ಸುಶಾಂತ್ ಪರ ವಾದಿಸಿದ್ದ ಲಾಯರ್‌ನಿಂದ ಆರ್ಯನ್‌ಗೆ ಸಪೋರ್ಟ್
ಸುಶಾಂತ್ ಸಿಂಗ್ ಪರ ವಾದಿಸಿದ್ದ ವಕೀಲರಿಂದ ಆರ್ಯನ್‌ಗೆ ಸಪೋರ್ಟ್ ಆರ್ಯನ್ ಖಾನ್ ಕೇಸ್ ಕುರಿತು ಮಾತನಾಡಿದ ಸುಶಾಂತ್ ಸಿಂಗ್

ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಇತ್ತೀಚೆಗೆ ಮುಂಬೈ ಕ್ರೂಸ್ ಡ್ರಗ್ ಪ್ರಕರಣದಲ್ಲಿ ಎನ್‌ಸಿಬಿಯಿಂದ ಅರೆಸ್ಟ್ ಆಗಿದ್ದಾರೆ.
ಅಕ್ಟೋಬರ್ 7 ರಂದು, ಆರ್ಯನ್‌ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಅದಕ್ಕೂ ಮೊದಲು ಆರ್ಯನ್ ಎನ್ಸಿಬಿಯ ವಿಚಾರಣೆಯಲ್ಲಿದ್ದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ವಕೀಲ ವಿಕಾಸ್ ಸಿಂಗ್ ಈಗ ಆರ್ಯನ್ ಅವರ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ್ದಾರೆ.
ಅವರು ಈ ಪ್ರಕರಣ ಸಂಪೂರ್ಣ ಮಾದಕದ್ರವ್ಯ ಔಷಧಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಇಟ್ಟುಕೊಂಡಿರುವುದನ್ನು ಆಧರಿಸಿದೆ ಎಂದು ಹೇಳಿದ್ದಾರೆ. ಯಾವುದೇ ಮಾದಕ ವಸ್ತು ಇಲ್ಲದಿದ್ದರೆ, ಯಾವುದೇ ಅಪರಾಧವಿಲ್ಲ ಎಂದಿದ್ದಾರೆ.
ಆರ್ಯನ್ ಖಾನ್‌ನನ್ನು ಎನ್‌ಸಿಬಿ ಬಂಧಿಸಿದ್ದು ಶಾರೂಖ್ ಪುತ್ರ ಸೇರಿದಂತೆ 10ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಮುಂಬೈನಿಂದ ಗೋವಾಗೆ ಪ್ರಯಾಣಿಸುವ ಐಷರಾಮಿ ಹಡಗಿನಲ್ಲಿ ಪಾರ್ಟಿ ನಡೆದಿದೆ
ಎನ್‌ಸಿಬಿ ದಾಳಿ ನಡೆಸಿದ್ದು ಬಹಳಷ್ಟು ಡ್ರಗ್ಸ್ ಹಾಗೆಯೇ ನಗದನ್ನೂ ವಶಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈಗ ಆರ್ಯನ್ ಅಲ್ಲಿಗೆ ಗೆಸ್ಟ್ ಆಗಿ ಹೋಗಿದ್ದ ಎಂದೂ ಹೇಳಲಾಗುತ್ತಿದೆ
ಪ್ರೀತಿಯ ಮಗನನ್ನು ಜೈಲಿನಿಂದ ಹೊರಗೆ ತರಲು ಶಾರೂಖ್ ಖಾನ್ ಇನ್ನಿಲ್ಲದಂತೆ ಓಡಾಡುತ್ತಿದ್ದು ಬಹಳಷ್ಟು ಜನ ಅಭಿಮಾನಿಗಳು ಶಾರೂಖ್‌ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.