ಸಮಂತಾ ಅಂದ್ರೆ ಕಲರ್ ಫುಲ್ ಲೈಫ್. ಈಗ ಅನಾರೋಗ್ಯದಿಂದ ಒಮ್ಮೆ ಡ್ರಿಪ್ ಹಾಕ್ಕೊಂಡು ಮಲಗಿದರೆ ಮತ್ತೊಮ್ಮೆ ಜಿಮ್‌ನಲ್ಲಿ ಸಿಕ್ಕಾಪಟ್ಟೆ ಬೆವರಿಳಿಸುತ್ತಿದ್ದಾರೆ. ಏನಮ್ಮಾ ನಿನ್ ಅವಸ್ಥೆ ಅಂತ ಜನ ಕಂಗಾಲಾಗಿ ಕೇಳ್ತಿದ್ದಾರೆ.

ಸಮಂತಾ ರುತ್ ಪ್ರಭು ಮಯೋಸೈಟಿಸ್ ಸಮಸ್ಯೆಯಿಂದ ನರಳ್ತಿರೋದು ಹಳೇ ವಿಷ್ಯ. ಟ್ರೀಟ್ ಮೆಂಟ್ ಮೇಲೆ ಟ್ರೀಟ್‌ಮೆಂಟ್ ತಗೊಂಡ್ರೂ ಈ ಸಮಸ್ಯೆ ವಾಸಿ ಆಗ್ತಿಲ್ಲ. ಹೀಗಾಗಿ ಸದ್ಯ ಆಸ್ಪತ್ರೆಯಲ್ಲೇ ವಾಸ. ಡ್ರಿಪ್ ಹಾಕಿಸ್ಕೊಂಡು ಮಲಗಿರೋ ಸಮಂತಾನ್ನ ಕಂಡು ಅವರ ಫ್ಯಾನ್ಸ್, ಚಿತ್ರರಂಗದವರು ಕಂಗಾಲಾದ್ರು. ಆದರೆ ಸಮಂತಾ ಎಂಥಾ ಗಟ್ಟಿಗಿತ್ತಿ ಅಂದರೆ ಒಮ್ಮೆ ಡ್ರಿಪ್ ಹಾಕಿಸ್ಕೊಂಡು ಮಲಕ್ಕೊಳ್ಳೋ ಸ್ಥಿತಿಯಲ್ಲಿದ್ದರೂ ಮರುಕ್ಷಣ ಮೇಲೆದ್ದು ಜಿಮ್‌ನಲ್ಲಿ ವರ್ಕೌಟ್ ಮಾಡ್ತಿದ್ದಾರೆ. ಅವರ ಈ ಅವತಾರ್ ಕಂಡು ಅವರ ಫ್ಯಾನ್ಸ್‌ಗೆ ಏನೊಂದೂ ಅರ್ಥ ಆಗ್ತಿಲ್ಲ. ಆಸ್ಪತ್ರೆಗೆ ಅಡ್ಮಿಟ್ ಆಗಿ ಡ್ರಿಪ್ ಹಾಕಿಸ್ಕೊಂಡು ಮಲಗಿದ್ರೂ ಬಿಡದೇ ನಿನ್ ಕೈಲಿ ವರ್ಕೌಟ್ ಮಾಡಿಸ್ತಾರಲ್ವಾಮ್ಮಾ, ನಿಮ್ಮಂಥಾ ನಟ, ನಟಿಯರದ್ದು ಎಂಥಾ ಬಾಳು, ಎಂಥಾ ಗೋಳು ಅಂತ ತಲೆ ತಲೆ ಜಜ್ಜಿಕೊಳ್ತಿದ್ದಾರೆ.

ಕೆಲವೇ ದಿನಗಳ ಹಿಂದೆ ಸಮಂತಾ ರುತ್​ ಪ್ರಭು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಬೆಡ್​ ಮೇಲೆ ಮಲಗಿ ಡ್ರಿಪ್ಸ್​ ಹಾಕಿಸಿಕೊಳ್ಳುತ್ತಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದರು. ಆರೋಗ್ಯದ ಪರಿಸ್ಥಿತಿ ಹೀಗಿರುವಾಗ ಅವರು ಕಠಿಣ ವರ್ಕೌಟ್​ ಮಾಡುತ್ತಿರುವುದು ಅಭಿಮಾನಿಗಳ ಚಿಂತೆಗೆ ಕಾರಣ ಆಗಿದೆ. ಇನ್ನೊಂದೆಡೆ ನಟಿ ಸಮಂತಾ ರುತ್​ ಪ್ರಭು ಅವರು ಪೂರ್ತಿಯಾಗಿ ಮಯೋಸೈಟಿಸ್ ಸಮಸ್ಯೆಯಿಂದ ಗುಣಮುಖರಾಗಿಲ್ಲ. ಹಲವು ತಿಂಗಳಿಂದಲೂ ಅವರು ಅದಕ್ಕೆ ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. ಆದರೆ ಸಮಸ್ಯೆ ಮಾತ್ರ ಪರಿಹಾರ ಆಗಿಲ್ಲ. ಇದರಿಂದಾಗಿ ಅವರ ಸಿನಿಮಾ ಕೆಲಸಗಳು ಕುಂಠಿತ ಆಗುತ್ತಿವೆ. ಸಮಂತಾ ಹೊಸ ಸಿನಿಮಾ ಒಪ್ಪಿಕೊಳ್ಳುವುದು ಕೂಡ ತಡವಾಗುತ್ತಿದೆ. ಈಗ ಅವರು ಚಿಕಿತ್ಸೆ ಸುಲುವಾಗಿಯೇ ದೀರ್ಘ ಬ್ರೇಕ್​ ಪಡೆದಿರುವುದು ಗೊತ್ತೇ ಇದೆ. ಹಾಗಿದ್ದರೂ ಕೂಡ ಸಮಂತಾ ಅವರು ಜಿಮ್​ನಲ್ಲಿ ವರ್ಕೌಟ್ ಮಾಡುವುದು ತಪ್ಪಿಸಿಲ್ಲ. ಮೈ ಕೈ ನೋವು ಇದ್ದರೂ ಕೂಡ ಅವರು ವರ್ಕೌಟ್​ ಮಾಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಚಿಂತೆ ಆಗಿದೆ.

ಮ್ಯಾಚ್​ಗೆ ಬಂದು ಹೊಟ್ಟೆ ಮೇಲೆ ಕೈಯಿಟ್ಟ ಅನುಷ್ಕಾ ಶರ್ಮಾ: ವಿಡಿಯೋ ನೋಡಿ ತಲೆ ಕೆಡಿಸಿಕೊಳ್ತೀರೋ ಫ್ಯಾನ್ಸ್​

ತನಗೆ ಮೈ ಕೈ ನೋವು ಇದೆ ಎಂದು ಸಮಂತಾ ತನ್ನ ಫಿಟ್‌ನೆಸ್‌ ಟ್ರೈನರ್ ಜುನೈದ್​ ಶೇಖ್​ಗೆ ಸಮಂತಾ ಮೆಸೇಜ್​ ಮಾಡಿದ್ದಾರೆ. ಒಂದು ದಿನ ವರ್ಕೌಟ್ (workout)​ ತಪ್ಪಿಸಿದರೆ ಉತ್ತಮ ಎಂಬುದು ಸಮಂತಾ ಅವರ ಆಲೋಚನೆ ಆಗಿತ್ತು. ಆದರೆ ಅದಕ್ಕೆ ಜುನೈದ್​ ಅವಕಾಶ ನೀಡಿಲ್ಲ. ಮೈ ಕೈ ನೋವು ಇದ್ದರೂ ಅವರು ವರ್ಕೌಟ್​ ಮಾಡಿಸಿದ್ದಾರೆ. ಭಾನುವಾರ ಕೂಡ ವರ್ಕೌಟ್​ ತಪ್ಪಿಸಲು ಅವರು ಅವಕಾಶ ನೀಡಿಲ್ಲ. ಹಾಗಾಗಿ ‘ಇದೊಂದು ಕ್ರೂರ ಭಾನುವಾರ’ ಎಂದು ಸಮಂತಾ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ ಮಾಡಿದ್ದಾರೆ. ಅವರ ಫಿಟ್‌ನೆಸ್ (fitness) ಟ್ರೈನರ್ ಬಗ್ಗೆ ಅಭಿಮಾನಿಗಳು ಕೆಂಡ ಕಾರುತ್ತಿದ್ದಾರೆ. ಸ್ವಲ್ಪನಾದ್ರೂ ಮಾನವೀಯತೆ ಬೇಡ್ವಾ, ಅವನೆಂಥಾ ಟ್ರೈನರ್ (trainer) ಅಂತ ಜುನೈದ್‌ಗೆ ಕ್ಲಾಸ್ ತಗೊಳ್ತಿದ್ದಾರೆ.

ಸದ್ಯಕ್ಕಂತೂ ಸಮಂತಾ ಅವರು ಹೊಸ ಸಿನಿಮಾ ಒಪ್ಪಿಕೊಳ್ಳುವಲ್ಲಿ ಅವಸರ ತೋರುತ್ತಿಲ್ಲ. ಆದಷ್ಟು ಬೇಗ ಅವರು ಪೂರ್ತಿ ಗುಣಮುಖರಾಗಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ. ‘ಸಿಟಾಡೆಲ್​’ ವೆಬ್​ ಸರಣಿಯ ಭಾರತದ ವರ್ಷನ್​ನಲ್ಲಿ ಅವರು ನಟಿಸಿದ್ದಾರೆ. ಅದರ ಬಿಡುಗಡೆಗಾಗಿ ಪ್ರೇಕ್ಷಕರು ಕಾದಿದ್ದಾರೆ.

ಭಾರತ ಗೆದ್ದ ಖುಷಿಯಲ್ಲಿದ್ದ ನಟಿ ಊರ್ವಶಿಗೆ ಬಿಗ್ ಶಾಕ್​: ಸ್ಟೇಡಿಯಂನಲ್ಲಿ ಚಿನ್ನದ ಐಫೋನ್​ ಗಾಯಬ್​?

ಸಮಂತಾ ರುತ್​ ಪ್ರಭು ಅವರು ಫಿಟ್ನೆಸ್​ಗೆ ಹೆಚ್ಚು ಮಹತ್ವ ನೀಡುತ್ತಾರೆ. ದೇಹದ ಶೇಪ್​ ಚೆನ್ನಾಗಿರಬೇಕು ಎಂದು ಕಾಳಜಿ ವಹಿಸುತ್ತಾರೆ. ಆದರೆ ಅನಾರೋಗ್ಯದ (Myositis)​ ಸಂದರ್ಭದಲ್ಲೂ ಅವರು ಈ ಪರಿ ಕಟ್ಟುನಿಟ್ಟಾಗಿ ಇರಬೇಕಾ ಎಂಬುದು ಕೆಲವು ಅಭಿಮಾನಿಗಳ ಪ್ರಶ್ನೆ. ಒಂದಷ್ಟು ವಿಶ್ರಾಂತಿ ಪಡೆದರೆ ಉತ್ತಮ ಎಂದು ಫ್ಯಾನ್ಸ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಡೆಡಿಕೇಶನ್‌ಗೆ ಮತ್ತೊಂದು ಹೆಸರಿನಂತಿರುವ ಸಮಂತಾ ಕಷ್ಟಪಟ್ಟಾದರೂ ಎಕ್ಸರ್‌ಸೈಸ್ (exercise) ಮಾಡುತ್ತಿದ್ದಾರೆ. ಅವರು ಬೇಗ ಚೇತರಿಸಿಕೊಂಡು ಮೊದಲಿನಂತಾಗಲಿ ಅನ್ನೋದು ಅವರ ಅಭಿಮಾನಿಗಳ ಹಾರೈಕೆ.