Asianet Suvarna News Asianet Suvarna News

ಮಾಡೋದೆಲ್ಲಾ ಮಾಡಿ ಕೈಕೊಡ್ತಾಳಾ? ನಟಿ ಜಾಕ್ವೆಲಿನ್​ ವಿಡಿಯೋ ಬಹಿರಂಗ ಮಾಡ್ತೇನೆಂದು ಜೈಲಿನಿಂದ್ಲೇ ಗುಡುಗಿದ ಸುಕೇಶ್​!

ಅಕ್ರಮ ಹಣ ವರ್ಗಾವಣೆ ಕೇಸ್​ನಲ್ಲಿ ಜೈಲಿನಲ್ಲಿರುವ ಸುಕೇಶ್​ ಚಂದ್ರಶೇಖರ್​ ವಿರುದ್ಧ ನಟಿ ಜಾಕ್ವೆಲಿನ್​ ಫರ್ನಾಂಡೀಸ್​ ಕೋರ್ಟ್​ಗೆ ಅರ್ಜಿ ಸಲ್ಲಿಸುತ್ತಲೇ ಜೈಲಿನಿಂದಲೇ ಸುಕೇಶ್​ ಕೊಟ್ಟಿರೋ ಎಚ್ಚರಿಕೆ ಏನು? 
 

Conman Sukesh vows to expose unseen chats recordings in response to Jacquelines charges suc
Author
First Published Dec 23, 2023, 10:26 AM IST

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Monet Laundering case) ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಹಾಗೂ ಆತನಿಂದ ಐಷಾರಾಮಿ ಉಡುಗೊರೆ ಪಡೆದು ತಗ್ಲಾಕ್ಕೊಂಡಿರೋ ರಾ ರಾ ರಕ್ಕಮ್ಮ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೇಸ್​ ಇನ್ನೂ ಮುಗಿದಿಲ್ಲ. ನೂರಾರು ಕೋಟಿ ಆಸ್ತಿ ಇದ್ದರೂ, ಮತ್ತಷ್ಟು ವೈಭೋಗ ಜೀವನಕ್ಕಾಗಿ ಸುಕೇಶ್​ನ ಮೋಹದ ಬಲೆಗೆ ಬಿದ್ದು, ಈಗ ಕೋರ್ಟ್​ ಅಲೀಯುವಂತಾಗಿದೆ ಜಾಕ್ವೆಲಿನ್​. ಕೋಟಿ ಕೋಟಿ ಬೆಲೆ ಬಾಳುವ ವಜ್ರಾಭರಣಗಳು ಸೇರಿದಂತೆ ಈಕೆ ಪಡೆದಿರುವ ಉಡುಗೊರೆಗೆ ಲೆಕ್ಕವೇ ಇಲ್ಲ. ನಂತರ ಯಾವಾಗ ಸುಕೇಶ್​ ಜೈಲು ಸೇರಿದನೋ, ಅವನ ಹಿಂದೆ ಜಾಕ್ವೆಲಿನ್​ ಹೆಸರೂ ಕೇಳಿಬಂದಿದ್ದು, ಇವರ ವಿರುದ್ಧವೂ ದೂರು ದಾಖಲಾಗಿದೆ. ಸುಕೇಶ್​ ಜೈಲಿನಲ್ಲಿ ಇದ್ದರೂ, ಇವರ ನಡುವೆ ಇಂದಿಗೂ ಪತ್ರವ್ಯವಹಾರ ಮುಂದುವರೆಯುತ್ತಲೇ ಇರುವ ಕಾರಣ, ಅಕ್ರಮ ಕೇಸ್​ನಲ್ಲಿ ಜಾಕ್ವೆಲಿನ್​ (Jacqueline Fernandez) ಹೆಸರು ಮತ್ತಷ್ಟು ಬಲಗೊಳ್ಳುತ್ತಲಿದೆ.

ಈ ಮಧ್ಯೆಯೇ ಈ ಕೇಸ್​ಗೂ ತಮಗೂ ಸಂಬಂಧ ಇಲ್ಲ ಎಂದು ನಟಿ ಇದಾಗಲೇ ಕೋರ್ಟ್​ ಮೊರೆ ಹೋಗಿದ್ದಾರೆ. ಇದರ ಬೆನ್ನಲ್ಲೇ ಈಗ ಸುಕೇಶ್​ ಜೈಲಿನಿಂದ ಬರೆಯುತ್ತಿರುವ ಲವ್​ ಲೆಟರ್​ಗಳು ನಟಿಯನ್ನು ಇನ್ನಷ್ಟು ಚಿಂತೆಗೀಡು ಮಾಡುತ್ತಿದೆ. ಈಗ ಲವ್​ ಲೆಟ್​ ವಿರುದ್ಧ ನಟಿ,  ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.  ಸುಕೇಶ್ ಚಂದ್ರಶೇಖರ್ ನ್ಯಾಯಾಂಗ ಬಂಧನದಲ್ಲಿದ್ದು ಅವರಿಂದ ತಮಗೆ ಯಾವುದೇ ಪತ್ರಗಳನ್ನು ನೀಡದಂತೆ ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗ ಮತ್ತು ಮಂಡೋಲಿ ಜೈಲಿನ ಸೂಪರಿಂಟೆಂಡೆಂಟ್ ಅವರಿಗೆ ನಿರ್ದೇಶಿಸುವಂತೆ ಕೋರಿದ್ದಾರೆ ಜಾಕ್ವೆಲಿನ್​.  ಸುಕೇಶ್​ ಜೈಲಿನಲ್ಲಿ ಇದ್ದ ದಿನದಿಂದಲೂ ಆಗಾಗ್ಗೆ ಜಾಕ್ವೆಲಿನ್​ಗೆ ಪತ್ರ ಬರೆಯುತ್ತಲೇ ಇದ್ದಾನೆ. ಪ್ರೇಮಿಗಳ ದಿನಕ್ಕೆ ಪತ್ರ ಬರೆದಿದ್ದ ಸುಕೇಶ್​, ನಂತರ ಮೇಲಿಂದ ಮೇಲೆ ಜಾಕ್ವೆಲಿನ್​ಗೆ ಲವ್​ ಲೆಟರ್​ ಬರೆಯುವುದು ಮುಂದುವರೆದಿದೆ. ಸಾಲದು ಎಂಬುದಕ್ಕೆ ನವರಾತ್ರಿಯ ಸಮಯದಲ್ಲಿ ತನ್ನ ಪ್ರಿಯತಮೆಗಾಗಿ ಸುಕೇಶ್​ ಜೈಲಿನಲ್ಲಿಯೇ ಉಪವಾಸ ಮಾಡುವುದಾಗಿಯೂ ಹೇಳಿದ್ದ. ಇದೇ ಟ್ರೂ ಲವ್​ ಎಂದು ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. 

ದುಬಾರಿ ಗಿಫ್ಟ್​ ಪಡೆದು ತಗ್ಲಾಕ್ಕೊಂಡ ರಾ ರಾ ರಕ್ಕಮ್ಮ ಬೆಡಗಿ: ಲವ್​ ಲೆಟರ್​ ವಿರುದ್ಧ ಕೋರ್ಟ್​ ಮೊರೆ

ಯಾವಾಗ ನಟಿ ತನ್ನ ವಿರುದ್ಧ ಕೋರ್ಟ್​ಗೆ ಹೋದರೋ, ಸುಕೇಶ್​ ಪಿತ್ತ ನೆತ್ತಿಗೇರಿದೆ. ನಟಿಯ ನಿಜವಾದ ಬಣ್ಣ ಬಯಲು ಮಾಡುವುದಾಗಿ ಸುಕೇಶ್​ ಜೈಲಿನಿಂದಲೇ ಎಚ್ಚರಿಕೆಯ ಸಂದೇಶ ರವಾನಿಸಿದ್ದಾನೆ.  ಕೋಟಿ ಕೋಟಿ ಗಿಫ್ಟ್​ ಪಡೆಯುವಾಗ ಸುಮ್ಮನಿದ್ದ ಜಾಕ್ವೆಲಿನ್​ ಈಗ ತಾನು ಜೈಲಿಗೆ ಸೇರಿದ ಮೇಲೆ ಕೇಸ್​ ಹಾಕಿರುವುದರಿಂದ ರೊಚ್ಚಿಗೆದ್ದಿರುವ ಸುಕೇಶ್​, ನಟಿಯ ಬಂಡವಾಳ ಬಯಲು ಮಾಡುವುದಾಗಿ ಜೈಲಿನಿಂದಲೇ ಗುಡುಗಿದ್ದಾರೆ ಎಂದು ವರದಿಯಾಗಿದೆ. ‘ಇಷ್ಟು ದಿನ ನಾನು ನಿನ್ನನ್ನು ರಕ್ಷಿಸುತ್ತಿದ್ದೆ. ಈಗ ಸುಮ್ಮನಿರುವುದಿಲ್ಲ. ಕಾನೂನಿನ ಪ್ರಕಾರ ಎಲ್ಲ ಸಾಕ್ಷಿ ಬಹಿರಂಗ ಮಾಡುತ್ತೇನೆ’ ಎಂದು ಸುಕೇಶ್​ ಹೇಳಿರುವುದಾಗಿ ವರದಿಯಾಗಿದೆ.  ಯಾರಿಗೂ ಇದುವರೆಗೆ ತೋರಿಸದ ಚಾಟ್​ ಸಂದೇಶ, ಮೆಸೇಜ್​ಗಳು, ವಿಡಿಯೋಗಳು ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದಿದ್ದಾನೆ. 

ಅಂದಹಾಗೆ, ಮೂಲಗಳ ಪ್ರಕಾರ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಸುಕೇಶ್​ ಚಂದ್ರಶೇಖರ್​ ಕಡೆಯಿಂದ  52 ಲಕ್ಷ ರೂಪಾಯಿ ಬೆಲೆಯ ಕುದುರೆ, 9 ಲಕ್ಷ ರೂಪಾಯಿಯ ಪರ್ಷಿಯನ್​ ಬೆಕ್ಕು ಸೇರಿದಂತೆ ವಜ್ರಾಭರಣಗಳು, ಬಟ್ಟೆಗಳು ಸೇರಿದಂತೆ ಹಲವು ಕೋಟಿ ರೂಪಾಯಿಗಳ ಗಿಫ್ಟ್​ ಪಡೆದುಕೊಂಡಿದ್ದಾರೆ. ಇವರಿಬ್ಬರೂ ತೀರಾ ಖಾಸಗಿಯಾಗಿರುವ ಫೋಟೋಗಳು ಕೂಡ ವೈರಲ್​ ಆಗಿವೆ. ಯಾವಾಗ ಸುಕೇಶ್​ ಜೈಲು ಸೇರಿದನೋ ಆಗ ನಟಿ, ಸುಕೇಶ್​ ವಿರುದ್ಧ ತಿರುಗಿಬಿದ್ದಿದ್ದಾರೆ. 

ವೈಭೋಗ ಜೀವನದ ದುರಾಸೆಗೆ ಬಿದ್ದು ವಂಚಕನ ಬಲೆಗೆ: ತನ್ನ ತಪ್ಪಿಲ್ಲವೆಂದು ಕೋರ್ಟ್​ಗೆ ರಾ ರಾ ರಕ್ಕಮ್ಮ ಬೆಡಗಿ!

Follow Us:
Download App:
  • android
  • ios