Asianet Suvarna News Asianet Suvarna News

ಅವರು ಯಾವತ್ತೂ ನನಗೆ ಪ್ರಮುಖ ಪಾತ್ರ ನೀಡಿಲ್ಲ; ಖ್ಯಾತ ನಿರ್ದೇಶಕನ ವಿರುದ್ಧ ನೀನಾ ಗುಪ್ತ ಅಸಮಾಧಾನ

ಶ್ಯಾಮ ಬೆನಗಲ್ ಯಾವತ್ತು ನನಗೆ ಪ್ರಮುಖ ಪಾತ್ರಗಳನ್ನು ನೀಡಿಲ್ಲ ಎಂದು ಖ್ಯಾತ ನಟಿ ನೀನಾ ಗುಪ್ತಾ ಆರೋಪಿಸಿದ್ದಾರೆ. 

Neena Gupta says director Shyam Benegal never gave her a major role sgk
Author
First Published Feb 12, 2023, 12:11 PM IST

ಬಾಲಿವುಡ್ ಖ್ಯಾತ ನಟಿ ನೀನಾ ಗುಪ್ತಾ ಸದ್ಯ ಉತ್ತಮ ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನೀನಾ ಗುಪ್ತಾ ಇತ್ತೀಚಿಗಷ್ಟೆ ಖ್ಯಾತ ನಿರ್ದೇಶಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಜನಪ್ರಿಯ ನಿರ್ದೇಶಕ ಶ್ಯಾಮ್ ಬೆನಗಲ್ ಬಗ್ಗೆ ಮಾತನಾಡಿರುವ ನೀನಾ ಗುಪ್ತಾ ಅವರು ಯಾವತ್ತೂ ತನಗೆ ಪ್ರಮುಖ ಪಾತ್ರಗಳನ್ನು ನೀಡಿಲ್ಲ ಎಂದು ಆರೋಪಿಸಿದ್ದಾರೆ. ಶ್ಯಾಮ್ ಬೆನಗಲ್ ಅವರ 3 ಸಿನಿಮಾಗಳಲ್ಲಿ ನೀನಾ ಗುಪ್ತಾ ನಟಿಸಿದ್ದಾರೆ. 1983ರಲ್ಲಿ ಬಂದ ಮಂಡಿ, 1985ರಲ್ಲಿ ರಿಲೀಸ್ ಆದ ತ್ರಿಕಲ್ ಮತ್ತು 1992ರಲ್ಲಿ ಬಂದ ಸೂರಜ್ ಕಾ ಸತ್ವನ್ ಘೋಡಾ  ಚಿತ್ರದಲ್ಲಿ ನೀನಾ ನಟಿಸಿದ್ದಾರೆ.  1980 ಮತ್ತು 1990 ರ ದಶಕದಲ್ಲಿ ಪ್ರಮುಖ ಪಾತ್ರಗಳನ್ನು ಪಡೆಯುವುದು ತುಂಬಾ ಕಷ್ಟವಾಗಿತ್ತು ಎಂದು ನೀನಾ ಹೇಳಿದ್ದಾರೆ. 

ಸಿನಿಮಾ ನಿರ್ದೇಶಕರು ತಮ್ಮ ಸಿನಿಮಾಗಳಿಗೆ  ಬೇಡಿಕೆ ಇರುವ ಮುಖಗಳನ್ನು ಮಾತ್ರ ಆಯ್ಕೆ ಮಾಡುತ್ತಿದ್ದರು ಎಂದು ನೀನಾ ಹೇಳಿದರು. ಪಿಟಿಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ನೀನಾ ಗುಪ್ತಾ, 'ಕಮರ್ಷಿಯಲ್ ಸಿನಿಮಾದಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರನ್ನು ಭೇಟಿಯಾಗುವ ಅವಕಾಶವಿರಲಿಲ್ಲ. ಮುಖ್ಯ ಪಾತ್ರಗಳು ಶಬಾನಾ ಅಜ್ಮಿ, ಸ್ಮಿತಾ ಪಾಟೀಲ್, ದೀಪ್ತಿ ಅವರಿಗೆ ಹೋಗುತ್ತಿತ್ತು.  ಅಲ್ಲಿ ನನಗೆ ಅವಕಾಶ ಇರಲಿಲ್ಲ. ಶ್ಯಾಮ್ ಬೆನಗಲ್ ನನಗೆ ಎಂದಿಗೂ ಪ್ರಮುಖ ಪಾತ್ರವನ್ನು ನೀಡಲಿಲ್ಲ. ಅವರ ಚಿತ್ರಗಳಲ್ಲಿ ನಾನು ಯಾವಾಗಲೂ ಚಿಕ್ಕ ಪಾತ್ರಗಳನ್ನೇ ಮಾಡಿದ್ದೀನಿ. ಹಾಗಾಗಿ ಕಮರ್ಷಿಯಲ್ ಸಿನಿಮಾದಲ್ಲೂ ನನಗೆ ಇದೇ ಪರಿಸ್ಥಿತಿ ಇತ್ತು. ಇದು ವ್ಯಾಪಾರವಾಗಿದೆ ಅಷ್ಟೆ. ಅವರು ಬೇಡಿಕೆ ಇರುವ ಮುಖವನ್ನು ಮಾತ್ರ ಆಯ್ಕೆ ಮಾಡಲು ಬಯಸುತ್ತಾರೆ' ಎಂದು ಹೇಳಿದರು. 

ಸಾಲ ಪಡೆದು ಮಗನನ್ನು ವಿದೇಶಕ್ಕೆ ಕಳುಹಿಸಿ ಸಂಕಷ್ಟದಲ್ಲಿ ಸಿಲುಕಿಕೊಂಡ ನಟಿ ನೀನಾ ಗುಪ್ತಾ; ಇದು ವಧ ಕತೆ

ಇಷ್ಟವಿಲ್ಲದ ಪಾತ್ರಗಳ ಬಗ್ಗೆ ನೀನಾ ಮಾತು 

ತನಗೆ ಇಷ್ಟವಿಲ್ಲದ ಪಾತ್ರಗಳ ಬಗ್ಗೆ ಮಾತನಾಡಿದ ನೀನಾ, 'ನಾನು ಸ್ಟೀರಿಯೊಟೈಪಿಕಲ್ ಪಾತ್ರಗಳನ್ನು ಬೇಡ ಎಂದು ಹೇಳುತ್ತೇನೆ ಮತ್ತು ತಾಯಿಯ ಪಾತ್ರಗಳನ್ನು ಕೂಡ. ಜನರು ವಿಭಿನ್ನ ಸ್ಥಳಗಳಲ್ಲಿ ಮಹಿಳೆಯರನ್ನು ನೋಡುತ್ತಿರುವುದು ಒಳ್ಳೆಯದು' ಎಂದು ಹೇಳಿದರು.

ನೀನಾ ಅನೇಕ ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಂಡಿ (1983), ಜಾನೆ ಭಿ ದೋ ಯಾರೋನ್ (1983), ಮಿರ್ಜಾ ಗಾಲಿಬ್ (1988ರಲ್ಲಿ ಬಂದ ಧಾರಾವಾಹಿ), ತ್ರಿಕಲ್ (1985), ಸೂರಜ್ ಕಾ ಸತ್ವನ್ ಘೋಡಾ (1992), ದರ್ದ್ (ಧಾರಾವಾಹಿ 1993), ಬಧಾಯಿ ಹೋ (2018) , ದಿ ಲಾಸ್ಟ್ ಕಲರ್ (2019), ಗುಡ್‌ಬೈ (2022), ಸಂದೀಪ್ ಔರ್ ಪಿಂಕಿ ಫರಾರ್ (2021), ಪಂಚಾಯತ್ (ವೆಬ್ ಸರಣಿ 2020), ಮತ್ತು ಮಸಾಬಾ ಮಸಾಬಾ (ವೆಬ್ ಸರಣಿ 2020) ಇನ್ನು ಅನೇಕ ಸಿನಿಮಾ, ಧರಾವಾಹಿ ಮತ್ತು ವೆಬ್ ಸೀರಿಸ್ ಗಳಲ್ಲಿ ಮಿಂಚಿದ್ದಾರೆ. 

ವಿವಿಯನ್ ರಿಚರ್ಡ್ಸ್‌ ಮೂಗು ಪಡೆದ ಖುಷಿ ಮಾತ್ರವಲ್ಲ ಜೀವನಕ್ಕೆ ಸಪೋರ್ಟ್ ಸಿಕ್ಕಿದೆ; ತಂದೆ ಬಗ್ಗೆ ಮಸಾಬಾ ಭಾವನಾತ್ಮಕ ಪೋಸ್ಟ್‌

ನೀನಾ ಕೊನೆಯದಾಗಿ ಅಜಯನ್ ವೇಣುಗೋಪಾಲನ್ ಅವರ ಶಿವಶಾಸ್ತ್ರಿ ಬಲ್ಬೋವಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಅನುಪಮ್ ಖೇರ್, ಜುಗಲ್ ಹಂಸರಾಜ್, ನರ್ಗೀಸ್ ಫಕ್ರಿ ಮತ್ತು ಶರೀಬ್ ಹಶ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಸದ್ಯ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

Follow Us:
Download App:
  • android
  • ios