Cine World

ಮದ್ವೆ ಬಗ್ಗೆ ಮೌನ ಮುರಿದ ಕಂಗನಾ

ತನ್ನದೇ ಆದ ಕುಟುಂಬ ಬೇಕೆಂದು ಬಯಸುವ ಕಂಗನಾ, ಮದ್ವೆ ಬಗ್ಗೆ ಹೇಳಿದ್ದೇನು? 

Image credits: Instagram

ಮದುವೆಯಾಗಲು ಸಿದ್ಧಳಾಗಿರುವ 38 ವರ್ಷದ ಕಂಗನಾ

ಬಿಜೆಪಿ ಎಂಪಿಯಾಗಿಯೂ ಆಯ್ಕೆಯಾದ ಕಂಗನಾ, ಸದಾ ಒಂದಲ್ಲೊಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ.

ಮದುವೆ ಮಗ್ಗೆ ಮೌನ್ ಮುರಿದ ಬಾಲಿವುಡ್ ಕ್ವೀನ್

ನಟಿ ಮತ್ತು ಸಂಸದೆ ಕಂಗನಾ ರಣಾವತ್ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಮದುವೆಯ ಯೋಜನೆಯ ಬಗ್ಗೆ ಮಾತನಾಡಿದ್ದಾರೆ. ಪ್ರತಿಯೊಬ್ಬರಿಗೂ ಜೀವನ ಸಂಗಾತಿ ಬೇಕೆಂದು ಒಪ್ಪಿಕೊಂಡಿದ್ದಾರೆ.

ಮನೆ ಕಟ್ಟಿಕೊಳ್ಳುತ್ತಾರಾ ಕಂಗನಾ?

ಕಂಗನಾ ರಣಾವತ್ ರಾಜ್ ಶಮಾನಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ್ದಾರೆ. ಮದುವೆಯಾಗಿ ಮಕ್ಕಳೊಂದಿಗೆ ಕುಟುಂಬ ಹೊಂದಲು ಬಯಸುತ್ತೀರಾ ಎಂದು ಕೇಳಿದಾಗ, ಅವರು 'ಖಂಡಿತ, ಹೌದು' ಎಂದಿದ್ದಾರೆ. 

ಎಲ್ಲರೂ ಮದುವೆಯಾಗುವುದು ಅಗತ್ಯವೇ?

'ಪ್ರತಿಯೊಬ್ಬರಿಗೂ ಜೀವನ ಸಂಗಾತಿ ಇರಬೇಕು. ಸಂಗಾತಿ ಇಲ್ಲದೆ ಬದುಕು ಕಷ್ಟ.'

ಸಂಗಾತಿ ಇಲ್ಲದಿರುವುದು ಏಕೆ ಕಷ್ಟ?

 'ಸಂಗಾತಿಯೊಂದಿಗೆ ಬದುಕುವುದು ಕಷ್ಟ, ಆದರೆ ಸಂಗಾತಿ ಇಲ್ಲದೆ ಬದುಕುವುದು ಇನ್ನೂ ಕಷ್ಟ. ನೀವು ಸೂಕ್ತ ವ್ಯಕ್ತಿಯನ್ನು ಹುಡುಕುವ ಅಗತ್ಯವಿಲ್ಲ. ಈ ಒಂದು ವಿಷಯವನ್ನು ಬಿಟ್ಟು ಬಿಡಬೇಕು.'

'ಸಂಗಾತಿ ಸಿಗುವುದೇ ದೊಡ್ಡ ಕಷ್ಟ'

ಹುಡುಕಿದಂಥ, ಬಯಸಿದಂಥ ಸಂಗಾತಿ ಸಿಗೋದು ಮಾತ್ರ ಅಷ್ಟು ಸುಲಭವಲ್ಲವೆಂಬುದನ್ನು ಕಂಗನಾ ಒಪ್ಪಿಕೊಂಡಿದ್ದಾರೆ. 

ಮದುವಗೆ ಪೋಷಕರ ಒತ್ತಾಯ ಇದ್ಯಾ?

'ಏನಾಗುತ್ತಿದೆ, ಏನಾಗುತ್ತಿಲ್ಲವೆಂಬುವುದು ಫೋಷಕರಿಗೆ ಗೊತ್ತು. ನನ್ನ ಜೀವನದ ಬಗ್ಗೆ ಅವರು ಅಪ್‌ಡೇಟ್ ಆಗಿದ್ದಾರೆ. ಪ್ರತಿಯೊಬ್ಬ ಭಾರತೀಯ ಪೋಷಕರಂತೆ ಅವರೂ ಯೋಚಿಸುತ್ತಾರೆ.'

ಯಾವಾಗ ಮದುವೆಯಾಗಬೇಕು?

'ವಯಸ್ಸಾದಂತೆ ಹೊಂದಿಕೊಳ್ಳುವುದು ಕಷ್ಟ. ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾದರೆ ಹೊಂದಿಕೊಳ್ಳುವುದು ಸುಲಭ.'

ಗ್ರಾಮೀಣ ಪ್ರದೇಶದ ಉದಾಹರಣೆ ನೀಡಿದ ಕಂಗನಾ

'ಗ್ರಾಮೀಣ ಪ್ರದೇಶಗಳಲ್ಲಿ ಚಿಕ್ಕ ವಯಸ್ಸಲ್ಲೇ ಮದುವೆಯಾಗುತ್ತಾರೆ. ಜೊತೆಗೆ, ಆ ವಯಸ್ಸಲ್ಲಿ ಹಾರ್ಮೋನುಗಳು ಪ್ರಬಲವಾಗಿರುತ್ತವೆ, ಆಗ ದಿಕ್ಕು ಸಿಗುವುದು ಒಳ್ಳೆಯದು. ಚಿಕ್ಕ ವಯಸ್ಸಿನಲ್ಲಿ ಅದು ಸುಲಭ.'

ಯಾರೊಂದಿಗಾದರೂ ಸಂಬಂಧದಲ್ಲಿದ್ದಾರಾ?

ಈ ವರ್ಷದ ಆರಂಭದಲ್ಲಿ ಕಂಗನಾ ತಾನು ಯಾರೊಂದಿಗೋ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಬಹಿರಂಗಪಡಿಸಿದ್ದರು. ಆದಾಗ್ಯೂ, ಅವರು ತಮ್ಮ ಗೆಳೆಯನ ಹೆಸರನ್ನು ಬಹಿರಂಗಪಡಿಸಲಿಲ್ಲ.

ಮುಂಬರುವ ಚಲನಚಿತ್ರಗಳು

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಸಂಸದೆಯಾಗಿರುವ ಕಂಗನಾ ರಣಾವತ್ ಅವರು ಚಲನಚಿತ್ರಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಅವರ ಮುಂದಿನ ಚಿತ್ರ 'ಎಮರ್ಜೆನ್ಸಿ' ಸೆಪ್ಟೆಂಬರ್ 22 ರಂದು ಬಿಡುಗಡೆಯಾಗಲಿದೆ.

Middle Classಗೂ ಸೂಟ್ ಆಗೋ ಸಾರಾ ಅಲಿ ಖಾನ್ ಸ್ಟೈಲ್‌ನ 10 ಕಾಟನ್ ಸೂಟ್ಸ್

ನಿಮ್ಮನ್ನು ನಕ್ಕು ನಗಿಸಲು ಬರುತ್ತಿವೆ ಹಾಸ್ಯ ಚಿತ್ರಗಳು! ಮಿಸ್ ಮಾಡ್ಬೇಡಿ

ವಾಟರ್ ಬಾಯ್ ರಿಷಬ್ ಶೆಟ್ಟಿ, ರಾಷ್ಟ್ರವೇ ಮೆಚ್ಚಿದ ನಟನಾಗಿದ್ದೇಗೆ?

ವಟ ವಟ ಅಂತ ಮಾತಾಡೋ ಕಂಗನಾಳ ಲಕ ಲಕ ಹೊಳೆಯೋ ಸ್ಕಿನ್ ಸೀಕ್ರೆಟ್ಸ್!