Asianet Suvarna News Asianet Suvarna News

ಹೊಟ್ಟೆ ಬಿಟ್ಟ ಬಿಕಿನಿಯಲ್ಲಿ ನೋಡಿದಾಗ್ಲೂ ಫೇಕ್​ ಅಂದ್ರು! ಸೀರೆಯಲ್ಲಿ ನೋಡಿದಾಗ ಅವಳಿ-ಜವಳಿ ಅಂತಿದ್ದಾರಲ್ಲಪ್ಪಾ...

ದೀಪಿಕಾ ಪಡುಕೋಣೆಯ ಡಿಲೆವರಿ ಡೇಟ್​ ಹತ್ತಿರ ಬಂದರೂ ಆಕೆಯದ್ದು ಫೇಕ್​ ಪ್ರೆಗ್ನೆನ್ಸಿ ಅನ್ನುತ್ತಿದ್ದವರೇ ಈಗ ಅವಳಿ ಮಕ್ಕಳು ಎನ್ನುತ್ತಿದ್ದಾರೆ. ಏನಿದು ವಿಶೇಷ? 
 

Parent to be  Deepika Padukone with family spotted at Siddhivinayak Temple fans says twins suc
Author
First Published Sep 6, 2024, 6:00 PM IST | Last Updated Sep 6, 2024, 6:00 PM IST

 ದೀಪಿಕಾ ಪಡುಕೋಣೆಗೆ ಮಗುವಾಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಆದರೆ ಇವರ ಹೊಟ್ಟೆಯ ಬಗೆಗೆ ಮಾತ್ರ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ. ಈ ಮೊದಲು ದಿನಕ್ಕೊಂದರಂತೆ ನಟಿಯ ಹೊಟ್ಟೆ ಕಾಣಿಸುತ್ತಿರುವ ಕಾರಣ, ನಟಿ ಗರ್ಭಿಣಿಯೇ ಅಲ್ಲ ಎಂದು ಹೇಳಲಾಗಿತ್ತು.  ಮುಂದಿನ ತಿಂಗಳು ಡೆಲವರಿ ಎಂದರೆ ಈಗ ದೀಪಿಕಾ ತುಂಬು ಗರ್ಭಿಣಿಯಾಗಿರಬೇಕು. ಆದರೆ ಇಲ್ಲಿಯವರೆಗೂ ಅವರ ಹೊಟ್ಟೆಯ ಸೈಜ್‌ನಲ್ಲಿ ವ್ಯತ್ಯಾಸ ಆಗ್ತಿಲ್ಲ, ಅದರ ಶೇಪ್‌ ಮಾತ್ರ ಅಡ್ಡಾದಿಡ್ಡಿ ಆಗುತ್ತಿದೆ ಎಂದೇ ದೊಡ್ಡ ಮಟ್ಟಿಗಿನ ಚರ್ಚೆಯಾಗಿತ್ತು.   ತುಂಬು ಗರ್ಭಿಣಿ ದೀಪಿಕಾ ಎಲ್ಲರ ಇಂಥ ಕುಹಕ ಮಾತುಗಳಿಗೆ ಫುಲ್​ಸ್ಟಾಪ್​ ಇಡಲು ಹೊಟ್ಟೆ ಬಿಟ್ಟುಕೊಂಡು ಫೋಟೋಶೂಟ್​ ಮಾಡಿಸಿಕೊಂಡರು. ಆದರೂ ಈಗಲೂ ಈಕೆಯ ಗರ್ಭಧಾರಣೆ ಕುರಿತು ಏನೇನೋ ಸುದ್ದಿಗಳು ಹರಿದಾಡುತ್ತಲೇ ಇವೆ. 

ಹೌದು. ಟೂ ಪೀಸ್​ ಸೇರಿದಂತೆ ಹಲವಾರು ರೀತಿಯಲ್ಲಿ ವೇಷ ಮಾಡಿಕೊಂಡ ನಟಿ ದೀಪಿಕಾ ಹೊಟ್ಟೆ ತೋರಿಸಿ ಫೋಟೋಶೂಟ್​ ಮಾಡಿಸಿದ್ದು, ಅದರ ಫೋಟೋಗಳು ವೈರಲ್​ ಆಗುತ್ತಿವೆ. ಗರ್ಭಿಣಿಯೊಬ್ಬಳು ಈ ರೀತಿ ಅಸಹ್ಯ ಎನಿಸುವಂತೆ ಫೋಟೋಶೂಟ್​ ಮಾಡಿಸಿಕೊಂಡಿದ್ದಾಳೆ ಎಂದು ಥಹರೇವಾರಿ ಕಮೆಂಟ್​ಗಳ ಸುರಿಮಳೆ ಒಂದು ಕಡೆ ಆಗುತ್ತಿದ್ದರೆ, ಅದಕ್ಕೂ ಕುತೂಹಲದ ಎನ್ನುವಂಥ ಕಮೆಂಟ್ಸ್​ ಬರುತ್ತಿದೆ. ಅದೇನೆಂದರೆ ದೀಪಿಕಾ ಗರ್ಭಿಣಿ ಅಲ್ಲವೇ ಅಲ್ಲ, ಇದು ಫೋಟೋಷಾಪ್​ನಲ್ಲಿ ಮಾಡಿರುವ ಎಡಿಟಿಂಗ್​ ಅಷ್ಟೇ. ಒಂದು ವೇಳೆ ಆಕೆ ರಿಯಲ್​ ಆಗಿ ಗರ್ಭಿಣಿಯಾಗಿದ್ದರೆ ಕಲರ್​ ಫೋಟೋಶೂಟ್​ ಮಾಡಿಸುತ್ತಿದ್ದರು ಎಂದೇ ಹಲವರು ಅಭಿಪ್ರಾಯ ಪಡುತ್ತಿದ್ದಾರೆ. ಇತ್ತೀಚೆಗೆ ಬ್ಲ್ಯಾಕ್​ ಆ್ಯಂಡ್​ ವೈಟ್​ ಫೋಟೋಗ್ರಫಿ ಮತ್ತೆ ಟ್ರೆಂಡಿಂಗ್​ನಲ್ಲಿ ಇರುವುದು ನಿಜವಾದರೂ, ಒಂದೆರಡು ಫೋಟೋಗಳನ್ನಾದರೂ ಕಲರ್​ನಲ್ಲಿ ಮಾಡಿಸಿಕೊಳ್ಳುತ್ತಿದ್ದರು. ಆದರೆ ಕಲರ್​ ಫೋಟೋಗ್ರಫಿಯಾದರೆ ಎಡಿಟಿಂಗ್​ ಮಾಡಿರುವುದು ಸರಿಯಾಗಿ ಗೋಚರಿಸುತ್ತದೆ ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂದೇ ಹೇಳಲಾಗುತ್ತಿದೆ.

ಕಪ್ಪು-ಬಿಳುಪು ಪ್ರೆಗ್ನೆನ್ಸಿ ಫೋಟೋಶೂಟ್​ ಹಿಂದಿರೋ ಸತ್ಯನೇ ಬೇರೆನಾ? ದೀಪಿಕಾಗೆ ಇದೆಂಥ ಅಗ್ನಿ ಪರೀಕ್ಷೆ?

ಆದರೆ ಇದೀಗ ಎಲ್ಲರೂ ಉಲ್ಟಾ ಹೊಡೆದಿದ್ದಾರೆ. ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಟಿ ದೀಪಿಕಾ ಮತ್ತು ಪತಿ ರಣವೀರ್​ ಸಿಂಗ್​ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬಂದಿದ್ದಾರೆ. ದೀಪಿಕಾ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದು, ತುಂಬು ಗರ್ಭಿಣಿ ಎನ್ನುವುದು ಸರಿಯಾಗಿ ಗೋಚರಿಸುತ್ತದೆ. ಯಾಕೋ ಸೀರೆಯಲ್ಲಿ ದೀಪಿಕಾ ಅವರನ್ನು ನೋಡಿದ ನೆಟ್ಟಿಗರು ಗ್ಯಾರೆಂಟಿ ಅವಳಿ ಜವಳಿ ಮಕ್ಕಳು ಎನ್ನುತ್ತಿದ್ದಾರೆ! ಇಲ್ಲಿಯವರೆಗೆ ಫೇಕ್​ ಫೇಕ್​ ಅಂದವರೆಲ್ಲಾ ಈಗ ಹೀಗೆ ಯಾಕೆ ಒಂದೇ ಸಲಕ್ಕೆ ಉಲ್ಟಾ ಹೊಡೆಯುತ್ತಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಹೊಟ್ಟೆ ಬಿಟ್ಟು ಬಿಕಿನಿಯಲ್ಲಿಯೂ ಕಾಣಿಸದೇ ಇದ್ದುದು, ಸೀರೆಯಲ್ಲಿ ಅಂಥದ್ದೇನು ಕಾಣಿಸಿತು ಎನ್ನುವುದು ಹಲವರ ಪ್ರಶ್ನೆಯಾಗಿದೆ. 

 ಆರಂಭದಲ್ಲಿ ಮಗುವಿನ ಬಗ್ಗೆ ದೀಪಿಕಾ ಘೋಷಿಸಿದಾಗಲೂ ತಾವು ಗರ್ಭಿಣಿ ಎಂದು ಹೇಳಿರಲಿಲ್ಲ. ಸೆಪ್ಟೆಂಬರ್‌ನಲ್ಲಿ ಮಗುವಿನ ನಿರೀಕ್ಷೆ ಅಂದಷ್ಟೇ ಹೇಳಿದ್ದರು. ಅದನ್ನೆಲ್ಲಾ ಕೆದಕಿ, ನಟಿ ಗರ್ಭಿಣಿ ಅಲ್ಲ, ಕಲ್ಕಿಯ ಫೇಕ್‌ ಬೇಬಿಬಂಪ್‌ ಅನ್ನೇ ತೋರಿಸ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಏಕೆಂದರೆ,  ನಟಿಯ  ಕಲ್ಕಿ 2898 ಎಡಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಫೈಟಿಂಗ್‌ ದೃಶ್ಯವಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ನಟಿ ಗರ್ಭಿಣಿಯಾಗಿರುವ ರೋಲ್‌ ಮಾಡಿದ್ದಾರೆ. ಆಗ ದೀಪಿಕಾ ನಿಜವಾಗಿಯೂ ಗರ್ಭಿಣಿಯಾಗಿದ್ದಳು ಎಂದು ಪತಿ ರಣವೀರ್‌ ಸಿಂಗ್‌ ಹೇಳಿದ್ದಾರೆ. ಆದರೆ 2-3 ತಿಂಗಳ ಗರ್ಭಿಣಿ ಅಂಥ ಸಾಹಸಮಯ ದೃಶ್ಯ ಮಾಡಲು ಸಾಧ್ಯವೇ ಇಲ್ಲ. ಕ್ಲೈಮ್ಯಾಕ್ಸ್‌ನಲ್ಲಿ ನಕಲಿ ಬೇಬಿ ಬಂಪ್‌ ತೋರಿಸಲಾಗಿದೆ. ಅದನ್ನೇ ಈಗಲೂ ನಟಿ ತೋರಿಸುತ್ತಿದ್ದಾರೆ ಎನ್ನುವ ವಾದ ಮಾಡುತ್ತಲೇ ಇದ್ದರೂ, ಈಗ  ಸೀರೆಯಲ್ಲಿ ನೋಡಿದ ಮೇಲೆ ಅವಳಿ ಜವಳಿ ಎನ್ನುತ್ತಿದ್ದಾರೆ. ಅಂದಹಾಗೆ ದೀಪಿಕಾಗೆ ಗಂಡು ಮಗು ಎಂದು ಇದಾಗಲೇ ಜ್ಯೋತಿಷಿಗಳು ಹೇಳಿದ್ದಾರೆ. 

ದೀಪಿಕಾ ಪಡುಕೋಣೆಯ ಒಂದೇ ಒಂದು ಸೆಕೆಂಡ್‌ನ ವಿಡಿಯೋ ನೋಡಲು ಮುಗಿ ಬಿದ್ದ ನೆಟ್ಟಿಗರು! ಅಂಥದ್ದೇನಿದೆ ನೋಡಿ...
 

Latest Videos
Follow Us:
Download App:
  • android
  • ios