Asianet Suvarna News Asianet Suvarna News

ಸುಪ್ರೀಂ ಕೋರ್ಟಲ್ಲಿ ಲಾಪತಾ ಲೇಡಿಸ್ ಪ್ರದರ್ಶನ ವೀಕ್ಷಿಸಲು ಬಂದ ಆಮೀರ್ ಖಾನ್ ಕಾಲೆಳೆದ ಚೀಫ್ ಜಸ್ಟೀಸ್

ಕಡಿಮೆ ಬಜೆಟ್​ನಲ್ಲಿಯೂ ಸಿನಿಮಾವೊಂದು ದಾಖಲೆ ಸಾಧಿಸಲು ಸಾಧ್ಯ ಎಂದು ತೋರಿಸಿದ  'ಲಾ ಪತಾ ಲೇಡೀಸ್​' ಈಗ ಇನ್ನೊಂದು ದಾಖಲೆ ಬರೆದಿದೆ. ಸುಪ್ರೀಂಕೋರ್ಟ್​ನಲ್ಲಿಯೇ ಚಿತ್ರ ಪ್ರದರ್ಶನವಾಗಿದೆ. ಏನಿದು ವಿಷ್ಯ? 
 

On wifes suggestion CJI Chandrachud arranges screening of Laapataa Ladies in SC suc
Author
First Published Aug 10, 2024, 12:06 PM IST | Last Updated Aug 10, 2024, 12:28 PM IST

ಕೇವಲ ನಾಲ್ಕು ಕೋಟಿ ರೂಪಾಯಿಗಳಲ್ಲಿ ನಿರ್ಮಿಸಲಾದ ಬಾಲಿವುಡ್​ನ ಲಾ ಪತಾ ಲೇಡೀಸ್​  ಹಲವು ದಾಖಲೆಗಳನ್ನು ಬರೆದಿದೆ. ನೂರಾರು ಕೋಟಿ ಬಜೆಟ್​ನಲ್ಲಿ ನಿರ್ಮಿಸಿ, ಕ್ರೌರ್ಯವನ್ನು ವಿಜೃಂಭಿಸುವ ಜೊತೆಗೆ ಬ್ಲಾಕ್​ಬಸ್ಟರ್​ ಎಂದೂ ಸಾಬೀತಾಗಿರೋ ಅನಿಮಲ್​ ಚಿತ್ರದ ದಾಖಲೆಯನ್ನು ಲಾಪತಾ ಲೇಡೀಸ್​ ಮುರಿದು ಹಾಕಿದೆ. ಕಳೆದು ಹೋಗುವ ಇಬ್ಬರು ವಧುಗಳ ಬಗೆಗಿನ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ. ವಧು ಕಳೆದುಹೋಗಿರುವ ಕತೆಯಲ್ಲಿ ಸ್ತ್ರೀ ಸ್ವಾತಂತ್ರ್ಯ ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಆಮೀರ್ ಖಾನ್ ಬಂಡವಾಳ ಹೂಡಿರೋ ಈ ಚಿತ್ರಕ್ಕೆ  ಅವರ ಮಾಜಿ ಪತ್ನಿ, ನಿರ್ದೇಶಕಿ ಕಿರಣ್ ರಾವ್ ನಿರ್ದೇಶನ ಮಾಡಿದ್ದಾರೆ.  ಸಿನಿಮಾದಲ್ಲಿ ನಿತಾಂಶಿ ಘೋಯಲ್, ಪ್ರತಿಭಾ ರಂತಾ, ಸ್ಪರ್ಷ್ ಶ್ರೀವತ್ಸ, ಚಯ್ಯಾ ಕದಮ್ ಅಂಥಹಾ ಹೊಸ ನಟರು ನಟಿಸಿದ್ದಾರೆ. ಸಿನಿಮಾದ ಮುಖ್ಯ ಪಾತ್ರದಲ್ಲಿ ನಟ ರವಿ ಕಿಶನ್ ನಟಿಸಿದ್ದಾರೆ. ಈ ಚಿತ್ರವೀಗ ಅನಿಮಲ್​ ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ. ಈ ದಾಖಲೆ ಮುರಿದಿರುವುದು ನೆಟ್​ಫ್ಲಿಕ್ಸ್​ನಲ್ಲಿ. ಸಿನಿಮಾಕ್ಕೆ ನಾಲ್ಕು ಕೋಟಿ ಬಜೆಟ್​ನ ಈ ಸಿನಿಮಾ ಚಿತ್ರಮಂದಿರದಲ್ಲಿ 21 ಕೋಟಿ ಗಳಿಸಿತ್ತು. ಆದರೆ ನೆಟ್​ಫ್ಲಿಕ್ಸ್​ನಲ್ಲಿ ದಾಖಲೆ ಬರೆದಿದೆ.  

ಯಾವುದೇ ಸ್ಟಾರ್ ನಟರಿಲ್ಲದ, ಸರಳವಾದ ಕತೆಯನ್ನಷ್ಟೆ ಹೊಂದಿದೆ ಈ ಚಿತ್ರ  ಈಗ ದಾಖಲೆ ಇನ್ನೊಂದು ಬರೆದಿದೆ. ಅದೇನೆಂದರೆ, ಸುಪ್ರೀಂ ಕೋರ್ಟ್​ನ 75ನೇ ವಾರ್ಷಿಕೋತ್ಸವದ ಸಲುವಾಗಿ ‘ಲಾಪತಾ ಲೇಡೀಸ್​’ ಸಿನಿಮಾವನ್ನು ಖುದ್ದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರ ಸೂಚನೆ ಮೇರೆಗೆ ಪ್ರದರ್ಶನ ಮಾಡಲಾಗಿದೆ. ಅವರ ಪತ್ನಿ ಕಲ್ಪನಾ ದಾಸ್​ ಅವರು ಈ ಚಿತ್ರವನ್ನು ಪ್ರದರ್ಶಿಸುವಂತೆ ಮನವಿ ಮಾಡಿಕೊಂಡಿದ್ದರಂತೆ. ಅದರಂತೆಯೇ ಚಿತ್ರ ನಿನ್ನೆ ಅಂದರೆ ಆಗಸ್ಟ್​ 9ರಂದು ಪ್ರದರ್ಶನ ಮಾಡಲಾಗಿದೆ. ಇದರಲ್ಲಿ ಭಾಗಿಯಾಗಲು ಕಿರಣ್​ ರಾವ್​ ಮತ್ತು ಆಮಿರ್​ ಖಾನ್​ ಅವರನ್ನು ಆಹ್ವಾನಿಸಲಾಗಿತ್ತು. ಅಷ್ಟಕ್ಕೂ ಈ ಚಿತ್ರವನ್ನು ಪ್ರದರ್ಶನ ಮಾಡಲು  'ಲಾಪತಾ ಲೇಡೀಸ್' ಒಂದು ಸಾಮಾಜಿಕ ಕಳಕಳಿಯುಳ್ಳ ಸಿನಿಮಾ. ಇದರಲ್ಲಿ ನಿರ್ದೇಶಕಿ ಕಿರಣ್ ರಾವ್ ಲಿಂಗ ಸಮಾನತೆಯ ಬಗ್ಗೆ ಸಂದೇಶವನ್ನು ವಿಡಂಬನಾತ್ಮಕವಾಗಿ ನೀಡಿದ್ದಾರೆ. ಭಾರತದ ಹಲವು ಭಾಗಗಳಲ್ಲಿ ಇನ್ನೂ ಲಿಂಗ ಅಸಮಾನತೆಯಿದೆ. ಅದನ್ನು ಪ್ರೇಕ್ಷಕರಿಗೆ ತಟ್ಟುವಂತೆ ಈ ಸಿನಿಮಾವನ್ನು ಮಾಡಲಾಗಿದೆ. ಈ ಕಾರಣಕ್ಕೆ ದೇಶಾದ್ಯಂತ ಚರ್ಚೆಯಾಗಿತ್ತು. ಪ್ರಮುಖ ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಲಾ ಪತಾ ಲೇಡೀಸ್ ಮೂವಿ ರಿವ್ಯೂ: ಘೂಂಘಟ್ ಗೊಂದಲ, ಪ್ರೇಕ್ಷಕನಿಗೋ ನಿಲ್ಲದ ತಳಮಳ


ಕೋರ್ಟ್​ಗೆ ಆಮೀರ್​ ಖಾನ್​ ಆಗಮಿಸಿದಾಗ ಮುಖ್ಯ ನ್ಯಾಯಮೂರ್ತಿ  ಚಂದ್ರಚೂಡ್  ಸ್ವಾಗತ ಕೋರಿದರು.  "ಕೋರ್ಟ್‌ನಲ್ಲಿ ನನಗೆ ನೂಕುನುಗ್ಗುಲು ಆಗುವುದು ಇಷ್ಟವಿಲ್ಲ. ಆದರೆ, ಇವತ್ತು ಇಲ್ಲಿ ಆಮಿರ್ ಖಾನ್ ಇದ್ದಾರೆ" ಎಂದು ಮುಖ್ಯ ನ್ಯಾಯಮೂರ್ತಿ ತಮಾಷೆ ಮಾಡಿದರು.   ತರ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿರಣ್​ ರಾವ್​ ಅವರು, ‘ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳು,  ಅವರ ಕುಟುಂಬದವರು ಹಾಗೂ ಅಧಿಕಾರಿಗಳಿಗಾಗಿ ನಮ್ಮ ಸಿನಿಮಾ ಪ್ರದರ್ಶನಗೊಂಡಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಇಲ್ಲಿಗೆ ಬಂದಿದ್ದಕ್ಕೆ ಬಹಳ ಖುಷಿ ಆಗಿದೆ’ ಎಂದರು.  ಈ ಅನುಭವದಿಂದ ಮುಂದೇನಾದರೂ ಕೋರ್ಟ್​ ರೂಂ ಡ್ರಾಮಾ ಸಿನಿಮಾವನ್ನು ಮಾಡುವ ಆಸೆ ಇದೆಯಾ ಎಂದು ಕೇಳಿದ್ದಕ್ಕೆ, ‘ಮಾಡಲು ಇಷ್ಟ ಇದೆ. ಇದನ್ನೆಲ್ಲ ಒಂದು ದಿನ ಪೂರ್ತಿ ನೀಡಿದ್ದರೆ ಚೆನ್ನಾಗಿತ್ತು. ಮುಂದೊಂದು ದಿನ ಆ ರೀತಿ ಸಿನಿಮಾ ಮಾಡಬಹುದು’ ಎಂದು ಉತ್ತರಿಸಿದ್ದಾರೆ.

ಅಂದಹಾಗೆ ಈ ಚಿತ್ರದ ಕಥೆ ಇಂತಿದೆ: ದೀಪಕ್ ಮತ್ತು ಫೂಲ್ ಕುಮಾರಿ ನವವಿವಾಹಿತರು. ಮದುವೆ ಮುಗಿಸಿ ವರನ ಕಡೆಯವರು ಊರಿಗೆ ಹೊರಟು ಬಿಡುತ್ತಾರೆ. ನೂತನ ವಧೂವರರು ವಧುವಿನ ಮನೆಯಲ್ಲಿ ಕೆಲವು ಶಾಸ್ತ್ರಗಳಿಗಾಗಿ ಉಳಿದುಕೊಳ್ಳುತ್ತಾರೆ. ನಂತರ ಇಬ್ಬರೇ ವರನ ಊರಿಗೆ ಹೊರಡುತ್ತಾರೆ. ಫೂಲ್ ಕುಮಾರಿ ಇನ್ನೂ ಮುಗ್ಧತೆಯೇ ಕಳೆಯದ ಸುಂದರ ಯುವತಿ. ದೀಪಕ್ ಕೂಡಾ ಅಷ್ಟೇ ಸರಳ ಮನಸ್ಸಿನ ಭಾವುಕ ಯುವಕ. ಹೊರಡುವಾಗ ಬಿಳ್ಕೊಡುಗೆ ಶಾಸ್ತ್ರದ ನಂತರ ವಧುವಿಗೆ ಘೂಂಘಟ್ ಅನ್ನು ಯಾವುದೇ ಕಾರಣಕ್ಕೂ ತೆರೆಯಬಾರದು ಹಾಗೂ ಗಂಡನ ಹೆಸರನ್ನು ಹೇಳಬಾರದು ಎಂದು ಹಿರಿಯರು ಅಣತಿ ಮಾಡುತ್ತಾರೆ. ಈ ಸಂಪ್ರದಾಯ ಎಂತಹ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ಚಿತ್ರ ನೋಡಿದರೆ ಪ್ರೇಕ್ಷಕನಿಗೆ ಅರಿವಾಗುತ್ತದೆ.

100 ಕೋಟಿ ಬಜೆಟ್​ನ ಕ್ರೌರ್ಯ ಬಿಂಬಿಸುವ 'ಅನಿಮಲ್'​ ದಾಖಲೆ ನುಂಗಿದ 4 ಕೋಟಿಯ 'ಲಪತಾ ಲೇಡೀಸ್​'!

  
 

Latest Videos
Follow Us:
Download App:
  • android
  • ios