ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಕುತೂಹಲ ಹೆಚ್ಚಾಗುತ್ತಿದೆ. ಇದೀಗ ಮತ್ತೊಂದು ಮಾಹಿತಿ ಬಹಿರಂಗವಾಗಿದೆ. ಟಾಕ್ಸಿಕ್ ಸಿನೆಮಾ ಶೂಟಿಂಗ್ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ನಡೆಯುತ್ತಿದೆ. ಕೆಜಿಎಫ್ ಫ್ಯಾನ್ ಇಂಡಿಯಾ ಆಗಿದ್ದರೆ ಟಾಕ್ಸಿ ಪ್ಯಾನ್ ವರ್ಲ್ಡ್ ಸಿನಿಮಾ. ಕಾರಣ ಇಲ್ಲಿದೆ.
ಬೆಂಗಳೂರು(ಫೆ.09) ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಇದೀಗ ಭಾರಿ ಚರ್ಚೆಯಾಗುತ್ತಿದೆ. ಕೆಜಿಎಪ್ ಮೂಲಕ ದೇಶಾದ್ಯಂತ ಹೊಸ ಅಲೆ ಸೃಷ್ಟಿಸಿರುವ ಯಶ್ ಇದೀಗ ಟಾಕ್ಸಿಕ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಕನ್ನಡ ಸಿನಿಮಾವನ್ನು ಪ್ಯಾನ್ ಇಂಡಿಯಾಗೆ ಕೊಂಡೊಯ್ದು ಹೊಸ ದಾಖಲೆ ಬರೆದ ಯಶ್ ಇದೀಗ ಟಾಕ್ಸಿಕ್ ಸಿನಿಮಾ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ. ಕಾರಣ ಟಾಕ್ಸಿಕ್ ಸಿನಿಮಾ ಕೇವಲ ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಇದು ಪ್ಯಾನ್ ವರ್ಲ್ಡ್ ಸಿನಿಮಾ. ಹೌದು. ಟಾಕ್ಸಿಕ್ ಸಿನಿಮಾ ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಶೂಟಿಂಗ್ ಮಾಡಲಾಗುತ್ತಿದೆ.
ಟಾಕ್ಸಿಕ್ ಸಿನಿಮಾ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸ್ಕ್ರಿಪ್ಟ್, ಸಂಭಾಷಣೆ ಎಲ್ಲವನ್ನೂ ಬರೆಯಲಾಗಿದೆ. ಇಷ್ಟೇ ಅಲ್ಲ ಇಂಗ್ಲೀಷ್ ಹಾಗೂ ಕನ್ನಡ ಭಾಷೆಯಲ್ಲಿ ಟಾಕ್ಸಿಕ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಭಾರತದ ಇತರ ಭಾಷೆಗಳಿಗೆ ಡಬ್ ಮಾಡಲಾಗುತ್ತದೆ. ಈ ಪೈಕಿ ಹಿಂದಿ, ತೆಲೆಗು, ತಮಿಳು, ಮಲೆಯಾಳಂ ಸೇರಿದಂತೆ ಭಾರತದ ಹಲವು ಭಾಷೆಗಳಿಗೆ ಟಾಕ್ಸಿಕ್ ಸಿನಿಮಾ ಡಬ್ ಮಾಡಲಾಗುತ್ತದೆ. ಈ ಚಿತ್ರದ ಕತೆ ಪ್ಯಾನ್ ವರ್ಲ್ಡ್ ಸಿನಿಮಾದ ಎಲ್ಲಾ ಅರ್ಹತೆ ಹೊಂದಿದೆ. ಹೀಗಾಗಿ ಈ ಸಿನಿಮಾವನ್ನು ಪ್ಯಾನ್ ವರ್ಲ್ಡ್ ಮಾಡಲು ಎರಡು ಭಾಷೆಯಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಯಶ್ ಕನ್ನಡದಲ್ಲಿ ಹಾಗೂ ಇಂಗ್ಲೀಷ್‌ನಲ್ಲೂ ಡೈಲಾಗ್ ಹೇಳಲಿದ್ದಾರೆ. ಈ ಸುದ್ದಿ ಹೋರಬೀಳುತ್ತಿದ್ದಂತೆ ಟಾಕ್ಸಿಕ್ ಸಿನಿಮಾ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಟಾಕ್ಸಿಕ್ ಸಿನಿಮಾ ಸೆಟ್‌ನಲ್ಲಿ ಯಶ್ ಭೇಟಿಯಾಗಿ ಮದುವೆ ಆಮಂತ್ರಣ ಪತ್ರಿಕೆ ನೀಡಿದ ಡಾಲಿ
ಗ್ಲೋಬಲ್ ರೀಚ್ ಕಾರಣಕ್ಕೆ ಟಾಕ್ಸಿಕ್ ಸಿನಿಮಾದಲ್ಲಿನ ತಾರಾಬಳಗವನ್ನು ಅದಕ್ಕೆ ತಕ್ಕಂತೆ ಆಯ್ಕೆ ಮಾಡಲಾಗಿದೆ. ಟಾಕ್ಸಿಕ್ ಪ್ಯಾನ್ ವರ್ಲ್ಡ್ ಸಿನಿಮಾ ಆಗಿ ಮಿಂಚಲು ರೆಡಿಯಾಗುತ್ತಿದೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ಹಾಗೂ ಯಶ್ ಅವರ ಮೊನ್‌ಸ್ಟರ್ ಮೈಂಡ್ ಕ್ರಿಯೆಶನ್ ನಿರ್ಮಾಣ ಮಾಡುತ್ತಿದೆ. ಹೀಗಾಗಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಗೀತು ಮೋಹನದಾಸ್ ನಿರ್ದೇಶಿಸುತ್ತಿರುವ ಟಾಕ್ಸಿಕ್ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಯಶ್ ಹುಟ್ಟು ಹಬ್ಬದ ದಿನ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ಕೆಲವೇ ನಿಮಿಷದಲ್ಲಿ ಟ್ರೇಲರ್ ದಾಖಲೆ ಬರೆದಿತ್ತು.
ಟಾಕ್ಸಿಕ್ ಕನ್ನಡದ ಜೊತೆಗೆ ಚಿತ್ರ ಇಂಗ್ಲಿಷ್‌ನಲ್ಲೂ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಕಥೆಗೆ ಜಾಗತಿಕ ಸ್ವರೂಪವಿದೆ, ಆದ್ದರಿಂದಲೇ ಇಂಗ್ಲಿಷ್‌ನಲ್ಲಿಯೂ ಚಿತ್ರೀಕರಿಸಲಾಗುತ್ತಿದೆ ಎಂಬ ಮಾಹಿತಿ ಇದೆ. ಇದಲ್ಲದೆ, ಭಾರತೀಯ ಮತ್ತು ಅಂತರರಾಷ್ಟ್ರೀಯ ಭಾಷೆಗಳಿಗೆ 'ಟಾಕ್ಸಿಕ್' ಡಬ್ ಮಾಡಿ ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ. ಬರೋಬ್ಬರಿ 200 ಕೋಟಿ ರೂಪಾಯಿ ವೆಚ್ಚದಲ್ಲಿ ಟಾಕ್ಸಿಕ್ ಚಿತ್ರ ನಿರ್ಮಾಣ ಆರಂಭಗೊಂಡಿತ್ತು. ಆದರೆ ಚಿತ್ರದ ಖರ್ಚು ವೆಚ್ಚಕ್ಕೆ ಅನುಗುಣವಾಗಿ ಇದರ ಬಜೆಟ್ ಶೇಕಡಾ 40 ರಷ್ಟು ಹೆಚ್ಚಾಗಿದೆ ಎಂದು ಮೂಲಗಳು ಹೇಳುತ್ತಿದೆ. ಹೀಗಾಗಿ ದುಬಾರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ.ಈ ವರ್ಷವೇ ಚಿತ್ರ ತೆರೆಗೆ ಬರಲಿದೆ.
ಜನವರಿ 8 ರಂದು 'ಟಾಕ್ಸಿಕ್' ನ ಮೊದಲ ಟೀಸರ್ ಬಿಡುಗಡೆಯಾಗಿತ್ತು. ಭಾರಿ ಮೆಚ್ಚಗೆಗೆಗೂ ಪಾತ್ರವಾಗಿತ್ತು. ಗ್ಯಾಂಗ್‌ಸ್ಟರ್ ಡ್ರಾಮಾ ಚಿತ್ರ ಇದಾಗಿದೆ. ಹಳೇ ವಿಂಟೇಜ್ ಕಾರುಗಳನ್ನು ಈ ಚಿತ್ರದಲ್ಲಿ ಬಳಸಲಾಗಿದೆ. ಟೀಸರ್‌ನಲ್ಲಿ ನಾಯಕ ನಟ ಯಶ್ ವಿಂಟೇಜ್ ಕಾರಿನಲ್ಲಿ ಬಂದು ಇಳಿಯುತ್ತಿರುವ ದೃಶ್ಯವಿದೆ. ಬಳಿಕ ಜನಪ್ರಿಯ ಹೊಟೆಲ್‌ಗೆ ತೆರಳಿ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿರುವ ಟ್ರೇಲರ್ ಭಾರಿ ಕುತೂಹಲ ಹುಟ್ಟು ಹಾಕಿತ್ತು. ಇದೀಗ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಚಿತ್ರ ಭಾರತೀಯ ಸಿನಿಮಾದಲ್ಲಿ ಹೊಸ ದಾಖಲೆಗೆ ಸಜ್ಜಾಗಿದೆ.
ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಬಳಸಿದ್ದು ಏಳೂವರೆ ದಶಕದ ಹಿಂದಿನ ಕಾರು, ವಿಡಿಯೋ ಬಹಿರಂಗ
