ಬಾಲಿವುಡ್ ನಟಿ ಅನನ್ಯಾ ಪಾಂಡೆ ಮನೆಗೆ ಎನ್‌ಸಿಬಿ ರೈಡ್ ಶಾರೂಖ್ ಖಾನ್ ಮನೆ ಮನ್ನತ್‌ಗೂ ದಾಳಿ ಮಾಡಿದ ಅಧಿಕಾರಿಗಳು

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ತಂಡಗಳು ಶಾರುಖ್ ಖಾನ್(Shah Rukh Khan) ಅವರ ಬಾಂದ್ರಾ ನಿವಾಸ 'ಮನ್ನತ್' ಮತ್ತು ನಟಿ ಅನನ್ಯ ಪಾಂಡೆ ಅವರ ನಿವಾಸದ ಮೇಲೆ ರೈಡ್ ಮಾಡಿದೆ.

"

ಮುಂಬೈನ(Mumbai) ಅಂಧೇರಿ ಪ್ರದೇಶದಲ್ಲಿ ಎನ್‌ಸಿಬಿ ತಂಡಗಳು ಗುರುವಾರ ದಾಳಿ ನಡೆಸಿ, ಮುಂಬೈ ಕ್ರೂಸ್ ಡ್ರಗ್ಸ್ ಬಸ್ಟ್ ಪ್ರಕರಣದ ಆರೋಪಿಗಳಲ್ಲಿ ಒಬ್ಬರಿಂದ ಹಿಂಟ್ ಪಡೆದು ಈ ರೈಡ್ ನಡೆಸಿವೆ ಎನ್ನಲಾಗಿದೆ. ಎನ್‌ಸಿಬಿ ತಂಡವು ಮುಂಬಯಿ ಖಾರ್ ವೆಸ್ಟ್‌ನಲ್ಲಿರುವ ಅನನ್ಯ ಪಾಂಡೆ ಮತ್ತು ಚಂಕಿ ಪಾಂಡೆ ಅವರ ನಿವಾಸವನ್ನು ತಲುಪಿದ್ದಾರೆ. ಅನನ್ಯ ಪಾಂಡೆಗೆ ಇಂದು ಮಧ್ಯಾಹ್ನ 2 ಗಂಟೆಗೆ ಎನ್‌ಸಿಬಿ ಸಮನ್ಸ್ ನೀಡಿದೆ.

ಗುರುವಾರ ಆರ್ಥರ್ ರೋಡ್ ಜೈಲಿನಲ್ಲಿರುವ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಭೇಟಿ ಮಾಡಿದ ನಂತರ ಎನ್‌ಸಿಬಿ ತಂಡವು ಶಾರುಖ್ ಖಾನ್ ಅವರ ನಿವಾಸ ಮನ್ನತ್‌ಗೆ ದಾಳಿ ಮಾಡಿದೆ.

ಅರೆಸ್ಟ್ ನಂತರ ಮೊದಲಬಾರಿ ಜೈಲಿನಲ್ಲಿ ಮಗನ ಭೇಟಿಯಾದ ಶಾರೂಖ್ ಖಾನ್

ಬುಧವಾರ ಮುಂಬೈ ವಿಶೇಷ ನ್ಯಾಯಾಲಯವು ಆರ್ಯನ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆರ್ಯನ್ ಖಾನ್ ಮತ್ತು 8 ಇತರರನ್ನು ಅಕ್ಟೋಬರ್ 3 ರಂದು ಬಂಧಿಸಲಾಯಿತು. ಮುಂಬೈ ಕರಾವಳಿಯಲ್ಲಿ ಕಾರ್ಡೆಲಿಯಾ ಕ್ರೂಸ್ ಹಡಗಿನ ಮೇಲೆ ಎನ್‌ಸಿಬಿ ದಾಳಿ ನಡೆಸಿದ ನಂತರ ಬಂಧಿಸಲಾಯಿತು.

ಆರ್ಯನ್ ಖಾನ್ ಜಾಮೀನು ಪಡೆಯಲು ಬಾಂಬೆ ಹೈಕೋರ್ಟ್ ಮೊರೆ ಹೋದರು. ಅಕ್ಟೋಬರ್ 26 ರಂದು ಜಾಮೀನು ಅರ್ಜಿಯನ್ನು ಆಲಿಸುವುದಾಗಿ ಹೈಕೋರ್ಟ್ ಹೇಳಿದೆ. ಆರ್ಯನ್ ಖಾನ್ ಅವರ ವಕೀಲ ಸತೀಶ್ ಮಾನ್‌ಶಿಂಧೆ ಅವರು ಶುಕ್ರವಾರ ತುರ್ತು ವಿಚಾರಣೆಗೆ ಕೋರಿ ನ್ಯಾಯಮೂರ್ತಿ ಎನ್ ಡಬ್ಲ್ಯು ಸಾಂಬ್ರೆ ಅವರ ಏಕ ಪೀಠದ ಮುಂದೆ ಮನವಿಯನ್ನು ಉಲ್ಲೇಖಿಸಿದ್ದಾರೆ.