Actress Sridevi Death: ಭಾರತೀಯ ಚಿತ್ರರಂಗದ ಅಪ್ರತಿಮ ನಟಿ, 'ಅತಿಲೋಕ ಸುಂದರಿ' ಶ್ರೀದೇವಿ ಸಾವು ಹೇಗೆ ಆಯ್ತು ಎಂದು ಇನ್ನೂ ಅನೇಕರಿಗೆ ಡೌಟ್‌ ಇದೆ. Paranormal Investigation ಆಗಿರುವ Saurabh Poonia ಅವರು ಈ ಬಗ್ಗೆ ಶಲೀನ್‌ ಶ್ರೋತ್ರಿಯಾ ಜೊತೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಭಾರತೀಯ ಚಿತ್ರರಂಗ ಕಂಡ ಪ್ರತಿಭಾವಂತ, ಸುಂದರ ನಟಿಯರಲ್ಲಿ ಶ್ರೀದೇವಿ ಅಗ್ರಗಣ್ಯರು. ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಇವರು, ದಕ್ಷಿಣ ಭಾರತದ ಚಿತ್ರರಂಗದಿಂದ ಬಾಲಿವುಡ್‌ವರೆಗೆ ದಶಕಗಳ ಕಾಲ 'ಲೇಡಿ ಸೂಪರ್‌ಸ್ಟಾರ್' ಆಗಿ ಮೆರೆದಿದ್ದಾರೆ, ಆಳಿದ್ದಾರೆ. ಇವರ ಸಾವಿನ ಕಾರಣ ಏನು ಎಂದು ಇನ್ನೂ ಕೆಲವರಿಗೆ ತಿಳಿದುಕೊಳ್ಳುವ ಕುತೂಹಲ ಇದೆ. ಶ್ರೀದೇವಿ ಬಾತ್‌ಟಬ್‌ನಲ್ಲಿ ಹೇಗೆ ಬಿದ್ದು ಸಾಯ್ತಾರೆ ಎಂದು ಕೆಲವರು ಅನುಮಾನ ಪಟ್ಟಿದ್ದರು. Paranormal Investigation ಆಗಿರುವ Saurabh Poonia ಈ ಬಗ್ಗೆ ಮಾತನಾಡಿದ್ದಾರೆ, ಶ್ರೀದೇವಿ ಆತ್ಮವನ್ನು ಮಾತನಾಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಲನಟಿ, ನಾಯಕಿಯಾಗಿ ಮೆರೆದರು!

ಕನ್ನಡದಲ್ಲಿ ಡಾ. ರಾಜ್‌ಕುಮಾರ್ ಅವರೊಂದಿಗೆ 'ಭಕ್ತ ಕುಂಬಾರ' ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಸುಮಾರು 15 ವರ್ಷಗಳ ಬ್ರೇಕ್‌ ಬಳಿಕ, 2012 ರಲ್ಲಿ 'ಇಂಗ್ಲಿಷ್ ವಿಂಗ್ಲಿಷ್' ಸಿನಿಮಾ ಮೂಲಕ ಕಾಣಿಸಿಕೊಂಡಿದ್ದರು. ಅವರ ಕೊನೆಯ ಚಿತ್ರ 'ಮಾಮ್' (MOM) ಗಾಗಿ ಮರಣೋತ್ತರ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಲಭಿಸಿತು. ಭಾರತ ಸರ್ಕಾರ ಅವರಿಗೆ 2013 ರಲ್ಲಿ 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಿತು.

ದುಬೈನಲ್ಲಿ ಏನು ನಡೆಯಿತು?

ಶ್ರೀದೇವಿ ಅವರು ಚಿತ್ರ ನಿರ್ಮಾಪಕ ಬೋನಿ ಕಪೂರ್ ಜೊತೆ ಮದುವೆಯಾದರು. ಇವರಿಗೆ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಎಂಬ ಮಕ್ಕಳಿದ್ದಾರೆ. ಶ್ರೀದೇವಿ ಅವರು ಬೋನಿ ಕಪೂರ್ ಸಂಬಂಧಿಕರಾದ ಮೋಹಿತ್ ಮಾರ್ವಾ ಮದುವೆಯಲ್ಲಿ ಭಾಗವಹಿಸಲು ದುಬೈಗೆ ಹೋಗಿದ್ದರು. ಬಾತ್‌ಟಬ್‌ನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾದರು. ದುಬೈ ಪೊಲೀಸರು ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ, ಶ್ರೀದೇವಿ ಅವರು ಬಾತ್‌ಟಬ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಅವರ ದೇಹದಲ್ಲಿ ಮದ್ಯದ ಅಂಶವೂ ಇತ್ತಂತೆ.

ಶ್ರೀದೇವಿ ಆತ್ಮ ಏನು ಹೇಳಿತು?

ಆರಂಭದಲ್ಲಿ ನಾನು ತನಿಖೆ ಮಾಡಿದಾಗ ಶ್ರೀದೇವಿ ಆತ್ಮ ಏನೂ ಹೇಳಲಿಲ್ಲ, ಪದೇ ಪದೇ ಕೇಳಿದೆ. ಅದಾದ ಬಳಿಕ ನಾನು ಯಾರು ನಿಮಗೆ ಹೊಡೆದು ಬಾತ್‌ಟಬ್‌ನಲ್ಲಿ ಮುಳುಗಿಸಿದ್ದಾರೆ ಎಂದು ಪ್ರಶ್ನೆ ಕೇಳಿದೆ. ಆಗ ಅವರ ಆತ್ಮ ಬೋನಿ ಕಪೂರ್‌ ಎಂದು ಸ್ಪಷ್ಟವಾಗಿ ಹೇಳಿದೆ. ನಾನು ಇದನ್ನೆಲ್ಲ ಹೇಳಿದರೆ ಯಾರೂ ನಂಬೋದಿಲ್ಲ, ನನ್ನ ಬಳಿ ಆಡಿಯೋ ರೆಕಾರ್ಡ್‌ ಕೂಡ ಇದೆ ಎಂದು ಹೇಳಿದ್ದಾರೆ.