ರಾಘವ್ ಚಡ್ಡಾ ಜೊತೆ ಪರಿಣೀತಿ ನಿಶ್ಚಿತಾರ್ಥದ ಸುಳಿವು ನೀಡಿದ ಆಪ್ ನಾಯಕ ಸಂಜೀವ್ ಅರೋರಾ
ಅಭಿನಂದನೆ ಪೋಸ್ಟ್ ಮೂಲಕ ರಾಘವ್ ಚಡ್ಡಾ ಜೊತೆ ಪರಿಣೀತಿ ನಿಶ್ಚಿತಾರ್ಥದ ಸುಳಿವು ನೀಡಿದ್ರಾ ಆಪ್ ನಾಯಕ ಸಂಜೀವ್ ಅರೋರಾ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಬಾಲಿವುಡ್ ನಟಿ, ಪ್ರಿಯಾಂಕಾ ಚೋಪ್ರಾ ಸಹೋದರಿ ಪರಿಣೀತಿ ಚೋಪ್ರಾ ಮತ್ತು ಆಪ್ ನಾಯಕ ರಾಘವ್ ಚಡ್ಡಾ ಡೇಟಿಂಗ್ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಪ್ರೀತಿ-ಪ್ರೇಮದ ಬಗ್ಗೆ ವದಂತಿ ಜೋರಾಗಿದೆ. ಅಂದಹಾಗೆ ಇಬ್ಬರೂ ಮದುವೆ ಆಗುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ನಡುವೆ ಆಪ್ ನಾಯಕ, ರಾಘವ್ ಚಡ್ಡಾ ಸಹೊದ್ಯೋಗಿ ಸಂಜೀವ್ ಆರೋರಾ, ಪರಿಣೀತಿ ಮತ್ತು ರಾಘವ್ ಇಬ್ಬರಿಗೂ ಅಭಿನಂದನೆ ಸಲ್ಲಿಸುವ ಮೂಲಕ ನಿಶ್ಚಿತಾರ್ಥ ಮಾಡಿರುವ ಬಗ್ಗೆ ಸುಳಿವು ನೀಡಿದ್ದಾರೆ. ಸಂಜೀವ್ ಅರೋರಾ ಇಬ್ಬರಿಗೂ ಬಹಿರಂಗವಾಗಿಯೇ ಶುಭಕೋರಿದ್ದಾರೆ.
ಸಂಜೀವ್ ಆರೋರಾ ಟ್ವೀಟ್ ಮಾಲಕ ಅಭಿನಂದನೆ ಸಲ್ಲಿಸುತ್ತಿದ್ದಂತೆ ಅಭಿಮಾನಿಗಳು ನಿಶ್ಚಿತಾರ್ಥಕ್ಕೆ ವಿಶ್ ಮಾಡಿದ್ದಾ ಅಥವಾ ಮದುವೆಗಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸಂಜೀವ್ ಆರೋರಾ ಟ್ವಿಟ್ಟರ್ ಖಾತೆಯಲ್ಲಿ, ರಾಘವ್ ಚಡ್ಡಾ ಮತ್ತು ಪರಿಣೀತಿ ಅವರಿಗೆ ನನ್ನ ಅಭಿನಂದನೆಗಳು. ಇಬ್ಬರೂ ಪ್ರೀತಿ, ಸಂತೋಷದಿಂದ ಇರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ' ಎಂದು ಹೇಳಿದ್ದಾರೆ. ಈ ಪೋಸ್ಟ್ ನೋಡಿ ಇಬ್ಬರ ಮದುವೆ ಫಿಕ್ಸ್ ಆಗಿರುವುದು ಕನ್ಫರ್ಮ್ ಎಂದು ಹೇಳುತ್ತಿದ್ದಾರೆ.
ಸದ್ಯದಲ್ಲೇ ಪರಿಣೀತಿ ಮತ್ತು ರಾಘವ್ ಚಡ್ಡಾ ಸದ್ಯದಲ್ಲೇ ಈ ಬಗ್ಗೆ ಅಧಿಕೃತವಾಗಿ ಬಹಿರಂಗ ಪಡಿಸುವ ಸಾಧ್ಯತೆ ಇದೆ. ಇಬ್ಬರೂ ಮದುವೆ ಫಿಕ್ಸ್ ಆದ ಬಳಿಕವೇ ಒಟ್ಟಿಗೆ ಓಡಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಇಬ್ಬರೂ ಮುಂಬೈನ ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡಿದ್ದರು. ರಾತ್ರಿ ಒಟ್ಟಿಗೆ ಊಟಕ್ಕೆ ಹೋಗಿದ್ದ ಈ ಜೋಡಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದರು. ಇಬ್ಬರೂ ಮರುದಿನವೂ ಮತ್ತೆ ರೆಸ್ಟೋರೆಂಟ್‌ನಲ್ಲಿಿಸೆರೆಯಾಗಿದ್ದರು. ಪಾಪಾರಾಜಿಗಳ ಕ್ಯಾಮರಾಗೆ ಸೆರೆಯಾದ ಈ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಇಬ್ಬರ ಪ್ರೀತಿ, ಮದುವೆ ವಿಚಾರ ವೈರಲ್ ಆಗಿದೆ.
ಆಪ್ ನಾಯಕನ ಜೊತೆ ಪ್ರಿಯಾಂಕಾ ಚೋಪ್ರಾ ಸಹೋದರಿಯ ಡೇಟಿಂಗ್; ಫೋಟೋ ವೈರಲ್
ಆಮ್ ಆದ್ಮಿ ಪಕ್ಷದಲ್ಲಿರುವ ರಾಘವ್ ಚಡ್ಡಾ ಸಂಸತ್ತಿನ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. ದೆಹಲಿ ಮೂಲದವರಾದ ರಾಘವ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ವಿದೇಶದಲ್ಲಿ ಅಧ್ಯಯನ ಮಾಡಿದ್ದಾರೆ. ಪರಿಣೀತಿ ಚೋಪ್ರ ಮ್ಯಾಂಚೆಸ್ಟರ್ ಬ್ಯುಸಿನೆಸ್ ಸ್ಕೂಲ್ UK ಯಲ್ಲಿ ಅಧ್ಯಯನ ಮಾಡಿದ್ದಾರೆ. 2009 ರಲ್ಲಿ ಪರಿಣೀತಿ, ಯಶ್ ರಾಜ್ ಫಿಲ್ಮ್ಸ್ ನ ಮಾರ್ಕೆಟಿಂಗ್ ವಿಭಾಗಕ್ಕೆ ಕೆಲಸಕ್ಕೆ ಸೇರಿದರು. ಬಳಿಕ ಅವರು ರಣ್‌ವೀರ್ ಸಿಂಗ್ ಮತ್ತು ಅನುಷ್ಕಾ ಶರ್ಮಾ ನಟನೆಯ ರೊಮ್-ಕಾಮ್ ಲೇಡೀಸ್ ವರ್ಸಸ್ ರಿಕಿ ಬಹ್ಲ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಮೊದಲ ಬಾರಿಗೆ ತೆರೆಮೇಲೆ ಕಾಣಿಸಿಕೊಂಡರು. ಅಲ್ಲಿಂದ ನಟನೆ ವೃತ್ತಿ ಜೀವನ ಪ್ರಾರಂಭಿಸಿದ ಪರಿಣಿತಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮಕ್ಕಳು ಬೇಕು... ಹುಡುಗನನ್ನು ಹುಡುಕಿ ಕೊಡಿ ಎಂದ ನಟಿ Parineeti Chopra!
ಪರಿಣೀತಿ ಕೊನೆಯದಾಗಿ ಸೂರಜ್ ಬರ್ಜಾತ್ಯಾ ಅವರ ಅಮಿತಾಬ್ ಬಚ್ಚನ್ ಮತ್ತು ಅನುಪಮ್ ಖೇರ್ ಜೊತೆ ಊಂಚೈನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ನಟ ಅಕ್ಷಯ್ ಕುಮಾರ್ ಜೊತೆ ಕ್ಯಾಪ್ಸುಲ್ ಗಿಲ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಜೊತೆಗೆ ಮತ್ತೊಂದು ಸಿನಿಮಾದಲ್ಲೂ ನಟಿ ಬ್ಯುಸಿಯಾಗಿದ್ದಾರೆ. ಈ ನಡುವೆ ಪರಿಣೀತಿ, ರಾಘವ್ ಜೊತೆ ಸದ್ಯದಲ್ಲೇ ಹಸಮೆಣೆ ಏರುವ ಸಾಧ್ಯತೆ ಇದೆ.