ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರ ಮದುವೆಯ ಸುದ್ದಿ ಬಹುತೇಕ ಖಚಿತವಾಗಿದ್ದು, ಈ ವಿಭಿನ್ನ ಕ್ಷೇತ್ರದವರು ಮೊದಲು ಮೀಟ್​  ಆಗಿದ್ದು ಎಲ್ಲಿ ಎಂಬ ಬಗ್ಗೆ ಈಗ ಬಹಿರಂಗಗೊಂಡಿದೆ.  

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರನ್ನು ವಿವಾಹವಾಗಲಿರುವ ಸುದ್ದಿ ನಿಜವಾಗಿದೆ. ರಾಹುಲ್ -ಅಥಿಯಾ, ಸಿದ್-ಕಿಯಾರಾ ಬಳಿಕ ಈಗ ಪರಿಣಿತಿಚೋಪ್ರಾ ಮತ್ತು ರಾಘವ್ ಚಡ್ಡಾ (Raghva Chadha) ಸರದಿ. ಈ ಪ್ರೇಮ ಪಕ್ಷಿಗಳು ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಮತ್ತು ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಿದ್ಧರಾಗಿದ್ದಾರೆ ಎಂದು ಗುಸುಗುಸು ಸುದ್ದಿಯಾಗಿತ್ತು. ಆದರೆ ಅದೀಗ ನಿಜವಾಗಿದೆ. ಸದ್ಯಕ್ಕೆ ಎಲ್ಲಾ ಕಡೆಗಳಲ್ಲಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ಮದುವೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಜೋಡಿಯ ಮದುವೆಗಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚಿಗೆ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಪರಿಣಿತಿ (Parineeti Chopra) ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಒಟ್ಟಿಗೆ ಕಾಣಿಸಿಕೊಂಡಿದ್ದು, ಡೇಟಿಂಗ್ ರೂಮರ್ಸ್ ಹರಡಲು ಕಾರಣವಾಯ್ತು. ಹೊಟೇಲ್ ಭೇಟಿಯ ವೇಳೆ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಆದರೆ ನೀವಿಬ್ಬರೂ ಪ್ರೀತಿಸುತ್ತಿದ್ದೀರಾ ಎಂದು ಸಂಸತ್ತಿನಿಂದ ಹೊರಗೆ ಬರುತ್ತಿರುವ ರಾಘವ್ ಚಡ್ಡಾ ಅವರನ್ನು ಪತ್ರಕರ್ತರೊಬ್ಬರು ಕೇಳಿದ್ದಾಗ, ರಾಘವ್ ಅವರು, ರಾಜಕೀಯದ ಬಗ್ಗೆ ಕೇಳಿ ಪರಿಣಿತಿ ಬಗ್ಗೆ ಅಲ್ಲ ಎಂದು ಹೇಳಿದ್ದರು. ಆದರೂ ಗುಸುಗುಸು ಮುಂದುವರೆದಿತ್ತು. ಅಂತೂ ಸುದ್ದಿಗೆ ಈಗ ಫುಲ್​ಸ್ಟಾಪ್​ ಸಿಕ್ಕಿದ್ದು, ಇಬ್ಬರ ಮದುವೆಗೂ ಗ್ರೀನ್​ ಸಿಗ್ನಲ್​ ಸಿಕ್ಕಿರುವುದು ಕನ್​ಫರ್ಮ್​ ಆಗಿದೆ. ಇಬ್ಬರ ಕುಟುಂಬಗಳಲ್ಲೂ ಈ ಜೋಡಿಯ ಮದುವೆ ಚರ್ಚೆ ನಡೆಯುತ್ತಿದ್ದು, ಸದ್ಯದಲ್ಲೇ ಮದುವೆ ದಿನಾಂಕ ನಿರ್ಧಾರವಾಗಲಿದೆ ಎನ್ನಲಾಗಿದೆ.

ಈ ಜೋಡಿ ಇದುವರೆಗೂ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡದಿದ್ದರೂ, ಆಮ್ ಆದ್ಮಿ ಪಕ್ಷದ (AAP) ನಾಯಕ ಸಂಜೀವ್ ಅರೋರಾ ಈಚೆಗಷ್ಟೇ ಟ್ವೀಟ್ ಮಾಡಿ ಸುದ್ದಿಯನ್ನು ಕನ್​ಫರ್ಮ್​ ಮಾಡಿದ್ದರು. ಇದಾದ ಬಳಿಕ, ಖ್ಯಾತ ನಟ-ಗಾಯಕ ಹಾರ್ಡಿ ಸಂಧು ಅವರು ಪರಿಣಿತಿ ಮತ್ತು ರಾಘವ್ ಅವರ ಮದುವೆಯ ಸುದ್ದಿಯ ಬಗ್ಗೆ ಚಿಕ್ಕದಾಗಿ ಹಿಂಟ್ ಕೊಟ್ಟಿದ್ದರು. ಹಾರ್ಡಿ ಸಂಧು ಪರಿಣಿತಿ ಚೋಪ್ರಾ ಅವರ ಬೆಸ್ಟ್​ಫ್ರೆಂಡ್. ನಟಿಯ ಮದುವೆಯ ಸುದ್ದಿಯನ್ನು ಅವರು ಖಚಿತಪಡಿಸಿದ್ದಾರೆ.

ಹೊಸ ಜೀವನಕ್ಕಾಗಿ ಹಾರೈಸಿದ್ದರು. ‘ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಅವರ ಮಿಲನವು ಪ್ರೀತಿ, ಸಂತೋಷ ಮತ್ತು ಸಮೃದ್ಧಿಯಿಂದ ಆಶೀರ್ವದಿಸಲ್ಪಡಲಿ. ನನ್ನ ಶುಭಾಶಯಗಳು’ ಎಂದಿದ್ದರು. ಇದೀಗ ಎರಡೂ ಕುಟುಂಬಗಳು ರೋಕಾ (ನಿಶ್ಚಯ) (Engagement) ಸಮಾರಂಭಕ್ಕೆ ಸಿದ್ಧತೆಗಳನ್ನು ನಡೆಸುತ್ತಿವೆ. ಅಂದಹಾಗೆ ರೋಕಾ ಎನ್ನುವುದು ಪಂಜಾಬಿ ವಿವಾಹದ ಮೊದಲು ನಡೆಯುವ ಅತ್ಯಂತ ಮಹತ್ವದ ಸಮಾರಂಭಗಳಲ್ಲಿ ಒಂದಾಗಿದೆ. 

ಪರಿಣಿತಿ-ರಾಘವ್​ ಮದ್ವೆ ಸುದ್ದಿಗೆ ಬ್ರೇಕ್ ಹಾಕಿದ AAP ನಾಯಕ: ಭಾರತಕ್ಕೆ ಪ್ರಿಯಾಂಕಾ

ಇಷ್ಟೆಲ್ಲಾ ಆದ ಮೇಲೆ ಈ ಜೋಡಿ ಎಲ್ಲಿ ಭೇಟಿಯಾದದ್ದು? ಇವರ ಲವ್​ ಶುರುವಾದದ್ದು ಎಲ್ಲಿಂದ ಎನ್ನುವ ಬಗ್ಗೆ ಫ್ಯಾನ್ಸ್​ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದರು. ಈ ಜೋಡಿ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ಓದಿದವರು. ಅಲ್ಲಿಯೇ ಲವ್​ ಶುರುವಾಗಿತ್ತು ಎನ್ನಲಾಗಿತ್ತು. ಪರಿಣಿತಿ ಮತ್ತು ರಾಘವ್ ಲಂಡನ್​ನಲ್ಲಿ ತಮ್ಮ ವಿಶ್ವವಿದ್ಯಾನಿಲಯದ ದಿನಗಳಿಂದಲೂ ಸ್ನೇಹಿತರಾಗಿದ್ದರು. ಲಂಡನ್‌ನಲ್ಲಿ ನಡೆದ ಈವೆಂಟ್‌ನಲ್ಲಿ ಕಾಣಿಸಿಕೊಂಡ ನಂತರ ಇಬ್ಬರೂ ಮೊದಲು ಡೇಟಿಂಗ್ ವದಂತಿಗಳನ್ನು ಹುಟ್ಟುಹಾಕಿದರು. ಅದರ ನಂತರ ಅವರು ಹಲವಾರು ಪ್ರವಾಸಗಳನ್ನು ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಹೊಸ ಸುದ್ದಿ ಹೊರಬಂದಿದೆ. ಅದೇನೆಂದರೆ, ಪರಿಣಿತಿ ಚೋಪ್ರಾ ಮೊದಲು ಪಂಜಾಬ್‌ನಲ್ಲಿ (Punjab) ರಾಘವ್ ಚಡ್ಡಾ ಅವರನ್ನು ಭೇಟಿಯಾಗಿದ್ದರಂತೆ. ಆಗ ನಟಿ ಅಲ್ಲಿ ಶೂಟಿಂಗ್ ಮಾಡುತ್ತಿದ್ದರು. ಆ ಸಂದರ್ಭವೇ ಜೋಡಿ ಮೊದಲ ಬಾರಿ ಮೀಟ್ ಆಗಿದ್ದಾರೆ. ಲವ್​ ಆ್ಯಟ್​ ಫಸ್ಟ್​ ಸೈಟ್​ ಆಗಿದೆ. ಇದಾಗಿ ಸುಮಾರು ಆರು ವರ್ಷಗಳೇ ಕಳೆದಿದ್ದು, ಇಬ್ಬರೂ ಸಂಬಂಧದಲ್ಲಿದ್ದರು. ಆದರೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ ಎನ್ನಲಾಗುತ್ತಿದೆ.

Siddharth Anand: ಬೇಷರಂ ರಂಗ್​ಗೆ ಕೇಸರಿ ಬಿಕಿನಿ ಆಯ್ಕೆ ಮಾಡಿದ್ದೇಕೆ? ಕೊನೆಗೂ ಮೌನ ಮುರಿದ ನಿರ್ದೇಶಕ

 ಇತ್ತೀಚೆಗೆ, ಪರಿಣಿತಿ ಅವರಿಗೆ ರಾಘವ್ ಅವರೊಂದಿಗಿನ ವಿವಾಹದ ವರದಿಗಳ ಬಗ್ಗೆ ಪ್ರತಿಕ್ರಿಯಿಸಲು ಕೇಳಲಾಯಿತು. ಆದರೆ ಅವರು ಏನೂ ಹೇಳಿರಲಿಲ್ಲ, ಆದರೆ ಆಕೆಯ ನಗು ಎಲ್ಲವನ್ನೂ ಹೇಳಿತ್ತು. ತಮ್ಮ ರಿಲೇಶನ್‌ಷಿಪ್ (Relationship) ಮತ್ತು ಮದುವೆ ಬಗ್ಗೆ ರಾಘವ್ ಚಡ್ಡಾ ಆಗಲಿ ಪರಿಣಿತಿ ಚೋಪ್ರಾ ಆಗಲಿ ತುಟಿಕ್ ಪಿಟಿಕ್ ಎಂದಿರಲಿಲ್ಲ. ಆದರೆ ರಾಘವ್​ ವಿಷಯ ಕೇಳಿದಾಗ ಪರಿಣಿತಿ ನಾಚಿಕೊಂಡಿದ್ದರು. ನಂತರ ಸಂಜೀವ್ ಅರೋರಾ (Sanjeev Arora) ಅವರ ಟ್ವೀಟ್​ನಿಂದಾಗಿ ಸುದ್ದಿ ಬಹುತೇಕ ಖಚಿತವಾಗಿತ್ತು.