Asianet Suvarna News Asianet Suvarna News

ನಟಿ ಜಾಕ್ವೆಲಿನ್‌-ಸುಕೇಶ್‌ ಕೇಸ್​ಗೆ ಭಾರಿ ಟ್ವಿಸ್ಟ್‌! ಜೈಲಿಂದ ಪತ್ರ ಬರೆದಿದ್ದು ಈತ ಅಲ್ವೇ ಅಲ್ವಂತೆ, ಹಾಗಿದ್ರೆ ಯಾರು?

ನಟಿ ಜಾಕ್ವೆಲಿನ್​ಗೆ ಬರ್ತಿದ್ದ ಪತ್ರಗಳು ವಂಚಕ ಸುಕೇಶ್​ ಚಂದ್ರಶೇಖರ್​ದ್ದು ಅಲ್ಲವಂತೆ! ಈ ಕುರಿತು ಚಾಲೆಂಜ್​ ಹಾಕಿರೋ ಸುಕೇಶ್​ ಹೇಳಿದ್ದೇನು ನೋಡಿ... 
 

On Leaked Chats With Jacqueline Fernandez   Sukesh Chandrashekhar New  Cloned Claim suc
Author
First Published Dec 27, 2023, 8:01 PM IST

ಐಷಾರಾಮಿ ಉಡುಗೊರೆಗೋಸ್ಕರ ವಂಚಕ ಸುಕೇಶ್​ ಜೊತೆ ಸಂಬಂಧ ಬೆಳೆಸಿರುವ ರಾ ರಾ ರಕ್ಕಮ್ಮ ಬೆಡಗಿ, ಬಾಲಿವುಡ್​ ತಾರೆ ಜಾಕ್ವೆಲಿನ್​ ಫರ್ನಾಂಡೀಸ್​ ಪ್ರಕರಣ ದಿನೇ ದಿನೇ ಹೊಸಹೊಸ ಬೆಳವಣಿಗೆ ಕಾಣುತ್ತಿದೆ.  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Money Laundering case) ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಮತ್ತು ಜಾಕ್ವೆಲಿನ್‌ ನಡುವಿನ ಪತ್ರ  ವ್ಯವಹಾರಗಳ ಕುರಿತು ಇದೀಗ ಬಿಗ್‌ ಅಪ್‌ಡೇಟ್‌ ಹೊರಬಂದಿದೆ. ಜೈಲಿನಿಂದಲೇ ಸುಕೇಶ್‌ ತಮಗೆ ಬೆದರಿಕೆ ಹಾಕುತ್ತಿರುವುದಾಗಿ ನಟಿ ಜಾಕ್ವೆಲಿನ್‌ ಇದಾಗಲೇ ಸುಕೇಶ್‌ ವಿರುದ್ಧ ಕೋರ್ಟ್‌‌ನಲ್ಲಿ ದೂರು ದಾಖಲು ಮಾಡಿದ್ದಾರೆ. ಇದರ ಮಧ್ಯೆ ಇವರಿಬ್ಬರ ನಡುವೆ ನಡೆದಿದೆ ಎನ್ನಲಾದ ವಾಟ್ಸ್‌ಆಪ್‌ ಸಂದೇಶ, ಪತ್ರ ವ್ಯವಹಾರಗಳ ಬಗ್ಗೆ ತನಿಖಾಧಿಗಳು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದಾರೆ.

 ಜೈಲಿನಲ್ಲಿರುವ ಸುಕೇಶ್ ವಾಟ್ಸ್ಆ್ಯಪ್ ಮತ್ತು ವಾಯ್ಸ್ ಮೇಸೆಜ್ ಮೂಲಕ ಬೆದರಿಕೆ ಹಾಕುತ್ತಿದ್ದಾನೆ ಎಂದು ನಟಿ ದೂರಿದ್ದರು. ಇದೀಗ ನಾನು ಆ ರೀತಿ ಯಾವುದೇ ಪತ್ರ ಬರೆದಿಲ್ಲ. ಇದು ತಪ್ಪಾದ ಮಾಹಿತಿ, ನನ್ನ ಹೆಸರಿನಲ್ಲಿ ಎಐ ಬಳಸಿ ಬೇರೆ ಯಾರೋ ಬರೆದಿರಬೇಕು. ಕಾನೂನು ನನಗೆ ತಿಳಿದಿದೆ. ಜೈಲಿನಲ್ಲಿ ಇದ್ದುಕೊಂಡು ಕಾನೂನು ನಾನು ಮೀರುವುದಿಲ್ಲ.  ನಾನು ಈ ರೀತಿ ತಪ್ಪು ಮಾಡಿದರೆ, ಸಿಬಿಐ ತನಿಖೆ ನಡೆಸಲಿ ಎಂದು ಸುಕೇಶ್‌ ಹೇಳಿದ್ದಾನೆ. ಒಂದು ವೇಳೆ ನಾನೇ ಜಾಕ್ವೆಲಿನ್‌ಗೆ ಬೆದರಿಕೆ ಹಾಕಿ ಪತ್ರ ಬರೆದಿದ್ದೇನೆ ಎನ್ನುವುದು ಸಾಬೀತಾದರೆ ಯಾವುದೇ ಶಿಕ್ಷೆ ಪಡೆಯಲು ನಾನು ಸಿದ್ಧ ಎಂದೂ ಹೇಳಿದ್ದಾನೆ.  

ಹಾಯ್​ ಬೇಬಿ.. ಏನಾದರೂ ಧರಿಸಿದ್ರೂ ಓಕೆ, ಆದ್ರೆ ಬಣ್ಣ ಕಪ್ಪು ಇರಲಿ... ಲವ್​ ಯೂ ಸೋ ಮಚ್​...

ತನಿಖಾಧಿಕಾರಿಗಳು ಎಲ್ಲಾ ರೀತಿಯ ತನಿಖೆ ನಡೆಸಲಿ. ಈ ರೀತಿ ಸಂದೇಶ ಕಳುಹಿಸಿದ ಐಪಿ ಅಡ್ರೆಸ್ ಮತ್ತು ಐಎಂಇಐ ನಂಬರ್ ಪರಿಶೀಲಿಸಿದರೆ ತಿಳಿಯುತ್ತದೆ. ನನ್ನ ಹೆಸರಿನಲ್ಲಿ ಯಾರು ಈ ರೀತಿ ಕೃತ್ಯ ಎಸಗುತ್ತಿದ್ದಾರೆ ಎನ್ನುವುದು ಎಂದಿರುವ ಸುಕೇಶ್‌, ಅದೇ ಇನ್ನೊಂದೆಡೆ, ತನ್ನಿಂದ ತಪ್ಪಿಸಿಕೊಳ್ಳಲು ಜಾಕ್ವೆಲಿನ್‌ ಉದ್ದೇಶಪೂರ್ವಕವಾಗಿ ಹೀಗೆ ಸುಳ್ಳು ಹೇಳುತ್ತಿದ್ದಾಳೆ ಎಂದೂ ಹೇಳಿದ್ದಾನೆ. ಹೀಗೆ ಮಾಧ್ಯಮಗಳ ಮುಂದೆ ಹೇಳಿಕೊಂಡು  ತಾನೊಬ್ಬಳು ಸಂತ್ರಸ್ತೆ ಎಂದು ಬಿಂಬಿಸಿಕೊಳ್ಳುವ ಯತ್ನ ಮಾಡುತ್ತಿದ್ದಾಳೆ. ನಾನೇ ಮೆಸೇಜ್‌ ಕಳುಹಿಸುತ್ತಿರುವುದು ಎನ್ನುವುದು ಕೋರ್ಟ್‌‌ನಲ್ಲಿ ಆಕೆ ಬೇಕಿದ್ದರೆ ಸಾಬೀತು ಮಾಡಲಿ ಎಂದಿರುವ ಸುಕೇಶ್‌, ಅವಳು ಏನೇ ಮಾಡಿದರೂ ನಾನು ಆಕೆಯನ್ನು ಹುಚ್ಚನಂತೆ ಪ್ರೀತಿಸುತ್ತೇನೆ ಎಂದು ಹೇಳುವುದನ್ನೂ ಬಿಡಲಿಲ್ಲ.
 
 ನೂರಾರು ಕೋಟಿ ಆಸ್ತಿ ಇದ್ದರೂ, ಮತ್ತಷ್ಟು ವೈಭೋಗ ಜೀವನಕ್ಕಾಗಿ ಸುಕೇಶ್​ನ ಮೋಹದ ಬಲೆಗೆ ಬಿದ್ದು, ಈಗ ಕೋರ್ಟ್​ ಅಲೀಯುವಂತಾಗಿದೆ ಜಾಕ್ವೆಲಿನ್​. ಕೋಟಿ ಕೋಟಿ ಬೆಲೆ ಬಾಳುವ ವಜ್ರಾಭರಣಗಳು ಸೇರಿದಂತೆ ಈಕೆ ಪಡೆದಿರುವ ಉಡುಗೊರೆಗೆ ಲೆಕ್ಕವೇ ಇಲ್ಲ. ನಂತರ ಯಾವಾಗ ಸುಕೇಶ್​ ಜೈಲು ಸೇರಿದನೋ, ಅವನ ಹಿಂದೆ ಜಾಕ್ವೆಲಿನ್​ ಹೆಸರೂ ಕೇಳಿಬಂದಿದ್ದು, ಇವರ ವಿರುದ್ಧವೂ ದೂರು ದಾಖಲಾಗಿದೆ. ಸುಕೇಶ್​ ಜೈಲಿನಲ್ಲಿ ಇದ್ದರೂ, ಇವರ ನಡುವೆ ಇಂದಿಗೂ ಪತ್ರವ್ಯವಹಾರ ಮುಂದುವರೆಯುತ್ತಲೇ ಇರುವ ಕಾರಣ, ಅಕ್ರಮ ಕೇಸ್​ನಲ್ಲಿ ಜಾಕ್ವೆಲಿನ್​ (Jacqueline Fernandez) ಹೆಸರು ಮತ್ತಷ್ಟು ಬಲಗೊಳ್ಳುತ್ತಲಿದೆ.

ಮಾಡೋದೆಲ್ಲಾ ಮಾಡಿ ಕೈಕೊಡ್ತಾಳಾ? ನಟಿ ಜಾಕ್ವೆಲಿನ್​ ವಿಡಿಯೋ ಬಹಿರಂಗ ಮಾಡ್ತೇನೆಂದು ಜೈಲಿನಿಂದ್ಲೇ ಗುಡುಗಿದ ಸುಕೇಶ್​!

Follow Us:
Download App:
  • android
  • ios