Asianet Suvarna News Asianet Suvarna News

ಹಿಂದಿಯಲ್ಲಿ ಮಾತನಾಡಲು ಬರದೇ ಪರದಾಡಿದ ಅಜಯ್ ದೇವಗನ್ ಪುತ್ರಿಗೆ ರಾಷ್ಟ್ರಭಾಷೆ ಪಾಠ!

ಅಜಯ್​ ದೇವಗನ್​ ಹಾಗೂ ಕಾಜೋಲ್​ ಪುತ್ರ ನ್ಯಾಸಾ ಹಿಂದಿ ಮಾತನಾಡಲು ಬರದೇ ಪೇಚಿಗೆ ಸಿಲುಕಿದ್ದಾರೆ. ಇದರಿಂದ ಭಾರಿ ಟ್ರೋಲ್​ ಆಗುತ್ತಿದ್ದು, ಟ್ರೋಲಿಗರು ಏನು ಹೇಳುತ್ತಿದ್ದಾರೆ ಕೇಳಿ... 
 

Nysa Devgan Struggles To Speak Hindi And Stammers At An Event, Gets Trolled As Her Video Goes Viral
Author
First Published Feb 23, 2023, 4:57 PM IST

ಕಳೆದ ವರ್ಷ ನಡೆದ ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ  (Amith Shah) ಅವರು ಎಲ್ಲಾ ರಾಜ್ಯಗಳ ಜನರನ್ನು ಹಿಂದಿಯಲ್ಲಿ ಪರಸ್ಪರ ಸಂವಹನ ನಡೆಸುವಂತೆ ಹೇಳಿದ್ದರು. ಇದು ಕೋಲಾಹಲಕ್ಕೆ ಕಾರಣವಾಗಿತ್ತು. ಅಮಿತ್​ ಷಾ ಅವರ ಮಾತನ್ನು ಬಾಲಿವುಡ್​ ನಟ ಅಜಯ್​ ದೇವಗನ್​ ಬೆಂಬಲಿಸಿದ್ದರು. ಇದು ನಟ ಕಿಚ್ಚ ಸುದೀಪ್​ ಮತ್ತು ಅಜಯ್​ ದೇವಗನ್​ ಮಧ್ಯೆ ಟ್ವೀಟ್​ಗೆ ವಾರ್​ಗೆ ನಾಂದಿ ಹಾಡಿತ್ತು.  ಸುದೀಪ್ ಅವರು  'ಹಿಂದಿ  ರಾಷ್ಟ್ರ ಭಾಷೆಯಲ್ಲ' ಎಂದು ಹೇಳಿದ್ದರು. ಪ್ಯಾನ್-ಇಂಡಿಯನ್ (Pan India) ಚಿತ್ರಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುದೀಪ್, 'ಯಾರೋ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ಕೇಳಿದ್ದರು. ನಾನು ಸಣ್ಣ ತಿದ್ದುಪಡಿ ಮಾಡಲು ಬಯಸುತ್ತೇನೆ. ಹಿಂದಿ ರಾಷ್ಟ್ರ ಭಾಷೆಯಲ್ಲ. ಬಾಲಿವುಡ್ ನವರು ಇಂದು ಪ್ಯಾನ್-ಇಂಡಿಯಾ ಚಲನಚಿತ್ರಗಳನ್ನು ಮಾಡುತ್ತಿದ್ದಾರೆ. ಅವರು ತೆಲುಗು ಮತ್ತು ತಮಿಳಿನಲ್ಲಿ ಡಬ್ಬಿಂಗ್ ಮಾಡುವ ಮೂಲಕ ಹೆಣಗಾಡುತ್ತಿದ್ದಾರೆ ಆದರೆ ಅವು ಯಶಸ್ಸು ಆಗುತ್ತಿಲ್ಲ. ಇಂದು ನಾವು ಎಲ್ಲರನ್ನೂ ಮುಟ್ಟುವಂತ ಚಲನಚಿತ್ರಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟ ಅಜೇಯ್ ದೇವಗನ್ (Ajay Devagan) ಹಿಂದಿಯಲ್ಲಿ ಟ್ವೀಟ್ ಮಾಡುತ್ತಾ  ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲದಿದ್ದರೆ, ನಿಮ್ಮ ಮಾತೃಭಾಷೆಯಲ್ಲಿ ಚಲನಚಿತ್ರಗಳನ್ನು ನಿರ್ಮಿಸಿ ಅದನ್ನು ಹಿಂದಿಯಲ್ಲಿ ಡಬ್ ಮಾಡಿ ಏಕೆ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರ ಭಾಷೆಯಾಗಿದೆ. ಜನ ಗಣ ಮನ ಎಂದು ಅಜಯ್ ಬರೆದಿದ್ದರು. ಇದಕ್ಕೆ ಸುದೀಪ್​ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. 

ಈ ವಿಷಯ ಈಗ ಮತ್ತೆ ಮುನ್ನೆಲೆಗೆ ಬರಲು ಕಾರಣ,  ನಟ ಅಜಯ್ ದೇವಗನ್​ ಅವರ  ಪುತ್ರಿ ನ್ಯಾಸಾ (Nysa) ಹಿಂದಿ ಮಾತನಾಡಲು ಬರದೇ ಒದ್ದಾಡಿದ್ದು! ಹೌದು. ಇವೆಂಟ್‌ವೊಂದರಲ್ಲಿ ಹಿಂದಿ ಮಾತನಾಡಲಾಗದೆ ಅಜಯ್​- ಕಾಜೋಲ್​ ಪತ್ರಿ ನ್ಯಾಸ ಪೇಜಿಗೆ ಸಿಲುಕಿರುವ ವಿಡಿಯೋ ಒಂದು ವೈರಲ್​ ಆಗಿದೆ.  ಈ ವಿಡಿಯೋ ನೋಡಿದ ಅನೇಕರು ನ್ಯಾಸಾ ಅವರನ್ನು ಮಾತ್ರವಲ್ಲದೇ ರಾಷ್ಟ್ರಭಾಷೆಯ ಪಾಠ ಮಾಡಿದ್ದ ಅಪ್ಪ ಅಜಯ್​ ದೇವಗನ್​ ಅವರನ್ನೂ ಟ್ರೋಲ್​ ಮಾಡುತ್ತಿದ್ದಾರೆ.  ನೆಪೋಟಿಸಂ ಮಕ್ಕಳಿಗೆ ಮಾತನಾಡುವ ಬೇಸಿಕ್ ಕೌಶಲ್ಯ ಆದ್ರೂ ಇದ್ಯಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಕನ್ನಡಿಗರಂತೂ ಸಿಕ್ಕಿದ್ದೇ ಚಾನ್ಸ್​ ಎಂದು ಸುದೀಪ್​  (Sudeep) ಮತ್ತು ಅಜಯ್​ ದೇವಗನ್​ ನಡುವೆ ನಡೆದಿದ್ದ ರಾಷ್ಟ್ರಭಾಷೆಯ ಕುರಿತ ಟ್ವೀಟ್​ ಸಮರವನ್ನು ಉಲ್ಲೇಖಿಸಿ ಕಾಲೆಳೆಯುತ್ತಿದ್ದಾರೆ.

ಸ್ಟಾರ್‌ಕಿಡ್ಸ್‌ ಲೇಟ್‌ ನೈಟ್‌ ಪಾರ್ಟಿ ಫೋಟೋ: ನಶೆಯಲ್ಲಿ ಅಜಯ್‌ ದೇವಗನ್‌ ಪುತ್ರಿ!

ಇಬ್ಬರು ಸ್ಟಾರ್ ನಟರ ಮಗಳು ಅದೂ ಹಿಂದಿ ಮಾತೃಭಾಷೆಯಾಗಿರುವಾಗಿ ಇಷ್ಟು ತಪ್ಪಾಗಿ ಮಾತನಾಡುತ್ತಿರೋದು ನಾಚಿಕೆ ಆಗುವುದಿಲ್ಲವೆ ಎಂದು ನ್ಯಾಸಾಳನ್ನು ಪ್ರಶ್ನಿಸಿದರೆ, ಮಗಳಿಗೆ ಸ್ವಲ್ಪನಾದರೂ ಹಿಂದಿ ಕಲಿಸಲು ಆಗುವುದಿಲ್ಲವೆ ಎಂದು ಅಪ್ಪ-ಅಮ್ಮನನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಹೇಯ್ ನೆಪೋಟಿಸಂ ಮಗುವೇ, ಹಿಂದಿ ಮಾತನಾಡುವ ಬಗ್ಗೆ ಯೋಚನೆ ಮಾಡಬೇಕು. ನಿನ್ನ ತಂದೆ-ತಾಯಿ ನಿರ್ದೇಶಕರ ಬಳಿ ಕರೆದುಕೊಂಡು ಹೋಗಿ ಯಾವ ಹೀರೋ ಜೊತೆಗೆ ಬೇಕಿದ್ರೂ ಸಿನಿಮಾ ಮಾಡ್ತಾರೆ. ನಟಿಯಾಗಬೇಕು ಅಂತಿದ್ರೆ ಚಿಕ್ಕ ವಯಸ್ಸಿನಿಂದಲೇ ನೀನು ಸ್ವಲ್ಪವಾದ್ರೂ ಹಿಂದಿ ಕಲಿಯುತ್ತಿದ್ದೆ ಎಂದು ನೆಟ್ಟಿಗನೊಬ್ಬ ಕಾಲೆಳೆದಿದ್ದಾನೆ. 

ಧೂಮಪಾನ ಮಾಡಿ ಮಾಡಿ ನ್ಯಾಸಾಳ ಮಿದುಳಿನ ನರಗಳು ಸತ್ತುಹೋಗಿವೆ. ಇವಳು ಬಾಲಿವುಡ್‌ ಸ್ಟಾರ್ (Bollywood Star) ದಂಪತಿಯ ಮಗಳಾಗಿ ಹುಟ್ಟಿ ಪುಣ್ಯ ಮಾಡಿದ್ದಳು. ಮಧ್ಯಮ ವರ್ಗದಲ್ಲಿ ಹುಟ್ಟಿ ಈ ರೀತಿ ಕೆಲಸದ ಸಂದರ್ಶನದಲ್ಲಿ ಮಾತನಾಡಿದ್ರೆ ಕಥೆ ಏನಾಗ್ತಿತ್ತು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ  ಕಾರಣವೂ ಇದೆ. ಅದೇನೆಂದರೆ ನ್ಯಾಸಾ ಇತ್ತೀಚೆಗೆ ಪಾರ್ಟಿ, ಪಬ್​ಗಳಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು. ಅದರಲ್ಲಿಯೂ ತುಂಡುಡುಗೆ ತೊಟ್ಟು ಈಕೆ ಕಾಣಿಸಿಕೊಳುತ್ತಾರೆ. ಆದ್ದರಿಂದ ಆ ವಿಷಯವನ್ನೆಲ್ಲಾ ಈಗ ಟ್ರೋಲ್​ನಲ್ಲಿ ತಿಳಿಸುತ್ತಿದ್ದಾರೆ.
 
ಅಷ್ಟಕ್ಕೂ ನ್ಯಾಸಾ ಟ್ರೋಲ್​  ಆಗುತ್ತಿರುವುದು ಇದೇ ಮೊದಲಲ್ಲ. ಕೆಲ ದಿನಗಳ ಹಿಂದೆ ಹೈ ಹೀಲ್ಸ್ ಹಾಕಿಕೊಂಡು ನಡೆಯಲು ಒದ್ದಾಡಿದ ನ್ಯಾಸಾ ನೋಡಿದವರು ಕುಡಿದಿದ್ದು ಹೆಚ್ಚಾಯ್ತು ಎಂದೆಲ್ಲ ಜನರು ಕಾಮೆಂಟ್ ಮಾಡಿದ್ದರು. ಅದಕ್ಕೂ ಮುನ್ನ ಫುಲ್​ ಡ್ರೆಸ್​ ಹಾಕಿಕೊಂಡು ಅಪ್ಪ-ಅಮ್ಮನ ಜೊತೆ ದೇವಸ್ಥಾನಕ್ಕೆ ಹೋದಾಗಲೂ ಆಕೆಯ ಕಾಲೆಳೆಯಲಾಗಿತ್ತು. ಒಹ್​ ನಿನಗೂ ಫುಲ್​ ಡ್ರೆಸ್ ಹಾಕಲು ಬರುತ್ತಾ? ಇಂಥ ಡ್ರೆಸ್​ ಕೂಡ ಹೊಲಿಸಿಕೊಟ್ಟಿದ್ದಾರಾ ಅಪ್ಪ-ಅಮ್ಮ ಎಂದು ಪ್ರಶ್ನಿಸಿದ್ದರು. ಕೊನೆಗೆ ಇದು ಪ್ರಚಾರದ ಸ್ಟಂಟ್​ (Stunt) ಎಂದೂ ಹೇಳಲಾಗಿತ್ತು. ಈಗ ಹಿಂದಿ ಭಾಷೆಯನ್ನು ಮುನ್ನೆಲೆಗೆ ತರಲಾಗಿದೆ. ನ್ಯಾಸಾ ಅವರು ಸಿಂಗಪುರದಲ್ಲಿ ಶಿಕ್ಷಣ ಪೂರೈಸುತ್ತಿದ್ದಾರೆ.  ವರ್ಷಗಳ ಹಿಂದೆ ನ್ಯಾಸಾರನ್ನು ಟ್ರೋಲ್ ಮಾಡಿದಾಗ ಅಜಯ್ ಅವರು "ನನ್ನ ಮಗಳು ಚಿಕ್ಕವಳು, ಹೀಗೆಲ್ಲ ಟ್ರೋಲ್ ಮಾಡಬೇಡಿ ಎಂದಿದ್ದರು.

ಒಬ್ಬನಿಗಾಗಿ ಇಬ್ಬರು ಬಾಲಿವುಡ್​ ನಟಿಯರ ಫೈಟ್​: ನಿಜ ಜೀವನದ ಇಂಟರೆಸ್ಟಿಂಗ್​ ಲವ್​ ಸ್ಟೋರಿ
 

Follow Us:
Download App:
  • android
  • ios