ರಣವೀರ್‌ ಸಿಂಗ್‌ ಯಾರಿಗೂ ಫಸ್ಟ್‌ನೈಟ್‌ ಮಾಡಲು ಬಿಡೋದೇ ಇಲ್ಲ ಎನ್ನುತ್ತಲೇ ದೀಪಿಕಾ ಪತಿಯ ಗುಟ್ಟು ಹೇಳಿದ್ದಾರೆ ಅಕ್ಷಯ್‌ ಕುಮಾರ್‌. ಅವರು ಹೇಳಿದ್ದೇನು?  

ಸದ್ಯ ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬರುವ ಸೆಪ್ಟೆಂಬರ್‌ನಲ್ಲಿ ದೀಪಿಕಾ ಡೆಲವರಿ ಡೇಟ್‌ ನೀಡಲಾಗಿದ್ದು, ಅಭಿಮಾನಿಗಳು ಕೂಡ ಕಾತರದಿಂದಲೇ ಕಾಯುತ್ತಿದ್ದಾರೆ. ಇದರ ನಡುವೆಯೇ ರಣವೀರ್‌ ಸಿಂಗ್‌ ಅವರ ಕೆಟ್ಟ ಹ್ಯಾಬಿಟ್‌ ಕುರಿತು ಅಕ್ಷಯ್ ಕುಮಾರ್‌ ಮಾತನಾಡಿದ್ದಾರೆ. ವಿವಾದಿತ ಷೋ ಎಂದೇ ಫೇಮಸ್‌ ಆಗಿರೋ ಕರಣ್‌ ಜೋಹರ್‌ ಷೋನಲ್ಲಿ ಪಾಲ್ಗೊಂಡಿದ್ದ ಅಕ್ಷಯ್‌ ಕುಮಾರ್‌ ಮತ್ತು ರಣವೀರ್‌ ಸಿಂಗ್‌, ಕರಣ್‌ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ರಣವೀರ್‌ ಸಿಂಗ್‌ರ ಮರ್ಯಾದೆ ತೆಗೆದಿದ್ದಾರೆ.

ಅಷ್ಟಕ್ಕೂ, ಸಿನಿಮಾ ತಾರೆಯರು ಖಾಸಗಿ ಸಮಾರಂಭಗಳಲ್ಲಿ ಮತ್ತು ಮದುವೆಗಳಲ್ಲಿ ಭಾರಿ ಹಣಕ್ಕಾಗಿ ಪ್ರದರ್ಶನ ನೀಡುವುದು ಸಾಮಾನ್ಯ. ಇದು ಚಿತ್ರರಂಗದಲ್ಲಿ ಇನ್ನೂ ವಿವಾದಾತ್ಮಕ ವಿಷಯವಾಗಿದೆ. ಆದರೆ ಹಣಕ್ಕಾಗಿ ಈ ರೀತಿ ಮಾಡುವುದು ಮಾಮೂಲಾಗಿದೆ. ಇದರ ಬಗ್ಗೆನೇ ಮಾತನಾಡುತ್ತಾ, ಅಕ್ಷಯ್‌ ಕುಮಾರ್‌, ರಣವೀರ್‌ ಅವರ ಮರ್ಯಾದೆ ತೆಗೆದಿರುವ ಘಟನೆ ನಡೆದಿದೆ. 2018 ರಲ್ಲಿ ಕಾಫಿ ವಿತ್‌ ಕರಣ್‌ನಲ್ಲಿ ಜಂಟಿಯಾಗಿ ಕಾಣಿಸಿಕೊಂಡಾಗ, ನಡೆದ ವಿಷಯ ಇದಾಗಿದೆ.

ಎಲ್ಲ ಹೆಂಗಸರಂತೆ ಗರ್ಭಿಣಿ ಆಗಿಲ್ವಾ ದೀಪಿಕಾ ಪಡುಕೋಣೆ? ಸೋಷಿಯಲ್​ ಮೀಡಿಯಾದಲ್ಲಿ ಇದೆಂಥ ಚರ್ಚೆ?

ಪಾರ್ಟಿಗಳಿಗೆ ರಣವೀರ್‌ ಸಿಂಗ್‌ ಹೋದರೆ, ಪಾರ್ಟಿಯಿಂದ ಕೊನೆಗೆ ಬರುವ ವ್ಯಕ್ತಿಯೇ ರಣವೀರ್‌ ಸಿಂಗ್‌ ಎಂದು ಲೇವಡಿ ಮಾಡಿದರು. ಪಾರ್ಟಿಯಿಂದ ಎಲ್ಲರೂ ಹೋದರೂ, ಬೆಳಿಗ್ಗೆ 5 ಗಂಟೆಯವರೆಗೆ ಡ್ಯಾನ್ಸ್ ಫ್ಲೋರ್‌ನಿಂದ ರಣವೀರ್‌ ಕೆಳಕ್ಕೆ ಇಳಿಯುವುದಿಲ್ಲ. ಅದು ಎಷ್ಟರಮಟ್ಟಿಗೆ ಎಂದರೆ ನೂತನ ಮದುಮಕ್ಕಳಿಗೆ ಫಸ್ಟ್‌ನೈಟ್‌ ಕೂಡ ಮಾಡಿಕೊಳ್ಳಲು ಬಿಡುವುದಿಲ್ಲ. ಅಲ್ಲಿಯೇ ಇದ್ದು ಬಿಡುತ್ತಾರೆ. ಪಾಪ ಅವರಿಗೂ ಹೇಳುವ ಹಾಗೆ ಇರುವುದಿಲ್ಲ. ಎಲ್ಲರೂ ಹೊರಗೆ ಬಂದರೂ ಅಲ್ಲಿಯೇ ಉಳಿದುಬಿಡುತ್ತಾರೆ ಎಂದು ಕಾಲೆಳೆದರು. ಆಗ ತಕ್ಷಣ ಮಧ್ಯೆ ಪ್ರವೇಶಿಸಿದ ರಣವೀರ್‌ ಸಿಂಗ್‌ ಅವರು, ಇದನ್ನು ನಾನು ಅಕ್ಷಯ್‌ನಿಂದ ಕಲಿತಿದ್ದೇನೆ ಎಂದು ಹೇಳಿದರು.

 ಅಷ್ಟಕ್ಕೇ ಸುಮ್ಮನಾಗದ ಅಕ್ಷಯ್‌ ಕುಮಾರ್‌, ಈ ಮನುಷ್ಯನೊಂದಿಗೆ ಜೀವನ ನಡೆಸುವುದು ಕಷ್ಟ. ದೀಪಿಕಾಗೆ ಹ್ಯಾಟ್ಸ್ ಆಫ್. ಈತನನ್ನು ಹೇಗೆ ಸಹಿಸಿಕೊಳ್ಳುತ್ತಾರೋ ಎಂದರು. ಈ ಮಧ್ಯೆಯೇ, ದೀಪಿಕಾ ಪಡುಕೋಣೆ ಒಂದು ಸೆಕೆಂಡಿನ ರೀಲ್ಸ್ ವಿಡಿಯೋವನ್ನು ನಟಿ ಶೇರ್ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ರೆಡಿಯಾಗುತ್ತಿರುವ ವೇಳೆ, ಈ ವಿಡಿಯೋವನ್ನು ಮಾಡಲಾಗಿದೆ. ವಿಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಭರ್ಜರಿ ವಿವ್ಸ್ ಪಡೆದುಕೊಂಡಿದೆ. ಇನ್ನೂ ‘ಕಲ್ಕಿ 2898 ಎಡಿ’ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಪ್ರಭಾಸ್ ಜೊತೆ ನಟಿಸಿದ್ದ ದೀಪಿಕಾ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಮುಂಬರುವ ‘ಸಿಂಗಂ ಅಗೇನ್’ ಸಿನಿಮಾದಲ್ಲಿ ಲೇಡಿ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದಾರೆ.

ಸಲ್ಮಾನ್‌ ಖಾನ್‌ ಅಸಭ್ಯ, ಅವಿವೇಕ ನಟ, ಅವನನ್ನು ಸ್ವಲ್ಪವೂ ಇಷ್ಟಪಡಲ್ಲ ಎಂದಿದ್ದೇಕೆ ಆಮೀರ್‌?

View post on Instagram