ಪಹಲ್ಗಾಮ್ ದಾಳಿಯ ನಂತರ ಭಾರತ-ಪಾಕಿಸ್ತಾನ ಸಂಬಂಧ ಹದಗೆಟ್ಟಿದ್ದು, 16ಕ್ಕೂ ಹೆಚ್ಚು ಪಾಕಿಸ್ತಾನಿ ಟಿವಿ ತಾರೆಯರ ಸೋಶಿಯಲ್ ಮೀಡಿಯಾ ಖಾತೆಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ.
ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನ ನಡುವಣ ಸಂಬಂಧ ವಿಷಮಿಸಿದ್ದು, ಈಗ ಪಾಕಿಸ್ತಾನಕ್ಕೆ ಸೇರಿದ 16ಕ್ಕೂ ಹೆಚ್ಚು ಟಿವಿ ತಾರೆಯರ ಸೋಶಿಯಲ್ ಮೀಡಿಯಾ ಖಾತೆಯನ್ನು ಭಾರತದಲ್ಲಿ ಬ್ಲಾಕ್ ಮಾಡಲಾಗಿದೆ. ಪಾಕಿಸ್ತಾನದ ಈ ನಟ ನಟಿಯರು ಭಾರತದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಫೇಮಸ್ ಆಗಿದ್ದರು. ಆದರೆ ಈಗ ಅವರ ಖಾತೆಗಳನ್ನು ಭಾರತದಲ್ಲಿ ಬ್ಲಾಕ್ ಮಾಡಲಾಗಿದೆ. ಪಾಕಿಸ್ತಾನದ ಫೇಮಸ್ ತಾರೆಯರಾದ ಹನಿಯಾ ಆಮೀರ್, ಅಲಿ ಝಾಫರ್, ಸನಮ್ ಸಯೀದ್, ಬಿಲಾಲ್ ಅಬ್ಬಾಸ್, ಈಕ್ರಾ ಅಜೀಜ್, ಇಮ್ರಾನ್ ಅಬ್ಬಾಸ್, ಸಜಲ್ ಅಲಿ ಮುಂತಾದ ಪಾಕಿಸ್ತಾನದ ಫೇಮಸ್ ಸೆಲೆಬ್ರಿಟಿಗಳ ಇನ್ಸ್ಟಾ ಖಾತೆಯನ್ನು ಈಗ ಭಾರತದಲ್ಲಿ ವಜಾ ಮಾಡಲಾಗಿದೆ. ಹೀಗಾಗಿ ಭಾರತದಲ್ಲಿರುವ ಅವರ ಅಭಿಮಾನಿಗಳಿಗೆ ಇನ್ನು ಮುಂದೆ ಅವರ ಯಾವುದೇ ಅಪ್‌ಡೇಟ್‌ಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಪಾಕಿಸ್ತಾನದ ನಟಿ ಹನಿಯಾ ಆಮೀರ್ ಖಾತೆಯನ್ನು ಮೊದಲು ಬ್ಲಾಕ್ ಮಾಡಲಾಗಿದೆ. ಈ ಪಾಕಿಸ್ತಾನಿ ಸೆಲೆಬ್ರಿಟಿಗಳ ಭಾರತದಲ್ಲಿರುವ ಅಭಿಮಾನಿಗಳು ಅವರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ನೋಡಲು ಪ್ರಯತ್ನಿಸಿದಾಗ ಅವರಿಗೆ ಭಾರತದಲ್ಲಿ ಈ ಖಾತೆ ಲಭ್ಯವಿಲ್ಲ. ಈ ವಿಷಯವನ್ನು ನಿರ್ಬಂಧಿಸುವ ಕಾನೂನು ವಿನಂತಿಯನ್ನು ನಾವು ಪಾಲಿಸಿದ್ದರಿಂದ ಹೀಗಾಗಿದೆ ಎಂದು ಕಾಣಿಸುತ್ತಿದೆ.
26 ಪ್ರವಾಸಿಗರ ಬಲಿ ಪಡೆದ ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನ ನಡುವೆ ಸಂಬಂಧ ಬಿಗಾಡಾಯಿಸಿರುವ ನಡುವೆಯೇ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಪಾಕಿಸ್ತಾನದವರೆ ಆದ ಫವಾದ್ ಖಾನ್ ಮತ್ತು ವಹಾಜ್ ಅಲಿಯಂತಹ ಇತರ ಕೆಲವು ಜನಪ್ರಿಯ ಪಾಕಿಸ್ತಾನಿ ನಟರ ಇನ್‌ಸ್ಟಾಗ್ರಾಮ್ ಖಾತೆಗಳು ಇನ್ನೂ ಭಾರತದಲ್ಲಿ ಕಾಣಿಸುತ್ತಿವೆ. ಸೆಲೆಬ್ರಿಟಿಗಳ ಇನ್‌ಸ್ಟಾಗ್ರಾಮ್ ಖಾತೆಗಳಲ್ಲದೆ, ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಚಾರಗಳನ್ನು ಪೋಸ್ಟ್ ಮಾಡಿದವರ ಹಾಗೂ ಭಾರತದ ದೇಶ, ಸೇನೆ ಮತ್ತು ಭದ್ರತಾ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಸುಳ್ಳು ನಿರೂಪಣೆಗಳನ್ನು ಮಾಡಿದ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರ 3.5 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದ್ದ ಯೂಟ್ಯೂಬ್ ಚಾನೆಲ್‌ಗೂ ಸಹ ಭಾರತದಲ್ಲಿ ನಿರ್ಬಂಧ ಹೇರಲಾಗಿದೆ. ಏಪ್ರಿಲ್ 22 ರ ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಸರ್ಕಾರ ತೆಗೆದುಕೊಂಡ ಹಲವಾರು ಇತರ ಕ್ರಮಗಳ ನಂತರ ಈಗ ಸೋಶಿಯಲ್ ಮೀಡಿಯದಲ್ಲೂ ಖಾತೆಗಳನ್ನು ಬ್ಯಾನ್ ಮಾಡಲಾಗುತ್ತಿದೆ. ಪಹಲ್ಗಾಮ್ ದಾಳಿಯ ನಂತರ ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದೆ. ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಮತ್ತು ನವದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್‌ನಲ್ಲಿ ಸಿಬ್ಬಂದಿಯನ್ನು ಕಡಿಮೆ ಮಾಡುವ ಮೂಲಕ ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಭಾರತ ಕಡಿಮೆ ಮಾಡಿದೆ ಮತ್ತು ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸಿದೆ. ಇತ್ತ ಭಾರತೀಯ ಮಿಲಿಟರಿ ಪ್ರತೀಕಾರದ ಭಯದಿಂದ ಪಾಕಿಸ್ತಾನಿ ಅಧಿಕಾರಿಗಳು ಆತಂಕದಿಂದ ತುದಿಗಾಲಲ್ಲಿ ನಿಂತಿದ್ದು, ದಿನದಿಂದ ದಿನಕ್ಕೆ ಪಾಕಿಸ್ತಾನದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ.
ಪಾಕ್‌ಗೆ ಭಾರತದ ದಾಳಿಯ ಭಯ
ಇಸ್ಲಾಮಾಬಾದ್: ಕಾಶ್ಮೀರದಲ್ಲಿ 26 ಜನರ ಸಾವಿಗೆ ಕಾರಣವಾದ ಪಹಹಲ್ಗಾಮ್ ನರಮೇಧದ ನಂತರ ಭಾರತದಿಂದ ದಾಳಿ ಎದುರಿಸುತ್ತಿರುವ ಪಾಕಿಸ್ತಾನ, ಇದೀಗ ಅದನ್ನು ಬಹಿರಂಗವಾಗೇ ಹೇಳಿಕೊಳ್ಳುತ್ತಿದೆ. ಮುಂದಿನ 24ರಿಂದ 26 ಗಂಟೆಗಳಲ್ಲಿ ನಮ್ಮ ವಿರುದ್ದ ಭಾರತ ಸೇನಾ ಕಾಯಾಚರಣೆ ನಡೆಸಲು ಭಾರತ ಸರ್ವ ಸಿದ್ಧತೆ ನಡೆಸುತ್ತಿದೆ' ಎಂದು ಪಾಕ್ ಸಚಿವ ಅತಾವುಲ್ಲಾ ತರಾರ್ ಮಂಗಳವಾರ ತಡರಾತ್ರಿ 2 ಗಂಟೆಗೆ ಟೀವಿ ಹೇಳಿಕೆ ನೀಡಿದ್ದಾರೆ. ಆದರೆ ಅದಕ್ಕೆ ಪಾಕ್ ತಕ್ಕ ಅದಕ್ಕೆ ಪಾಕ ತಕ್ಕ ಉತ್ತರ ನೀಡಲಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಮ್ಮ ನಿವಾಸದಲ್ಲಿ ಭದ್ರತೆಗೆ ಸಂಬಂಧಿಸಿದ ಸಭೆ ನಡೆಸಿದ್ದರು.


