Asianet Suvarna News Asianet Suvarna News

ರಣಬೀರ್ ಕಪೂರ್ ನನ್ನ ಮನೆಗೆ ಬಂದು ಪ್ಲೀಸ್‌...? ಹೊಸ ವಿಷಯ ಬಿಚ್ಚಿಟ್ಟ ಕಂಗನಾ ರಣಾವತ್

ಬಾಲಿವುಡ್ ಕ್ವೀನ್  ಕಂಗನಾ ರಣಾವತ್ ಹೊಸ ವಿಷಯವೊಂದನ್ನು ರಿವೀಲ್ ಮಾಡಿದ್ದರು. ಸ್ವತಃ ರಣ್‌ಬೀರ್ ಕಪೂರ್ ತಮ್ಮ ಮನೆಗೆ ಬಂದು ಪ್ಲೀಸ್‌... ಅಂತ ರಿಕ್ವೆಸ್ಟ್ ಮಾಡಿಕೊಂಡಿದ್ದ ಘಟನೆಯನ್ನು ಹಂಚಿಕೊಂಡಿದ್ದಾರೆ.

Once Ranbir kapoor came my home  says kangana ranaut mrq
Author
First Published Aug 25, 2024, 9:25 PM IST | Last Updated Aug 25, 2024, 9:25 PM IST

ಮುಂಬೈ: ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ನೀಡಿದ ಸಂದರ್ಶನ ಹಲವು ಚರ್ಚೆಗಳಿಗೆ ಮುನ್ನಡಿ ಬರೆದಿದೆ. ಕಂಗನಾ ರಣಾವತ್ ಸಂದರ್ಶನದ ವಿಡಿಯೋ ಕ್ಲಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಸಂದರ್ಶನದಲ್ಲಿ ಬಾಲಿವುಡ್ ಸ್ಟಾರ್ ದಂಪತಿಯಾಗಿರುವ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಗ್ಗೆಯೂ ಕಂಗನಾ ರಣಾವತ್ ಮಾತನಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡ ರಣ್‌ಬೀರ್ ಕಪೂರ್ ಅಭಿನಯದ ಬಗ್ಗೆಯೂ ಕಂಗನಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದೇ ವೇಳೆ ರಣ್‌ಬೀರ್ ಕಪೂರ್ ತಮ್ಮ ಸಿನಿಮಾದಲ್ಲಿ ನಟಿಸುವಂತೆ ನಮ್ಮನೆಯವರೆಗೂ ಬಂದಿದ್ದರು ಎಂಬ ವಿಷಯವನ್ನು ರಿವೀಲ್ ಮಾಡಿದ್ದರು. 

ನಟ ಸಂಜಯ್ ದತ್ ಜೀವನಾಧರಿತ ಸಂಜು ಸಿನಿಮಾ ರಣ್‌ಬೀರ್ ಕಪೂರ್ ಜೀವನದ ಮೊದಲ ಯಶಸ್ವಿ ಚಿತ್ರವಾಗಿತ್ತು. ರಾಜಕುಮಾರ್ ಹಿರಾಣಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಸಂಜು ಚಿತ್ರ, ಬಿಡುಗಡೆಯಾದ ಮೊದಲ ವಾರದಲ್ಲಿಯೇ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈ ಚಿತ್ರದಲ್ಲಿ ದಿಯಾ ಮಿರ್ಜಾ, ಅನುಷ್ಕಾ ಶರ್ಮಾ, ಸೋನಮ್ ಕಪೂರ್, ಮನೀಷಾ ಕೊಯಿರಲಾ, ಪರೇಶ್ ರಾವಲ್, ವಿಕ್ಕಿ ಕೌಶಲ್, ಕರಿಷ್ಮಾ ತನ್ನಾ ಸೇರಿದಂತೆ ದೊಡ್ಡ ತಾರಾಬಳಗವನ್ನೇ ಹೊಂದಿತ್ತು. ಮೊದಲ ಬಾರಿಗೆ ರಣ್‌ಬೀರ್ ಕಪೂರ್ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 96 ಕೋಟಿ ಬಜೆಟ್‌ನಲ್ಲಿ ರೆಡಿಯಾಗಿದ್ದ ಈ ಸಿನಿಮಾ  587 ಕೋಟಿಗೂ ಅಧಿಕ ಹಣ ಗಳಿಸಿತ್ತು. ಈ ಚಿತ್ರದ ಪಾತ್ರವೊಂದರಲ್ಲಿ ನಟಿಸಲು ಕಂಗನಾ ಅವರಿಗೂ ಆಫರ್ ಹೋಗಿತ್ತು. ಆದ್ರೆ ಕಂಗನಾ ಈ ಸಿನಿಮಾದ ಆಫರ್ ತಿರಸ್ಕರಿಸಿದ್ದರು. ಈ ಚಿತ್ರ 2018ರಲ್ಲಿ ರಿಲೀಸ್ ಆಗಿತ್ತು.

ಕಂಗನಾ ರಣಾವತ್ ಮದ್ವೆ ಆಗ್ತಿದ್ದಾರಾ? ಮದ್ವೆ ಬಗ್ಗೆ ಹೇಳಿದ್ದೇನು ಬಾಲಿವುಡ್ ಕ್ವೀನ್

ಕಂಗನಾ ರಣಾವತ್ ಯಾವ ಪಾತ್ರಕ್ಕಾಗಿ ತಮಗೆ ಆಫರ್ ಬಂದಿರುವ ವಿಷಯವನ್ನು ಕಂಗನಾ ಬಿಟ್ಟುಕೊಟ್ಟಿಲ್ಲ. ಅಂದು ಸ್ವತಃ ರಣ್‌ಬೀರ್ ಕಪೂರ್ ನಮ್ಮ ಮನೆಗೆ ಬಂದು ಸಿನಿಮಾದಲ್ಲಿ ನಟಿಸುವಂತೆ ಮನವಿ ಮಾಡಿಕೊಂಡಿದ್ದರು. ಆದ್ರೆ ನನಗೆ ಇಷ್ಟವಾಗದ ಕಾರಣ ಒಪ್ಪಿಕೊಳ್ಳಲಿಲ್ಲ. ಹಲವು ಸ್ಟಾರ್ ನಟರ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದೇನೆ. ಆದ್ರೆ ಅದ್ಯಾವುದೂ ನನ್ನ ಸಿನಿ ಜೀವನದ ಮೇಲೆ ಪರಿಣಾಮ ಬೀರಿಲ್ಲ ಎಂದು ಕಂಗನಾ ರಣಾವತ್ ಹೇಳಿದ್ದಾರೆ. 

ತ್ರಿವಳಿ ಖಾನ್‌ ಬಗ್ಗೆ ಕಂಗನಾ ಮಾತು

ಇದೇ ಸಂದರ್ಶನದಲ್ಲಿ ಬಾಲಿವುಡ್ ತ್ರಿವಳಿ ಖಾನ್‌ಗಳಾದ ಶಾರೂಖ್ ಖಾನ್, ಆಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಬಗ್ಗೆಯೂ ಕಂಗನಾ ಮಾತನಾಡಿದ್ದರು. ಇದುವರೆಗೂ ಮೂರು ಖಾನ್‌ಗಳ ಪ್ರತಿಭೆಯನ್ನು ಪರಿಚಯಿಸುವ ಕೆಲಸ ಆಗಿಲ್ಲ. ಹಾಗಾಗಿ ಇವರ ಟ್ಯಾಲೆಂಟ್ ತೋರಿಸಲು ಸಿನಿಮಾ ನಿರ್ದೇಶನ ಮಾಡಬೇಕೆಂಬ ಆಸೆ ಇದೆ ಎಂದು ಹೇಳಿಕೊಂಡಿದ್ದರು. 

ತ್ರಿವಳಿ ಖಾನ್‌ಗಳ ಟ್ಯಾಲೆಂಟ್ ಪ್ರದರ್ಶನಕ್ಕೆ ಹೊಸ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ ಕಂಗನಾ!

Latest Videos
Follow Us:
Download App:
  • android
  • ios