Asianet Suvarna News Asianet Suvarna News

ಬೆಡ್​ರೂಮ್​ ಕಮಿಟ್​ಮೆಂಟ್​ ಇಲ್ಲದಿದ್ರೆ ಟಾಪ್​ ನಾಯಕಿಯಾಗೋದು ಕಷ್ಟ! ರಮ್ಯಾ ಕೃಷ್ಣನ್​ ಹೇಳಿಕೆ ವೈರಲ್​...

ನಟಿ ರಮ್ಯಾ ಕೃಷ್ಣನ್​ ಸಿನಿಮಾ ರಂಗದಲ್ಲಿನ ಕಾಸ್ಟಿಂಗ್​ ಕೌಚ್​ ಕುರಿತು ಓಪನ್ನಾಗಿ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 

Ramya Krishna Opens Up About Casting Couch and  bedroom commitment in cine industry suc
Author
First Published May 6, 2024, 11:30 AM IST

ಬಾಲಿವುಡ್​ ಮಾತ್ರವಲ್ಲದೇ ಬಹುತೇಕ ಸಿನಿ ಇಂಡಸ್ಟ್ರಿಯ ತಾರೆಯರು ಇದಾಗಲೇ ಸಿನಿಮಾದಲ್ಲಿ ತಮಗಾಗಿರುವ ಲೈಂಗಿಕ ದೌರ್ಜನ್ಯಗಳು ಕುರಿತು ಮಾತನಾಡಿದ್ದಾರೆ. ಇದೀಗ 1990ರಿಂದ ಹಿಡಿದು 2-3 ದಶಕ ಸಿನಿರಂಗವನ್ನು ಆಳಿದ ನಟಿ ರಮ್ಯಾ ಕೃಷ್ಣನ್ (Ramya Krishan)​ ಕೂಡ ತಮಗಾಗಿರುವ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದು, ಅವರ ಸಂದರ್ಶನ ಪುನಃ ವೈರಲ್​ ಆಗಿದೆ.  ಅಷ್ಟಕ್ಕೂ ರಮ್ಯಾ ಕೃಷ್ಣನ್​ ಅವರಿಗೆ ಈಗ  ವಯಸ್ಸು 53. ಆದರೂ ಆ ತೇಜಸ್ಸಿಗೆ ಏನೂ ಕೊರತೆಯಿಲ್ಲ. ಬ್ಲ್ಯಾಕ್​ ಆ್ಯಂಡ್​ ಚಿತ್ರದಿಂದ ಹಿಡಿದು ಇತ್ತೀಚಿನ ಚಿತ್ರಗಳವರೆಗೂ ನಾಯಕಿಯಾಗಿ ನಟಿಸುತ್ತಲೇ ವರ್ಚಸ್ಸನ್ನು ಉಳಿಸಿಕೊಂಡಿರುವ ಬೆಡಗಿ ರಮ್ಯಾ. ಚೆನ್ನೈ ಮೂಲದ ರಮ್ಯಾ, ತೆಲುಗು , ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ನಾಲ್ಕು ಫಿಲ್ಮ್​ಫೇರ್​ (Film Fare) ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಮೂರು ನ೦ದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. 

ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ  ರಮ್ಯಾ ಕೃಷ್ಣ ಎಂಬ ಹೆಸರಿನಿಂದ ಇವರು ಫೇಮಸ್​. ಮೋಡಿ ಮಾಡುವ ಅಭಿನಯ, ನೃತ್ಯದ ಮೂಲಕ ಎಲ್ಲರ ಹೃದಯ ಗೆದ್ದಿರುವ ನಟಿ   ಭರತನಾಟ್ಯ, ಕೂಚಿಪೂಡಿಯಂಥ ಶಾಸ್ತ್ರೀಯ ನೃತ್ಯಗಳಲ್ಲಿಯೂ ಎತ್ತಿದ ಕೈ.  ‘ಬಾಹುಬಲಿ’ ಚಿತ್ರದಲ್ಲಿ ಶಿವಗಾಮಿ (ದೇವಸೇನಾ) ಪಾತ್ರದಲ್ಲಿ ನಟಿಸಿದ್ದ ‘ಬಾಹುಬಲಿ’ ತಾಯಿ ರಮ್ಯಾ ಕೃಷ್ಣನ್ ಈ ಚಿತ್ರದಲ್ಲಿ ರಮ್ಯಾ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಲ್ಲದೆ, ಚಿತ್ರದಲ್ಲಿನ ಅವರ ಸಂಭಾಷಣೆಗಳಿಗೆ ಅಭಿಮಾನಿಗಳು ಶಿಳ್ಳೆಯ ಮೇಲೆ ಶಿಳ್ಳೆ ಹೊಡೆದಿದ್ದರು.

ಅನನ್ಯಾ- ಆದಿತ್ಯ ಬ್ರೇಕಪ್​ ಕನ್​ಫರ್ಮ್​? ಬಾಯ್​ಫ್ರೆಂಡ್​​ ಜಾಗದಲ್ಲಿ ನಾಯಿ ಇಟ್ಟುಕೊಂಡ ನಟಿ!

ನಟಿ ತಮಗಾಗಿರುವ ಕರಾಳ ಅನುಭವನ್ನು ಬಿಚ್ಚಿಟ್ಟಿದ್ದಾರೆ.  ಕಾಸ್ಟಿಂಗ್‌ ಕೌಚ್‌ ಕುರಿತು ಮಾತನಾಡಿದ್ದಾರೆ. ಕಾಸ್ಟಿಂಗ್ ಕೌಚ್ ಸಮಸ್ಯೆ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲಿಯೂ ಇದೆ. ಆದರೆ ಚಿತ್ರರಂಗದ ಸೆಲೆಬ್ರಿಟಿಗಳು ಹೆಚ್ಚಾಗಿ ಪರದೆಯ ಮೇಲೆ ಕಾಣಿಸಿಕೊಳ್ಳುವುದರಿಂದ ಎಲ್ಲರೂ ಹೆಚ್ಚಾಗಿ ಸಿನಿ ಸೆಲೆಬ್ರಿಟಿಗಳ ಕಾಸ್ಟಿಂಗ್ ಕೌಚ್ ವಿಷಯಗಳ ಬಗ್ಗೆ ಆಸಕ್ತಿ ವಹಿಸುತ್ತಾರೆ. ಕೆಲವರು ಸುಳ್ಳು ಸುದ್ದಿಗಳನ್ನೂ  ಹರಡುತ್ತಾರೆ ಎನ್ನುವುದೂ ನಿಜ ಎಂದಿರುವ ನಟಿ,  ಮಹಿಳೆಯರು ಸಿನಿಮಾದಲ್ಲಿ ಸ್ಟಾರ್​ ಪಟ್ಟ ಗಳಿಸಬೇಕು ಎಂದರೆ  ಸಾಂದರ್ಭಿಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಲೇಬೇಕು.  ಚಿತ್ರರಂಗದಲ್ಲಿ ಕೆಲವು ನಿರ್ಮಾಪಕರು ನಾಯಕಿಯರಿಗೆ ಕಿರುಕುಳ ನೀಡುವುದರಲ್ಲಿ ಹೊಸದೇನೂ ಇಲ್ಲ ಎಂಬ ಸಂಗತಿಯನ್ನೂ ಹೊರಹಾಕಿದ್ದಾರೆ. 
 
ಇನ್ನು ರಮ್ಯಾ ವೃತ್ತಿ ಜೀವನದ ಕುರಿತು ಹೇಳುವುದಾದರೆ, ಇವರು 1948ರಲ್ಲಿ ವೈ.ಜಿ ಮಹೇ೦ದ್ರ ರವರ ಜೊತೆ 'ವೆಲ್ಲಿ ಮನಸ್ಸು' ಎ೦ಬ ತಮಿಳು ಚಲನಚಿತ್ರದಲ್ಲಿ 14ನೇ ವಯಸ್ಸಿನಲ್ಲಿ ನಟಿಸಿದ್ದಾರೆ. ಅವರ ಮೊದಲ ತೆಲುಗು ಚಿತ್ರ 1986ರಲ್ಲಿ ಬಿಡುಗಡೆಗೊಂಡ 'ಭಲೆ ಮಿತ್ರುಲು'. ಕಾಶಿನಾಧುನಿ ವಿಶ್ವನಾಥ್ ರವರ ಸೂತ್ರಧಾರುಲು ಚಿತ್ರದಿಂದ ಇವರು ಜನಪ್ರಿಯರಾದರು. 1990ರಲ್ಲಿ  ಸೌ೦ದರ್ಯ, ಮೀನಾ, ರೋಜಾ, ನಗ್ಮಾ ಹಾಗೂ ಮು೦ತಾದ ನಟಿಯರೊ೦ದಿಗೆ ತೆಲುಗು ಉದ್ಯಮದಲ್ಲಿ ಪ್ರಮುಖ ನಟಿಯಾಗಿ ಹೊರಹೊಮ್ಮಿದ್ದರು. ಇವರು ಎನ್.ಟಿ ರಾಮ ರಾವ್,ಕೃಷ್ಣ, ಚಿರ೦ಜೀವಿ, ಬಾಲಕೃಷ್ಣ, ವೆ೦ಕಟೇಶ್, ಮೋಹನ್ ಬಾಬು ,ಜಗಪತಿ ಬಾಬು, ರಾಜಶೇಖರ್, ರಜನಿಕಾಂತ್ ಹಾಗೂ ಕನ್ನಡದಲ್ಲಿ ರವಿಚಂದ್ರನ್, ಪುನೀತ್ ರಾಜ್‍ಕುಮಾರ್,ಉಪೇಂದ್ರ (Upendra) ಹಾಗೂ ಮು೦ತಾದ ನಟರ ಜೊತೆ ಚಲನಚಿತ್ರದಲ್ಲಿ ನಟಿಸಿದ್ದಾರೆ. ಉಪೇಂದ್ರ ಅವರ ಜೊತೆ ಮೈಚಳಿ ಬಿಟ್ಟು ನಟಿಸಿದ್ದ ಬಾ ಬಾರೋ ರಸಿಕ ಹಾಡನ್ನು ನೆನಪಿಸಿಕೊಂಡರೆ ಇವರ ಅಭಿಮಾನಿಗಳ ಮೈ ಇನ್ನೂ ರೋಮಾಂಚನಗೊಳ್ಳುತ್ತದೆ. 
ಮಂಟಪಕ್ಕೆ ನನ್​ ಕರ್ಕೊಂಡು ಬರ್ಬೇಕಿದ್ದ ಮಾವ ಕಾಣೆಯಾಗೋದ್ರು! ಅದೊಂದ್​ ದೊಡ್ಡ ಕಥೆ, ಆ ದಿನ ಸ್ಮರಿಸಿದ ರಕ್ಷಿತಾ

Latest Videos
Follow Us:
Download App:
  • android
  • ios