿರುವುದು. ನಾನು ಸಾವಿರ ಜನರ ಮುಂದೆ ಬೆತ್ತಲೆಯಾಗಬಲ್ಲೆ' ಎಂದು ಹೇಳಿದರು.
ಇನ್ನು ಸಿನಿಮಾಗಳ ವಿಚಾರಕ್ಕೆ ಬರುವುದಾರೆ ರಣವೀರ್ ಸಿಂಗ್ ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ 83 ಬಯೋಪಿಕ್ ಮೂಲಕ ಅಭಿಮಾನಿಗಳ ಮುಂದೆ ಬಂದ್ದರು. ಸದ್ಯ ಸರ್ಕಸ್ ಮತ್ತು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್‌ಗೆ ಜೋಡಿಯಾಗಿ ಅಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಕರಣ್ ಜೋಹರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಇದಾಗಿದೆ.