ಶಾಲೆಯೊಂದರಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ನಟ ಸಲ್ಮಾನ್​ ಖಾನ್​ರನ್ನು ಕುತೂಹಲದ ರೀತಿಯಲ್ಲಿ ಕರೆದಿದ್ದಾರೆ.  

ಸಲ್ಮಾನ್ ಖಾನ್ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಸಲ್ಮಾನ್ ಖಾನ್ ಅವರನ್ನು ವಿಶಿಷ್ಟ ರೀತಿಯಲ್ಲಿ ಉಲ್ಲೇಖಿಸಿದ್ದಾರೆ. ಪ್ರಧಾನಿ ಭಾಷಣದಲ್ಲಿ ಟೈಗರ್ 3 ನಟನ ಬಗ್ಗೆ ಪ್ರಸ್ತಾಪಿಸಿದ ರೀತಿಯ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಪ್ರಧಾನಿಯ ಬಾಯಲ್ಲಿ ಸಲ್ಮಾನ್​ ಖಾನ್​ ಅವರ ಹೆಸರು ವಿಶೇಷ ರೀತಿಯಲ್ಲಿ ಕೇಳಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಗ್ವಾಲಿಯರ್‌ನ ಪ್ರಸಿದ್ಧ ಸಿದ್ಧಿಯಾನ್ ಶಾಲೆಯ 125 ನೇ ಸಂಸ್ಥಾಪಕರ ದಿನದಂದು. ಈ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಈ ಶಾಲೆ ಮತ್ತು ಇಲ್ಲಿ ಓದಿದ ಕೆಲವು ಹಿಂದಿನ ವಿದ್ಯಾರ್ಥಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.

ಐತಿಹಾಸಿಕ ಗ್ವಾಲಿಯರ್ ಕೋಟೆಯ ಮೇಲೆ ನಿರ್ಮಿಸಲಾದ ಸಿಂಧಿಯಾ ಶಾಲೆಯ ಈ ವಿಶೇಷ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉಪಸ್ಥಿತರಿದ್ದರು. ಅವರು ತಮ್ಮ ಭಾಷಣದಲ್ಲಿ ಈ ಶಾಲೆಯ ಕೆಲವು ಪ್ರಸಿದ್ಧ ಹಳೆಯ ವಿದ್ಯಾರ್ಥಿಗಳ ಬಗ್ಗೆ ಚರ್ಚಿಸಿದರು. ಆಗ ಸಲ್ಮಾನ್​ ಖಾನ್​ ಅವರ ಹೆಸರನ್ನು ಅವರು ಪ್ರಸ್ತಾಪಿಸಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಪ್ರಧಾನಿಯವರು, ವೀಡಿಯೊದಲ್ಲಿ 'ನನಗೆ ಸಿಂಧಿಯಾ ಶಾಲೆಯ ಮೇಲೆ ಏಕೆ ನಂಬಿಕೆ ಇದೆ ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಶಾಲೆಯ ಕೆಲವು ಹಿಂದಿನ ವಿದ್ಯಾರ್ಥಿಗಳು ನನಗೆ ಚೆನ್ನಾಗಿ ಗೊತ್ತು. ಅವರಲ್ಲಿ ಒಬ್ಬರು ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಅವರು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾರೆ, ಅವರನ್ನು ಹೊರತುಪಡಿಸಿದರೆ ಲೆಫ್ಟಿನೆಂಟ್ ಜನರಲ್ ಮೋತಿಧರ್, ಅಮೀನ್ ಸಯಾನಿ ವಿಭಿನ್ನ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು ಎಂದರು.

ಅಪ್ಪನ ವಯಸ್ಸಿನ ಹೀರೋ ಜತೆ ರೊಮ್ಯಾನ್ಸ್‌, ಲಿಪ್‌ಲಾಕ್‌ಗೆ ನಯನತಾರಾ ರೆಡಿ? ಅಯ್ಯೋ ಅಂತಿದ್ದಾರೆ ಫ್ಯಾನ್ಸ್‌

ಇದೇ ವೇಳೆ ಇನ್ನೊಬ್ಬರ ಹೆಸರೂ ಇದೆ. ಅದೇನೆಂದರೆ, ಬ್ರದರ್ಸ್ ಮತ್ತು ಹುಡ ಹುಡ ದಬಂಗ್​ ಸಲ್ಮಾನ್ ಖಾನ್ ಎಂದರು. ಹೀಗೆ ಹೇಳುತ್ತಿದ್ದಂತೆಯೇ ಅಲ್ಲಿ ನೆರೆದವರೆಲ್ಲಾ ಜೋರಾಗಿ ಚಪ್ಪಾಳೆ ತಟ್ಟಿದರು. ಕೆಲವರು ಜೋರಾಗಿ ಶಿಳ್ಳೆ ಹೊಡೆದರು. ಅಂದಹಾಗೆ ದಬಂಗ್ ಪಾರ್ಟ್​ 1​ 2010ರಲ್ಲಿ ರಿಲೀಸ್​ ಆಗಿತ್ತು. ಸೋನಾಕ್ಷಿ ಸಿನ್ಹಾ ಅವರನ್ನು ಸಲ್ಮಾನ್ ಖಾನ್ ಅವರೇ 'ದಬಂಗ್' ಮೂಲಕ ಲಾಂಚ್ ಮಾಡಿದ್ದರು. 'ದಬಂಗ್ 2' ಚಿತ್ರದಲ್ಲಿಯೂ ಅವರು ನಟಿಸಿದ್ದರು. 2019ರಲ್ಲಿ 3ನೇ ಪಾರ್ಟ್​ ಬಂದಿತು. ಈ ಚಿತ್ರ ನಿರೀಕ್ಷೆಯಷ್ಟು ಹಿಟ್​ ಆಗದಿದ್ದರೂ ಉತ್ತಮ ಚಿತ್ರ ಎನಿಸಿಕೊಂಡಿತ್ತು. ಇತ್ತೀಚೆಗೆ ಇದೇ ಸಿನಿಮಾ ಮತ್ತೆ ಮುನ್ನೆಲೆಗೆ ಬಂದಿತ್ತು. ಇದಕ್ಕೆ ಕಾರಣ, ಸಲ್ಮಾನ್​ ಮತ್ತು ಸೋನಾಕ್ಷಿ ಮದ್ವೆಯಾಗುತ್ತಿದ್ದಾರೆ ಎಂಬ ಗಾಳಿಸುದ್ದಿಯಿಂದ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಇದೇ ಚಿತ್ರದ ವಿಷಯವನ್ನು ಪ್ರಸ್ತಾಪ ಮಾಡಿದ್ದರಿಂದ ಮತ್ತೆ ಚಿತ್ರದ ಹೆಸರು ಮುನ್ನೆಲೆಗೆ ಬಂದಿದೆ. 

ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ 'ಟೈಗರ್ 3' ಗಾಗಿ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್ ಹಾಗೂ ಮೊದಲ ಹಾಡು ‘ಲೇಕೆ ಪ್ರಭು ಕಾ ನಾಮ್’ ಬಿಡುಗಡೆಯಾಗಿದ್ದು, ಇದನ್ನು ನೋಡಿ ಸಲ್ಮಾನ್ ಅಭಿನಯದ ಸ್ಪೈ ಥ್ರಿಲ್ಲರ್ ‘ಟೈಗರ್ 3’ಗೆ ಅಭಿಮಾನಿಗಳ ಸಂಭ್ರಮ ಇನ್ನಷ್ಟು ಹೆಚ್ಚಾಗಿದೆ. ಚಿತ್ರವು ನವೆಂಬರ್ 12 ರಂದು ದೀಪಾವಳಿ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಕೈಕೊಟ್ಟ ಐಶ್ವರ್ಯ ರೈ, ಮಾಜಿ ಪ್ರೇಮಿ ಸಲ್ಮಾನ್‌ರಿಂದ ಬೆದರಿಕೆ! ನೋವು ತೋಡಿಕೊಂಡ ವಿವೇಕ್‌ ಓಬಿರಾಯ್‌

Scroll to load tweet…