ಲಲಿತ್ ಮೋದಿ ಜೊತೆ ಡೇಟಿಂಗ್ ಆಂಡ್ ಮ್ಯಾರೇಜ್‌? ಮಕ್ಕಳ ಜೊತೆ ಫೋಟೋ ಹಂಚಿಕೊಂಡು ಕ್ಲಾರಿಟಿ ಕೊಟ್ಟ ಸುಶ್ಮಿತಾ...

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಅಧ್ಯಕ್ಷ ಲಲಿತ್ ಮೋದಿ ಕೆಲವು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಸುಶ್ಮಿತಾ ಸೇನ್‌ ಜೊತೆಗಿರುವ ಸಂಬಂಧದ ಬಗ್ಗೆ ಅಫೀಶಿಯಲ್ ಆಗಿ ಪೋಸ್ಟ್‌ ಮಾಡಿದ್ದರು. ಈ ವಿಚಾರದಿಂದ ಸುಶ್ಮಿತಾ ಸೇನ್ ಪರ್ಸನಲ್ ಲೈಫ್‌ ಮತ್ತು ಮಕ್ಕಳ ಜೀವನದ ಬಗ್ಗೆ ನೆಗೆಟಿವ್ ಕಾಮೆಂಟ್ ಹರಿದಾಡುತ್ತಿದೆ. ಹೀಗಾಗಿ ಫ್ಯಾಮಿಲಿ ಫೋಟೋ ಹಂಚಿಕೊಂಡು ಇದೆಲ್ಲಾ none of your business ಎಂದು ಸುಶ್ಮಿತಾ ಹೇಳಿದ್ದಾರೆ.

ಸುಶ್ಮಿತಾ ಪೋಸ್ಟ್‌:

'ತುಂಬಾ ಸಂತೋಷವಾಗಿರುವ ಸ್ಥಾನದಲ್ಲಿರುವೆ. ಮದುವೆ ಆಗಿಲ್ಲ ಉಂಗುರ ಇಲ್ಲ. ಅಪಾರ ಪ್ರೀತಿ ಕೊಡುವ ಜನರ ನಡುವೆ ಇರುವೆ. ನಿಮಗೆಲ್ಲಾ ಸಾಕಿಷ್ಟು ಕ್ಲಾರಿಫಿಕೇಶನ್. ಈಗ ಜೀವನ ನಡೆಯಬೇಕು ಕೆಲಸ ಮುಂದುವರೆಸೆಬೇಕು. ನನ್ನ ಸಂತೋಷಗಳಲ್ಲಿ ಸದಾ ಭಾಗಿಯಾಗುವುದಕ್ಕೆ ಧನ್ಯವಾದಗಳು. ಯಾರು ಭಾಗಿಯಾಗುವುದಿಲ್ಲ ಇದು none of your business. ಏನೇ ಇರಲಿ ಐ ಲವ್‌ ಯು' ಎಂದು ಸುಶ್ಮಿತಾ ಬರೆದುಕೊಂಡಿದ್ದಾರೆ.

ಲಲಿತ್ ಮೋದಿ ಟ್ವೀಟ್:

'ಮಾಲ್ಡೀವ್ಸ್‌ ಗ್ಲೋಬಲ್ ಟೂರ್‌ ಮುಗಿಸಿ ಲಂಡನ್‌ಗೆ ಹಿಂತಿರುಗಿದ್ದೀವಿ ನಮ್ಮ ಕುಟುಂಬದ ಜೊತೆ. ಹೇಳುವುದನ್ನು ಮರೆಯಬಾರದು ನನ್ನ ಬೆಟರ್‌ಹಾಫ್‌ ನನ್ನ ಜೊತೆಗಿದ್ದಾರೆ- ಸುಶ್ಮಿತಾ ಸೇನ್. ಹೊಸ ಜೀವನ. ಚಂದ್ರನ ಮೇಲಿರುವಷ್ಟೇ ಸಂತೋಷವಾಗುತ್ತಿದೆ' ಎಂದು ಟ್ವೀಟ್ ಮಾಡಿದ್ದರು. 

2013ರಲ್ಲಿ ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಮಾಡಿದ್ದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಟ್ವೀಟ್‌ನಲ್ಲಿ ಲಲಿತ್ ಅವರು ಸುಶ್ಮಿತಾ ಅವರನ್ನು ಟ್ಯಾಗ್ ಮಾಡಿ 'ನನ್ನ SMS ಗೆ ಉತ್ತರಿಸಿ' ಎಂದು ಬರೆದಿದ್ದಾರೆ. ಈ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳುವ ಮೂಲಕ, ಇಬ್ಬರ ಸಂಬಂಧ ಇಲ್ಲಿಂದ ಪ್ರಾರಂಭವಾಗಿದೆ ಎಂದು ಬಳಕೆದಾರರು ಹೇಳುತ್ತಿದ್ದಾರೆ.

ಅನಿಲ್‌ ಅಂಬಾನಿ ಸೇರಿ ಸುಶ್ಮಿತಾ ಸೇನ್‌ ಡೇಟ್‌ ಮಾಡಿದ ಬ್ಯುಸಿನೆಸ್‌ಮೆನ್‌

ಲಲಿತ್ ಮೋದಿ ಟ್ವೀಟ್ ಮಾಡಿ, 'ಸರಿ ನಾನು ಬದ್ಧನಾಗಿದ್ದೇನೆ. ನೀವು ದಯಾಮಯಿ. ಭರವಸೆಗಳನ್ನು ಮುರಿಯಲು ಉದ್ದೇಶಿಸಿದ್ದರೂ, ಬದ್ಧತೆಯನ್ನು ಗೌರವಿಸಲಾಗುತ್ತದೆ, ಚಿಯರ್ಸ್‌ ಲವ್ ಎಂದಿದ್ದಾರೆ. ಇದಾದ ನಂತರ ಸುಶ್ಮಿತಾ ‘Gotcha 47’ ಎಂದು ಉತ್ತರಿಸಿದ್ದಾರೆ. ಇದಕ್ಕೆ ಮೇಲೆ ಲಲಿತ್ ಮೋದಿ ಅವರು 'ನನ್ನ SMS ಗೆ ಉತ್ತರಿಸಿ' ಎಂದು ಬರೆದಿದ್ದಾರೆ.

ರೋಹ್ಮನ್ ಶಾಲ್ ರಿಯಾಕ್ಷನ್:

ಒಂದೆರಡು ವರ್ಷಗಳ ಕಾಲ ಸುಶ್ಮಿತಾ ಸೇನ್ ರೋಹ್ಮನ್ ಶಾಲ್‌ರನ್ನು ಡೇಟ್‌ ಮಾಡಿದ್ದರು. ಲಲಿತ್‌ ಮೋದಿ ಜೊತೆ ಮದುವೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ರೋಹ್ಮನ್ ಪಾಸಿಟಿವ್ ಆಗಿ ರಿಯಾಕ್ಟ್ ಮಾಡಿದ್ದಾರೆ. 'ಅವರಿಬ್ಬರ ಬಗ್ಗೆ ನಾವು ತುಂಬಾ ಸಂತೋಷ ಪಡಬೇಕು. ಲವ್‌ ತುಂಬಾನೇ ಬ್ಯೂಟಿಫುಲ್. ನನಗೆ ಗೊತ್ತಿರುವುದು ಒಂದೇ ವಿಚಾರ ಸುಶ್ಮಿತಾ ಆಯ್ಕೆ ಮಾಡಿದ್ದಾಳೆ ಅಂದ್ರೆ ಅವನು ಬೆಸ್ಟ್‌' ಎಂದಿದ್ದಾರೆ ರೋಹನ್. 

ರೋಹ್ಮನ್ ಸುಶ್ಮಿತಾ ಅವರಿಗಿಂತ 16 ವರ್ಷ ಚಿಕ್ಕವರು

ಸುಶ್ಮಿತಾ ಸೇನ್ ಜೊತೆ ಸಂಬಂಧದಲ್ಲಿದ್ದ ರೋಹ್ಮನ್ ಶಾಲ್ ಅವರಿಗಿಂತ 16 ವರ್ಷ ಚಿಕ್ಕವರು. ಇಬ್ಬರೂ 2018 ರಲ್ಲಿ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಅದೇ ಸಮಯದಲ್ಲಿ, ಅವರು 23 ಡಿಸೆಂಬರ್ 2021 ರಂದು ಬೇರ್ಪಟ್ಟರು. ಸುಶ್ಮಿತಾ ಸೇನ್ ರೋಹ್ಮನ್ ಜೊತೆ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಿದನ್ನು ಅವರು ಸಂಬಂಧವನ್ನು ಸುಂದರವಾದ ಪೋಸ್ಟ್‌ ಮೂಲಕ ತಿಳಿಸಿದ್ದರು. ಸುಶ್ಮಿತಾ ಮತ್ತು ರೋಹ್ಮನ್ ಇನ್ನೂ ಸ್ನೇಹಿತರು. ಲಲಿತ್ ಮೋದಿ ಬಂದ ನಂತರ ಅವರ ಸ್ನೇಹ ಎಷ್ಟು ದಿನ ಉಳಿಯುತ್ತದೆ? ಈ ಬಗ್ಗೆ ಇನ್ನೂ ಏನನ್ನೂ ಹೇಳಲು ಸಾಧ್ಯವಿಲ್ಲ.

Photos- ಮಾಜಿ ಮಿಸ್‌ ವರ್ಲ್ಡ್‌ ಸುಶ್ಮಿತಾ ಸೇನ್‌ ಮನೆ ಒಳಗೆ ಹೇಗಿದೆ ನೋಡಿ

ಸುಶ್ಮಿತಾ ತಂದೆ ಶುಬೀರ್ ಸೇನ್ ರಿಯಾಕ್ಷನ್:

'ಈ ವಿಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಬೆಳಗ್ಗೆ ಮಗಳ ಜೊತೆ ಮಾತನಾಡಿದೆ ಆಕೆ ಕೂಡ ಏನೂ ಹೇಳಲಿಲ್ಲ. ಮಾಧ್ಯಮದವರು ಕೇಳಿದಾಗ ನಾನು ಈ ಟ್ವೀಟ್ ನೋಡಿದೆ. ಇದೇ ಮೊದಲು ಈ ಟ್ವೀಟ್ ನೋಡುತ್ತಿರುವುದು. ಇದರ ಬಗ್ಗೆ ನನಗೆ ಗೊತ್ತಿರದ ಕಾರಣ ನಾನು ಏನೂ ಹೇಳುವುದಕ್ಕೆ ಆಗೋಲ್ಲ' ಎಂದಿದ್ದಾರೆ ಶುಬೀರ್.

View post on Instagram