ಅವ್ರು ಮಲಗಲು ರೆಡಿ ಇದ್ರೆ ತಾನೇ ಇವ್ರೂ ಮುಂದಾಗೋದು! ಕಾಸ್ಟಿಂಗ್ ಕೌಚ್​ ಅನ್ನೋರಿಗೆ ನಟಿ ಲಕ್ಷ್ಮಿ ತಿರುಗೇಟು

ಸಿನಿಮಾ ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸಿರುವ ಕಾಸ್ಟಿಂಗ್​ ಕೌಚ್​ ಕುರಿತು ಮಾತನಾಡುವವರ ಬಗ್ಗೆ ನಟಿ ಲಕ್ಷ್ಮಿ ರೈ ಹೇಳಿದ್ದೇನು? 
 

Nobody is forcing to sleep with them it is actually a mutual thing Laxmi Raai comments on casting couch suc

 ಕಾಸ್ಟಿಂಗ್​ ​ ಕೌಚ್​ (casting couch) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018ರಲ್ಲಿ ನಟಿ ಶ್ರುತಿ ಹರಿಹರನ್​ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ನಂತರ ಮೀ ಟೂ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟಿಂಗ್​ ​ ಕೌಚ್​ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು. ನಟನಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು. ಇದಾದ ಬಳಿಕ ಇತ್ತೀಚಿನ ವರ್ಷಗಳಲ್ಲಿ ಹಲವು ನಟಿಯರು ಈ ಬಗ್ಗೆ ಭಯಾನಕ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಬೇಕು, ಟಾಪ್​ ಸ್ಥಾನ ಪಡೆಯಬೇಕು, ಇಂಡಸ್ಟ್ರಿಯಲ್ಲಿ ಬೇರೂರಬೇಕು  ಎಂದರೆ ಕೆಲವು ನಟರು, ನಿರ್ದೇಶಕರು,  ನಿರ್ಮಾಪಕರು... ಹೀಗೆ ಎಲ್ಲರ ಜೊತೆ ಮಲಗುವುದು ಅನಿವಾರ್ಯ ಎನ್ನುವ ಅರ್ಥದಲ್ಲಿಯೇ ಬಹುತೇಕ ಎಲ್ಲಾ ನಟಿಯರೂ ಹೇಳಿಕೊಂಡಿದ್ದಾರೆ.

ಇದರ ನಡುವೆಯೇ, ದಕ್ಷಿಣದ ಬೆಡಗಿ ಲಕ್ಷ್ಮಿ ರೈ ಸ್ಫೋಟಕ ಹೇಳಿಕೆ ನೀಡಿದ್ದಾರೆ.  ಧಮ್ ಧೂಮ್, ಕಾಂಚನಾ ಮತ್ತು ತಾಂಡವಂನಂತಹ ಬ್ಲಾಕ್​ಬಸ್ಟರ್​ ಚಿತ್ರಗಳಲ್ಲಿ ಹೆಸರು ಮಾಡಿರುವ ಲಕ್ಷ್ಮಿ ರೈ ಅವರು,  ಸಿನಿ ಇಂಡಸ್ಟ್ರಿಯಲ್ಲಿ ಅತ್ಯಂತ  ಮನಮೋಹಕ ನಾಯಕಿಯೆಂದೇ  ಪರಿಗಣಿಸಲ್ಪಟ್ಟಿದ್ದಾರೆ. ಇತ್ತೀಚೆಗೆ ಅವರು ಕಾಸ್ಟಿಂಗ್​ ಕೌಚ್​ ಕುರಿತು ಮಾತನಾಡಿದ್ದು, ಅದೀಗ  ಮತ್ತೆ ಮುನ್ನೆಲೆಗೆ ಬಂದಿದೆ.  ಪ್ರತಿ ಉದ್ಯಮದಲ್ಲಿ ಕಾಸ್ಟಿಂಗ್ ಕೌಚ್ ಅಸ್ತಿತ್ವದಲ್ಲಿದೆ ಎಂದು ಹೇಳುತ್ತಲೇ ಅವರು ನಟನಾ ವೃತ್ತಿಯ ಕೆಲವು ಕಹಿ ಸತ್ಯಗಳನ್ನೂ ಹೇಳಿದ್ದಾರೆ.  ಹಲವು ನಟಿಯರಿಗೆ ಕಾಸ್ಟಿಂಗ್​ ಕೌಚ್​ ಅನುಭವ ಆಗಿರುವುದು ನಿಜ. ನಿಜ ಹೇಳಬೇಕೆಂದರೆ, ನನ್ನ ಪ್ರವೇಶವು ಸುಗಮವಾಗಿದ್ದರಿಂದ ನಾನು ಅಂತಹ ಯಾವುದೇ ಸಮಸ್ಯೆಗಳನ್ನು ಎದುರಿಸಲಿಲ್ಲ. ಈ ಇಂಡಸ್ಟ್ರಿಯಲ್ಲಿ ಬ್ರೇಕ್ ಪಡೆಯಲು ಕಷ್ಟಪಡುತ್ತಿರುವ ಹೊಸಬರನ್ನು  ನಿರ್ಮಾಪಕರು ಮತ್ತು ನಿರ್ದೇಶಕರು  ಹೆಚ್ಚಾಗಿ ಶೋಷಣೆ ಮಾಡುವುದು ನಿಜವೇ. ಕೆಲವರು ಜೂಜು, ಮೋಜು ಮತ್ತು  ಮಲಗಲು ಮಾತ್ರ ಈ ಉದ್ಯಮಕ್ಕೆ ಬರುತ್ತಿರುವುದೂ ನಿಜವೇ ಎಂದಿದ್ದಾರೆ. 

ಕಿರುತೆರೆಯಲ್ಲಿಯೂ ಕಾಸ್ಟಿಂಗ್​ ಕೌಚ್​? ರೂಮಿನಲ್ಲಿ ಕೂಡಾಕಿದ್ರು, ಬಟ್ಟೆ ಬದಲಿಸುವಾಗ... ನಟಿಯ ಕರಾಳ ಅನುಭವ

ಆದರೆ ಎನ್ನುತ್ತಲೇ ಕಾಸ್ಟಿಂಗ್​ ಕೌಚ್​ನ ಇನ್ನೊಂದು ಮುಖವನ್ನು ನಟಿ ಅನಾವರಣಗೊಳಿಸಿದ್ದಾರೆ. ಇಲ್ಲಿ ಯಾರೂ ತನ್ನೊಂದು ಮಲಗಲು ಬಾ ಎಂದು ಬಲವಂತಪಡಿಸುವುದಿಲ್ಲ. ಒಳ್ಳೆಯ ಅವಕಾಶ ಬೇಕೆಂದರೆ ಹೀಗೆ ಮಾಡು ಎಂದು ಕರೆಯುತ್ತಾರೆ. ಆದರೆ ಬಲವಂತ ಮಾಡುವುದಿಲ್ಲ. ಅವಕಾಶ ಬೇಕು ಎಂದರೆ, ಇವರು ಹೋಗುತ್ತಾರೆ. ಆದ್ದರಿಂದ ಇದು ಪರಸ್ಪರ ಒಪ್ಪಿಗೆಯ ವಿಷಯವಾಗಿದೆ ಎಂದಿರುವ ಲಕ್ಷ್ಮಿ, ಇವರು ಒಪ್ಪದೇ ಹೋದರೆ ಅವರು ಹೇಗೆ ರೆಡಿಯಾಗುತ್ತಾರೆ ಎನ್ನುವ ಅರ್ಥದಲ್ಲಿ ಮಾತನಾಡಿ ತಲ್ಲಣ ಸೃಷ್ಟಿಸಿದ್ದಾರೆ. ಆದರೆ ಎಲ್ಲರಿಗೂ ಇಂಥ ಕಹಿ ಅನುಭವ ಆಗಬೇಕೆಂದೇನು ಇಲ್ಲ. ನನ್ನ ತಂದೆ ಸಮಾನರಾಗಿರುವ ಆರ್​.ವಿ.ಉದಯಕುಮಾರ್​ ಅವರಿಂದ ಸಿನಿಮಾ ಸಿಕ್ಕಿತು. ಆದ್ದರಿಂದ ತನಗೆ ಈ ರೀತಿಯ ಯಾವುದೇ ಕೆಟ್ಟ ಅನುಭವ ಆಗಿಲ್ಲ ಎಂದರು. 

ಎಲ್ಲಾ ಕಡೆಗಳಲ್ಲಿಯೂ ಕಾಸ್ಟಿಂಗ್ ಕೌಚ್ ಇರುವುದು ಸಾಮಾನ್ಯ.  ನಾವು ಯಾವ ರೀತಿ ನಡ್ಕೋತೀವಿ ಅದರ ಮೇಲೆ ನಮ್ಮನ್ನ ಇಂಡಸ್ಟ್ರಿ ಟ್ರೀಟ್ ಮಾಡುತ್ತದೆ. ಅವಕಾಶ ಸಿಗುತ್ತದೆ ಎಂದು ನಾವು ಮಲಗಿದರೆ ಏನೂ ಮಾಡಲು ಆಗುವುದಿಲ್ಲ ಎನ್ನುತ್ತಲೇ ಇದನ್ನೇ ದೊಡ್ಡದಾಗಿ ಬಿಂಬಿಸಿ ಚಿತ್ರರಂಗದ ಹೆಸರನ್ನು ಹಾಳು ಮಾಡುವುದು ಸರಿಯಲ್ಲ ಎಂದು ನಟಿ ಹೇಳಿದ್ದಾರೆ.    

ಬೆಡ್​ರೂಮ್​ ಕಮಿಟ್​ಮೆಂಟ್​ ಇಲ್ಲದಿದ್ರೆ ಟಾಪ್​ ನಾಯಕಿಯಾಗೋದು ಕಷ್ಟ! ರಮ್ಯಾ ಕೃಷ್ಣನ್​ ಹೇಳಿಕೆ ವೈರಲ್​...

Latest Videos
Follow Us:
Download App:
  • android
  • ios