ತಮ್ಮವರ ಮೇಲೆಯೇ ಈ ಪರಿ ಹಿಂಸಾಚಾರ, ಇನ್ನು... ಎನ್ನುತ್ತಲೇ ಸನಾತನ ಧರ್ಮದ ಮಹತ್ವ ತಿಳಿಸಿದ ಕಂಗನಾ

ಮುಸ್ಲಿಂ ರಾಷ್ಟ್ರ ಬಾಂಗ್ಲಾದೇಶದಲ್ಲಿ ಆಗುತ್ತಿರುವ ಹಿಂಸಾಚಾರದಿಂದ ಪ್ರಧಾನಿ ಶೇಖ್​ ಹಸೀನಾ ಅವರು ಭಾರತಕ್ಕೆ ರಕ್ಷಣೆಗೆಂದು ಬಂದಿರುವ ವಿಷಯ ಉಲ್ಲೇಖಿಸುತ್ತಲೇ ಸನಾತನ  ಧರ್ಮದ ಮಹತ್ವ ತಿಳಿಸಿದ್ದಾರೆ ನಟಿ, ಸಂಸದೆ ಕಂಗನಾ ರಣಾವತ್​ 
 

Need to spread Sanatan Dharma to stop Bangladesh-like situation says Kangana Ranaut suc

ಮುಸ್ಲಿಂ ರಾಷ್ಟ್ರದಲ್ಲಿಯೇ ಇಂದು ಮುಸ್ಲಿಮರೇ ಸೇಫ್​ ಆಗಿಲ್ಲ ಎನ್ನುವುದಕ್ಕೆ ಬಾಂಗ್ಲಾದೇಶಕ್ಕಿಂತ ಬೇರೊಂದು ಉದಾಹರಣೆ ಬೇಕಿಲ್ಲ. ಅಲ್ಲಿನ ಪ್ರಧಾನಿಯೇ ಪಲಾಯನ ಮಾಡುವಂಥ ಸ್ಥಿತಿ ಬಾಂಗ್ಲಾದೇಶದಲ್ಲಿ ತಂದೊಡ್ಡಿದ್ದು ಯಾರು ಎಂದು ನಮ್ಮ ಕಣ್ಣಮುಂದೆಯೇ ಇದೆ. ಇದು ಕೇವಲ ಬಾಂಗ್ಲಾದ ಮಾತಲ್ಲ, ಈ ಹಿಂದೆಯೂ ಮುಸ್ಲಿಂ ರಾಷ್ಟ್ರಗಳಲ್ಲಿನ ಸ್ಥಿತಿ ನೋಡಿದ್ದೇವೆ ಎನ್ನುತ್ತಲೇ ಭಾರತ ಮತ್ತು ಸನಾತನ ಧರ್ಮದ ಬಗ್ಗೆ ಈಗಲಾದ್ರೂ ಅರ್ಥ ಮಾಡಿಕೊಳ್ಳಿ ಎಂದು ಹೇಳಿದ್ದಾರೆ ನಟಿ, ಸಂಸದೆ ಕಂಗನಾ ರಣಾವತ್​. ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿಯನ್ನು ತಡೆಗಟ್ಟಲು, ನಾವು ಸನಾತನ ಧರ್ಮವನ್ನು ಅಳವಡಿಸಿಕೊಳ್ಳಬೇಕು. ಬಾಂಗ್ಲಾದೇಶದ ಪ್ರಕ್ಷುಬ್ಧ ಇತಿಹಾಸದಿಂದ ಭಾರತ ಕಲಿಯಬೇಕು ಮತ್ತು ಸನಾತನ ಧರ್ಮವನ್ನು ಸಕ್ರಿಯವಾಗಿ ಪ್ರಚಾರ ಮಾಡಬೇಕು. ಭಾರತದ ಪ್ರಾಚೀನ ಅಧ್ಯಾತ್ಮಿಕ ಸಂಪ್ರದಾಯವು ನಿಖರವಾಗಿ ಏನನ್ನು ಒಳಗೊಂಡಿದೆ ಎಂಬ ಬಗ್ಗೆ ಇನ್ನಾದರೂ ಭಾರತೀಯರು ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಕಂಗನಾ ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿರುವ ಕಂಗನಾ ರಣಾವತ್​ ಅವರು,  ಹಿಮಾಚಲ ಪ್ರದೇಶದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಮಾಧ್ಯಮಗಳೊಂದಿಗೆ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ. ಇದರ ಬಗ್ಗೆ ತಮ್ಮ ಸೋಷಿಯಲ್​ ಮೀಡಿಯಾದಲ್ಲಿಯೂ ಬರೆದುಕೊಂಡಿದ್ದಾರೆ. ಮುಸ್ಲಿಂ ದೇಶವಾಗಿರುವ ಬಾಂಗ್ಲಾದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿಯಾದರೂ ಕಲಿಯಬೇಕು ಮತ್ತು ಸನಾತನ ಧರ್ಮವನ್ನು ಅನುಸರಿಸಬೇಕು ಮತ್ತು ಭಾರತದಲ್ಲಿ ಅಂತಹ ಪರಿಸ್ಥಿತಿಯನ್ನು ತಪ್ಪಿಸಲು ಸನಾತನ ಧರ್ಮದ ಪ್ರಸಾರ ದೊಡ್ಡ ಮಟ್ಟದಲ್ಲಿ ಆಗಬೇಕು ಎಂದು ಕಂಗನಾ ಹೇಳಿದ್ದಾರೆ.

ಸಂಸತ್ತಿಗೆ ಬರುವ ಮೊದಲು ರಾಹುಲ್​ ಗಾಂಧಿ ಪರೀಕ್ಷೆ ನಡೆಸಿ ಎಂದ ಕಂಗನಾ! ಏನಿದು ಹೊಸ ವರಸೆ?

 ಇದೇ ವೇಳೆ ಬಾಂಗ್ಲಾದೇಶದ ಪ್ರಧಾನಿ ಶೇಖ್​ ಹಸೀನಾ ಅವರು ಭಾರತಕ್ಕೆ ರಕ್ಷಣೆಗಾಗಿ ಬಂದಿರುವ ಬಗ್ಗೆ ವಿಶ್ಲೇಷಿಸಿರುವ ಕಂಗನಾ,  "ಭಾರತವು ನಮ್ಮ ಸುತ್ತಮುತ್ತಲಿನ ಎಲ್ಲಾ ಇಸ್ಲಾಮಿಕ್ ಗಣರಾಜ್ಯಗಳ ಮೂಲ ತಾಯಿನಾಡು.  ಬಾಂಗ್ಲಾದೇಶದ ಪ್ರಧಾನ ಮಂತ್ರಿಗೆ ಮಾತ್ರವಲ್ಲದೇ  ಭಾರತದಲ್ಲಿ  ವಾಸಿಸುವ ಎಲ್ಲರಿಗೂ ಈ ತಾಯಿನಾಡು ಸುರಕ್ಷಿತ ವಾತಾವರಣವನ್ನು ಕಲ್ಪಿಸುತ್ತಿದೆ.  ಭಾರತ ಏಕೆ ಹಿಂದೂ ರಾಷ್ಟ್ರ ಎಂದು ಕೇಳುವವರಿಗೆ ಇದು ಉತ್ತರವಾಗಿದೆ ಎನ್ನುತ್ತಲೇ ರಾಮರಾಜ್ಯದ ಕುರಿತೂ ಕಂಗನಾ ಹೇಳಿದ್ದಾರೆ.  ಮುಸ್ಲಿಂ ರಾಷ್ಟ್ರಗಳಲ್ಲಿ ಬೇರೆ ಧರ್ಮದವರಷ್ಟೇ ಅಲ್ಲ, ಖುದ್ದು ಮುಸ್ಲಿಮರೇ  ಸುರಕ್ಷಿತವಾಗಿಲ್ಲ. ಅದಕ್ಕಾಗಿಯೇ  ರಾಮರಾಜ್ಯ ಏಕೆ ಬೇಕು ಎನ್ನುವುದು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು. ದುರದೃಷ್ಟವಶಾತ್ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ನೋಡಿ ಕಣ್ಣು ತೆರೆಯಿರಿ, ಭಾರತದಲ್ಲಿ ಬದುಕುತ್ತಿರುವ ನಾವೇ  ಅದೃಷ್ಟವಂತರು ಎನ್ನುವುದು ತಿಳಿದುಕೊಳ್ಳಬೇಕಿದೆ ಎಂದು ಸಂಸದೆ ಹೇಳಿದ್ದಾರೆ. 

ಕಂಗನಾ ರಣಾವತ್ ಅವರು 'ಹಿಂದೂ ರಾಷ್ಟ್ರ'ದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ  ಅವರು 2014 ರಲ್ಲಿ ಭಾರತ ಸ್ವತಂತ್ರವಾಯಿತು ಎಂದು ಹೇಳಿಕೆ ನೀಡುವ ಮೂಲಕ ಟೀಕೆಗೆ ಗುರಿಯಾಗಿದ್ದರೂ ಇದೆ. ಪ್ರಧಾನಿಯಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾದ ಮೇಲೆ ಹಿಂದೂ ರಾಷ್ಟ್ರವಾಗಿದೆ ಎನ್ನುವುದು ಅವರ ಮಾತಿನ ಅರ್ಥವಾಗಿತ್ತು.  "ನಮ್ಮ ಪೂರ್ವಜರು ಮೊಘಲರ ಅಡಿಯಲ್ಲಿ ಶತಮಾನಗಳ ಗುಲಾಮಗಿರಿಯನ್ನು ಅನುಭವಿಸಿದರು. 1947 ರ ನಂತರ ದೇಶವು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾದಾಗ, ಹಲವಾರು ದಶಕಗಳಿಂದ ಕಾಂಗ್ರೆಸ್​ ದುರಾಡಳಿತವಾಗಿತ್ತು. ನಿಜವಾದ ಅರ್ಥದಲ್ಲಿ, 2014 ರಲ್ಲಿ ಸ್ವಾತಂತ್ರ್ಯವನ್ನು ಗಳಿಸಿತು. ಇದು ಸನಾತನ ಸಂಸ್ಥೆಗೆ ಮಾತ್ರವಲ್ಲದೆ ನಮ್ಮ ಸ್ವಂತ ಧರ್ಮವನ್ನು ಆಚರಿಸಲು ಮತ್ತು ನಿರ್ಭಯವಾಗಿ ಪ್ರದರ್ಶಿಸಲು ಮತ್ತು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ದೃಷ್ಟಿಗೆ ಸ್ವಾತಂತ್ರ್ಯವನ್ನು ನೀಡಿದೆ ಎಂದು ಹೇಳಿದ್ದರು.  

'ಸಮಾಧಿ ಅಗೆಯುವ' ಸ್ಲೋಗನ್​ ಮೂಲಕ ವಿನೇಶ್ ಫೋಗಟ್​ಗೆ ಕಂಗನಾ ಕೊಟ್ಟ ಪ್ರತಿಕ್ರಿಯೆ ಹೀಗಿದೆ...

Latest Videos
Follow Us:
Download App:
  • android
  • ios