ಆಕೆಯೊಬ್ಬ ಬಾಲಿವುಡ್ ನಟಿ. ಆಕೆಯನ್ನು ಆಕೆಯ ಬಾಯ್‌ಫ್ರೆಂಡ್‌ ಕ್ರೂರವಾಗಿ ಬಡಿದುಹಾಕಿದ. ಆಗ ಅವಳ ನೆರವಿಗೆ ನಿಂತವಳು ಐಶ್ವರ್ಯಾ ರೈ ಮಾತ್ರ.


ಬಾಲಿವುಡ್‌ನ ಅತ್ಯಂತ ಸುಂದರ ನಟಿ ಐಶ್ವರ್ಯಾ ರೈ ಬಚ್ಚನ್, ಅವರ ಸೌಂದರ್ಯ ಮತ್ತು ಶಕ್ತಿಯುತ ಪಾತ್ರಗಳಿಗೆ ಮಾತ್ರವಲ್ಲದೆ ಅವರ ದಿಟ್ಟ ಸ್ವಭಾವಕ್ಕೂ ಹೆಸರುವಾಸಿ. ಶಾಲಾ ಈವೆಂಟ್‌ನಲ್ಲಿ ಪಾಪ್ಸ್ ಆಗಿರಲಿ ಅಥವಾ ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ತನ್ನ ಆಲೋಚನೆಗಳನ್ನು ವ್ಯಕ್ತಪಡಿಸುವುದಿರಲಿ, ಐಶ್‌ ಯಾವಾಗಲೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಒಬ್ಬ ನಟಿಗೆ ಐಶ್ ಒಮ್ಮೆ ಬೆಂಬಲ ನೀಡಿದ್ದು ಗೊತ್ತೇ? ಮಾಜಿ ವಿಶ್ವ ಸುಂದರಿ ಐಶು ಆ ಕೆಲಸವನ್ನೂ ಮಾಡಿದ್ದಾರೆ. ಅದೇ ಕಾರಣಕ್ಕಾಗಿ ಆಕೆ ಒಂದು ಚಲನಚಿತ್ರದಲ್ಲಿ ತನಗಿದ್ದ ಅವಕಾಶವನ್ನೂ ಕೈಬಿಟ್ಟರು. 

ಐಶ್‌ ಬೆಂಬಲಿಸಿದ ಆ ನಟಿ ಫ್ಲೋರಾ ಸೈನಿ. ಆಕೆ ಸಾಕಷ್ಟು ಕೌಟುಂಬಿಕ ದೌರ್ಜನ್ಯ ಎದುರಿಸಿದ್ದಾಳೆ. ಆಕೆಯ ಗೆಳೆಯ, ನಿರ್ಮಾಪಕ ಆಕೆಗೆ ಸಾಕಷ್ಟು ಹಿಂಸೆ ನೀಡಿದ್ದ. ಮನೆಯೊಳಗೆ ಆತ ಅವಳಿಗೆ ಯದ್ವಾತದ್ವಾ ಹೊಡೆಯುತ್ತಿದ್ದ. ಫ್ಲೋರಾ ಬಹಳ ದೌರ್ಜನ್ಯ ಅನುಭವಿಸಿದ ಸಂಬಂಧದಲ್ಲಿದ್ದಳು. ʼಬಾಲಿವುಡ್ ಲೈಫ್‌ʼಗೆ ನೀಡಿದ ಸಂದರ್ಶನದಲ್ಲಿ ಫ್ಲೋರಾ ತಾನು ಎದುರಿಸಿದ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದಳು. 

ಆಕೆಯ ಮಾಜಿ ಗೆಳೆಯ ಬಾಲಿವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ನಿರ್ಮಾಪಕ. ಹೊರಗೆ ಸಂಭಾವಿತ. ಆದರೆ ಮನೆಯಲ್ಲಿ ಆಕ್ರಮಣಕಾರಿ. ಪಾನಮತ್ತನಾಗಿ ಬಂದು ಫ್ಲೋರಾ ಸೈನಿಯನ್ನು ಹಿಂಸಿಸುತ್ತಿದ್ದ. ಒಂದು ಬಾರಿ ಈ ದೈಹಿಕ ಕಿರುಕುಳ ಎಷ್ಟಾಯಿತೆಂದರೆ, ಫ್ಲೋರಾಳ ದವಡೆಯ ಮೂಳೆಗಳು ಮುರಿದುಹೋಗುವಷ್ಟು ಜೋರಾಗಿ ಆತ ಬಾರಿಸಿದ. ಆಕೆ ಈ ವಿಚಾರವನ್ನು ತನ್ನ ಕೆಲವು ಗೆಳತಿಯರ ಮುಂದೆ ಹೇಳಿಕೊಂಡಳು. ಆದರೆ ಯಾರೂ ಆಕೆಯನ್ನು ಕಾಪಾಡಲು ಮುಂದೆ ಬರಲಿಲ್ಲ. ಆದರೆ ಐಶ್ವರ್ಯಾ ಮಾತ್ರ ಸುಮ್ಮನಿರಲಿಲ್ಲ. 

ಐಶ್ವರ್ಯಾ, ಫ್ಲೋರಾಳ ಸಂಕಟದ ಬಗ್ಗೆ ತಿಳಿದಾಗ ಅವಳು ಒಂದು ಗಟ್ಟಿಯಾದ ನಿಲುವನ್ನು ತೆಗೆದುಕೊಂಡಳು. ಫ್ಲೋರಾಳ ಬಾಯ್‌ಫ್ರೆಂಡ್‌ ಆಗಿದ್ದ ನಿರ್ಮಾಪಕ ಗೌರಂಗ್ ದೋಷಿ, ಐಶ್ವರ್ಯಾಳನ್ನು ತನ್ನ ಒಂದು ಫಿಲಂನಲ್ಲಿ ಆಗ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದ. ಫ್ಲೋರಾ ಕಾರಣದಿಂದಾಗಿ ಐಶ್ ಆ ಚಲನಚಿತ್ರವನ್ನು ತಿರಸ್ಕರಿಸಿದಳು. ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಇಂಥ ವ್ಯಕ್ತಿಯ ಸಿನಿಮಾದಲ್ಲಿ ನಾನಿರುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದಳು. ಐಶ್‌ ಈ ನಿಲುವು ತೆಗೆದುಕೊಂಡ ನಂತರ ಇನ್ನೂ ಹಲವರು ಈ ಬಗ್ಗೆ ಮಾತನಾಡುವ ಧೈರ್ಯ ಮಾಡಿದರು. 

ಐಶ್ವರ್ಯಾ ಆ ಚಿತ್ರದಿಂದ ಹೊರಬಂದ ಮೇಲೆ ಫ್ಲೋರಾ, “ನಾನು ಆ ಬಗ್ಗೆ ಮಾತನಾಡುತ್ತಿದ್ದಾಗ, ನಾನು ತಪ್ಪು ಮಾಡಿದ್ದೇನೆ ಎಂದು ನನಗೆ ಅನಿಸುತ್ತಿತ್ತು. ಯಾಕೆಂದರೆ ನನ್ನೊಂದಿಗೆ ಕೆಲಸ ಮಾಡಲು ಬೇರೆ ಯಾರೂ ಸಿದ್ಧರಿರಲಿಲ್ಲ. ನನ್ನ ಕುಟುಂಬದಲ್ಲಿ ನಾನೊಬ್ಬಳೇ ದುಡಯುವವಳಾಗಿದ್ದೆ. ಆಗ ಕೆಲಸದ ಕೊರತೆಯಿಂದ ಬದುಕುವುದೇ ದುಸ್ತರವಾಗಿತ್ತು. ಇಡೀ ಜಗತ್ತು ನನ್ನ ವಿರುದ್ಧವಾಗಿದೆ ಅನಿಸುತ್ತಿತ್ತು. ಆಗ ಒಬ್ಬ ಮಹಿಳೆ ಮಾತ್ರ ನನ್ನ ಬೆಂಬಲಕ್ಕೆ ನಿಂತಿದ್ದಳು. ಅವಳು ನನಗಾಗಿ ಚಿತ್ರ ಬಿಟ್ಟಾಗ ನನಗೆ ಭರವಸೆ ಸಿಕ್ಕಿತು" ಎಂದು ಹೇಳಿದಳು. 

ನಾನು ಬದುಕಿದ್ದೀನೋ, ಸತ್ತಿದ್ದೀನೋ ಅವರಿಗೆ ಗೊತ್ತಿಲ್ಲ: ಮಹೇಶ್ ಬಾಬು ಬಗ್ಗೆ ಮಾತಾಡಿ ಟ್ರೋಲ್ ಆದ ಹಿರಿಯ ನಟಿ!

ಫ್ಲೋರಾ ಸೈನಿಯ ಆನ್‌ಸ್ಕ್ರೀನ್‌ ಹೆಸರು ಆಶಾ ಸೈನಿ ಅಥವಾ ಮಯೂರಿ. ಈಕೆ ನಟಿ ಮತ್ತು ಮಾಡೆಲ್.‌ ಪ್ರಧಾನವಾಗಿ ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾಳೆ. ಹಲವಾರು ಕನ್ನಡ ಮತ್ತು ತಮಿಳು ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಳು. ನಟಿಯಾಗಿ 80ಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳನ್ನು ಮಾಡಿದ್ದಾಳೆ. ಪ್ರೇಮ ಕೋಸಂ (1999) ಚಿತ್ರದಲ್ಲಿ ಪಾದಾರ್ಪಣೆ ಮಾಡಿದ ನಂತರ, 50ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾಳೆ. ವೆಂಕಟೇಶ್, ಬಾಲಕೃಷ್ಣ, ಸುದೀಪ್, ಶಿವರಾಜಕುಮಾರ್, ವಿಜಯಕಾಂತ್, ಪ್ರಭು, ಕಾರ್ತಿಕ್, ಜಗಪತಿ ಬಾಬು ಮತ್ತು ರಾಜಶೇಖರ್ ಅವರಂತಹ ಖ್ಯಾತ ನಟರೊಂದಿಗೆ ನಟಿಸಿದ್ದಾಳೆ.

ನನ್ನ ಕೈ ಹಿಡಿಯುತ್ತೀಯಾ? ಡೇಟಿಂಗ್ ರೂಮರ್ ನಡುವೆ ಇನ್‌ಸ್ಟಾದಲ್ಲಿ ಹಿಂಟ್ ಕೊಟ್ರಾ ಸಮಂತಾ?