ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಬಳಸಿದ್ದು ಏಳೂವರೆ ದಶಕದ ಹಿಂದಿನ ಕಾರು, ವಿಡಿಯೋ ಬಹಿರಂಗ
ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಸಣ್ಣ ಟೀಸರ್ ಒಂದು ಬಿಡುಗಡೆಯಾಗಿದೆ. ಯಶ್ ಸ್ವ್ಯಾಗ್, ಸ್ಟೈಲ್‌ಗೆ ಸರಿಸಾಟಿ ಇಲ್ಲ. ಮತ್ತೊಂದು ವಿಶೇಷ ಅಂದರೆ ಯಶ್ ಈ ಸಿನಿಮಾದಲ್ಲಿ ಬಳಸಿರುವ ಕಾರು ಯಾವುದು ಅನ್ನೋದು ಟೀಸರ್‌ನಲ್ಲಿ ಬಹಿರಂಗವಾಗಿದೆ.
ಬೆಂಗಳೂರು(ಜ.10) ಕೆಜಿಎಫ್ ಬಳಿಕ ಯಶ್ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಟಾಕ್ಸಿಕ್ ಚಿತ್ತಕ್ಕಾಗಿ ಇದೀಗ ಯಶ್ ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ನಡುವೆ ಟಾಕ್ಸಿಕ್ ಚಿತ್ರದ ಪೋಸ್ಟರ್ ಬಿಡುಗಡೆಯಾದಾಗ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಇದೀಗ ಟಾಕ್ಸಿಕ್ ಚಿತ್ರ ಟೀಸರ್ ಬಿಡುಗಡೆಯಾಗಿದೆ. ಪೋಸ್ಟರ್ ಹಾಗೂ ಟೀಸರ್ ಮೂಲಕ ಹಲವರು ಟಾಕ್ಸಿಕ್ ಸಿನಿಮಾದ ಕತೆ ಏನು? ಇದರಲ್ಲಿ ಯಶ್ ಸ್ಟೈಲ್ ಕುರಿತು ವ್ಯಾಖ್ಯಾನ ಆರಂಭಗೊಂಡಿದೆ. ಆದರೆ ಇವರಡರಲ್ಲೂ ಯಶ್ ಬಳಸಿರುವ ಕಾರಿನ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಟೀಸರ್ ವಿಡಿಯೋದಲ್ಲಿ ಯಶ್ ಬಳಸಿದ ವಿಂಟೇಜ್ ಕಾರಿನ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಕತೆಯ ಸುಳಿವು ಸಿಕ್ಕಿದೆ.
ಟೀಸರ್‌ನಲ್ಲಿ ಯಶ್ ವಿಂಟೇಜ್ ಕಾರಿನ ಮೂಲಕ ಜನಪ್ರಿಯ ಪರಾಸಿಯೋ ಹೊಟೆಲ್‌ಗೆ ಆಗಮಿಸುತ್ತಾರೆ. ಕಾರಿನಿಂದ ಇಳಿದು ಸಿಗರೇಟು ಹಚ್ಚಿ ಹೊಟೆಲ್ ಒಳಕ್ಕೆ ಸಾಗುತ್ತಾರೆ. ಹ್ಯಾಟ್ ಹಾಗೂ ಬಿಳಿ ಬಣ್ಣದ ಸೂಟ್ ಧರಿಸಿರುವ ಯಶ್, ಪಾರ್ಟಿ, ಡ್ಯಾನ್ಸ್ ನಡುವೆ ಯಶ್ ತಮ್ಮ ಸ್ವ್ಯಾಗ್ ಸ್ಟೈಲ್ ಮೂಲಕ ಸಾಗುವ ದೃಶ್ಯವಿದೆ. ಬಳಿಕ ಪಾರ್ಟಿಯಲ್ಲಿ ಯಶ್ ಸಂಭ್ರಮಿಸುವ ಈ ಟೀಸರ್ ಭಾರಿ ಸಂಚಲನ ಮೂಡಿಸಿದೆ. ಈ ಟೀಸರ್‌ನಲ್ಲಿ ಯಶ್ ಬಳಸಿರುವ ವಿಂಟೇಟ್ ಕಾರಿನ ಸಣ್ಣ ಸುಳಿವು ಸಿಕ್ಕಿದೆ.
ಯಾಕೋ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸದ ಯಶ್ ಅವ್ರಿಗೆ ಏನೋ ಗಿಫ್ಟ್ ಕೊಟ್ಟಿದ್ದಾರೆ!
ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಬಳಸಿರುವುದು ಲಿಂಕನ್ ಕಾಸ್ಮೋಪೊಲಿಟನ್ ಸ್ಪೋರ್ಟ್ಸ್ ಸೆಡಾನ್ ಎಡಿಶನ್ ಕಾರು(lincoln cosmopolitan)sport sedan) ಎನ್ನಲಾಗುತ್ತಿದೆ. ಟೀಸರ್‌ನಲ್ಲಿ ಕಾರು ಸ್ಪಷ್ಟವಾಗಿಲ್ಲದಿದ್ದರೂ ಇದೇ ಲಿಂಕನ್ ಕಾಸ್ಮೋಪೊಲಿಟನ್ ಕಾರು ಬಳಸಲಾಗಿದೆ ಅನ್ನೋ ಸುಳಿವು ಸ್ಪಷ್ಟವಾಗಿದೆ. ಲಿಂಕನ್ ಕಾಸ್ಮೋಪೊಲಿಟನ್ ಕಾರಿನಲ್ಲಿ ಹಲವು ಮಾಡೆಲ್‌ಗಳಿವೆ. ಕನ್ವರ್ಟೇಬಲ್, ಕ್ಯಾಪ್ರಿ ಕೂಪ್, ಕಸ್ಟಮ್ ಫೋರ್ ಡೋರ್ ಸೆಡಾನ್ ಸೇರಿದಂತೆ ವಿವಿದ ಮಾಡೆಲ್‌ಗಳಿವೆ. ಈ ಪೈಕಿ ಟಾಕ್ಸಿಕ್ ಸಿನಿಮಾದಲ್ಲಿ ಬಳಸಿದ್ದು ಲಿಂಕನ್ ಕಾಸ್ಮೋಪೊಲಿಟನ್ ಸ್ಪೋರ್ಟ್ ಸೆಡಾನ್ ಕಾರು ಅನ್ನೋ ಸುಳಿವು ಸಿಕ್ಕಿದೆ.
1950 ವೇಳೆ ಲಿಂಕನ್ ಕಾಸ್ಮೋಪೊಲಿಟನ್ ಕಾರನ್ನು ಅಮೆರಿಕ ಅಧ್ಯಕ್ಷರ ಅಧಿಕೃತ ಕಾರು ಎಂದು ಘೋಷಿಸಲಾಗಿತ್ತು. ಈ ಕಾರನ್ನು ಭಾರತದ ರಾಜ ಮಹಾರಾಜಗಳು ಬಳಸಿದ್ದಾರೆ. ಇದೇ ಕಾರನ್ನು ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಬಳಸಿದ್ದಾರೆ. ಅತ್ಯಂತ ಶ್ರೀಮಂತಿಕೆಯ ಸಂಕೇತವಾಗಿತ್ತು ಈ ಕಾರು. ಹೀಗಾಗಿ ಭಾರತದಲ್ಲಿ ಕೆಲವೇ ಕೆಲವು ಮಂದಿ 1950ರ ದಶಕದಲ್ಲಿ ಈ ಕಾರು ಬಳಸಿದ್ದರು. ಹೀಗಾಗಿ ಯಶ್ ಟಾಕ್ಸಿಕ್ ಸಿನಿಮಾ 1950ರ ಆಸುಪಾಸಿನ ಕತೆಯಾಗಿರಲಿದೆ ಅನ್ನೋ ಚರ್ಚೆ ಶುರುವಾಗಿದೆ.
ಈ ಟೀಸರ್‌ನಲ್ಲಿ ಮತ್ತೊಂದು ಮಾಹಿತಿಯೂ ಬಹಿರಂಗವಾಗಿದೆ. ಟಾಕ್ಸಿಕ್ ಸಿನಿಮಾ ಕರ್ನಾಟಕ ಹಾಗೂ ಗೋವಾ ಸಂಬಂಧಿಸಿದೆ ಅನ್ನೋ ಮಾಹಿತಿ ಹಲವು ದಿನಗಳ ಹಿಂದೆ ಹರಿದಾಡಿತ್ತು. ಈ ಟೀಸರ್‌ನಲ್ಲಿ ಯಶ್ ತೆರಳುವ ಹೊಟೆಲ್ ಪರಾಸಿಯೋ(ಪ್ಯಾರಡೈಸ್) ಇದು ಗೋವಾದಲ್ಲಿರುವ ಅತ್ಯಂತ ಜನಪ್ರಿಯ ಹೊಟೆಲ್ ಹಾಗೂ ಗೆಸ್ಟ್ ಹೌಸ್. ಹೀಗಾಗಿ ಯಶ್ ಟೀಸರ್ ಇದೀಗ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಯಶ್ ಸ್ಟೈಲ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಯಶ್ ಟಾಕ್ಸಿಕ್ ಸಿನಿಮಾ ಹಲವು ಕುತೂಹಲಗಳನ್ನು ಹಿಡಿದಿಟ್ಟುಕೊಂಡಿದೆ. ಕಾಂತಾರ ಬಳಿಕ ಪ್ಯಾನ್ ಇಂಡಿಯಾ ಸಿನಿಮಾ ಕನ್ನಡದಿಂದ ಬಂದರೂ ನಿರೀಕ್ಷಿತ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿಲ್ಲ. ಪುಷ್ಪಾ2 ದೇಶ ವಿದೇಶಗಳಲ್ಲಿ ಸದ್ದು ಮಾಡಿದೆ. ಇದೀಗ ಎಲ್ಲರ ನಿರೀಕ್ಷೆ ಟಾಕ್ಸಿಕ್ ಸಿನಿಮಾ ಮೇಲಿದೆ. ಜೊತೆಗೆ ನಾಯಕ ನಟ ಯಶ್. ಕೆಜಿಎಫ್ ಮೂಲಕ ಯಶ್ ದೇಶಾದ್ಯಂತ ಅಭಿಮಾನಿಗಳ ಬಳಗ ಹೊಂದಿದ್ದಾರೆ. ಯಶ್ ಚಿತ್ರಕ್ಕೆ ಎಲ್ಲರು ಕಾಯುತ್ತಿದ್ದಾರೆ.
Toxic Movie Big Update: ಏನ್ ಗುರು ಇದು, ಬಿಡುಗಡೆಗೆ ಮೊದಲೇ ಪುಷ್ಪಾ 2 ದಾಖಲೆ ಪುಡಿಗಟ್ಟಿದ ಟಾಕ್ಸಿಕ್!