ಎರಡು ಬಾರಿ ಆಸ್ಕರ್ ವಿಜೇತ ನಟ ಜೀನ್ ಹ್ಯಾಕ್‌ಮನ್ (95), ಪತ್ನಿ ಬೆಟ್ಸಿ ಅರಕಾವಾ (63) ಮತ್ತು ಅವರ ನಾಯಿ ನ್ಯೂ ಮೆಕ್ಸಿಕೋದ ಮನೆಯಲ್ಲಿ ನಿಧನರಾದರು. ಪೊಲೀಸರು ದುಷ್ಕೃತ್ಯದ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಸಾವಿಗೆ ಕಾರಣ ತಿಳಿದಿಲ್ಲ. ಹ್ಯಾಕ್‌ಮನ್ 'ದಿ ಫ್ರೆಂಚ್ ಕನೆಕ್ಷನ್' ಸೇರಿದಂತೆ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 2004ರಲ್ಲಿ ನಟನೆಯಿಂದ ನಿವೃತ್ತರಾದರು. ಅವರಿಗೆ ಮೂವರು ಮಕ್ಕಳಿದ್ದಾರೆ.
ಎರಡು ಬಾರಿ ಆಸ್ಕರ್ ಪ್ರಶಸ್ತಿ ವಿಜೇತನಾಗಿರುವ ನಟ ಜೀನ್ ಹ್ಯಾಕ್‌ಮನ್ ಗುರುವಾರ ನ್ಯೂ ಮೆಕ್ಸಿಕೋದ ಸಾಂಟಾ ಫೆಯಲ್ಲಿರುವ ತಮ್ಮ ಮನೆಯಲ್ಲಿ ಅವರ ಪತ್ನಿ ಬೆಟ್ಸಿ ಮತ್ತು ಅವರ ನಾಯಿಯೊಂದಿಗೆ ಶವವಾಗಿ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತನಿಖೆ ನಡೆಯುತ್ತಿದ್ದು, ಈ ಪ್ರಕರಣದಲ್ಲಿ ದುಷ್ಕೃತ್ಯ ನಡೆದಿರುವ ಬಗ್ಗೆ ಅನುಮಾನಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಎರಡು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ನಟ ತನ್ನ ನಾಯಿ ಮತ್ತು ಹೆಂಡತಿಯೊಂದಿಗೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿವುದನ್ನು ವರದಿ ಮಾಡಲಾಗಿದೆ.
ಮೃತ ಜೀನ್ ಗೆ 95 ವರ್ಷ ಮತ್ತು ಅವರ ಪತ್ನಿಗೆ 63 ವರ್ಷ ವಯಸ್ಸಾಗಿತ್ತು. ಸಾವಿಗೆ ಸ್ಪಷ್ಟ ಕಾರಣ ಏನೆಂದು ಇನ್ನೂ ಕೂಡ ಅಧಿಕಾರಿಗಳು ಪ್ರಕಟಿಸಿಲ್ಲ. ಜೀನ್ ಹ್ಯಾಕ್‌ಮನ್ ಎರಡು ದಶಕಗಳಿಂದ ನಟನೆಯಿಂದ ದೂರ ಉಳಿದಿದ್ದರು. ತಮ್ಮ ಪತ್ನಿ 63 ವರ್ಷದ ಬೆಟ್ಸಿ ಅರಕಾವಾ ಅವರೊಂದಿಗೆ ನ್ಯೂ ಮೆಕ್ಸಿಕೋದಲ್ಲಿ ವಾಸಿಸುತ್ತಿದ್ದರು. ಫೆಬ್ರವರಿ 26ರ ಬುಧವಾರ ಮಧ್ಯಾಹ್ನ 1:45 ರ ಸುಮಾರಿಗೆ ಹ್ಯಾಕ್‌ಮನ್ ಮತ್ತು ಬೆಟ್ಸಿ ಅರಕಾವಾ ಹಾಗೂ ಅವರ ನಾಯಿಯ ಯೋಗಕ್ಷೇಮವನ್ನು ಪರಿಶೀಲಿಸಲು ಡೆಪ್ಯೂಟೀಸ್ ಅವರ ಮನೆಗೆ ಬಂದು ಪರಿಶೀಲಿಸಿದಾಗ ಎಲ್ಲರೂ ಸತ್ತಿರುವುದು ಬೆಳಕಿಗೆ ಬಂದಿದೆ.
ಫ್ಲಾಪ್ ಸ್ಟಾರ್ ಪಟ್ಟ ಇದ್ರೂ ಕನ್ನಡತಿಗೆ ಒಲಿದ ಅದೃಷ್ಟ, ಬಿಗ್‌ಸ್ಟಾರ್‌ಗಳ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ!
ಹ್ಯಾಕ್‌ಮನ್ ಅವರ ಇತರ ಗೌರವಾನ್ವಿತ ಕೃತಿಗಳಲ್ಲಿ 'ದಿ ಫ್ರೆಂಚ್ ಕನೆಕ್ಷನ್' ಮತ್ತು 'ದಿ ರಾಯಲ್ ಟೆನೆನ್‌ಬಾಮ್ಸ್' ಸೇರಿವೆ. ಅವರ ಪ್ರಸಿದ್ಧ ವೃತ್ತಿಜೀವನದಲ್ಲಿ ಎರಡು ಬಾರಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದಲ್ಲದೆ, ಅವರು ನಾಲ್ಕು ಗೋಲ್ಡನ್ ಗ್ಲೋಬ್‌ಗಳು ಮತ್ತು ಎರಡು BAFTA ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹ್ಯಾಕ್‌ಮನ್ 'ಸೂಪರ್‌ಮ್ಯಾನ್' (1978) ಮತ್ತು 'ಸೂಪರ್‌ಮ್ಯಾನ್ II' (1980) ಚಿತ್ರಗಳಲ್ಲಿ ಲೆಕ್ಸ್ ಲೂಥರ್ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ. ಅವರು ಕೊನೆಯ ಬಾರಿಗೆ 2004 ರಲ್ಲಿ 'ವೆಲ್‌ಕಮ್ ಟು ಮೂಸ್‌ಪೋರ್ಟ್' ನಲ್ಲಿ ಕಾಣಿಸಿಕೊಂಡರು ಮತ್ತು 2008 ರಲ್ಲಿ ಅವರ ಮೂರನೇ ಪುಸ್ತಕದಲ್ಲಿ ಅವರು ನಟನೆಯಿಂದ ನಿವೃತ್ತರಾಗಿದ್ದಾರೆ ಎಂದು ದೃಢಪಡಿಸಿದರು.
ದಿ ಫ್ರೆಂಚ್ ಕನೆಕ್ಷನ್ ಮತ್ತು ಅನ್‌ಫರ್ಗಿವನ್‌ನಂತಹ ಚಲನಚಿತ್ರಗಳಲ್ಲಿನ ಅಪ್ರತಿಮ ಪಾತ್ರಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ನಟ ಜೀನ್ ಹ್ಯಾಕ್‌ಮನ್ ಸ್ವತಂತ್ರ ಚಲನಚಿತ್ರಗಳಲ್ಲಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದ ಮತ್ತು ಬ್ಲಾಕ್‌ಬಸ್ಟರ್‌ಗಳಲ್ಲಿ ಕಾಣಿಸಿಕೊಂಡ ಅಪರೂಪದ ಹಾಲಿವುಡ್ ತಾರೆಗಳಲ್ಲಿ ಒಬ್ಬರು. 1960 ರ ದಶಕದ ಆರಂಭದಲ್ಲಿ ಪ್ರಾರಂಭವಾದ ಅವರ ಬಣ್ಣದ ಬದುಕಿನಲ್ಲಿ, ಮಾಜಿ ನೌಕಾಪಡೆಯ ಅಧಿಕಾರಿ 80 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ, ದೂರದರ್ಶನ ಮತ್ತು ವೇದಿಕೆಯಲ್ಲಿ ಕಾಣಿಸಿಕೊಂಡರು. ಅವರ ಎರಡು ಆಸ್ಕರ್‌ಗಳ ಜೊತೆಗೆ, ಅವರು ಎರಡು BAFTA ಪ್ರಶಸ್ತಿಗಳು ಮತ್ತು ನಾಲ್ಕು ಗೋಲ್ಡನ್ ಗ್ಲೋಬ್‌ಗಳನ್ನು ಸಹ ಗೆದ್ದರು. 2004 ರಲ್ಲಿ ಅವರು ನಟನೆಯಿಂದ ನಿವೃತ್ತರಾದರು, ವೆಲ್‌ಕಮ್ ಟು ಮೂಸ್‌ಪೋರ್ಟ್ ಅವರ ಕೊನೆಯ ಚಿತ್ರವಾಗಿತ್ತು.
ತಂದೆ ನೆನಪಿಗಾಗಿ ಸೌಂದರ್ಯ ನಿರ್ಮಿಸಿದ ಏಕೈಕ ಸಿನಿಮಾವಿದು, ರಾಷ್ಟ್ರವೇ ಮೆಚ್ಚಿದ ಕನ್ನಡ ಚಿತ್ರ!
ಜೀನ್ ಹ್ಯಾಕ್‌ಮನ್ ಎರಡು ಬಾರಿ ವಿವಾಹವಾದರು. ಮೊದಲು ಫಾಯೆ ಮಾಲ್ಟೀಸ್ ಎಂಬವರನ್ನು ವಿವಾಹವಾದರು ಈ ಸಂಸಾರದಲ್ಲಿ ಮೂವರು ಮಕ್ಕಳಿದ್ದಾರೆ.ಮಗ 63 ವರ್ಷ ವಯಸ್ಸಿನ ಕ್ರಿಸ್ಟೋಫರ್ ಅಲೆನ್ , ಮಗಳಂದಿರಾದ 61 ವರ್ಷದ ಎಲಿಜಬೆತ್ ಜೀನ್ ಮತ್ತು 57 ವರ್ಷದ ಲೆಸ್ಲೀ ಆನ್ ಹ್ಯಾಕ್ಮನ್. ಈ ಮೂವರು ಕೂಡ ಸಾರ್ವಜನಿಕ ಜೀವನದಿಂದ ದೂರ ಉಳಿದಿದ್ದಾರೆ. ದಂಪತಿ ತಮ್ಮ ಮೂರು ದಶಕಗಳ ದಾಂಪತ್ಯವನ್ನು 1986 ರಲ್ಲಿ ಕೊನೆಗೊಳಿಸಿದರು. ನಂತರ ಹ್ಯಾಕ್ಮನ್ 1991 ರಲ್ಲಿ ಪಿಯಾನೋ ವಾದಕ ಬೆಟ್ಸಿ ಅರಕಾವಾ ಅವರನ್ನು ವಿವಾಹವಾದರು. ಅವರ ಎರಡನೇ ಹೆಂಡತಿಯೊಂದಿಗೆ ಅವರಿಗೆ ಯಾವುದೇ ಮಕ್ಕಳಿರಲಿಲ್ಲ. ನಾಯಿಗಳನ್ನು ಪ್ರೀತಿಯಿಂದ ಸಾಕುತ್ತಿದ್ದರು.
