KGF 2 ಮೊದಲ ದಿನದ ಅಂದಾಜು ಲೆಕ್ಕಾಚಾರ; ಹಿಂದಿ ಭಾಗದಲ್ಲಿ 50 ಕೋಟಿ ರೂ.ಅಧಿಕ ಕಲೆಕ್ಷನ್
ಹಿಂದಿ ಭಾಗದಲ್ಲಿ ಕೆಜಿಎಫ್ 2 ಬರೋಬ್ಬರಿ 4400 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದೆ. ದಾಖಲೆ ಮಟ್ಟದಲ್ಲಿ ಬಿಡುಗಡೆಯಾಗಿರುವ ಕೆಜಿಎಫ್-2 ಮುಂಗಡ ಬುಕ್ಕಿಂಗ್ ನಲ್ಲೂ ಭರ್ಜರಿ ಗಳಿಕೆ ಮಾಡಿತ್ತು. ಹಿಂದಿ ವಿಭಾಗದಲ್ಲಿ ಕೆಜಿಎಫ್-2 49 ರಿಂದ 53 ಕೋಟಿ ರೂಪಾಯಿ ಗಳಿಕೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.
ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಕೆಜಿಎಫ್ 2 ಸಿನಿಮಾ ಇಂದು (ಏಪ್ರಿಲ್ 14) ಅದ್ದೂರಿಯಾಗಿ ತೆರೆಗೆ ಬಂದಿದೆ. ಮೊದಲ ದಿನ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ರಾಕಿಂಗ್ ಸ್ಟಾರ್ ಯಶ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ರಾಕಿ ಭಾಯ್ ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಮೊದಲ ದಿನ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೀಡಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿರುವುದರಲ್ಲಿ ಯಾವುದೇ ಅನುಮಾನ ಎನ್ನುವುದು ಖಾತರಿಯಾಗಿದೆ. ಸಿನಿಮಾ ವಿಶ್ಲೇಷಕರು ಹೇಳುತ್ತುರವ ಪ್ರಕಾರ ಕೆಜಿಎಫ್2 ಹಿಂದಿಯೊಂದರಲ್ಲೇ ಬರೋಬ್ಬರಿ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಲಿದೆ ಎನ್ನಲಾಗುತ್ತಿದೆ.
ಹಿಂದಿ ಭಾಗದಲ್ಲಿ ಕೆಜಿಎಫ್ 2 ಬರೋಬ್ಬರಿ 4400 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದೆ. ದಾಖಲೆ ಮಟ್ಟದಲ್ಲಿ ಬಿಡುಗಡೆಯಾಗಿರುವ ಕೆಜಿಎಫ್-2 ಮುಂಗಡ ಬುಕ್ಕಿಂಗ್ ನಲ್ಲೂ ಭರ್ಜರಿ ಗಳಿಕೆ ಮಾಡಿತ್ತು. ಹಿಂದಿ ವಿಭಾಗದಲ್ಲಿ ಕೆಜಿಎಫ್-2, 49 ರಿಂದ 53 ಕೋಟಿ ರೂಪಾಯಿ ಗಳಿಕೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಯಶ್ ನಟನೆಯ ಕೆಜಿಎಫ್2 ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದೆ. ಹಿಂದಿ ವಿಭಾಗದಲ್ಲಿ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹೃತಿಕ್ ರೋಷನ್ ವರ ವಾರ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ಬೀಟ್ ಮಾಡುತ್ತದೆ ಎಂದು ಹೇಳಲಾಗುತ್ತಿದೆ.
ಹೃತಿಕ್ ರೋಷನ್ ಅವರ ವಾರ್ ಸಿನಿಮಾ 51 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ದಕ್ಷಿಣ ಭಾರತೀಯ ಸಿನಿಮಾರಂಗಕ್ಕೆ ಹೋಲಿಸಿದರೆ ಹಿಂದಿಯಲ್ಲಿ ಕಡಿಮೆ ಸ್ಕ್ರೀನ್ ಗಳಲ್ಲಿ ಕೆಜಿಎಫ್-2 ಬಿಡುಗಡೆಯಾಗಿದೆ.
KGF 2 ಸಂಜಯ್ ದತ್ ವೃತ್ತಿ ಜೀವನದ ವಿಶೇಷ ಸಿನಿಮಾ; ಮಾನ್ಯತಾ ದತ್
ರಾತ್ರಿ ಶೋ ಮತ್ತು ಮುಂಗಡ ಬುಕ್ಕಿಂಗ್ ಸೇರಿ ಒಟ್ಟು 42 ಕೋಟಿ ರೂ. ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ. ಕೆಲವು ದಿನಗಳಿಂದ ಹಿಂದಿಯಲ್ಲಿ ಕೆಜಿಎಫ್-2 40 ಕೋಟಿ ರೂಪಾಯಿ ಕಲೆಕ್ಷನ್ ಆಗಲಿದೆಯಾ ಎನ್ನುವ ಚರ್ಚೆ ನಡೆದಿತ್ತು. ಆದರೆ ಇವತ್ತು ಚಿತ್ರಕ್ಕೆ ಸಿಕ್ಕ ಓಪನಿಂಗ್ ನೋಡಿದ್ರೆ ಸಿನಿಮಾ 50 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಿರುವುದು ಅಚ್ಚರಿ ಮೂಡಿಸಿದೆ.
KGF 2ನಲ್ಲಿ ಶ್ರುತಿ ತಂದೆ; ಸಿನಿಮಾ ನೋಡಿ ಹಿರಿಯ ನಟಿ ಹೇಳಿದ್ದೇನು?
ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾಗಳಿಗೆ ಕೆಜಿಎಫ್-2 ಸವಾಲ್ ಹಾಕಿರುವುದು ಅಚ್ಚರಿ ಮೂಡಿಸಿದೆ. ದಕ್ಷಿಣ ಭಾರತದ ಮೊದಲ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದೆ. ಬಾಹುಬಲಿ-2 ಸಿನಿಮಾಗಿಂತ ಅತೀ ಹೆಚ್ಚು ಕಲೆಕ್ಷನ್ ಮಾಡುತ್ತಿದೆ. ಹಿಂದಿ ವಿಭಾಗದಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡಿರುವುದು ಮತ್ತು ಯಶ್ ಗೆ ಸಿಕ್ಕ ಪ್ರತಿಕ್ರಿಯೆ ನೀಡಿದ್ರೆ ಹಿಂದಿ ಭಾಗದಲ್ಲಿ ಯಶ್ ದೊಡ್ಡ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇದು ಸಿನಿ ಪಂಡಿತರ ಅಂದಾಜು ಲೆಕ್ಕಾಚಾರವಾಗಿದೆ. ಕರ್ನಾಟಕದಲ್ಲಿ ಮತ್ತು ದಕ್ಷಿಣ ಭಾರತ ಎಲ್ಲಾ ಭಾಷೆಯಲ್ಲೂ ಸೇರಿ ಕೆಜಿಎಫ್-2 ಕಲೆಕ್ಷನ್ ಎಷ್ಟಾಗಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ. ದೇಶ ಮತ್ತು ವಿದೇಶ ಎಲ್ಲಾ ಸೇರಿ ಕೆಜಿಎಫ್-2 ಎಷ್ಟು ಭಾಚಿಕೊಳ್ಳಲಿದೆ ಎನ್ನುವುದು ನಾಳೆ ಗೊತ್ತಾಗಲಿದೆ.