ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಮಾಡುತ್ತಿರುವ ಭಾಷಣಗಳಿಗೆ ಪ್ರತಿಕ್ರಿಯೆ ನೀಡಿರುವ ಕಂಗನಾ ರಣಾವತ್ ರಾಹುಲ್ ವಿರುದ್ಧ ಹೀಗೆಲ್ಲಾ ಮಾತನಾಡುವುದಾ?
ಸಂಸತ್ತಿನ ಅಧಿವೇಶನ ಆರಂಭದಿಂದಲೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಲು ಜೋಶ್ನಿಂದ ಭಾಷಣ ಮಾಡುತ್ತಿದ್ದಾರೆ. ಆಡಳಿತಾರೂಢ ಬಿಜೆಪಿ ವಿರುದ್ಧ ಹರಿಹಾಯುತ್ತಿದ್ದಾರೆ. ಭಾಷಣದ ಭರದಲ್ಲಿ ಹಿಂದೂ ದೇವತೆಗಳನ್ನು ಎಳೆದು ತಂದಿದ್ದಾರೆ. ಬಜೆಟ್ ಪೂರ್ವದಲ್ಲಿ ಬಜೆಟ್ ತಯಾರು ಮಾಡುವ ಸಿಬ್ಬಂದಿಗೆ ಸಿಹಿ ಹಂಚುವ ಹಲ್ವಾ ತಲೆತಲಾಂತರಗಳಿಂದ ಬಂದ ಸಂಪ್ರದಾಯವನ್ನೇ ಪ್ರಶ್ನೆ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತಮ್ಮದೇ ಕ್ಷೇತ್ರವಾಗಿರುವ ಕೇರಳದ ವಯನಾಡಿನ ಜನ ಅಕ್ಷರಶಃ ನಲುಗಿರುವ ಈ ಪರಿಸ್ಥಿತಿಯಲ್ಲಿ ಅಲ್ಲಿಗೆ ಭೇಟಿ ಕೊಡದೇ ಮತ್ತಷ್ಟು ಟೀಕೆಗೆ ಒಳಗಾಗುತ್ತಿದ್ದಾರೆ. ಇವುಗಳ ನಡುವೆಯೇ, ಪ್ರಧಾನಿ, ದೇಶ, ದೇವರು... ಹೀಗೆ ಎಲ್ಲರ ವಿರುದ್ಧವೂ ಹರಿಹಾಯುತ್ತಿದ್ದಾರೆ. ಮೊನ್ನೆ ನಡೆದ ಕಲಾಪದ ಸಂದರ್ಭದಲ್ಲಿ 'ದೇಶವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಲಾಗಿದೆ' ಎಂದು ಆರೋಪಿಸಿ ಭಾಷಣ ಮಾಡಿದ್ದರು.
ಇವೆಲ್ಲ ಭಾಷಣಗಳಿಗೆ ಕಾಂಟ್ರವರ್ಸಿ ನಟಿ ಎಂದೇ ಫೇಮಸ್ ಆಗಿರೋ ಸಂಸದೆ ಕಂಗನಾ ರಣಾವತ್ ತೀಕ್ಷ್ಣ ಪ್ರತಿಕ್ರಿಯೆ ನೀಡುವ ಮೂಲಕ ವಿವಾದಾತ್ಮಕ ಎನಿಸಿರುವ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಅವರು ಬಹುಶಃ ಡ್ರಗ್ಸ್ ಸೇವನೆ ಮಾಡಿ ಸಂಸತ್ತಿಗೆ ಬರುತ್ತಾರೆ ಎನ್ನಿಸುತ್ತಿದೆ. ಇವರು ಸಂಸತ್ತಿನ ಒಳಗೆ ಪ್ರವೇಶಿಸುವ ಮೊದಲು ಪರೀಕ್ಷೆ ನಡೆಸಬೇಕಿದೆ ಎಂದು ಹೇಳಿಕೆ ನೀಡಿದ್ದಾರೆ! ರಾಹುಲ್ ಅವರು ಅರ್ಥವಿಲ್ಲದ ಮಾತನಾಡುತ್ತಿದ್ದಾರೆ. ಅವರನ್ನು ತಪಾಸಣೆಗೆ ಒಳಪಡಿಸಬೇಕಿದೆ. ಪ್ರಧಾನಿ ವಿರುದ್ಧ ಇಲ್ಲಸಲ್ಲದ್ದನ್ನು ಹೇಳುತ್ತಿದ್ದಾರೆ. ಅಷ್ಟಕ್ಕೂ ಪ್ರಧಾನಿ ಹುದ್ದೆಯನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡುವುದು ಎನ್ನುವುದು ಅವರಿಗೆ ತಿಳಿದಿಲ್ಲವೆ? ಇಡೀ ದೇಶ ಪ್ರಧಾನಿ ಅವರನ್ನು ಆಯ್ಕೆ ಮಾಡುತ್ತದೆ. ಪ್ರಭಾಪ್ರಭುತ್ವ, ಸಂವಿಧಾನ ಎಂದರೇನು ಎಂದು ರಾಹುಲ್ ಗಾಂಧಿ ಅವರಿಗೆ ತಿಳಿದಿಲ್ಲವೆ ಎಂದು ಕಂಗನಾ ವ್ಯಂಗ್ಯವಾಡಿದ್ದಾರೆ.
ಕಂಗನಾ ಸ್ನೇಹ ವಿವರಿಸುತ್ತಲೇ ಮದುವೆ ವಿಷಯ ತಿಳಿಸಿದ ತರುಣಿಯರ ಕ್ರಷ್ ಸಂಸದ ಚಿರಾಗ್ ಪಾಸ್ವಾನ್!
ಸಂಸತ್ತಿನಲ್ಲಿ ಬರೀ ಹಾಸ್ಯಾಸ್ಪದ ಭಾಷಣ ಮಾಡುತ್ತಿದ್ದಾರೆ ರಾಹುಲ್ ಗಾಂಧಿ. ಹಲ್ವಾ ಸಂಪ್ರದಾಯವನ್ನೂ ಟೀಕಿಸಿದರು. ಶಿವನನ್ನು ಎಳೆದು ತಂದರು. ಅವರಿಗೆ ನೀತಿ ನಿಯಮಗಳ ಅರಿವಿಲ್ಲ. ಲೋಕಸಭೆಯಲ್ಲಿ ತಮ್ಮನ್ನು ತಾವು ಈಶ್ವರನ ದೇಶದವರು ಎಂತಲೂ, ಬಿಜೆಪಿಯವರು ಚಕ್ರವ್ಯೂಹ ರಚಿಸಿದ್ದಾರೆ ಎಂದೂ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿ ಕಾರಿರುವ ಕಂಗನಾ, ಪ್ರಧಾನ ಮಂತ್ರಿಯನ್ನು ಲಿಂಗ, ವಯಸ್ಸು, ಸಾಮಾಜಿಕ ಸ್ಥಾನಮಾನ ಅಥವಾ ಜಾತಿಯ ಆಧಾರದ ಮೇಲೆ ಆಯ್ಕೆ ಮಾಡುವುದಿಲ್ಲ ಎನ್ನುವ ಕನಿಷ್ಠ ತಿಳಿವಳಿಕೆಯೂ ಅವರಲ್ಲಿ ಇಲ್ಲವೆ? ಈ ರೀತಿ ಇಲ್ಲಸಲ್ಲದ ಹೇಳಿಕೆ ನೀಡುವ ಮೂಲಕ ರಾಹುಲ್ ಅವರು ಸಂವಿಧಾನವನ್ನು ನಿರಂತರವಾಗಿ ಅವಮಾನಿಸುತ್ತಿದ್ದಾರೆ. ಮುಂದೊಂದು ದಿನ ಅವರು ಪ್ರಧಾನಿಯನ್ನು ಚರ್ಮದ ಬಣ್ಣದ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರೂ ಹೇಳಿಯಾರು ಎಂದು ಕಟುವಾಗಿ ಟೀಕಿಸಿದ್ದಾರೆ.
ನಾನು ಹೊಸದಾಗಿ ಬಂದಿರುವ ಸಂಸದೆ. ಆದರೆ ಅವರಿಗೆ ಮೊದಲಿನಿಂದಲೂ ಇಲ್ಲಿಯ ನೀತಿ-ನಿಯಮಗಳ ಅರಿವು ಇರಬೇಕು. ಹೊಸದಾಗಿ ಬಂದಿರುವ ನಾನೇ ಸಂಸತ್ತಿನ ಸಂಪೂರ್ಣ ರೂಲ್ಸ್ ತಿಳಿದುಕೊಂಡಿರುವೆ. ಆದರೆ ಎಲ್ಲಿ ಏನು ಮಾತನಾಡಬೇಕು ಎನ್ನುವ ತಿಳಿವಳಿಕೆ ಇಲ್ಲದವರು ಸುಮ್ಮನೇ ಹೇಳಿಕೆ ನೀಡಲು ಸಾಧ್ಯವೇ ಇಲ್ಲ. ಬಹುಶಃ ಅವರು ಡ್ರಗ್ಸ್ ಇಲ್ಲವೇ ಮಾದಕ ದ್ರವ್ಯ ಸೇವನೆ ಮಾಡಿಕೊಂಡೇ ಸಂಸತ್ತನ್ನು ಪ್ರವೇಶ ಮಾಡುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿದೆ. ದಯವಿಟ್ಟು ಅವರು ಸಂಸತ್ತನ್ನು ಪ್ರವೇಶಿಸುವ ಪೂರ್ವದಲ್ಲಿ ಅವರ ಪರೀಕ್ಷೆ ಮಾಡಿಸಿದರೆ ಉತ್ತಮ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಕಂಗನಾ.
ಹೈಕೋರ್ಟ್ನಿಂದ ಸಂಸದೆ ಕಂಗನಾಗೆ ನೋಟಿಸ್: ಸಂಸದೆ ಸ್ಥಾನಕ್ಕೆ ಎದುರಾಯ್ತಾ ಸಂಕಟ?
