ನಾನು ರಾಜಕಾರಣಿಯನ್ನ ಮದುವೆಯಾಗಲ್ಲ: ಮದುವೆ ವದಂತಿ ಬೆನ್ನಲ್ಲೇ ಪರಿಣೀತಿ ಚೋಪ್ರಾ ಹಳೆ ಸಂದರ್ಶನ ವೈರಲ್
ನಾನು ರಾಜಕಾರಣಿಯನ್ನ ಮದುವೆಯಾಗಲ್ಲ ಎಂದು ನಟಿ ಪರಿಣೀತಿ ಚೋಪ್ರಾ ಹೇಳಿದ್ದ ಹಳೆಯ ಸಂದರ್ಶನ ಈಗ ವೈರಲ್ ಆಗಿದೆ.
ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮತ್ತು ಆಪ್ ನಾಯಕ ರಾಘವ್ ಚಡ್ಡಾ ಸದ್ಯದಲ್ಲೇ ಹಸೆಮಣೆ ಏರುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇಬ್ಬರ ಡೇಟಿಂಗ್ ವಿಚಾರ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ಇಬ್ಬರೂ ಎಲ್ಲಿಯೂ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಆದರೆ ಇಬ್ಬರೂ ಸದ್ಯದಲ್ಲೇ ಹಸೆಮಣೆ ಏರುವುದು ಖಚಿತ ಎನ್ನವುದನ್ನು ರಾಘವ್ ಚಡ್ಡಾ ಆಪ್ತರು ಬಹಿರಂಗ ಪಡಿಸಿದ್ದಾರೆ. ವದಂತಿಯ ನಡುವೆಯೂ ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಒಟ್ಟಿಗೆ ಸುತ್ತಾಡುತ್ತಿದ್ದಾರೆ. ಈ ನಡುವೆ ಪರಿಣೀತಿ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಸಂದರ್ಶನದಲ್ಲಿ ಪರಿಣೀತಿ ರಾಜಕಾರಣಿಯನ್ನು ಮದುವೆಯಾಗಲ್ಲ ಎಂದು ಹೇಳಿದ್ದರು.
ಹಳೆಯ ಸಂದರ್ಶನದಲ್ಲಿ ನಟಿ ಪರಿಣೀತಿ ಚೋಪ್ರಾ, ರಾಜಕಾರಣಿಯನ್ನು ಎಂದಿಗೂ ಮದುವೆಯಾಗುವುದಿಲ್ಲ ಎಂದು ಹೇಳಿದ್ದರು. ಆಗ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಜೊತೆಯಲ್ಲೇ ಕುಳಿತಿದ್ದರು. ಬಾಲಿವುಡ್ ಹಂಗಾಮಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪರುಣೀತಿ, 'ನಾನು ಯಾವುದೇ ರಾಜಕಾರಣಿಯನ್ನು ಮದುವೆಯಾಗಲು ಬಯಸಲ್ಲ. ನನಗೆ ಆನೇಕ ಆಯ್ಕೆಗಳಿವೆ ನಾನು ಯಾಕೆ ರಾಜಕಾರಣಿಯನ್ನು ಮದುವೆಯಾಗಲಿ' ಎಂದು ಹೇಳಿದ್ದರು.
ಬಳಿಕ ಅದೇ ಸಂದರ್ಶನದಲ್ಲಿ ತನ್ನ ಪತಿ ಹೇಗಿರಬೇಕೆಂದು ವಿವರಿಸಿದ್ದರು. 'ಫನ್ನಿಯಾಗಿರಬೇಕು. ನನ್ನನ್ನು ಗೌರವಿಸಬೇಕು. ಸ್ವಾಭಿಮಾನ ಇರುವ ವ್ಯಕ್ತಿಯನ್ನು ಇಷ್ಟಪಡುತ್ತೇನೆ. ತಮ್ಮ ಜೀವನವನ್ನು ತಾವೆ ರೂಪಿಸಿಕೊಂಡಿರುವ ವ್ಯಕ್ತಿ ನನಗೆ ತುಂಬಾ ಇಷ್ಟ' ಎಂದು ಹೇಳಿದ್ದರು.
ಪರಿಣೀತಿ ಮತ್ತು ರಾಘವ್ ಇಬ್ಬರೂ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಈ ಬಗ್ಗೆ ಇನ್ನೂ ಅಧಿಕೃತವಾಗಿ ಬಹಿರಂಗ ಪಡಿಸದಿದ್ದರೂ ಬಹುತೇಕ ಖಚಿತವಾಗಿದೆ. ಇತ್ತೀಚಿಗಷ್ಟೆ ಪಾಪರಾಜಿಗಳು ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಪರಿಣೀತಿ ನಗುತ್ತಾ ಯಾವುದೇ ಪ್ರತಿಕ್ರಿಯೆ ನೀಡಿದ ಹಾಗೆ ಹೊರಟು ಹೋಗಿದ್ದರು. ಸದ್ಯದಲ್ಲೇ ಇಬ್ಬರೂ ಅನೌನ್ಸ್ ಮಾಡುವ ಸಾಧ್ಯತೆ ಇದೆ.
Parineeti Chopra- Raghav Chadha: ಆಪ್ ನಾಯಕನಿಗೆ ಬಾಲಿವುಡ್ ತಾರೆ ಹೃದಯ ಕೊಟ್ಟಿದ್ದು ಈ ಜಾಗದಲ್ಲಿ!
ಆಮ್ ಆದ್ಮಿ ಪಕ್ಷದಲ್ಲಿರುವ ರಾಘವ್ ಚಡ್ಡಾ ಸಂಸತ್ತಿನ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. ಪರಿಣೀತಿ 2009 ರಲ್ಲಿ ಪರಿಣೀತಿ, ಯಶ್ ರಾಜ್ ಫಿಲ್ಮ್ಸ್ ನ ಮಾರ್ಕೆಟಿಂಗ್ ವಿಭಾಗಕ್ಕೆ ಕೆಲಸಕ್ಕೆ ಸೇರಿದರು. ಬಳಿಕ ಅವರು ರಣ್‌ವೀರ್ ಸಿಂಗ್ ಮತ್ತು ಅನುಷ್ಕಾ ಶರ್ಮಾ ನಟನೆಯ ರೊಮ್-ಕಾಮ್ ಲೇಡೀಸ್ ವರ್ಸಸ್ ರಿಕಿ ಬಹ್ಲ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಮೊದಲ ಬಾರಿಗೆ ತೆರೆಮೇಲೆ ಕಾಣಿಸಿಕೊಂಡರು. ಅಲ್ಲಿಂದ ನಟನೆ ವೃತ್ತಿ ಜೀವನ ಪ್ರಾರಂಭಿಸಿದ ಪರಿಣಿತಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ರಾಘವ್ ಚಡ್ಡಾ ಜೊತೆ ಪರಿಣೀತಿ ನಿಶ್ಚಿತಾರ್ಥದ ಸುಳಿವು ನೀಡಿದ ಆಪ್ ನಾಯಕ ಸಂಜೀವ್ ಅರೋರಾ
ಪರಿಣೀತಿ ಕೊನೆಯದಾಗಿ ಸೂರಜ್ ಬರ್ಜಾತ್ಯಾ ಅವರ ಅಮಿತಾಬ್ ಬಚ್ಚನ್ ಮತ್ತು ಅನುಪಮ್ ಖೇರ್ ಜೊತೆ ಊಂಚೈನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ನಟ ಅಕ್ಷಯ್ ಕುಮಾರ್ ಜೊತೆ ಕ್ಯಾಪ್ಸುಲ್ ಗಿಲ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಜೊತೆಗೆ ಮತ್ತೊಂದು ಸಿನಿಮಾದಲ್ಲೂ ನಟಿ ಬ್ಯುಸಿಯಾಗಿದ್ದಾರೆ. ಈ ನಡುವೆ ಪರಿಣೀತಿ, ರಾಘವ್ ಜೊತೆ ಸದ್ಯದಲ್ಲೇ ಹಸಮೆಣೆ ಏರುವ ಸಾಧ್ಯತೆ ಇದೆ.