ಜೈಲಿನಲ್ಲಿರೋ ಮಗನನ್ನು ಭೇಟಿಯಾದ ಶಾರೂಖ್ ಖಾನ್ ಅರೆಸ್ಟ್ ಆದ ನಂತರ ಮೊದಲ ಭೇಟಿ, 20 ನಿಮಿಷ ಮಾತ್ರ

ಮುಂಬೈ(ಅ.21): ಶಾರೂಖ್ ಖಾನ್(Shah Rukh Khan) ಮುಂಬೈನ(Mumbai) ಆರ್ಥರ್ ರೋಡ್‌ಜೈಲಿನಲ್ಲಿ ಮಗ ಆರ್ಯನ್ ಖಾನ್‌ನನ್ನು ಭೇಟಿ ಮಾಡಿದ್ದಾರೆ. ಅ.20ರಂದು ಆರ್ಯನ್ ಖಾನ್‌ಗೆ ಜಾಮೀನು ನಿರಾಕರಿಸಲಾಗಿದೆ. ಅ.2ರಂದು ಐಷರಾಮಿ ಹಡಗಿನಲ್ಲಿ ನಡೆದ ಎನ್‌ಸಿಬಿ ರೈಡ್ ಡ್ರಗ್ಸ್ ಕೇಸ್‌ನಲ್ಲಿ(Drugs Case) ಅ.08ರಂದು ಜೈಲು ಸೇರಿದ ಆರ್ಯನ್ ಖಾನ್‌ಗೆ ಈವರೆಗೆ ಪ್ರತಿ ವಿಚಾರಣೆಯಲ್ಲೂ ಜಾಮೀನು ನಿರಾಕರಿಸಲಾಗಿದೆ.

View post on Instagram

ರೇವ್ ಪಾರ್ಟಿ ಮೇಲೆ ಎನ್‌ಸಿಬಿ(NCB) ರೈಡ್ ನಡೆದು ಆರ್ಯನ್ ಅರೆಸ್ಟ್ ಆದ ನಂತರ ಶಾರೂಖ್ ಖಾನ್ ಇದೇ ಮೊದಲ ಬಾರಿಗೆ ತಮ್ಮ 23 ವರ್ಷದ ಮಗನನ್ನು ಭೇಟಿಯಾಗಿದ್ದಾರೆ. 55 ವರ್ಷದ ನಟ ಶಾರೂಖ್ ಖಾನ್ ಸುಮಾರು 20 ನಿಮಿಷಗಳ ಕಾಲ ಜೈಲಿನಲ್ಲಿ ಮಗನ ಜೊತೆಗಿದ್ದರು.

Aryan Khan Drug Case: ಸಲ್ಮಾನ್ ಸಿನಿಮಾದ ಮೇಲೂ ಪರಿಣಾಮ !

ಕೊರೊನಾ ಸಂದರ್ಭ ಬಿಗಿಗೊಳಿಸಲಾಗಿದ್ದ ಜೈಲ್ ವಿಸಿಂಟಿಗ್ ನಿಯಮಗಳನ್ನು ಸಡಿಲಿಸಿ ಮಹಾರಾಷ್ಟ್ರ ನಿರ್ಧಾರ ಮಾಡಿದ ಬೆನ್ನಲ್ಲೇ ಈ ಭೇಟಿ ನಡೆದಿದೆ. ಆರ್ಯನ್ ಖಾನ್ ಗೆ ಎರಡು ಬಾರಿ ಜಾಮೀನು ನಿರಾಕರಿಸಲಾಗಿದೆ. ಈಗ ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದಾರೆ. ಅವರ ನ್ಯಾಯಾಂಗ ಬಂಧನ ನಿನ್ನೆಗೆ ಕೊನೆಗೊಳ್ಳುತ್ತದೆ ಎನ್ನಲಾಗಿತ್ತು.

View post on Instagram

ಆರ್ಯನ್ ಖಾನ್ ಹೆತ್ತವರಾದ ಶಾರೂಖ್ ಮತ್ತು ಗೌರಿ ಖಾನ್‌ ಅವರೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡಿದ್ದರು.ನಿನ್ನೆ ವಿಶೇಷ ನ್ಯಾಯಾಲಯವು ಆರ್ಯನ್ ಖಾನ್ ಜಾಮೀನು ನಿರಾಕರಿಸಿದ್ದು, ಆತನ ವಾಟ್ಸಾಪ್ ಚಾಟ್‌ಗಳು ಆತ ಅಕ್ರಮ ಮಾದಕವಸ್ತು ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ತೋರಿಸುತ್ತದೆ ಎಂದಿತ್ತು.

Aryan Khan Drug Case| ಶಾರುಖ್ ಪುತ್ರನಿಗೆ ಮತ್ತೆ ಜೈಲು, ಜಾಮೀನು ಅರ್ಜಿ ರದ್ದು!

ವಾಟ್ಸಾಪ್ ಚಾಟ್ಸ್ ಪ್ರೈಮ ಫೇಸಿ ಆರೋಪಿತ ಆರ್ಯನ್ ಖಾನ್ ಕಾನೂನುಬಾಹಿರ ಮಾದಕವಸ್ತು ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ ಎಂದು ಬಹಿರಂಗಪಡಿಸುತ್ತದೆ. ಆದ್ದರಿಂದ ಖಾನ್ ಇದೇ ರೀತಿಯ ಅಪರಾಧ ಮಾಡುವ ಸಾಧ್ಯತೆ ಇಲ್ಲ ಎಂದು ಹೇಳಲಾಗುವುದಿಲ್ಲ ಎಂದು ನ್ಯಾಯಾಧೀಶ ವಿ.ವಿ ಪಾಟೀಲ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ ಮತ್ತು ನಿರ್ದೇಶಕ ಫರಾ ಖಾನ್ ಅವರಂತಹ ಸ್ಟಾರ್‌ಗಳು ಶಾರೂಖ್ ಮತ್ತು ಅವರ ಪುತ್ರನ ಬೆಂಬಲಕ್ಕೆ ಬಂದಿದ್ದರೆ, ಚಿತ್ರೋದ್ಯಮವು ಪ್ರಕರಣದ ಪ್ರತಿಕ್ರಿಯೆಯಲ್ಲಿ ಹೆಚ್ಚಾಗಿ ಸೈಲೆಂಟ್ ಆಗಿದೆ.

ಬುಧವಾರ ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ನಿರಾಕರಿಸಲ್ಪಟ್ಟ ತನ್ನ ಮಗ ಆರ್ಯನ್ ನನ್ನು ಭೇಟಿಯಾದ ನಂತರ ಪತ್ರಕರ್ತರು ನಟ ಶಾರೂಖ್ ಖಾನ್ ಅವರನ್ನು ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಹೊರಹೋಗುತ್ತಿದ್ದಾಗ ಮುತ್ತಿಕೊಂಡಿದ್ದಾರೆ. ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಶಾರುಖ್ ನಿರಾಕರಿಸಿದ್ದಾರೆ.