Asianet Suvarna News Asianet Suvarna News

ಮೊದಲ ಶೂಟಿಂಗ್‌ನಲ್ಲಿ ಯುದ್ಧಕಾಂಡ ನಟಿ ಪೂನಂ ದಿಲ್ಹೋನ್‌ರನ್ನು ಅಮಿತಾಭ್ ಹೀಗೆ ಬಳಸಿಕೊಂಡ್ರಂತೆ!

ಕನ್ನಡದ ಯುದ್ಧಕಾಂಡದಲ್ಲಿ ನಟಿಸಿರೋ ನಟಿ ಪೂರ್ನ ದಿಲ್ಹೋನ್‌ ಅಮಿತಾಭ್‌ ಜೊತೆಗಿನ ಮೊದಲ ಪಯಣದ ಕುರಿತು ರಿವೀಲ್‌ ಮಾಡಿದ್ದಾರೆ.
 

Poonam Dhillon On Her First Day Of Shoot With Amitabh Bachchan reveals suc
Author
First Published Nov 7, 2023, 2:32 PM IST

ಬಾಲಿವುಡ್‌ನ ಖ್ಯಾತ ನಟಿಯರಲ್ಲಿ ಒಬ್ಬರು ನಟಿ ಪೂರ್ನ ದಿಲ್ಹೋನ್‌. 1989ರಲ್ಲಿ ಬಿಡುಗಡೆಗೊಂಡ ಕನ್ನಡದ ಯುದ್ಧಕಾಂಡದಲ್ಲಿಯೂ ರವಿಚಂದ್ರನ್‌ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ ನಟಿ. ಇವರು ನಟಿಸಿದ್ದು ಒಂದೇ ಕನ್ನಡ ಸಿನಿಮಾ. ಆದರೂ ಕನ್ನಡಿಗರು ಈಕೆಯನ್ನು ಇಂದಿಗೂ ಮರೆತಿಲ್ಲ. ಬಾಲಿವುಡ್‌ನಲ್ಲಿ ಹಲವಾರು ಹಿಟ್‌ ಚಿತ್ರಗಳನ್ನು ಕೊಟ್ಟಿರುವ ನಟಿಗೆ ಈಗ 61 ವರ್ಷ ವಯಸ್ಸು. ಈಗಲೂ ಹಿಂದಿ ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಕಳೆದ ವರ್ಷ  ನೆಟ್‌ಫ್ಲಿಕ್ಸ್‌ನಲ್ಲಿ ತೆರೆ ಕಂಡ ರಿತೇಶ್‌ ದೇಶ್‌ಮುಖ್‌ ಹಾಗೂ ತಮನ್ನಾ ಅಭಿನಯದ 'ಪ್ಲಾನ್‌ ಎ ಪ್ಲಾನ್‌ ಬಿ' ಚಿತ್ರದಲ್ಲಿ ಪೂನಂ ನಟಿಸಿದ್ದರು. ಈಗ ಆಕೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಇವರು ಹಿಂದಿ, ಪಂಜಾಬ್‌, ಮರಾಠಿ, ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಸಿನಿಮಾ ನಟಿಯಾಗಿ ಮಾತ್ರವಲ್ಲ, ಪೂನಂ ರಾಜಕೀಯದಲ್ಲಿ ಕೂಡಾ ಸಕ್ರಿಯರಾಗಿದ್ದಾರೆ. 2004ರಲ್ಲಿ ಪೂನಂ, ಭಾರತೀಯ ಜನತಾ ಪಕ್ಷ ಸೇರಿದರು. 2019ರಲ್ಲಿ ಮುಂಬೈ ಬಿಜೆಪಿ ಘಟಕದ ಉಪಾಧ್ಯಕ್ಷೆಯಾಗಿ ನೇಮಕಗೊಂಡರು. ಇವರು ಸಮಾಜಸೇವೆಯಲ್ಲೂ ಗುರುತಿಸಿಕೊಂಡಿದ್ದು ಡ್ರಗ್ಸ್‌ , ಏಡ್ಸ್, ಕುಟುಂಬ ಯೋಜನೆ ಮತ್ತು ಅಂಗಾಂಗ ದಾನಕ್ಕೆ ಸಬಂಧಿಸಿದಂತೆ ಅನೇಕ ಜಾಗೃತಿ ಕಾರ್ಯಕ್ರಮಗಳಲ್ಲಿ ಪೂನಂ ಭಾಗವಹಿಸಿದ್ದಾರೆ.  

ಅರೆಸ್ಟ್‌ ನಾಟಕವಾಡಿದ ನಟಿ ಉರ್ಫಿ ಜಾವೇದ್‌ಗೆ ಜೈಲು ಫಿಕ್ಸ್‌? ಮಾಡಿದ್ದೇನು, ಆಗಿದ್ದೇನು?

ಇಂತಿಪ್ಪ ಪೂನಂ ಅವರು ತಮ್ಮ ಮೊದಲ ಚಿತ್ರದ ಕುರಿತು ಮಾಹಿತಿ ಶೇರ್‌ ಮಾಡಿಕೊಂಡಿದ್ದಾರೆ. ಅಮಿತಾಭ್ ಬಚ್ಚನ್, ಸಂಜೀವ್ ಕುಮಾರ್, ಶಶಿ ಕಪೂರ್, ರಾಖಿ ಮತ್ತು ಹೇಮಾ ಮಾಲಿನಿ ನಟಿಸಿದ ತ್ರಿಶೂಲ್ ಚಿತ್ರದಲ್ಲಿ ನಟಿಸಿದ್ದರು  ಪೂನಂ ಧಿಲ್ಲೋನ. ಇದು ಅವರ ಮೊದಲ ಚಿತ್ರ. ಇದರವಲ್ಲಿ ಅವರು  ಸಂಜೀವ್ ಕುಮಾರ್ ಅವರ ಮಗಳ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಟ  ಅಮಿತಾಭ್‌ ಬಚ್ಚನ್ ಅವರು ತಮ್ಮನ್ನು ಹೇಗೆ ಬಳಸಿಕೊಂಡರು ಎಂಬುದನ್ನು ನಟಿ ಈಗ ಸ್ಮರಿಸಿದ್ದಾರೆ.  ತಮ್ಮ ಆರಂಭಿಕ ದಿನಗಳಲ್ಲಿ ನಿರ್ದೇಶಕ ಯಶ್ ಚೋಪ್ರಾ ಹೊರತುಪಡಿಸಿ ಯಾರೂ ಇದು ತಮ್ಮ  ವೃತ್ತಿಜೀವನದ ಆರಂಭ ಎಂದು ಗುರುತಿಸಲಿಲ್ಲ ಎಂದರು. ಇದೇ ವೇಳೆ ಅಮಿತಾಭ್ ಬಚ್ಚನ್ ಕುರಿತು ಹೇಳಿದ ನಟಿ, ಅವರೊಂದಿಗೆ ಶೂಟಿಂಗ್‌ನ ಮೊದಲ ದಿನ ನನ್ನನ್ನು ಅವರು  ತೋಳುಗಳಲ್ಲಿ ಸಾಗಿಸಬೇಕಾದ ದೃಶ್ಯವಿತ್ತು. ಮೊದಲ ಚಿತ್ರದಲ್ಲಿಯೇ ಇಂಥ ಖ್ಯಾತ ನಟನೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು ಎಂದ ಪೂನಂ ಅವರು, ಶೂಟಿಂಗ್ ಸಮಯದಲ್ಲಿ ಅಮಿತಾಭ್‌ ಅವರು ನನಗೆ ಸಪೋರ್ಟ್‌ ಮಾಡಿದರು. ನನಗೆ ತುಂಬಾ ಸಪೋರ್ಟ್‌ ಮಾಡಿದರು. ನನ್ನನ್ನು ಆಸರೆಯಂತೆ ನಡೆಸಿಕೊಂಡರು. ಅಂತಹ ಒಳ್ಳೆಯ ವ್ಯಕ್ತಿ ನನ್ನನ್ನು ತಮ್ಮ ತೋಳುಗಳಲ್ಲಿ ಹೊತ್ತುಕೊಂಡಿದ್ದಾನೆ ಎಂದು ಯಾರಿಗೂ ತಿಳಿದಿರಲಿಲ್ಲ. ನನ್ನನ್ನು ಕೈಯಲ್ಲಿ ಹಿಡಿದುಕೊಂಡು ಶೂಟಿಂಗ್‌ಗೆ ಹೋಗುತ್ತಿದ್ದರು. ಅವರು ನನಗೆ ಆಸರೆಯಾಗಿದ್ದರು ಎಂದು ತಿಳಿಸಿದ್ದಾರೆ.
 
ಇನ್ನು ಪೂನಂ ಅವರ ವೈಯಕ್ತಿಕ ಜೀವನದ ಕುರಿತು ಹೇಳುವುದಾದರೆ, ಇವರು,   1988ರಲ್ಲಿ ಪೂನಂ ಧಿಲ್ಲೋನ್‌ ಬಾಲಿವುಡ್‌ ನಿರ್ಮಾಪಕ ಅಶೋಕ್‌ ಥಕಾರಿಯಾ ಕೈ ಹಿಡಿದರು. ಆದರೆ ಈ ಜೋಡಿ 1997ರಲ್ಲಿ ವಿಚ್ಛೇದನ ಪಡೆದು ದೂರಾದರು.  ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳ ಹೆಸರು ಪಲೊಮಾ, ಪುತ್ರನ ಹೆಸರು ಅನ್ಮೋಲ್‌.  ಮದುವೆ ನಂತರ ಸಿನಿಮಾಳಿಂದ ದೂರ ಉಳಿದಿದ್ದ ಪೂನಂ ಪತಿಯೊಂದಿಗೆ ಮನಸ್ತಾಪ ಉಂಟಾದ ನಂತರ ಮತ್ತೆ ಚಿತ್ರರಂಗದಲ್ಲಿ ಸೆಕೆಂಡ್‌ ಇನ್ನಿಂಗ್ಸ್‌ ಅರಂಭಿಸಿದ್ದಾರೆ.  

ರಾಖಿ ಪತಿ ಆದಿಲ್‌ ಜೊತೆ ಶೆರ್ಲಿನ್‌ ಚೋಪ್ರಾ ಮತ್ತೆ ರೊಮ್ಯಾನ್ಸ್‌: ವಿಡಿಯೋ ನೋಡಿ ದಂಗಾದ ಫ್ಯಾನ್ಸ್‌!

Follow Us:
Download App:
  • android
  • ios