Asianet Suvarna News Asianet Suvarna News

100 ಕೋಟಿ ಬಜೆಟ್​ನ ಕ್ರೌರ್ಯ ಬಿಂಬಿಸುವ 'ಅನಿಮಲ್'​ ದಾಖಲೆ ನುಂಗಿದ 4 ಕೋಟಿಯ 'ಲಪತಾ ಲೇಡೀಸ್​'!

 100 ಕೋಟಿ ಬಜೆಟ್​ನ ಕ್ರೌರ್ಯ ಬಿಂಬಿಸುವ 'ಅನಿಮಲ್'​ ದಾಖಲೆಯನ್ನು ಮುರಿದಿದೆ ಕಿರಣ್​ ರಾವ್​ ಅವರ  4 ಕೋಟಿಯ 'ಲಪತಾ ಲೇಡೀಸ್​'.  ಏನಿದು ವಿಷಯ? 
 

Kiran Raos Laapataa Ladies Beats Ranbir Kapoors Animal Viewership on Netflix suc
Author
First Published May 24, 2024, 5:10 PM IST

ಇಂದು ನೂರಾರು ಕೋಟಿ ಬಜೆಟ್​ನ ಚಿತ್ರಗಳಿಗೇನೂ ಕಮ್ಮಿ ಇಲ್ಲ. ಕೋಟಿಗೆ ಬೆಲೆಯೇ ಇಲ್ಲದ ಇಂದಿನ ದಿನಗಳಲ್ಲಿ ಇಷ್ಟು ಬೃಹತ್​ ಬಂಡವಾಳ ಹೂಡಿ ಕೈಸುಟ್ಟುಕೊಂಡ ನಿರ್ಮಾಪಕರಿಗೂ ಕೊರತೆಯೇನಿಲ್ಲ. ಅದರ ಜೊತೆಗೆ ಸೆಕ್ಸ್​, ಕ್ರೌರ್ಯ, ರಕ್ತಪಾತ, ಹೀರೋಗಳ ಕೈಯಲ್ಲಿ ಲಾಂಗು, ಮಚ್ಚು ಹಿಡಿಸುವುದು, ಪೈಪೋಟಿಗೆ ಬಿದ್ದವರಂತೆ ನಟಿಯರು ಅರೆನಗ್ನ, ಪೂರ್ಣ ನಗ್ನವಾಗುವುದು... ಹೀಗೆ ಒಂದು ಚಿತ್ರ ಓಡಿಸಲು ನಿರ್ಮಾಪಕರು, ನಿರ್ದೇಶಕರು ಪಡುವ ಶ್ರಮ ಅಷ್ಟಿಷ್ಟಲ್ಲ. ಇವುಗಳ ಪೈಕಿ ಕೆಲವೊಂದು ಯಾವುದೋ ಕಾರಣಕ್ಕೆ ಬ್ಲಾಕ್​ಬಸ್ಟರ್​ ಎಂದೂ ಸಾಬೀತಾಗಬಹುದು. ಆದರೆ ನೂರಾರು ಕೋಟಿ ಬಜೆಟ್​ ಹಾಕಿದ ಚಿತ್ರಗಳು ಬ್ಲಾಕ್​ಬಸ್ಟರ್​ ಆಗುತ್ತವೆ ಎನ್ನುವುದು ಎಷ್ಟು ಸುಲ್ಲೋ,  ಕೆಲವೇ ಕೋಟಿ ರೂಪಾಯಿಗಳಲ್ಲಿ ನಿರ್ಮಿಸಲಾಗಿರುವ ಚಿತ್ರಗಳು ಫ್ಲಾಪ್​ ಆಗುತ್ತವೆ ಎನ್ನುವುದು ಅದಕ್ಕಿಂತಲೂ ದೊಡ್ಡ ಸುಳ್ಳು ಎನ್ನುವುದನ್ನು ಇದಾಗಲೇ ಹಲವಾರು ಸಿನಿಮಾಗಳು ತೋರಿಸಿಕೊಟ್ಟಿವೆ.

ಇದಕ್ಕೆ ಒಂದು ಉದಾಹರಣೆಯಾಗಿದ್ದು ಕನ್ನಡದ ಕಾಂತಾರ ಚಿತ್ರ. ಚಿಕ್ಕ ಬಜೆಟ್​ನಲ್ಲಿ ನಿರ್ಮಿಸಿದ್ದ ಕನ್ನಡದ ಚಿತ್ರ ಪ್ಯಾನ್​ ಇಂಡಿಯಾ ಮಾತ್ರವಲ್ಲದೇ ಹೊರದೇಶಗಳಲ್ಲಿಯೂ ಹೇಗೆ ಬೇಡಿಕೆ ಕುದುರಿಸಿಕೊಂಡಿತು ಎನ್ನುವುದು ಈಗ ಇತಿಹಾಸ. ಆದರೆ ಈಗ ಹೇಳಹೊರಟಿರುವುದು ಕೇವಲ ನಾಲ್ಕು ಕೋಟಿ ರೂಪಾಯಿಗಳಲ್ಲಿ ನಿರ್ಮಿಸಲಾದ ಬಾಲಿವುಡ್​ನ ಲಾ ಪತಾ ಲೇಡೀಸ್​ ಚಿತ್ರದ ಕುರಿತು. ನೂರಾರು ಕೋಟಿ ಬಜೆಟ್​ನಲ್ಲಿ ನಿರ್ಮಿಸಿ, ಕ್ರೌರ್ಯವನ್ನು ವಿಜೃಂಭಿಸುವ ಜೊತೆಗೆ ಬ್ಲಾಕ್​ಬಸ್ಟರ್​ ಎಂದೂ ಸಾಬೀತಾಗಿರೋ ಅನಿಮಲ್​ ಚಿತ್ರದ ದಾಖಲೆಯನ್ನು ಲಾಪತಾ ಲೇಡೀಸ್​ ಮುರಿದು ಹಾಕಿದೆ. ಕಳೆದು ಹೋಗುವ ಇಬ್ಬರು ವಧುಗಳ ಬಗೆಗಿನ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ. ವಧು ಕಳೆದುಹೋಗಿರುವ ಕತೆಯಲ್ಲಿ ಸ್ತ್ರೀ ಸ್ವಾತಂತ್ರ್ಯ ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

20ರ ಹರೆಯದಲ್ಲೇ 40ರ ವಿನೋದ್ ಖನ್ನಾ ಜೊತೆ ಹಸಿಬಿಸಿ ಬೆಡ್​ರೂಂ ಸೀನ್, ಇವರಿಬ್ಬರ ನಡುವೆ ಇತ್ತಾ ಅಫೇರ್!

ಆಮೀರ್ ಖಾನ್ ಬಂಡವಾಳ ಹೂಡಿರೋ ಈ ಚಿತ್ರಕ್ಕೆ  ಅವರ ಮಾಜಿ ಪತ್ನಿ, ನಿರ್ದೇಶಕಿ ಕಿರಣ್ ರಾವ್ ನಿರ್ದೇಶನ ಮಾಡಿದ್ದಾರೆ.  ಸಿನಿಮಾದಲ್ಲಿ ನಿತಾಂಶಿ ಘೋಯಲ್, ಪ್ರತಿಭಾ ರಂತಾ, ಸ್ಪರ್ಷ್ ಶ್ರೀವತ್ಸ, ಚಯ್ಯಾ ಕದಮ್ ಅಂಥಹಾ ಹೊಸ ನಟರು ನಟಿಸಿದ್ದಾರೆ. ಸಿನಿಮಾದ ಮುಖ್ಯ ಪಾತ್ರದಲ್ಲಿ ನಟ ರವಿ ಕಿಶನ್ ನಟಿಸಿದ್ದಾರೆ. ಈ ಚಿತ್ರವೀಗ ಅನಿಮಲ್​ ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ. ಈ ದಾಖಲೆ ಮುರಿದಿರುವುದು ನೆಟ್​ಫ್ಲಿಕ್ಸ್​ನಲ್ಲಿ. ಸಿನಿಮಾಕ್ಕೆ ನಾಲ್ಕು ಕೋಟಿ ಬಜೆಟ್​ನ ಈ ಸಿನಿಮಾ ಚಿತ್ರಮಂದಿರದಲ್ಲಿ 21 ಕೋಟಿ ಗಳಿಸಿತ್ತು. ಆದರೆ ನೆಟ್​ಫ್ಲಿಕ್ಸ್​ನಲ್ಲಿ ದಾಖಲೆ ಬರೆದಿದೆ.  ಯಾವುದೇ ಸ್ಟಾರ್ ನಟರಿಲ್ಲದ, ಸರಳವಾದ ಕತೆಯನ್ನಷ್ಟೆ ಹೊಂದಿರುವ ಈ ಚಿತ್ರ ಈಗ ದಾಖಲೆ ಬರೆದಿದೆ.
 
 ಅಂದಹಾಗೆ ಲಾಪತಾ ಲೇಡೀಸ್​ ಕಳೆದ ಮಾರ್ಚ್ 1ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಚಿತ್ರ ಮಂದಿರಗಳಲ್ಲಿ  ಸಾಧಾರಣ ಯಶಸ್ಸು ಗಳಿಸಿದೆ.  ಆದರೆ ಇದೀಗ ಒಟಿಟಿಯಲ್ಲಿ ಬಿಡುಗಡೆ ಆದ ಬಳಿಕ ಭಾರಿ ಯಶಸ್ಸು ಗಳಿಸಿಕೊಂಡಿತು.  ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದ್ದ ‘ಅನಿಮಲ್’ ಸಿನಿಮಾದ ದಾಖಲೆಯನ್ನು ಮುರಿದಿದೆ ‘ಲಾಪತಾ ಲೇಡೀಸ್’.  ನೆಟ್​ಫ್ಲಿಕ್ಸ್​ನಲ್ಲಿ ಒಂದು ತಿಂಗಳಿಗೆ 13.8 ಮಿಲಿಯನ್ ಅಂದರೆ 1.38 ಕೋಟಿ ಬಾರಿ ವೀಕ್ಷಣೆ ಕಂಡಿದೆ.  ‘ಅನಿಮಲ್’ ಚಿತ್ರ  1.36 ಕೋಟಿ ವೀಕ್ಷಣೆ ಕಂಡಿತ್ತು.  ಈ ಖುಷಿಯ ವಿಷಯವನ್ನು ಸಿನಿಮಾದ ನಿರ್ದೇಶಕಿ ಕಿರಣ್ ರಾವ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.   ‘ಲಾಪತಾ ಲೇಡೀಸ್’ ಸಿನಿಮಾದ ಬಿಡುಗಡೆ ಸಮಯದಲ್ಲಿ ನಿರ್ದೇಶಕಿ ಕಿರಣ್ ರಾವ್, ‘ಅನಿಮಲ್’ ಸಿನಿಮಾವನ್ನು ಟೀಕಿಸಿ ಮಾತನಾಡಿದ್ದರು. ‘ಅನಿಮಲ್’ ಸಿನಿಮಾ ಸ್ತ್ರೀ ವಿರೋಧಿ, ಪುರುಷ ಅಹಂಕಾರವನ್ನು ಮೆರೆಸುವ ಸಿನಿಮಾ ಎಂದು ಜರಿದಿದ್ದರು.  

ನನ್ನ ಹಿಂಬದಿ ಊಟದ ಟೇಬಲ್​ನಂತೆ ಕಂಡುಬಂದ್ರೆ ಏಳು ಮಂದಿಗೆ ಆಹಾರ ನೀಡ್ತೇನೆ... ನಿಮಗೇನ್ರೀ ಸಮಸ್ಯೆ?

Latest Videos
Follow Us:
Download App:
  • android
  • ios