ಪೋರ್ನ್​ ಸ್ಟಾರ್ ಸನ್ನಿ ಲಿಯೋನ್​ಗಾಗಿ ಅಪ್ಪನನ್ನು ಬಿಗ್​ಬಾಸ್​ ಮನೆಗೆ ಕಳುಹಿಸಿದ್ದಂತೆ ನಟಿ ಪೂಜಾ ಭಟ್​!

ನೀಲಿ ತಾರೆಯಾಗಿದ್ದ ಸನ್ನಿ ಲಿಯೋನ್​ ಅವರನ್ನು ಭೇಟಿಯಾಗುವುದಕ್ಕಾಗಿಯೇ ತಾವು ತಮ್ಮ ತಂದೆ ಮಹೇಶ್​ ಭಟ್​ ಅವರನ್ನು ಬಿಗ್​ಬಾಸ್​  ಮನೆಯೊಳಕ್ಕೆ ಕಳಹಿಸಿರುವುದಾಗಿ ನಟಿ ಪೂಜಾ ಭಟ್​ ಹೇಳಿದ್ದಾರೆ. 
 

Pooja reveals Mahesh entered BB 5 to convince Sunny Leone for Jism 2 suc

ನಟಿಯರಾದ ಪೂಜಾ ಭಟ್​, ಆಲಿಯಾ ಭಟ್​ ತಂದೆಯೂ ಆಗಿರುವ, ಬಾಲಿವುಡ್​ನ ಖ್ಯಾತ  ನಿರ್ದೇಶಕ ಮಹೇಶ್ ಭಟ್ (Mahesh Bhatt) ಅವರು ಸದಾ ಒಂದಲ್ಲಾ ಒಂದು ವಿವಾದ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಚಿತ್ರ ನಿರ್ಮಾಪಕ ಮಹೇಶ್ ಭಟ್ ಹಿಂದಿ ಚಿತ್ರರಂಗಕ್ಕೆ ಅನೇಕ ಹಿಟ್‌ ಸಿನಿಮಾಗಳನ್ನು ಕೊಟ್ಟಿದ್ದಾರೆ. ಅವರ ಸಿನಿಮಾಗಳು ಎಷ್ಟು ಫೇಮಸ್‌ ಆಗಿದ್ಯೋ, ಅವರ ಮಾತುಗಳು ಅಷ್ಟೇ ವಿವಾದದಿಂದ ಕೂಡಿರುತ್ತದೆ.  ಈಗ ಮಹೇಶ್​ ಭಟ್ ಬಿಗ್​ಬಾಸ್​ನ ಓಟಿಟಿ-2ಲ್ಲಿ ಸದ್ದು ಮಾಡುತ್ತಿದ್ದಾರೆ. ಈ ವಾರ ಕೌಟುಂಬಿಕ ರೌಂಡ್​ ಆಗಿದ್ದು, ಮಗಳು ಪೂಜಾ ಭಟ್​ ಜೊತೆ ಅಪ್ಪ ಮಹೇಶ್​ ಭಟ್​ ಕೂಡ ಕಾಣಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಇವರು,  ತಮ್ಮ ಮಗಳಿನ ವಯಸ್ಸಿನ ಒಬ್ಬಳಿಗೆ ಕಿಸ್​ ಮಾಡಿದ್ದು, ಭಾರಿ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಇನ್ನೋರ್ವ ಸ್ಪರ್ಧಿ ಮನಿಶಾ ರಾಣಿ ಕೈ ಅನ್ನು ಹಿಡಿದುಕೊಂಡು ಕುಳಿತಿದ್ದಾರೆ. ಬಳಿಕ ಅವರ ಕೈಗೆ ಮುತ್ತಿಟ್ಟಿದ್ದು, ಬಹಳ ವಿವಾದಕ್ಕೆ ಕಾರಣವಾಗಿದೆ, ಇದರ ವಿಡಿಯೋ ಸಕತ್​ ವೈರಲ್​ ಆಗುತ್ತಿತ್ತು. ಮಹೇಶ್​ ಭಟ್​ರನ್ನು ಟ್ರೋಲ್​ ಕೂಡ ಮಾಡುತ್ತಿದ್ದಾರೆ.  

ಆದರೆ ಇದೀಗ, ಇದರ ಮಧ್ಯೆಯೇ ಮಗಳು, ನಟಿ ಪೂಜಾ ಭಟ್​ ​ (Mahesh Bhatt) ಅಪ್ಪನ ಕುರಿತು ಕುತೂಹಲದ ವಿಷಯವನ್ನು ಶೇರ್​ ಮಾಡಿಕೊಂಡಿದ್ದಾರೆ. ಅದೇನೆಂದರೆ ಹಿಂದೊಮ್ಮೆ ಬಿಗ್​ಬಾಸ್​ ಮನೆಯಲ್ಲಿ ಮಾಜಿ ಪೋರ್ನ್​ ತಾರೆ ಸನ್ನಿ ಲಿಯೋನ್​ ಅವರ ಬಳಿ ಮಾತನಾಡಲು ತಾವು ಅಪ್ಪ ಮಹೇಶ್​ ಭಟ್​ರನ್ನು ಬಿಗ್​ಬಾಸ್​ ಮನೆಯೊಳಕ್ಕೆ ಕಳಿಸಿದ್ದ ವಿಷಯ ಶೇರ್​ ಮಾಡಿಕೊಂಡಿದ್ದಾರೆ. ಹೌದು! ಈಗ ಓಟಿಟಿಯಲ್ಲಿ ಮಹೇಶ್​ ಭಟ್​ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದರೆ, ಇದಕ್ಕೂ ಮುನ್ನ 2011ರಲ್ಲಿ ಬಿಗ್ ಬಾಸ್ 5ನಲ್ಲಿಯೂ ಇವರು ಸ್ಪರ್ಧಿಸಿದ್ದರು. ಅದರಲ್ಲಿ ಸನ್ನಿ ಲಿಯೋನ್​ ಭಾಗವಹಿಸಿದ್ದರು. ಅವರನ್ನು ಭೇಟಿಯಾಗುವುದಕ್ಕಾಗಿಯೇ ಅಪ್ಪನನ್ನು ಅಲ್ಲಿಗೆ ತಾವು ಕಳುಹಿಸಿದ್ದ ಬಗ್ಗೆ ಪೂಜಾ ಭಟ್​ ಬಹಿರಂಗಗೊಳಿಸಿದ್ದಾರೆ. 

Bigg Boss ಮಹಿಳಾ ಸ್ಪರ್ಧಿಗೆ ಕಿಸ್​: ಹೊಸ ವಿವಾದದಲ್ಲಿ ಮಹೇಶ್​ ಭಟ್​

ಅಷ್ಟಕ್ಕೂ, ಅಪ್ಪನನ್ನು ಅವರು ಕಳುಹಿಸಿದ್ದ ಉದ್ದೇಶ ಜಿಸ್ಮ್​-2 ಚಿತ್ರಕ್ಕಾಗಿ. ಈ ಚಿತ್ರದಲ್ಲಿ ಬೋಲ್ಡ್​ ಆಗಿ ನಟಿಸಲು ಸನ್ನಿ ಲಿಯೋನ್​ ಬಿಟ್ಟರೆ ಬೇರೊಬ್ಬರಿಂದ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಅವರೊಂದಿಗೆ ಈ ಕುರಿತು ಮಾತನಾಡಲು, ಅಪ್ಪನನ್ನುಬಿಗ್​ಬಾಸ್​ ಮನೆಗೆ ಹೋಗುವಂತೆ ಹೇಳಿದ್ದೆ ಎಂದಿದ್ದಾರೆ ಪೂಜಾ. 'ನಿಮಗೆ ಗೊತ್ತಾ, ಕುತೂಹಲಕಾರಿಯಾಗಿ ನನ್ನ ತಂದೆ ಬಿಗ್ ಬಾಸ್ ಮನೆಗೆ ಎರಡನೇ ಬಾರಿಗೆ ಬರುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 5 ರಲ್ಲಿ ಸನ್ನಿ ಲಿಯೋನ್ ಇದ್ದಾಗ ಅವರು ಮೊದಲ ಬಾರಿಗೆ ಈ ಮನೆಯೊಳಕ್ಕೆ ಬಂದಿದ್ದರು. ನಾನು ನಿರ್ದೇಶಿಸುತ್ತಿದ್ದ ಜಿಸ್ಮ್​-2ಗೆ ಸನ್ನಿ ಅವರನ್ನು ಹಾಕಿಕೊಳ್ಳಲು ಬಯಸಿದ್ದೆ. ಆದರೆ ಇಂಥ ಚಿತ್ರದಲ್ಲಿ  ಹಾಗೂ ನನ್ನ ಚಿತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದರೋ ಇಲ್ಲವೋ ತಿಳಿಯಬೇಕಿತ್ತು. ಬಿಗ್​ಬಾಸ್​ ಮನೆಯಿಂದ ಆಕೆ ಹೊರಕ್ಕೆ ಬರಬೇಕಾದರೆ ನಾನು ಕನಿಷ್ಠ ಆರು ತಿಂಗಳು ಕಾಯಬೇಕಿತ್ತು. ಆದರೆ ಅಷ್ಟು ಕಾಯುವುದು ಕಷ್ಟವಾಗಿದ್ದರಿಂದ ಅಪ್ಪನನ್ನು (father) ಅಲ್ಲಿಗೆ ಕಳುಹಿಸಿದ್ದೆ ಎಂದಿದ್ದಾರೆ ಪೂಜಾ.

ಅಷ್ಟಕ್ಕೂ ಆ ಸಮಯದಲ್ಲಿ ಪೋರ್ನ್​ ಸ್ಟಾರ್​ (Porn Star) ಆಗಿಯೇ ಗುರುತಿಸಿಕೊಂಡಿದ್ದ ಸನ್ನಿ ಲಿಯೋನ್​, ಯಾವುದೇ ಚಿತ್ರಗಳಲ್ಲಿ ನಟಿಸಿರಲಿಲ್ಲ. ಇನ್ನೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರಲಿಲ್ಲ. ಆದರೆ ಜಿಸ್ಮ್​-2 ಚಿತ್ರದ ಸಬ್ಜೆಕ್ಟ್​ಗೆ ಆಕೆಯೇ ಸೂಟ್​ ಆಗುತ್ತಾಳೆ ಎಂದು ತಾವು ಬಯಸಿದ್ದರಿಂದ ಆಕೆಯ ಬಳಿ ಮಾತನಾಡುವಂತೆ ಅಪ್ಪನಿಗೆ ಹೇಳಿದ್ದೆ ಎಂದಿದ್ದಾರೆ. ಕೊನೆಗೆ ಸನ್ನಿ ಲಿಯೋನ್​ ಇದಕ್ಕೆ ಒಪ್ಪಿಗೆ ಸೂಚಿಸಿದ್ದರು ಎಂದು ತಿಳಿಸಿದರು.

ಬಾಲಿವುಡ್​ಗೆ ಬರಸಿಡಿಲು- ಬಿಗ್​ಬಾಸ್​ ಸ್ಟುಡಿಯೋದಲ್ಲಿ ಲಗಾನ್ ಕಲಾ ನಿರ್ದೇಶಕ ದೇಸಾಯಿ ನಿಗೂಢ ಸಾವು!

Latest Videos
Follow Us:
Download App:
  • android
  • ios