ಮಿಷನ್ ಮಜ್ನು ಸಿನಿಮಾದ ವಿರುದ್ಧ ಪಾಕ್ ನಟ ಅದ್ನಾನ್ ಸಿದ್ದಿಕಿ ಆಕ್ರೋಶ ಹೊರಹಾಕಿದ್ದಾರೆ.
ಬಾಲಿವುಡ್ ಸ್ಟಾರ್ ಸಿದ್ಧಾರ್ಥ್ ಮಲ್ಹೋತ್ರ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಮಿಷನ್ ಮಜ್ನು ಸಿನಿಮಾ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿದ್ಧಾರ್ಥ್ ಮತ್ತು ರಶ್ಮಿಕಾ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಅಂದಹಾಗೆ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ನೆಟ್‌ಫ್ಲಿಕ್ಸ್ ನಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಈಗಾಗಲೇ ಈ ಚಿತ್ರತಂಡ ಸಕ್ಸಸ್ ಪಾರ್ಟಿಯನ್ನು ಆಯೋಜಿಸಿದ್ದು ಇಡೀ ತಂಡ ಸಂಭ್ರಮಿಸಿದೆ. ಈ ನಡುವೆ ಪಾಕ್ ನಟ ಅದ್ನಾನ್ ಸಿದ್ದಿಕಿ ಮಿಷನ್ ಮಜ್ನು ಸಿನಿಮಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಸಿನಿಮಾದಲ್ಲಿ ಪಾಕಿಸ್ತಾನವನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಹೇಳಿದ್ದಾರೆ.
ಪಾಕ್ ಅನ್ನು ತಪ್ಪಾಗಿ ಚಿತ್ರಿಸಲಾಗಿದೆ, ಕಳಪೆ ಕಥೆ, ಸಂಶೋಧನೆ ಸರಿಯಾಗಿ ಮಾಡಿಲ್ಲ ಎಂದು ಹೇಳಿದ್ದಾರೆ. ನಟ ಅದ್ನಾನ್ ಸಿದ್ಧಿಕಿ ಬಾಲಿವುಡ್ ಸಿನಿಮಾದಲ್ಲೂ ನಟಿಸಿದ್ದರು. ಶ್ರೀದೇವಿ ನಟಿಸಿದ್ದ ಮಾಮ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮಿಷನ್ ಮಜ್ನು ವಿರುದ್ಧ ಕಿಡಿ ಕಾರಿದ್ದಾರೆ. 'ಇದು ತುಂಬಾ ತಪ್ಪಾದ ನಿರೂಪಣೆಯಾಗಿದೆ. ಇದಕ್ಕೆ ಬಾಲಿವುಡ್‌ನಲ್ಲೇ ಉತ್ತರವಿದೆ. ಉತ್ತಮ ಸಂಶೋಧಕರನ್ನು ನೇಮಿಸಿಕೊಳ್ಳಿ ಶ್ರಮ ಹಾಕಿ ಹೋಮ್ ವರ್ಕ್ ಮಾಡಿ, ಅಥವ ನಮ್ಮ ಬಳಿ ಸಹಾಯ ಕೇಳಿ' ಎಂದು ಹೇಳಿದರು.
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರ ಜೊತೆ ರಶ್ಮಿಕಾ ಪಾರ್ಟಿ: ಫೋಟೋ ವೈರಲ್
ಈ ಸಿನಿಮಾದಲ್ಲಿ ಸ್ಕಲ್ ಕ್ಯಾಪ್ಸ್, ಸುರ್ಮಾ ಮತ್ತು ತವೀಜ್ ಧರಿಸಲಾಗಿದೆ. ಆದರೆ ಪಾಕ್ ನವರು ಇದನ್ನೆಲ್ಲ ಧರಿಸಲ್ಲ ಎಂದು ಹೇಳಿದ್ದಾರೆ. 'ಮಿಷನ್ ಮಜ್ನು ಸಿನಿಮಾ ಅಸಹ್ಯಕರ ಮತ್ತು ವಾಸ್ತವಿಕವಾಗಿ ತಪ್ಪಾಗಿದೆ. ವಿಲನ್ ವೀಕ್ ಆಗಿದ್ದಾರೆ ಮತ್ತು ನಾಯಕ ಕೂಡ ದುರ್ಬಲನಾಗಿದ್ದಾನೆ' ಎಂದು ಹೇಳಿದ್ದಾರೆ. 'ಈ ಸಿನಿಮಾದ ಸಂಶೋಧನೆ ಸರಿಯಾಗಿಲ್ಲ. ಮುಂದಿನ ಸರಿ ನಮ್ಮ ಬಳಿ ಬನ್ನಿ, ನಾವು ಉತ್ತಮ ಆತಿಥೇಯರು. ನಾವು ಹೇಗೆ ಕಾಣುತ್ತೇವೆ, ಉಡುಗೆ ತೊಡುಗೆ ಮತ್ತು ಬದುಕುತ್ತೇವೆ ಎಂದು ನಿಮಗೆ ತೋರಿಸುತ್ತೇವೆ' ಎಂದು ವ್ಯಂಗ್ಯವಾಡಿದ್ದಾರೆ.
Mission Majnu; ರಶ್ಮಿಕಾ ಮಂದಣ್ಣ 2ನೇ ಬಾಲಿವುಡ್ ಸಿನಿಮಾ ರಿಲೀಸ್: ಸಿಕ್ತು ಗುಡ್ ರೆಸ್ಪಾನ್ಸ್
ಶಂತನು ಬಾಗ್ಚಿ ನಿರ್ದೇಶನದ ಈ ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ತಾರಿಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಟಿ ರಶ್ಮಿಕಾ ಮಂದಣ್ಣ ಕಣ್ಣು ಕಾಣದ ಅಂಧಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೈಜ ಘಟನೆ ಆಧಾರಿತ ಸಿನಿಮಾ ಇದೀಗಿದೆ. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಕ್ಸಸ್ ಆಗಿದೆ ಎಂದು ಸಿನಿಮಾ ತಂಡ ಇತ್ತೀಚಿಗಷ್ಟೆ ಅದ್ದೂರಿ ಪಾರ್ಟಿ ಮಾಡಿ ಸಂಭ್ರಮಿಸಿದೆ. ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಶ್ಮಿಕಾ ನಟನೆಯ ಎರಡನೇ ಬಾಲಿವುಡ್ ಸಿನಿಮಾ ಇದಾಗಿದೆ. ಈ ಮೊದಲು ಗುಡ್ ಬೈ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಮೊದಲ ಸಿನಿಮಾ ಕೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಇದೀಗ ಮಿಷನ್ ಮಜ್ನು ಮೂಲಕ ಮಿಂಚುತ್ತಿದ್ದಾರೆ.
