ಪಶ್ಚಿಮ ಬಂಗಾಳದ ಚುನಾವಣೆಗೆ ಸಂಬಂಧಿಸಿದಂತೆ ಕೆಲವೊಂದು ಹೇಳಿಕೆ ನೀಡಿದ್ದರಿಂದ ಕಳೆದ ವರ್ಷ ನಟಿ ಕಂಗನಾ ರಣಾವತ್ ಅವರ ಟ್ವಿಟರ್ ಖಾತೆ ಬ್ಯಾನ್ ಆಗಿತ್ತು. ಅದೀಗ ಮರಳಿ ನೀಡಲಾಗಿದೆ. ನಟಿ ಹೇಳಿದ್ದೇನು?
ಸಿನಿಮಾಗಳಿಗಿಂತಲೂ ಹೆಚ್ಚಾಗಿ ಕಾಂಟ್ರವರ್ಸಿಯಲ್ಲಿಯೇ (Contraversy) ಹೆಸರು ಗಳಿಸಿರುವ ನಟಿ ಕಂಗನಾ ರಣಾವತ್ ಅವರು ಟ್ವಿಟರ್ ಖಾತೆಯನ್ನು 2021ರ ಮೇ ತಿಂಗಳಿನಲ್ಲಿ ಅಮಾನತುಗೊಳಿಸಲಾಗಿತ್ತು. ಇದನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ (Suspend) ಎಂದು ವರದಿಯಾಗಿತ್ತು. ಮೇ 4ರಂದು ನಡೆದ ಪಶ್ಚಿಮ ಬಂಗಾಳದ ವಿಧಾನಸಭೆ ಫಲಿತಾಂಶದ ಕುರಿತು ಅವರು ಒಂದಾದ ಮೇಲೆ ಒಂದರಂತೆ ಟ್ವೀಟ್ ಮಾಡಿದ್ದರು. ಇದು ಹಿಂಸಾಚಾರಕ್ಕೆ ಪುಷ್ಟಿಕೊಡುವ ನಡವಳಿಕೆಯಾಗಿದೆ ಎಂದು ಟ್ವಿಟ್ಟರ್ (Twitter) ಹೇಳಿತ್ತು. ಟ್ವಿಟ್ಟರ್ ನಿಯಮಗಳನ್ನು ಅವರು ಪದೇ ಪದೇ ಉಲ್ಲಂಘಿಸುತ್ತಿದ್ದಾರೆ ಎಂದಿತ್ತು.
ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ಪಶ್ಚಿಮ ಬಂಗಾಳದಲ್ಲಿ ಗೆಲುವಿನ ಕುರಿತು ಟೀಕಿಸಿದ ಕಂಗನಾ ಟ್ವೀಟ್ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವಿಟರ್ಗೆ ಮನವಿ ಮಾಡಲಾಗಿತ್ತು. 'ಟ್ವಿಟರ್ ನಿಯಮ ಉಲ್ಲಂಘನೆ ಹಿನ್ನಲೆ ನಾವು ಈ ಕ್ರಮಕ್ಕೆ ಮುಂದಾಗುತ್ತಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ (social media) ದ್ವೇಷಪೂರಿತ ನಡವಳಿಕೆ ನೀತಿ ಮತ್ತು ನಿಂದನಾತ್ಮಕ ವರ್ತನೆಯ ಬಗ್ಗೆ ಈಗಾಗಲೇ ನಿಯಮಗಳನ್ನು ಸ್ಪಷ್ಟಪಡಿಸಲಾಗಿದ್ದು, ಇವು ಎಲ್ಲರಿಗೂ ಅನ್ವಯಿಸುತ್ತದೆ' ಎಂದು ಟ್ವಿಟರ್ ವಕ್ತಾರರು ತಿಳಿಸಿದ್ದರು. ಆದರೆ ಇದೀಗ ಸುಮಾರು ವರ್ಷದ ಬಳಿಕ ಟ್ವಿಟರ್ ಖಾತೆಯು ಮತ್ತೆ ಮರಳಿದೆ. ಈ ಕುರಿತು ಕಂಗನಾ ಅವರು 'ಎಲ್ಲರಿಗೂ ನಮಸ್ಕಾರ, ಇಲ್ಲಿಗೆ ಹಿಂತಿರುಗಲು ಸಂತೋಷವಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಈ ಸಿನಿಮಾಗಾಗಿ ಎಲ್ಲಾ ಆಸ್ತಿ ಅಡ ಇಟ್ಟೆ, ಇದು ನನಗೆ ಪುನರ್ಜನ್ಮ...: ನಟಿ ಕಂಗನಾ ರಣಾವತ್
ತಮ್ಮ ಖಾತೆ ಮರುಸ್ಥಾಪಿತವಾದ ಕೆಲವೇ ನಿಮಿಷಗಳಲ್ಲಿ, ಕಂಗನಾ ಅವರು ತಮ್ಮ ಮುಂಬರುವ ಚಿತ್ರ ಎಮರ್ಜೆನ್ಸಿಯ ಮೇಕಿಂಗ್ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೀಗ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ ಎಂದು ಅವರು ಹೇಳಿದ್ದಾರೆ. ನಟ-ಚಲನಚಿತ್ರ ನಿರ್ಮಾಪಕರು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. 'ಇದು ಒಂದು ಸುತ್ತು ಮಾತ್ರ. ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. 20ನೇ ಅಕ್ಟೋಬರ್ 2023 ರಂದು ಚಿತ್ರಮಂದಿರಗಳಲ್ಲಿ ನಿಮ್ಮನ್ನು ನೋಡೋಣ' ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ. ಕಂಗನಾ ರಣಾವತ್ ಅವರು ತುರ್ತು ಪರಿಸ್ಥಿತಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ (Indira Gandhi) ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಇತರರು ಚಿತ್ರದಲ್ಲಿ ನಟಿಸಿದ್ದಾರೆ. 1975 ರಲ್ಲಿ ಭಾರತದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಘಟನೆಗಳನ್ನು ಆಧರಿಸಿ, ಚಲನಚಿತ್ರವು ಅಕ್ಟೋಬರ್ 20 ರಂದು ಬಿಡುಗಡೆಯಾಗಲಿದೆ.
2021 ರಲ್ಲಿ, ಕಂಗನಾ ಅವರ ಟ್ವಿಟರ್ ಅಮಾನತುಗೊಂಡಾಗ ಭಾರಿ ಪ್ರತಿಭಟನೆಗಳು ನಡೆದಿದ್ದವು. ಈ ರೀತಿ ಖಾತೆಯನ್ನು ಅಮಾನತುಗೊಳಿಸಿರುವುದು ಜನಾಂಗೀಯ ನಡೆ ಎಂದು ಹೇಳಿದ್ದರು. ಟ್ವೀಟರ್ ಖಾತೆ ಅಮಾನತು ಹಾಕಿರುವ ಹಿನ್ನಲೆ ಇನ್ಸ್ಟಾಗ್ರಾಮ್ ಮೂಲಕ ನೋವು ಹೊರ ಹಾಕಿದ ನಟಿ ಇದು ಪ್ರಜಾಪ್ರಭುತ್ವದ ಕೊಲೆ ಎಂದಿದ್ದರು. ಅಷ್ಟಕ್ಕೂ ಸೋಷಿಯಲ್ ಮೀಡಿಯಾದಲ್ಲಿ ಕಂಗನಾ ಈ ರೀತಿ ಮಾಡುತ್ತಿರುವುದು ಮೊದಲು ಏನಲ್ಲ. ಈ ಹಿಂದೆ ಕೂಡ ಕಂಗನಾ ಕೆಲವು ಪೋಸ್ಟ್ ಮಾಡಿದ್ದಾಗ, ಆ ಪೋಸ್ಟ್‌ಗಳಿಗೆ ಕ್ರಮ ಕೈಗೊಳ್ಳಲಾಗಿತ್ತು. ಅಮೆಜಾನ್ ಪ್ರೈಂ (Amazon prime)ವಿಡಿಯೋಸ್‌ನಲ್ಲಿ ರಿಲೀಸ್ ಆದ ತಾಂಡವ್ ವೆಬ್ ಸಿರೀಸ್‌ನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕೆ ಕಂಗನಾ ಮಾಡಿದ್ದ ಟ್ವೀಟ್ ವೈರಲ್ ಆಗಿತ್ತು. ಇದರ ಮೇಲೆ ಟ್ವಿಟ್ವರ್ ಕ್ರಮ ತೆಗೆದುಕೊಂಡಿತ್ತು.
Katrina Kaif: ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟ ಕತ್ರಿಕಾ ಕೈಫ್: ಇನ್ಸ್ಟಾದಲ್ಲಿ ಪೋಸ್ಟ್
ಇದಾದ ಬಳಿಕ ಖ್ಯಾತ ಮೈಕ್ರೋಬ್ಲಾಗಿಂಗ್ ಜಾಲತಾಣ ಟ್ವಿಟರ್ ಅನ್ನು ಖ್ಯಾತ ಉದ್ಯಮಿ ಹಾಗೂ ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್ ತಮ್ಮ ತೆಕ್ಕೆಗೆ ತೆಗೆದುಕೊಂಡ ಬೆನ್ನಲ್ಲೇ ಸಂಸ್ಛೆಯ ಪ್ರಮುಖ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಿದ್ದರು. ಈ ಪೈಕಿ ಭಾರತ ಮೂಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ (CEO) ಮತ್ತು ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ ಪರಾಗ್ ಅಗರ್ವಾಲ್, ಸಿಎಫ್‌ಒ ನೆಡ್ ಸೆಗಲ್, ಕಾನೂನು ವ್ಯವಹಾರಗಳು ಮತ್ತು ನೀತಿ ಮುಖ್ಯಸ್ಥ ವಿಜಯ ಗಡ್ಡೆ ಸೇರಿದಂತೆ ಹಲವು ಅಧಿಕಾರಿಗಳನ್ನು ಮಸ್ಕ್ ವಜಾ ಮಾಡಿದ್ದರು. ತಮ್ಮ ಟ್ವಿಟರ್ ಖಾತೆ ಬ್ಯಾನ್ ಮಾಡಿದ್ದನ್ನು ನೆನಪಿಸಿಕೊಂಡಿದ್ದ ಕಂಗನಾ, ಟ್ವಿಟರ್ ಮುಖ್ಯಸ್ಥರ ಅವನತಿಯನ್ನು ನಾನು ಬಹಳ ಹಿಂದೆಯೇ ಊಹಿಸಿದ್ದೆ ಎಂದು ಹೇಳುವ ಮೂಲಕ ಟ್ವಿಟರ್ ಮುಖ್ಯಸ್ಥರಿಗೆ ಟಾಂಗ್ ನೀಡಿದ್ದರು.
