ಆತ್ಮತೃಪ್ತಿಗಾಗಿ ಪುತ್ರಿ ಪೂಜಾ ದೇಹವನ್ನೇ ಬಳಸಿಕೊಂಡ್ರಾ ಮಹೇಶ್​ ಭಟ್​? ನಟಿ ಹೇಳಿದ್ದೇನು?

ಮಹೇಶ್​ ಭಟ್​ ಅವರು ತಮ್ಮ ಆತ್ಮ ಗೌರವಕ್ಕಾಗಿ ಮಗಳು ಪೂಜಾರ ದೇಹವನ್ನೇ ಬಳಸಿಕೊಂಡಿದ್ರಾ ಎಂದು ನೆಟ್ಟಿಗನೊಬ್ಬ ಪ್ರಶ್ನಿಸಿದ್ದು, ಇದಕ್ಕೆ ಪೂಜಾ ಹೇಳಿದ್ದೇನು? 
 

Pooja Bhatt reacts to  questioned if Mahesh Bhatt used her body to satisfy his ego suc

ನಿರ್ಮಾಪಕ ಹಾಗೂ ನಟಿ ಪೂಜಾ ಭಟ್​ ಅವರ ತಂದೆ ಮಹೇಶ್​ ಭಟ್​ (Mahesh Bhatt) ವಿವಾದಗಳಿಗೆ ಆಗಾಗ್ಗೆ ಸಿಲುಕುತ್ತಲೇ ಇರುತ್ತಾರೆ. ​ಈಚೆಗೆ ಬಿಗ್​ಬಾಸ್​ ಮನೆಯೊಳಕ್ಕೆ ಹೋಗಿದ್ದ ಅವರು ಅಲ್ಲಿಯ ಮಹಿಳಾ ಸ್ಪರ್ಧಿಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎನ್ನುವ ಆರೋಪವೂ ಇದೆ. ಹಾಗೆಂದು ಇದೇ ಮೊದಲಲ್ಲ. ಮಹಿಳೆಯರ ವಿಷಯದಲ್ಲಿ ಈ ಹಿಂದೆಯೂ ಅವರು ಹಲವು ಬಾರಿ ವಿವಾದಗಳಿಗೆ ಗುರಿಯಾಗಿದ್ದರು. ಸಾಲದು ಎನ್ನುವುದಕ್ಕೆ ಖುದ್ದು ಮಗಳು ಪೂಜಾರ ವಿಷಯದಲ್ಲಿಯೂ ಟ್ರೋಲಾಗಿದ್ದು ಇದೆ. ಒಮ್ಮೆ ಅವರು ತಮ್ಮ ಸ್ವಂತ ಮಗಳು ಪೂಜಾ ಭಟ್‌ಳನ್ನು ಮದುವೆಯಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿ ಆಕೆಯೊಂದಿಗೆ ಲಿಪ್‌ ಲಾಕ್ ಮಾಡಿ ಬಾರಿ ಟೀಕೆಗೆ ಗುರಿಯಾಗಿದ್ದರು. ಇದರ  ಫೋಟೋ ಪಬ್ಲಿಷ್‌ ಆದಾಗ  ಕೋಲಾಹಲವೇ ಉಂಟಾಗಿತ್ತು.  ಮಾಧ್ಯಮಗಳೂ ಅವರ ಬಗ್ಗೆ ತುಂಬಾ ಕೀಳಾಗಿ ಪ್ರಕಟಿಸಿತ್ತು.  
 
ಅಷ್ಟಕ್ಕೂ ಇದು ಪ್ರಕಟವಾದದ್ದು ಸ್ಟಾರ್ಡಸ್ಟ್ ಮ್ಯಾಗಜಿನ್‌ನಲ್ಲಿ. ತಂದೆ-ಮಗಳಾಗಿರುವ ಪೂಜಾ ಭಟ್‌ (Pooja Bhatt) –ಮಹೇಶ್‌ ಭಟ್‌ ಪರಸ್ಪರ ಚುಂಬಿಸುವ (Kissing) ಫೋಟೋವನ್ನು ಅಂದು ಮ್ಯಾಗ್‌ ಜಿನ್‌ ಗಾಗಿ ಶೂಟ್‌ ಮಾಡಲಾಗಿತ್ತು. ತಂದೆ ಮಹೇಶ್‌ ಭಟ್ ಮಡಿಲಿನ ಮೇಲೆ ಕೂತುಕೊಂಡು ಪೂಜಾ ಭಟ್‌ ಲಿಪ್‌ ಲಾಕ್‌ ಮಾಡಿರುವ ಫೋಟೋ ಮ್ಯಾಗಜಿನ್‌ ಮುಖಪುಟದಲ್ಲಿ ಹಾಕಲಾಗಿತ್ತು. ಫೋಟೋಗೆ ಅನೇಕರಿಂದ ವಿರೋಧ ವ್ಯಕ್ತವಾಗಿತ್ತು. ತಂದೆ-ಮಗಳ ಅಶ್ಲೀಲ ವರ್ತನೆಯ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ನಿರ್ದೇಶಕ ಮಹೇಶ್‌ ಭಟ್‌ ಪ್ರತಿಕಾಗೋಷ್ಠಿ ನಡೆಸಿ ಇದಕ್ಕೆ ಸ್ಪಷ್ಟನೆ ನೀಡಲು ಮುಂದಾಗಿ, 'ಪೂಜಾ ನನ್ನ ಮಗಳಲ್ಲದಿದ್ದರೆ ನಾನು ಅವಳನ್ನು ಮದುವೆಯಾಗುತ್ತಿದ್ದೆ' ಎಂದು ಹೇಳಿದ್ದು ವಿವಾದವನ್ನು ಮತ್ತಷ್ಟು ಹೆಚ್ಚಿಸಿತ್ತು. 

ಮೈ ಮರೆತು ತಂದೆಗೇ ಲಿಪ್‌ ಲಾಕ್‌ ಮಾಡಿದ್ದ ನಟಿ, ಪೋಷಕರ ಮೇಲೆಯೇ ಲೈಂಗಿಕಾಸಕ್ತಿ, ಏನಿದು ಈಡಿಪಸ್ ಕಾಂಪ್ಲೆಕ್ಸ್?

ಇದೀಗ ಮಹೇಶ್​ ಭಟ್​ ಅವರ ಮಗಳು ಪೂಜಾ ಅವರಿಗೆ ಇದೇ ಪ್ರಶ್ನೆಯನ್ನು ಕೇಳಿ ಆ ವಿಷಯವನ್ನು ಕೆದಕಲಾಗಿದೆ. ಬಾಲಿವುಡ್​ ನಟಿ ಪರ್ವೀನ್​ ಬಾಬಿ ಅವರು ನಗ್ನರಾಗಿ ಕತ್ತಲಲ್ಲಿ ತಮ್ಮ ಹಿಂದೆ ಓಡಿ ಬರುತ್ತಿದ್ದ ವಿಷಯವನ್ನು ನಿಮ್ಮ ತಂದೆ ಪದೇ ಪದೇ ಹೇಳುತ್ತಿರುತ್ತಾರೆ. ಈ ಹಿಂದೆ ನೀವು ಕೂಡ ಅವರ ಜೊತೆ ಲಿಪ್​ಲಾಕ್​ ಮಾಡಿ ಸುದ್ದಿಯಾಗಿದ್ದೀರಿ. ನಟಿಯರು ತಮ್ಮ ಆತ್ಮತೃಪ್ತಿಗಾಗಿ ನನ್ನ ಹಿಂದೆ ಬರುತ್ತಾರೆ ಎಂದು ಮಹೇಶ್​ ಭಟ್​ ಅವರು ಹೇಳುತ್ತಿರುತ್ತಾರೆ. ಯಾವಾಗಲಾರದೂ ಅವರು ಆತ್ಮ ತೃಪ್ತಿಗಾಗಿ ನಿಮ್ಮ ದೇಹವನ್ನು ಬಳಸಿಕೊಂಡಿದ್ದಾರಾ ಎನ್ನುವ ಪ್ರಶ್ನೆಯೊಂದನ್ನು ನೆಟ್ಟಿಗನೊಬ್ಬ ಪೂಜಾ ಭಟ್​ ಅವರ ಎದುರಿಗೆ ಇಟ್ಟಿದ್ದಾರೆ. ಇದಕ್ಕೆ ಇನ್ನೋರ್ವ ಕಮೆಂಟಿಗ ರಿಪ್ಲೈ ಮಾಡಿದ್ದರು,  ಎಂತಹ ವಿಪರ್ಯಾಸ! ಅಯ್ಯೋ ದೇವರೇ. ಜನರು ತಮ್ಮ ಅಹಂ, ಶಕ್ತಿಗಳನ್ನು ಮೆಚ್ಚಿಸಲು ಯಾರೊಬ್ಬರ ಮುಗ್ಧ ಭಾವನೆಗಳನ್ನು ಬಳಸಬಹುದು. ತದನಂತರ ತಮ್ಮನ್ನು ತಾವು ದೇವರ ಮಕ್ಕಳು ಎಂದು ಕರೆದುಕೊಳ್ಳುತ್ತಾ ಮುಕ್ತವಾಗಿ ಓಡಾಡುತ್ತಿರುತ್ತಾರೆ ಎಂದಿದ್ದರು.
 
ಈ ಪ್ರಶ್ನೆಗೆ ಪೂಜಾ ಭಟ್​ ತುಂಬಾ ನೊಂದುಕೊಂಡು,  'ದೇವರು ನಿಮಗೆ ಒಳ್ಳೆಯದನ್ನು ಮಾಡಲಿ. ನೀವು ಉಗುಳುವ ಕೆಟ್ಟ ದ್ವೇಷದಿಂದ ಕಾಪಾಡಲಿ. ಒಳ್ಳೆಯದಾಗಲಿ' ಎಂದು ಹೇಳಿದ್ದಾರೆ. ಮತ್ತೆ ಈ ಬಗ್ಗೆ ಅವರು ಹೆಚ್ಚಿಗೆ ಏನೂ ಬರೆಯಲಿಲ್ಲ. ಈ ರೀತಿ ಪ್ರಶ್ನೆ ಕೇಳಿದವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡು ಕ್ಲಾಸ್​ ತೆಗೆದುಕೊಳ್ಳುತ್ತಿದ್ದಾರೆ. ತಂದೆ-ಮಗಳ ಬಗ್ಗೆ ಈ ರೀತಿ ಮಾತನಾಡಿರುವುದು ಅಸಭ್ಯದ ಪರಮಾವಧಿ ಎಂದು ಬೈಯುತ್ತಿದ್ದಾರೆ. ಇನ್ನು ಕೆಲವರು ಇಂಥ ಪ್ರಶ್ನೆ ಎದುರಿಸಿರುವ ಪೂಜಾ ಅವರಿಗೆ ಸಮಾಧಾನ ನುಡಿಗಳನ್ನೂ ಆಡುತ್ತಿದ್ದಾರೆ. ನಿಮ್ಮ ಪರವಾಗಿ ನಾವಿದ್ದೇವೆ ಎನ್ನುತ್ತಿದ್ದಾರೆ.

ಪೋರ್ನ್​ ಸ್ಟಾರ್ ಸನ್ನಿ ಲಿಯೋನ್​ಗಾಗಿ ಅಪ್ಪನನ್ನು ಬಿಗ್​ಬಾಸ್​ ಮನೆಗೆ ಕಳುಹಿಸಿದ್ದಂತೆ ನಟಿ ಪೂಜಾ ಭಟ್​!
 

Latest Videos
Follow Us:
Download App:
  • android
  • ios