ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರಿಗೆ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ(Lata Deenanath Mangeshkar Award) ನೀಡಿ ಗೌರವಿಸಲಾಗುವುದು ಎಂದು ಮಂಗೇಶ್ಕರ್ ಕುಟುಂಬ ಸೋಮವಾರ(ಏಪ್ರಿಲ್ 11) ಪ್ರಕಟಿಸಿದೆ.

ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರಿಗೆ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ(Lata Deenanath Mangeshkar Award) ನೀಡಿ ಗೌರವಿಸಲಾಗುವುದು ಎಂದು ಮಂಗೇಶ್ಕರ್ ಕುಟುಂಬ ಸೋಮವಾರ(ಏಪ್ರಿಲ್ 11) ಪ್ರಕಟಿಸಿದೆ. ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಗೆ ಸ್ವೀಕರಿಸುತ್ತಿರುವ ಮೊದಲ ವ್ಯಕ್ತಿ ಮೋದಿಯಾಗಿದ್ದಾರೆ. ಏಪ್ರಿಲ್ 24ರಂದು ಸಂಗೀತ ಲೋಕದ ಲೆಜೆಂಡ್ ಲತಾ ಮಂಗೇಶ್ಕರ್ ಅವರ ತಂದೆ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಅವರ 80ನೇ ಪುಣ್ಯತಿಥಿ. ಅವತ್ತೇ ಪ್ರಧಾನಿ ಮೋದಿ ಅವರಿಗೆ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಲತಾ ಮಂಗೇಶ್ಕರ್ ಅವರ ಗೌರವ ಸ್ಮರಣಾರ್ಥ ಈ ಪ್ರಶಸ್ತಿ ನೀಡಲು ಕುಟುಂಬದವರು ನಿರ್ಧರಿಸಿ ಮೊದಲ ಪ್ರಶಸ್ತಿಯನ್ನು ಮೋದಿ ಅವರಿಗೆ ನೀಡಲಾಗುತ್ತಿದೆ.

ಈ ಪ್ರಶಸ್ತಿಯನ್ನು ದಿವಂಗತ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ ಪುಣೆ ಮತ್ತು ಹೃದಯೇಶ್ ಆರ್ಟ್ಸ್ ಅವರ ಜಂಟಿ ಸಮಾರಂಭದಲ್ಲಿ ಮೋದಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 92 ವರ್ಷದ ಗಾನಕೋಗಿಲೆ ಲತಾ ಮಂಗೇಶ್ಕರ್ ಫೆಬ್ರವರಿಯಲ್ಲಿ ಇಹಲೋಕ ತ್ಯಜಿಸಿದರು. ಅವರ ಸ್ಮರಣಾರ್ಥ ಈ ಪ್ರಶಸ್ತಿ ಈ ವರ್ಷದಿಂದ ಸ್ಥಾಪಿಸಲಾಗಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಪ್ರಧಾನಿ ಮೋದಿ ಮತ್ತು ಲತಾ ಮಂಗೇಶ್ಕರ್ ಕುಟುಂಬದ ಜೊತೆ ಉತ್ತಮ ಸ್ನೇಹ ಬಾಂಧವ್ಯವಿದೆ. ಮೋದಿ ಅವರು ಲತಾ ಮಂಗೇಶ್ಕರ್ ಅವರನ್ನು ತನ್ನ ಹಿರಿಯ ಸಹೋದರಿ ಎಂದೇ ಪರಿಗಣಿಸಿದ್ದರು. ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ ಸಹ ಭಾಗವಹಿಸಿದ್ದರು.

ಪ್ರಶಸ್ತಿ ಬಗ್ಗೆ ಹೇಳುವುದಾರೆ ಈ ಪ್ರಶಸ್ತಿಯನ್ನು ಪ್ರತಿ ವರ್ಷ ರಾಷ್ಟ್ರಕ್ಕೆ, ಜನರಿಗೆ ಮತ್ತು ಸಮಾಜಕ್ಕೆ ಅದ್ಭುತವಾದ ಕೊಡುಗೆ ನೀಡಿದ ಒಬ್ಬ ವ್ಯಕ್ತಿಗೆ ಮಾತ್ರ ನೀಡಲಾಗುತ್ತದೆ. ಮೊದಲ ಪ್ರಶಸ್ತಿ ಪ್ರಕಟಿಸಿದ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ, ಮೊದಲ ಪ್ರಶಸ್ತಿ ಪುರಸ್ಕೃತರು ಬೇರೆ ಯಾರು ಅಲ್ಲ, ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಎಂದು ಘೋಷಣೆ ಮಾಡಲು ತುಂಬಾ ಸಂತೋಷವಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Lata Mangeshkar: 368 ಕೋಟಿ ರೂ ಮೌಲ್ಯದ ಆಸ್ತಿಗೆ ಯಾರಾಗ್ತಾರೆ ವಾರಸುದಾರರು.?

ಯಾರೆಲ್ಲ ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆ

ಈ ಪ್ರಶಸ್ತಿ ಸಂಗೀತ, ಕಲೆ, ನಾಟಕ, ವೈದ್ಯಕೀಯ ಮತ್ತು ಸಾಮಾಜಿಕ ಕಾರ್ಯ ಕ್ಷೇತ್ರದ ಲೆಜೆಂಡ್ ಅನ್ನು ಗೌರವಿಸುವ ಗುರಿಯನ್ನು ಹೊಂದಿದೆ. ಹಿರಿಯ ನಟರಾದ ಆಶಾ ಪರೇಶ್ ಮತ್ತು ಜಾಕಿ ಶ್ರಾಫ್ ಸಿನಿಮಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ವಿಶೇಷ ಗೌರವ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಾರೆ ಎಂದು ಮಂಗೇಶ್ಕರ್ ಕುಟುಂಬ ತಿಳಿಸಿದೆ. ಇನ್ನು ಸಂಗೀತ ಕ್ಷೇತ್ರದ ಸೇವೆಗಾಗಿ ರಾಹುಲ್ ದೇಶಪಾಂಡೆ ಪ್ರಶಸ್ತಿ ಪಡೆದರೆ, ನಾಟಕ ವಿಭಾಗದಲ್ಲಿ ಸಂಜಯ್ ಛಾಯಾ ಅವರಿಗೆ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇನ್ನು ಸಮಾಜ ಸೇವಾ ಕ್ಷೇತ್ರದಲ್ಲಿ ಸಮರ್ಪಿತ ಸೇವೆ ಮಾಡಿದ ನೂತನ್ ಮುಂಬೈ ಟಿಫಿನ್ ಬಾಕ್ಸ್ ಸಪ್ಲೈ ಚಾರಿಟಿ ಟ್ರಸ್ಟ್ ಅವರಿಗೆ ನೀಡಲಾಗುತ್ತಿದೆ.

Lata Mangeshkar: ಧರ್ಮೇಂದ್ರ, ಅಮಿತಾಭ್ ಲತಾ ಅಂತ್ಯಕ್ರಿಯೆ ತಪ್ಪಿಸಿಕೊಂಡಿದ್ದೇಕೆ?

ಇನ್ನು 24ರಂದು ನಡೆಯುವ ಪ್ರಶಸ್ತು ಪ್ರದಾನ ಸಮಾರಂಭದಲ್ಲಿ ವಿಶೇಷ ಗಾಯನ ಕಾರ್ಯಕ್ರಮ ಕೂಡ ಇರಲಿದೆ. ಇದಕ್ಕೆ ಸ್ವರ್ಲಾತಾಂಜಲಿ ಎನ್ನುವ ಕಾರ್ಯಕ್ರಮವನ್ನು ಖ್ಯಾತ ಗಾಯಕರೂಪಕುಮಾರ್ ರಾಥೋಡ್ ನಡೆಸಿಕೊಡಲಿದ್ದಾರೆ. ಇದು ಲತಾ ಮಂಗೇಶ್ಕರ್ ಅವರ ಮಧುರ ನೆನಪುಗಳಿಗೆ ಸಲ್ಲಿಸುತ್ತಿರುವ ಗೌರವ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.