- Home
- Entertainment
- Cine World
- ನನ್ನ ಕೈ ಹಿಡಿಯುತ್ತೀಯಾ? ಡೇಟಿಂಗ್ ರೂಮರ್ ನಡುವೆ ಇನ್‌ಸ್ಟಾದಲ್ಲಿ ಹಿಂಟ್ ಕೊಟ್ರಾ ಸಮಂತಾ?
ನನ್ನ ಕೈ ಹಿಡಿಯುತ್ತೀಯಾ? ಡೇಟಿಂಗ್ ರೂಮರ್ ನಡುವೆ ಇನ್‌ಸ್ಟಾದಲ್ಲಿ ಹಿಂಟ್ ಕೊಟ್ರಾ ಸಮಂತಾ?
ನಟಿ ಸಮಂತಾ ರುಥ್ ಪ್ರಭು ಮಾಡಿದ ಪೋಸ್ಟ್ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ನನ್ನ ಕೈ ಹಿಡಿಯುತ್ತೀಯಾ ಎಂದು ಯಾರಿಗೆ ಸಮಂತಾ ಪೋಸ್ಟ್ ಮಾಡಿದ್ದಾರೆ? ಡೇಟಿಂಗ್ ಸುದ್ದಿ ನಡುವೆ ಸಮಂತಾ ಪೋಸ್ಟ್ ಹಿಂದಿನ ಮರ್ಮವೇನು?

ನಟಿ ಸಮಂತಾ ರುತ್ ಪ್ರಭು ವಿಚ್ಚೇದನ ಪಡೆದ ಬಳಿಕ ರಿಲೇಶನ್‌ಶಿಪ್ ಕುರಿತು ಹೆಚ್ಚು ಮಾತನಾಡಿಲ್ಲ. ಆದರೆ ಸಮಂತಾ ಡೇಟಿಂಗ್‌ನಲ್ಲಿದ್ದಾರೆ ಅನ್ನೋ ಮಾತುಗಳು ಹಲವು ಬಾರಿ ಕೇಳಿಬಂದಿದೆ. ಇದ್ಯಾವುದಕ್ಕೂ ಸಮಂತಾ ತಲೆಕೆಡಿಸಿಕೊಂಡಿಲ್ಲ. ಇತ್ತೀಚೆಗೆ ನಿರ್ದೇಶಕನ ಜೊತೆಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದರು. ಇದರ ನಡುವೆ ಇದೀಗ ಸಮಂತಾ ಮಾಡಿದ ಪೋಸ್ಟ್ ಕುತೂಹಲಕ್ಕೆ ಕಾರಣವಾಗುತ್ತಿದೆ.
ನಟಿ ಸಮಂತಾ ರುತ್ ಪ್ರಭು ಇನ್‌ಸ್ಟಾಗ್ರಾಂನಲ್ಲಿ ಮಾಡಿದ ಪೋಸ್ಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಸುಂದರ ಫೋಟೋಗಳನ್ನು ಪೋಸ್ಟ್ ಮಾಡಿರುವ ಸಮಂತಾ, ಕೆಲ ಸಾಲುಗಳನ್ನು ಬರೆದಿದ್ದಾರೆ. ಈ ಪೈಕಿ ಒಂದು ಸಾಲಿನಲ್ಲಿ ನನ್ನ ಕೈಹಿಡಿಯುತ್ತೀಯಾ ಅನ್ನೋ ಸಾಲು ಇದೀಗ ಅಭಿಮಾನಿಗಳ ಕುತೂಹಲ ಡಬಲ್ ಮಾಡಿದೆ.
ಸಮಂತಾ ಫ್ಯಾಶನ್ ಪ್ರತಿ ಬಾರಿ ಹಲವರನ್ನು ವಿಸ್ಮಯಗೊಳಿಸಿದೆ. ಅಷ್ಟರ ಮಟ್ಟಿಗೆ ಸಮಂತಾ ರುತ್ ಪ್ರಭು ತಮ್ಮ ಅತ್ಯಾಕರ್ಷಕ ಸೌಂದರ್ಯ ಹಾಗೂ ಉಡುಪಿನ ಮೂಲಕ ಗಮನಸೆಳೆಯುತ್ತಾರೆ. ಈ ಬಾರಿ ಬಳಿ ಸ್ಲೀವ್‌ಲೆಸ್ ಟಾಪ್ ಜೊತೆಗೆ ಬ್ಲೂ ಲಾಂಗ್ ಸ್ಕರ್ಟ್ ಮೂಲಕ ಸಮಂತ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಅತ್ಯಂತ ಆಕರ್ಷಕವಾಗಿದೆ. ಇದರ ಜೊತೆಗೆ ಬರೆದ ಸಾಲಿನ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
ಸಮಂತಾ ಸ್ಟೈಲೀಶ್ ಲುಕ್ ಜೊತೆಗೆ ಮುದ್ದಾದ ಸಾಲುಗಳನ್ನು ಬರೆದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿನ ಒಂದು ಸಾಲು, ನೀನು ನನ್ನ ಪರವಾಗಿ ನಿಲ್ಲುತ್ತಿಯಾ? ನನ್ನ ಕೈಹಿಡಿಯುತ್ತೀಯಾ ಎಂದು ಬರೆದಿದ್ದಾರೆ. ಈ ಸಾಲು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈ ಸಾಲುಗಳ ಅರ್ಥವೇನು ಎಂದು ಹಲವರು ಪ್ರಶ್ನಿಸಿದ್ದಾರೆ.
ಸಮಂತಾ ರುತ್ ಪ್ರಭು ಹೆಸರು ಇತ್ತೀಚೆಗೆ ನಿರ್ದೇಶಕ ರಾಜ್ ನಿಡಿಮೂರು ಜೊತೆ ಥಳುಕುಹಾಕಿಕೊಂಡಿತ್ತು. ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಕೆಲ ವೇದಿಕೆಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು.
ಈ ರೂಮರ್ ನಡುವೆ ಸಮಂತಾ ಮಾಡಿದ ಪೋಸ್ಟ್ ಕುತೂಹಲ ಕೆರಳಿಸಿದೆ. ಸಮಂತಾ ಈ ಸಾಲುಗಳನ್ನು ನಿರ್ದೇಶಕನಿಗಾಗಿ ಬರೆದಿದ್ದಾರಾ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಸದ್ಯ ಸಮಂತಾ ಮಾಡಿರುವ ಪೋಸ್ಟ್ ಹಾಗೂ ಫೋಟೋಗಳು ಬಾರಿ ವೈರಲ್ ಆಗುತ್ತಿದೆ. ನಾಗಚೈತನ್ಯ ಜೊತೆಗಿನ ಮದುವೆ ಮುರಿದು ಬಿದ್ದ ಬಳಿಕ ಸಮಂತಾ ಪರ ವಿರೋಧ ಟೀಕೆ ಎದುರಿಸಿದ್ದರು.