ಬಾಲಿವುಡ್ ಖ್ಯಾತ ಗಾಯಕ ಕೆಕೆ ನಿಧನ ಸಂಗೀತ ಕಾರ್ಯಕ್ರಮದ ಮುಗಿಸಿದ ಬೆನ್ನಲ್ಲೇ ಸಾವು ಸಾವಿಗೂ ಮುನ್ನ ನೀಡಿದ್ದ ಸಂಗೀತ ಕಾರ್ಯಕ್ರಮ ವೀಡಿಯೋ
ಕೋಲ್ಕತಾ(ಜೂ.01): ಬಾಲಿವುಡ್ ಖ್ಯಾತ ಗಾಯಕ ಕೆಕೆ ಎಂದೇ ಹೆಸರಾಗಿದ್ದ ಕೃಷ್ಣಕುಮಾರ್ ಕುನ್ನತ್ ನಿಧನರಾಗಿದ್ದಾರೆ. ಕೋಲ್ಕತಾದಲ್ಲಿ ಆಯೋಸಿದ್ದ ಸಂಗೀತ ಕಾರ್ಯಕ್ರಮ ಮುಗಿಸಿದ ಬೆನ್ನಲ್ಲೇ ಆಸ್ವಸ್ಥರಾದ ಕೆಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಕೆ ಸಾವಿಗೂ ಕೆಲವೇ ಕ್ಷಣಗಳ ಮುನ್ನ ಮ್ಯಾಜಿಕಲ್ ಸಂಗೀತ ಕಾರ್ಯಕ್ರಮ ನೀಡಿದ್ದರು.
ಕೋಲ್ಕತಾದ ನಜ್ರುಲ್ ಮಂಚ್‌ನಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಕಿಕ್ಕಿರಿದು ಜನ ತುಂಬಿದ್ದರು. ಈ ಕಾರ್ಯಕ್ರಮದಲ್ಲಿ ಸತತ 1 ಗಂಟೆಗಳೂ ಹೆಚ್ಚು ಕಾಲ ಸಂಗೀತ ಆಸಕ್ತರನ್ನು ರಂಜಿಸಿದ್ದ ಕೆಕೆ, ಕಾರ್ಯಕ್ರಮ ಮುಗಿಸಿ ಹೊಟೆಲ್‌ಗೆ ತೆರಳಿದ್ದಾರೆ. ಈ ವೇಳೆ ಆರೋಗ್ಯದಲ್ಲಿ ಏರುಪೇರಾಗಿದೆ. ತೀವ್ರ ಆಸ್ವಸ್ಥರಾದ ಕೆಕೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು CMRI ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಕೆಕೆ ಬದುಕುಳಿಯಲಿಲ್ಲ.
ಸಂಗೀತ ಕಾರ್ಯಕ್ರಮ ನೀಡಿದ ಬೆನ್ನಲ್ಲೇ ಖ್ಯಾತ ಬಾಲಿವುಡ್ ಗಾಯಕ ಕೆಕೆ ನಿಧನ
ಸಂಗೀತ ಕಾರ್ಯಕ್ರಮದ ನಡುವೆ ಕೆಕೆಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಕಾರ್ಯಕ್ರಮದ ನಡುವೆ ಅಸ್ವಸ್ಥರಾಗಿದ್ದಾರೆ. ಆದರೆ ಸಾವರಿಸಿಕೊಂಡು ಮತ್ತೆ ಹಾಡು ಹಾಡಿ ಜನರನ್ನು ರಂಜಿಸಿದ್ದಾರೆ. ಕಾರ್ಯಕ್ರಮದ ಕನೆಯವರೆಗೂ ಹಾಡಿನ ಮೂಲಕ ಜನರನ್ನು ರಂಜಿಸಿದ್ದಾರೆ.ಬಳಿಕ ಹೊಟೆಲ್‌ಗೆ ತೆರಳಿದ್ದಾರೆ. ಕೆಕೆ ಸಾವಿಗೂ ಮುನ್ನ ನೀಡಿದ ಕಾರ್ಯಕ್ರಮದ ಕೆಲ ತುಣುಕುಗಳು ಇಲ್ಲಿವೆ.
"
"
ಬಾಲಿವುಡ್ ಹಾಗೂ ಭಾರತದಲ್ಲಿ ಕೆಕೆ ಎಂದೆ ಹೆಸರುವಾಸಿಯಾಗಿರುವ ಕೃಷ್ಣಕುಮಾರ್ ಕುನ್ನತ್ ಹಲವು ಸೂಪರ್ ಹಿಟ್ ಹಾಡಿಗೆ ಧನಿಯಾಗಿದ್ದಾರೆ. ಬಾಲಿವುಡ್ ಪ್ರವೇಶಕ್ಕೂ ಮೊದಲು ಕೆಕೆ 3,500 ಜಿಂಗಲ್ಸ್ ಹಾಡಿದ್ದಾರೆ. ಹಲವು ಆಲ್ಬಮ್ ಹಾಡು ಹೊರತಂದಿದ್ದಾರೆ. 199ರ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾಗಾಗಿ ಜೋಶ್ ಆಫ್ ಇಂಡಿಯಾ ಹಾಡು ಹಾಡಿದ್ದಾರೆ.
ಕೆಕೆ ನಿಧನ ಕುಟುಂಬ ಹಾಗೂ ಅಭಿಮಾನಿಗಳಿಗೆ ಆಘಾತ ತಂದಿದೆ. 1991ರಲ್ಲಿ ಕೆಕೆ ಜ್ಯೋತಿಯನ್ನು ವಿವಾಹವಾಗಿದ್ದರು. ಇವರಿಗೆ ನಕುಲ್ ಕೃಷ್ಣ ಕುನ್ನತ್ ಹಾಗೂ ತಾಮರ ಕುನ್ನತ್ ಇಬ್ಬರು ಮಕ್ಕಳಿದ್ದಾರೆ. ನಕುಲ್ ಕೃಷ್ಣ ಕುನ್ನತ್ ಹಮ್‌ಸಫರ್ ಎಂಬು ಅಲ್ಬಮ್ ಹಾಡಿನಲ್ಲಿ ತಂದೆ ಕೆಕೆ ಜೊತೆ ಮಸ್ತಿ ಎಂಬ ಹಾಡು ಹಾಡಿದ್ದಾರೆ.
ಕೆಕೆ ಬಾಲಿವುಡ್‌ನಲ್ಲಿ ಮಾತ್ರವಲ್ಲ, ಕನ್ನಡ, ತೆಲೆಗು, ಮಲೆಯಾಳಂ, ತಮಿಳು, ಬಂಗಾಳಿ, ಗುಜರಾತಿ ಸೇರಿದಂತೆ ಹಲವು ಭಾರತೀಯ ಭಾಷೆಗಳ ಚಿತ್ರಗಳಲ್ಲಿ ಹಾಡಿದ್ದಾರೆ. 1996 ರಿಂದ ಬಾಲಿವುಡ್‌ನಲ್ಲಿ ಪ್ಲೇ ಬ್ಯಾಕ್ ಸಿಂಗರ್ ಆಗಿ ಗುರತಿಸಿಕೊಂಡಿರುವ ಕೆಕೆ, ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸುಮಾರು 14ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಕೆ ಹಾಡಿದ್ದಾರೆ. 2004ರಲ್ಲಿ ಲವ್ ಚಿತ್ರದ ಏಳು ಬಂಧನ ಹಾಡಿನ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಕೆಕೆ, 2014ರ ಆರ್ಯನ್ ಚಿತ್ರದ ಒಂದು ಹಾಡು ಮೆಲ್ಲ ಹಾಡು ಹಾಡಿದ್ದಾರೆ. ಇದು ಅವರ ಸ್ಯಾಂಡಲ್‌ವುಡ್‌ನಲ್ಲಿ ಹಾಡಿದ ಕೊನೆಯ ಹಾಡಾಗಿದೆ.
ರೌಡಿ ಅಳಿ, ಸಾರ್ವಭೌಮ, ನ್ಯೂಲ್, ನೀಯಾರೆ, ಪರಿಚಯ, ಮನಸಾರೆ, ಮಳೆ ಬರಲಿ ಮಂಜು ಇರಲಿ, ಯೋಗಿ, ಸಂಚಾರಿ , ಬಹುಪರಾಕ್ ಸೇರಿದಂತೆ ಹಲವು ಕನ್ನಡ ಚಿತ್ರದಲ್ಲಿ ಪ್ಲೇ ಬ್ಯಾಕ್ ಸಿಂಗರ್ ಆಗಿ ಅತ್ಯುತ್ತಮ ಹಾಡುಗಳನ್ನು ನೀಡಿದ್ದಾರೆ.
