ಮುಂಬೈ ಡ್ರಗ್ಸ್ ಕೇಸ್‌ನಲ್ಲಿ ಹೊಸ ತಿರುವು ಘಟನೆಗೆ ಸಂಬಂಧಿಸಿ ಬಿಜೆಪಿ ಜೊತೆ ಲಿಂಕ್ ಇದ್ದವ್ರು ಬಿಡುಗಡೆ ಎಂಬ ಆರೋಪ ಸಾಕ್ಷಿಯನ್ನು ಆಧರಿಸಿ ಅರೆಸ್ಟ್ ಎಂದ ಎನ್‌ಸಿಬಿ

ಮಾಜಿ ವಸತಿ ಸಚಿವ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಸದಸ್ಯ ನವಾಬ್ ಮಲಿಕ್ ಅವರು ಮುಂಬೈ ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಬಿಜೆಪಿಯೊಂದಿಗೆ ನಂಟು ಹೊಂದಿದ್ದ ಆರೋಪಿಗಳನ್ನು ಸುಮ್ಮನೆ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ, ಮಲಿಕ್ ಎನ್‌ಸಿಬಿ 11 ಜನರನ್ನು ಸೆರೆಹಿಡಿದು ಕ್ರೂಸ್ ಪಾರ್ಟಿಯಿಂದ ಬಂಧಿಸಿದೆ ಎಂದು ಹೇಳಿದ್ದಾರೆ. ಈ ಪೈಕಿ, ರಿಷಬ್ ಸಚ್ ದೇವ್, ಪ್ರತೀಕ್ ಗಬಾ ಮತ್ತು ಅಮೀರ್ ಫರ್ನಿಚರ್ ವಾಲಾ ಎಂಬ ಮೂವರನ್ನು ಬಿಡುಗಡೆ ಮಾಡಲಾಗಿದೆ. ಸಚ್‌ದೇವ್ ಮಾಜಿ ಭಾರತೀಯ ಜನತಾ ಯುವ ಮೋರ್ಚಾ (BJYM) ಅಧ್ಯಕ್ಷ ಮೋಹಿತ್ ಕಾಂಬೋಜ್ ಅವರ ಸೋದರ ಮಾವ. ಅಮೀರ್ ಫರ್ನಿಚರ್ ವಾಲಾ ಮತ್ತು ಪ್ರತೀಕ್ ಗಬಾ ಅವರು ಸಚದೇವ್ ಮತ್ತು ಆರ್ಯನ್ ಖಾನ್(Aryan Khan) ಅವರ ಸ್ನೇಹಿತರು, ಅವರು ಖಾನ್ ಅವರನ್ನು ಪಾರ್ಟಿಗೆ ಆಹ್ವಾನಿಸಿದ್ದಾರೆ ಎಂದಿದ್ದಾರೆ.

View post on Instagram

ಆರ್ಯನ್ ಖಾನ್‌ಗೆ ಜಾಮೀನು ನಿರಾಕರಿಸಿದ ಕೋರ್ಟ್, ಗೌರಿ ಖಾನ್ ಹುಟ್ಟು ಹಬ್ಬ ಆಚರಣೆ ಕ್ಯಾನ್ಸಲ್!

Scroll to load tweet…

ಕ್ರೂಸ್ ಹಡಗು ದಾಳಿಯ ನಂತರ 11 ಜನರನ್ನು ಬಂಧಿಸಿದಾಗ ಯಾವ 3 ಜನರನ್ನ ಬಿಡುಗಡೆ ಮಾಡಿದ್ದಾರೆ ಎಂದು ನಾವು ಎನ್‌ಸಿಬಿಯನ್ನು ಪ್ರಶ್ನಿಸುತ್ತೇವೆ. ನಾವು ಸತ್ಯವನ್ನು ಬಹಿರಂಗಪಡಿಸಬೇಕೆಂದು ಎನ್‌ಸಿಬಿಯನ್ನು(NCB) ಕೋರುತ್ತೇವೆ. ಸಮೀರ್ ವಾಂಖೆಡೆ ಮತ್ತು ಬಿಜೆಪಿ ನಾಯಕರ ನಡುವೆ ಸ್ವಲ್ಪ ಮಾತುಕತೆ ನಡೆದಿದೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ. ಅವರು ಈ ಬಗ್ಗೆ ಸ್ವತಂತ್ರ ತನಿಖೆಗೆ ನಡೆಯಬೇಕು. ಅದಕ್ಕಾಗಿ ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆಯುವುದಾಗಿ ಮಲಿಕ್ ಹೇಳಿದ್ದಾರೆ.

ಎನ್‌ಸಿಬಿ ಪ್ರತಿಕ್ರಿಯೆ ಏನು?

ಮಲಿಕ್ ಹೇಳಿಕೆಯ ನಂತರ, ಎನ್‌ಸಿಬಿ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಗೊಂದಲ ಪರಿಹರಿಸುವುದಾಗಿ ತಿಳಿಸಿದ್ದಾರೆ. ಉಪ ಮಹಾನಿರ್ದೇಶಕ ಜ್ಞಾನೇಶ್ವರ್ ಸಿಂಗ್ ಈಗ ನವಾಬ್ ಮಲಿಕ್ ಅವರ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಪಾರ್ಟಿಯ ದಿನದಂದು 14 ಜನರನ್ನು ಬಂಧಿಸಲಾಯಿತು. ಅವರ ವಿರುದ್ಧ ಯಾವುದೇ ದೋಷಾರೋಪಣೆಯ ಪುರಾವೆಗಳು ಸಿಗದ ಕಾರಣ ಆರು ಜನರನ್ನು ಬಿಡಲಾಯಿತು ಎಂದು ಅವರು ಹೇಳಿದ್ದಾರೆ.

ಸುಶಾಂತ್ ಪರ ವಾದಿಸಿದ್ದ ಲಾಯರ್‌ನಿಂದ ಆರ್ಯನ್‌ಗೆ ಸಪೋರ್ಟ್

ಅಗತ್ಯವಿದ್ದಲ್ಲಿ ಆ ಆರು ಜನರನ್ನು ವಿಚಾರಣೆಗೆ ಕರೆಯಲಾಗುವುದು ಎಂದು ಅವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಒಂಬತ್ತು ಸ್ವತಂತ್ರ ಸಾಕ್ಷಿಗಳು ಭಾಗಿಯಾಗಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ. ಪ್ರತಿ ಸಾಕ್ಷಿಯ ಗುರುತು ಅಕ್ಟೋಬರ್ 2 ರವರೆಗೆ ಏಜೆನ್ಸಿಗೆ ತಿಳಿದಿರಲಿಲ್ಲ.

NCBಯಿಂದ ಮಗನ ಕಾಪಾಡಲು ವಾಟ್ಸಾಪ್ ಬ್ಲಾಕ್ ಮಾಡ್ಸಿದ್ರಾ ಶಾರೂಖ್ ?

ಎನ್‌ಸಿಬಿ ವ್ಯಕ್ತಿಯ ಜಾತಿ, ಧರ್ಮ ಅಥವಾ ರಾಜಕೀಯ ಪಕ್ಷದ ಆಧಾರದ ಮೇಲೆ ಬಂಧನ ಮಾಡುವುದಿಲ್ಲ. ನಾವು ಸಾಕ್ಷ್ಯದ ಆಧಾರದಲ್ಲಿ ಜನರನ್ನು ಬಂಧಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"

ಇತ್ತೀಚೆಗಷ್ಟೇ ಮಗನ ಬಂಧನದ ನಂತರ ಶಾರೂಖ್ ಖಾನ್ ಅವರ ಬೈಜೂಸ್ ಜಾಹಿರಾತು ಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ನಟನ ಮಗನ ಬಂಧನದ ಕುರಿತು ಭಾರೀ ಟ್ರೋಲ್ ಆದ ನಂತರ ಈ ಬೆಳವಣಿಗೆ ನಡೆದಿದೆ.