Asianet Suvarna News Asianet Suvarna News

ನ್ಯಾಷನಲ್ ಅವಾರ್ಡ್ ಸಿಕ್ಕಿದ ಮೇಲೆ ಮದ್ವೆಯಾಗೋದಂತೆ ನಯನತಾರಾ..!

ಸೌತ್‌ನ ಲೇಡಿ ಸೂಪರ್‌ಸ್ಟಾರ್ ನಯನತಾರಾ ವಿವಾಹದ ಬಗ್ಗೆ ಈಗಾಗಲೇ ಬಹಳಷ್ಟು ನಿರೀಕ್ಷೆ ಇದ್ದು, ಸದ್ಯಕ್ಕಂತೂ ಮದುವೆಯಾಗೋ ಯೋಚನೆಯಲ್ಲಿಲ್ಲ ಈ ಕ್ಯೂಟ್ ಕಪಲ್.

Nayanthara plans to get married to Vignesh Shivan only after bagging a National Award dpl
Author
Bangalore, First Published Oct 4, 2020, 10:38 AM IST
  • Facebook
  • Twitter
  • Whatsapp

ಆರಂ ಸಿನಿಮಾದಲ್ಲಿ ನಟಿಯ ಪಾತ್ರಕ್ಕೆ ನ್ಯಾಷನಲ್ ಅವಾರ್ಡ್ ಬರುವ ನಿರೀಕ್ಷೆಯೂ ಸಿನಿಪ್ರಿಯರಿಗಿದೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಕಾಲಿವುಡ್‌ನ ಕ್ಯೂಟ್ ಕಪಲ್. ಇಬ್ಬರೂ ಲವ್ ರಿಲೇಷನ್‌ಶಿಪ್‌ನಲ್ಲಿ ಹ್ಯಾಪಿ ಆಗಿದ್ದಾರೆ.

ಮದುವೆ ಯಾವಾಗ ಅಂದ್ರೆ ಮಾತ್ರ ಸರಿಯಾದ ಆನ್ಸರ್ ಇಲ್ಲ.  ಇತ್ತೀಚೆಗಷ್ಟೇ ಗೋವಾದಲ್ಲಿ ವಕೇಷನ್ ಎಂಜಾಯ್ ಮಾಡಿದ ಕಪಲ್ಸ್ ಈ ವರ್ಷ ವಿವಾಹಿತರಾಗಲಿದ್ದಾರೆ ಎಂಬ ಮಾತಿತ್ತು. ಆದರೆ ಕೊರೋನಾದಿಂದಾಗಿ ವಿವಾಹ ಮುಂದೂಡಿದ್ದಾರೆ.

ಬಾಯ್‌ಫ್ರೆಂಡ್ ಬರ್ತ್‌ಡೇ ಸದಾ ನೆನಪಿನಲ್ಲಿ ಉಳಿಯೋಕೆ ನಯನತಾರಾ ಏನ್ ಮಾಡಿದ್ರು ನೋಡಿ?

ರಾಹು ದೇವಾಲಯದಲ್ಲಿ ಪೂಜೆ ಮಾಡಿ ವಿವಾಹವಾಗ್ತಾರೆ ಎಂಬ ಮಾತು ಕೇಳಿ ಬಂದಿದೆ. ಆದರೆ ಈಗ ನಯನತಾರಾ ಅವಾರ್ಡ್ ಬಂದ ಮೇಲಷ್ಟೇ ಮದ್ವೆಯಾಗ್ತಾರೆ ಎಂಬ ಮಾತು ಕೇಳಿ ಬಂದಿದೆ.

ಡೇಟಿಂಗ್ ಮಾಡಿ ಬೋರ್ ಆದಾಗ ಮದ್ವೆಯಾಗ್ತಾರಂತೆ ನಯನ್‌ತಾರಾ-ವಿಘ್ನೇಶ್

ಆರಂ ಸಿನಿಮಾ ಪಾತ್ರಕ್ಕೆ ಬೆಸ್ಟ್ ಆಕ್ಟ್ರೆಸ್ ನ್ಯಾಷನಲ್ ಅವಾರ್ಡ್ ಬರುತ್ತೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ನಟಿ ಜಿಲ್ಲಾಧಿಕಾರಿ ಪಾತ್ರ ಮಾಡಿದ್ದರು. ಈ ಸಿನಿಮಾಗಾಗಿ ಬಹಳಷ್ಟು ಜನ ನ್ಯಾಷನಲ್ ಅವಾರ್ಡ್ ನಿರೀಕ್ಷಿಸಿದ್ದರು. ನಯನತಾರಾ ಆರ್‌ಜೆ ಬಾಲಾಜಿ ಅವರ ಮೂಕುತಿ ಅಮ್ಮನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ರಜನೀಕಾಂತ್ ಲೀಡ್ ರೋಲ್ ಮಾಡ್ತಿದ್ದಾರೆ.

Follow Us:
Download App:
  • android
  • ios