Asianet Suvarna News Asianet Suvarna News

ಮ್ಯಾಚ್​ಗೆ ಬಂದು ಹೊಟ್ಟೆ ಮೇಲೆ ಕೈಯಿಟ್ಟ ಅನುಷ್ಕಾ ಶರ್ಮಾ: ವಿಡಿಯೋ ನೋಡಿ ತಲೆ ಕೆಡಿಸಿಕೊಳ್ತೀರೋ ಫ್ಯಾನ್ಸ್​

ಅಹಮದಾಬಾದ್​ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಮ್ಯಾಚ್​ಗೆ ಬಂದ ಅನುಷ್ಕಾ ಶರ್ಮಾ ಗರ್ಭಿಣಿ ಹೌದೋ ಅಲ್ವೋ ಎಂದು ತಲೆ ಕೆಡಿಸಿಕೊಳ್ತಿದ್ದಾರೆ ಫ್ಯಾನ್ಸ್. ಆಗಿದ್ದೇನು? 
 

Aushka Sharma second pregnancy baby bump spotted in viral video suc
Author
First Published Oct 15, 2023, 6:12 PM IST

ಇತ್ತ ಭಾರತದ ನೆಲದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಕ್ರಿಕೆಟ್​ನಲ್ಲಿ ಜಯಭೇರಿ ಬಾರಿಸಿರುವ ಖುಷಿಯಲ್ಲಿದ್ದರೆ, ಅತ್ತ ತಮ್ಮ ಪತಿ ವಿರಾಟ್​ ಕೊಹ್ಲಿ ಅವರಿಗೆ ಸಪೋರ್ಟ್​ ಮಾಡಲು ಬಂದ ಅನುಷ್ಕಾ ಶರ್ಮಾ ಬೇಬಿ ಬಂಪ್​ ಷೋ ಮಾಡಿದ್ದಾರೆ. ಅಸಲಿಗೆ ಇವರೇನೂ ಬೇಬಿ ಬಂಪ್​ ಮಾಡಿಲ್ಲ, ಆದರೆ ಇವರ ಮೇಲೆ ಕಣ್ಣು ನೆಟ್ಟಿರುವ ಪಾಪರಾಜಿಗಳ ಕಣ್ಣಿಗೆ ಅನುಷ್ಕಾ ಗರ್ಭಿಣಿಯ ರೀತಿಯಲ್ಲಿ ಕಂಡಿದ್ದಾರೆ. ಅಷ್ಟಕ್ಕೂ, ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದಾರೆ ವಿರಾಟ್ ಕೊಹ್ಲಿ ಮತ್ತೆ ತಂದೆಯಾಗುತ್ತಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.  ಬಹುತೇಕ ಎಲ್ಲಾ ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಿವೆ. ಆದರೆ ಸ್ವತಃ ಅನುಷ್ಕಾ ಶರ್ಮಾ ಈ ಸುದ್ದಿಯನ್ನು ನಿರಾಕರಿಸಿದ್ದರು. ಜೊತೆಗೆ ತಮ್ಮ ಗರ್ಭಾವಸ್ಥೆಯ ಸುದ್ದಿ ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ಗರಂ ಕೂಡ ಆಗಿದ್ದರು.  ಆದರೆ ಕೊನೆಗೆ ತಿಳಿದದ್ದು ಏನೆಂದರೆ, ಈ ಸುದ್ದಿಯನ್ನು ನಿರಾಕರಿಸಿರುವುದು ರಿಯಲ್‌ ಅನುಷ್ಕಾ ಶರ್ಮಾ ಅಲ್ಲ,  ಫೇಕ್ ಅನುಷ್ಕಾ ಎಂದು! 

ಹೌದು. ಮಾಧ್ಯಮವೊಂದರ ನ್ಯೂಸ್ ಟ್ವಿಟ್‌ ಶೇರ್ ಮಾಡಿಕೊಂಡಿರುವ ಅನುಷ್ಕಾ ಹೆಸರಿನಲ್ಲಿರುವ ಫೇಕ್‌ ಖಾತೆಯಿಂದ, ವಾವ್‌ ಈ ವಿಚಾರ  ವಿರಾಟ್‌ ಕೊಹ್ಲಿ ಹಾಗೂ ನನಗಿಂತ ಮೊದಲೇ ನಿಮಗೆ ತಿಳಿದಿದೆ ಎಂದು ವ್ಯಂಗ್ಯವಾಡಿದ್ದರು. ಈ ಟ್ವಿಟ್‌ಗೆ ಅನೇಕರು ನಗುವ ಇಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ. ಮತ್ತೊಂದು ಸೋಜಿಗವೆಂದರೆ ಈ ಫೇಕ್‌ ಟ್ವಿಟ್‌ನ್ನು ಐದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.  ಮತ್ತೆ ಕೆಲವರು ನಾನು ಇದು ಅನುಷ್ಕಾ ಅವರ ರಿಯಲ್ ಟ್ವಿಟ್ಟರ್ ಅಕೌಂಟ್ ಎಂದೇ ಭಾವಿಸಿದ್ದೇ ಎಂದು ಕಾಮೆಂಟ್ ಮಾಡಿದ್ದಾರೆ.  ಅದೇನೆ ಇದ್ದರೂ ರಿಯಲ್​ ಅನುಷ್ಕಾ ಮಾತ್ರ ಇದರ ಬಗ್ಗೆ ಮಾತನಾಡಲಿಲ್ಲ. ಹೀಗಿರುವಾಗಲೇ ಈಕೆ ಗರ್ಭಿಣಿ ಹೌದೋ, ಅಲ್ಲವೋ ಎನ್ನುವ ಬಗ್ಗೆ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ. ಇದಾಗಲೇ,  ಅನುಷ್ಕಾ ಶರ್ಮಾ (Anushka Sharma)ಹಾಗೂ ವಿರಾಟ್ ಕೊಹ್ಲಿಗೆ  ಒಬ್ಬಳು ಮಗಳಿದ್ದಾಳೆ. 2021ರ ಜನವರಿಯಲ್ಲಿ ವಿರಾಟ್ ಕೊಹ್ಲಿ (virat kohli) ಪತ್ನಿ ಅನುಷ್ಕಾ ಶರ್ಮಾ ವಾಮಿಕಾ ಎನ್ನುವ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಇದುವರೆಗೂ ವಾಮಿಕಾ ಮುಖವನ್ನು ವಿರುಷ್ಕಾ ಜೋಡಿ ಜಗತ್ತಿಗೆ ತೋರಿಸಿಲ್ಲ. ಇದೀಗ ಮತ್ತೆ ಗರ್ಭಿಣಿ ಎನ್ನುವ ಸುದ್ದಿ ತಿಳಿಯುತ್ತಲೇ ಫ್ಯಾನ್ಸ್​ ಫುಲ್​ ಕನ್​ಫ್ಯೂಸ್ ಆಗಿದ್ದಾರೆ. 

ಮಗಳ ವಯಸ್ಸಿನವಳ ಜೊತೆ ಲಿಪ್​ಲಾಕ್​, ರೊಮ್ಯಾನ್ಸ್​ ಮಾಡಲು ನಾಚಿಕೆ ಆಗಲ್ವಾ? ನಟಿ ರತ್ನಾ ಕ್ಲಾಸ್​

ಆದರೆ ಇದೀಗ ಪತಿಯನ್ನು ಸಪೋರ್ಟ್​ ಮಾಡಲು ಅನುಷ್ಕಾ ಅವರು ಅಹಮದಾಬಾದ್​ಗೆ ಬಂದಿದ್ದರು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಅನುಷ್ಕಾ ಶರ್ಮಾ ಹೊರಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ಈ ವೀಡಿಯೊದಲ್ಲಿ, ಅನುಷ್ಕಾ ಶರ್ಮಾ ಸಂಪೂರ್ಣ ಭದ್ರತೆಯ ನಡುವೆ ಕಪ್ಪು ಉಡುಪಿನಲ್ಲಿ ವಿಮಾನ ನಿಲ್ದಾಣದಿಂದ ಹೊರ ಬರುತ್ತಿರುವುದನ್ನು ಕಾಣಬಹುದು. ನಂತರ ಅವರು ತಮ್ಮ ಕಾರಿನ ಬಳಿಗೆ ಹೋದರು ಮತ್ತು ನಂತರ ಹೋಟೆಲ್‌ಗೆ ಹೊರಟರು. ಅದಾದ ಬಳಿಕ ಸ್ಟೇಡಿಯಂಗೆ ಬಿಳಿಯ ಮಿನಿ ಡ್ರೆಸ್​ನಲ್ಲಿ ನಟಿ ಕಾಣಿಸಿಕೊಂಡಿದ್ದು, ಅವರ ಬೇಬಿ ಬಂಪ್​ ಕಾಣಿಸುವಂತಿದೆ. ತುಂಬಾ ರಶ್​ ಇದ್ದುದರಿಂದ ವಿರಾಟ್​ ಕೊಹ್ಲಿ ಕೂಡ ಪತ್ನಿಯನ್ನು ಸೂಕ್ಷ್ಮವಾಗಿ ಕರೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಇದೇ ಕಾರಣಕ್ಕೆ ಅವರು ಗರ್ಭಿಣಿ ಇರಬಹುದು ಎಂದು ಫ್ಯಾನ್ಸ್​ ಊಹಿಸುತ್ತಿದ್ದಾರೆ. 

ಕೆಲ ದಿನಗಳಿಂದ ನಟಿ ಅನುಷ್ಕಾ ಶರ್ಮಾ ಕ್ಯಾಮೆರಾ ಕಣ್ಣಿಗೆ ಬಿದ್ದಿರಲಿಲ್ಲ. ಮ್ಯಾಚ್​ ನೋಡಲೆಂದೇ ಅಹಮದಾಬಾದ್​ಗೆ ಬಂದಿದ್ದರು. ಅವರ ಜೊತೆ  ಗಾಯಕ ಅರಿಜಿತ್ ಸಿಂಗ್ ಕೂಡ ಇದ್ದರು.  ಅರಿಜಿತ್ ಸಿಂಗ್ ಅನುಷ್ಕಾ ಅವರ ಫೋಟೋವನ್ನು ಕ್ಲಿಕ್ ಮಾಡುವುದನ್ನು ನೋಡಬಹುದು. ಅರಿಜಿತ್  ಕ್ಯಾಮೆರಾಗೆ ಪೋಸ್ ನೀಡುವಂತೆ ಅನುಷ್ಕಾಗೆ ಕೇಳಿದ ತಕ್ಷಣ, ಅನುಷ್ಕಾ ಕೈಯಿಂದ ತನ್ನ ಹೊಟ್ಟೆಯನ್ನು ಮರೆಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ತಮ್ಮ ಬೇಬಿ ಬಂಪ್ ಅನ್ನು ಮರೆಮಾಡಲು ನಟಿ ಹೀಗೆ ಮಾಡಿದ್ದಾರೆ ಎಂದು ಊಹಿಸುತ್ತಿದ್ದಾರೆ.  ಆದರೆ, ಇದುವರೆಗೂ ದಂಪತಿಯಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.  

ಲಿಪ್​ಲಾಕ್​ ಸೀನ್​ ಮಾಡಿದ್ರೆ ಮನೆಯಲ್ಲಿ ಹೊಡೆದಾಟವೇ ನಡೆಯತ್ತೆ ಎಂದ ನಟ ನಾನಿ ಹೇಳಿದ್ದೇನು?

Follow Us:
Download App:
  • android
  • ios