ವಿಜಯ್ 65ನೇ ಸಿನಿಮಾಕ್ಕೆ ಪೂಜಾ ನಾಯಕಿ | ವಿಲನ್‌ ಆಗಿ ಕಾಣಿಸಿಕೊಳ್ಳೋದ್ಯಾರು..? 

ಸಿನಿಮಾ ರಂಗವೇ ಕಾಲಿವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಮಾಸ್ಟರ್ ನ ವಿಜಯ್ ಮುಂದಿನ ಸಿನಿಮಾಗೆ ಮೊಹೆಂಜದಾರೋ ನಟಿ ನಾಯಕಿಯಾಗಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೂಜಾ ಬಳಿ ಈಗಾಗಲೇ ಮಾತುಕತೆ ಕೂಡಾ ನಡೆದಿದೆ ಎನ್ನಲಾಗುತ್ತಿದೆ.

ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ರೊಮ್ಯಾಂಟಿಕ್ ಸಿನಿಮಾ ವಿಜಯ್ 65ನೇ ಮೂವಿ. ಪ್ರೊಡಕ್ಷನ್ ಹೌಸ್ ಸನ್ ಪಿಕ್ಚರ್ಸ್ ಸಿನಿಮಾವನ್ನು ಸಣ್ಣ ವಿಡಿಯೋ ಮೂಲಕ ಎನೌನ್ಸ್ ಮಾಡಿದೆ.

ವಿವಾಹಿತ ನಟನ ಮೇಲೆ ಲವ್: ಪತ್ನಿ ಇರಲಿ, ನನ್ನನ್ನು ಇಡ್ಕೊ ಎಂದ ರಾಖಿ

ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಜೊತೆ ಈಗಾಗಲೇ ಮಾತುಕತೆಯಾಗಿದೆ ಎಂಬ ಮಾತು ಕೇಳಿ ಬಂದಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆಯಷ್ಟೆ.

Scroll to load tweet…

ಸಿನಿಮಾದಲ್ಲಿ ವಿಲನ್ ಪಾತ್ರ ಮಾಡೋಕೆ ಅರುಣ್ ವಿಜಯ್ ಅವರ ಜೊತೆಯೂ ಮಾತನಾಡಲಾಗಿದೆ ಎನ್ನಲಾಗುತ್ತಿದೆ. ಇದೀಗ ವಿಜಯ್ ನಟನೆಯ 65ನೇ ಸಿನಿಮಾದ #Thalapathy65 ಈಗ ಟ್ರೆಂಡ್ ಆಗುತ್ತಿದೆ.

Scroll to load tweet…