KGF 2 ಸಂಜಯ್ ದತ್ ವೃತ್ತಿ ಜೀವನದ ವಿಶೇಷ ಸಿನಿಮಾ; ಮಾನ್ಯತಾ ದತ್
ಸಂಜಯ್ ದತ್ ಪತ್ನಿ ಮಾನ್ಯತಾ ದತ್(Manyata Dutt) ಅಧೀರನನ್ನು ನೋಡಿ ಹೆಮ್ಮೆ ಪಟ್ಟಿದ್ದಾರೆ. ಸಂಜಯ್ ದತ್ ವೃತ್ತಿ ಜೀವನದಲ್ಲಿಯೇ ಕೆಜಿಎಫ್-2 ಬಹಳ ವಿಶೇಷವಾದ ಚಿತ್ರ ಎಂದು ಹೇಳಿದ್ದಾರೆ.
ಇಡೀ ವಿಶ್ವವೆ ಕಾತರಿಂದ ಕಾಯುತ್ತಿದ್ದ ಬಹುನಿರೀಕ್ಷೆಯ ಕೆಜಿಎಫ್ 2 (KGF 2) ಸಿನಿಮಾ ಇಂದು (ಏಪ್ರಿಲ್ 14) ಅದ್ದೂರಿಯಾಗಿ ಬಿಡುಗಡೆಯಾಗಿದೆ. ವಿಶ್ವದಾದ್ಯಂತ 12ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಕೆಜಿಎಫ್-2 ರಾರಾಜಿಸುತ್ತಿದೆ. ಇಂದು ತೆರೆಗೆ ಬಂದ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿ ಕಣ್ತುಂಬಿಕೊಂಡಿದ್ದಾರೆ. ಇಂದು ಬೆಳ್ಳಂಬೆಳಗ್ಗೆಯೇ ಅಭಿಮಾನಿಗಳು ಮತ್ತು ಅನೇಕ ಸಿನಿಮಾ ಗಣ್ಯರು ಸಹ ಚಿತ್ರ ವೀಕ್ಷಿಸಿ ಖುಷಿ ಪಟ್ಟಿದ್ದಾರೆ.
ಕೆಜಿಎಫ್-2 ವೀಕ್ಷಿಸಿದ ಪ್ರತಿಯೊಬ್ಬರು ಹಾಡಿಹೊಗಳುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ಅನೇಕ ಸಿನಿ ಗಣ್ಯರು ಸಹ ಚಿತ್ರ ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ, ಯಶ್(Yash) ನಟನೆ, ಸಂಜಯ್ ದತ್ ಪಾತ್ರ ಪ್ರತಿಯೊಂದು ಸಹ ಸಿನಿ ರಸಿಕರ ಹೃದಯ ಗೆದ್ದಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಕೆಜಿಎಫ್-2 ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ರಾಕಿ ಭಾಯ್ ಯಶ್ ಅಭಿನಯ ಮತ್ತು ಅಧೀರ ಸಂಜಯ್ ದತ್ ಪಾತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕೆಜಿಎಫ್2 ಮೂಲಕ ಸಂಜಯ್ ದತ್(Sanjay Dutt) ಮೊದಲ ಬಾರಿಗೆ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಕಾಣಿಸಿಕೊಂಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಸಂಜಯ್ ದತ್ ಅವರ ಭಯಾನಕ ಅಧೀರ ಪಾತ್ರ ಎಲ್ಲರ ಮನಗೆದ್ದಿದೆ. ಸಿನಿಮಾದ ಬಗ್ಗೆ ಮತ್ತು ಸಂಜಯ್ ದತ್ ಅಧೀರ ಪಾತ್ರವನ್ನು ಹಾಡಿಹೊಗಳಿದ್ದಾರೆ. ಸಂಜಯ್ ದತ್ ಪತ್ನಿ ಮಾನ್ಯತಾ ದತ್(Manyata Dutt) ಅಧೀರನನ್ನು ನೋಡಿ ಹೆಮ್ಮೆ ಪಟ್ಟಿದ್ದಾರೆ. ಸಂಜಯ್ ದತ್ ವೃತ್ತಿ ಜೀವನದಲ್ಲಿಯೇ ಕೆಜಿಎಫ್-2 ಬಹಳ ವಿಶೇಷವಾದ ಚಿತ್ರ ಎಂದು ಹೇಳಿದ್ದಾರೆ.
KGF 2ನಲ್ಲಿ ಶ್ರುತಿ ತಂದೆ; ಸಿನಿಮಾ ನೋಡಿ ಹಿರಿಯ ನಟಿ ಹೇಳಿದ್ದೇನು?
ಅಂದಹಾಗೆ ಸಂಜಯ್ ದತ್ ಕೆಜಿಎಫ್-2 ಸಿನಿಮಾದಲ್ಲಿ ನಟಿಸುತ್ತಿರುವಾಗಲೇ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಬಳಿಕ ಚಿಕಿತ್ಸೆಗೆ ಒಳಗಾದರು. ಕ್ಯಾನ್ಸರ್ ನಿಂದ ಸಂಪೂರ್ಣ ಗುಣಮುಖರಾದ ಬಳಿಕ ಸಂಜಯ್ ದತ್ ಮತ್ತೆ ಕೆಜಿಎಫ್2 ಚಿತ್ರೀಕರಣದಲ್ಲಿ ಭಾಗಿಯಾಗಿ ಸಿನಿಮಾ ಸಂಪೂರ್ಣವಾಗಿ ಮುಗಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಜಯ್ ದತ್ ಪತ್ನಿ ಮಾನ್ಯತಾ ದತ್, 'ಚಿತ್ರವು ನಮಗೆ ಹೆಚ್ಚು ರೀತಿಯಲ್ಲಿ ವಿಶೇಷವಾಗಿದೆ. ಬೇಜವಾಬ್ದಾರಿ, ಬದ್ದತೆಯಿಲ್ಲದ ಮತ್ತು ಬ್ಯಾಡ್ ಬಾಯ್ ಎಂದು ಹಣೆಪಟ್ಟಿ ಕಟ್ಟುವವರು ಅವರ ಡೆಡಿಕೇಶನ್ ಮತ್ತು ಡಿಟರ್ಮಿನೇಶನ್ ನೋಡಲು ಈ ಚಿತ್ರವನ್ನು ನೋಡಲೇ ಬೇಕ. ಸಂಜು ಈ ಸಿನಿಮಾವನ್ನು ತಮ್ಮ ಜೀವನದ ಅತ್ಯಂತ ದುರ್ಬಲ ಘಟ್ಟದಲ್ಲಿ ಚಿತ್ರೀಕರಿಸಿದರು. ಆ ಎಲ್ಲಾ ಶ್ರಮದಾಯಕ ದೃಶ್ಯಗಳನ್ನು ಎಂದಿನಂತೆ ಅದೇ ಉತ್ಸಾಹದಿಂದ ಚಿತ್ರೀಕರಿಸಿದರು' ಎಂದು ಹೇಳಿದರು.
'ನನಗೆ ಅವರು ಈ ಸಿನಿಮಾ ಹೀರೋ. ಕೂಲ್, ಪವರ್ ಫುಲ್ ಮತ್ತು ಹೋರಾಟಗಾರ. ಕೆಜಿಎಫ್2 ಅಧೀರ ಮೂಲಕ ಸಂಜು ಮತ್ತೆ ವಾಪಾಸ್ ಆಗಿದ್ದಾರೆ' ಎಂದು ಮಾನ್ಯತಾ ಹೇಳಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಮಾನ್ಯತಾ ಫೋಟೋಗಳನ್ನು ಹಂಚಿಕೊಂಡು, ಶಕ್ತಿಶಾಲಿ ನಟರಿಂದ ಶಕ್ತಿಯುತ ಪ್ರದರ್ಶನಗಳು ಬರುತ್ತವೆ ಎಂದಿದ್ದಾರೆ.
KGF 2 Film Review: ಅಮ್ಮನ ಹಠದ ಹಿಂದೆ ಹೋಗುವ ಮಗನ ಕಥೆಯಿದು, ಕೆಜಿಎಫ್ 2 ಅದ್ದೂರಿತನ ಮಿಸ್ ಮಾಡ್ಕೊಳ್ಬೇಡಿ!
ಕೆಜಿಎಫ್2 ಸಿನಿಮಾ ಮೊದಲ ಭಾಗಕ್ಕಿಂತ ರೋಚಕವಾಗಿದ್ದು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಪಾರ್ಟ್-2ನಲ್ಲಿ ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು ಎಲ್ಲಾ ಭಾಷೆಯಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಕಿ ಭಾಯ್ ಮತ್ತು ಅಧೀರನನ್ನು ನೋಡಿ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ.