ನಯನತಾರಾಗೆ ಟೈಮ್ ಸೆನ್ಸ್ ಇಲ್ವಾ? ಮತ್ತೊಂದು ವಿವಾದಕ್ಕೆ ಗುರಿಯಾದ ಬಹು ಬೇಡಿಕೆ ನಟಿ!

ನಟಿ ನಯನತಾರಾ ಅವರು ತಮ್ಮ ಫೆಮಿ 9 ಬಿಸಿನೆಸ್ ಸಂಸ್ಥೆಯ ಕಾರ್ಯಕ್ರಮಕ್ಕೆ 6 ಗಂಟೆ ತಡವಾಗಿ ಬಂದಿದ್ದಕ್ಕೆ ಸಭಿಕರು ಹಾಗೂ ಸಾರ್ವಜನಿಕರಿಂದ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಕ್ಷಮೆ ಕೇಳದೆ ಫೋಟೋಗಳನ್ನು ಶೇರ್ ಮಾಡಿದ್ದಕ್ಕೂ ಅಸಮಾಧಾನ ವ್ಯಕ್ತವಾಗಿದೆ.

Nayanthara Faces Backlash for 6 Hour Delay at Femi9 Event sat

ಕ್ಷಿಣ ಭಾರತದ ಸ್ಟಾರ್ ನಟಿ ನಯನತಾರ. 20 ವರ್ಷಗಳ ಚಿತ್ರರಂಗದಲ್ಲಿ ಅನೇಕ ಪಾತ್ರಗಳನ್ನು ಮಾಡಿರೋ ನಯನತಾರ ಈಗ ತಮ್ಮ ಮಕ್ಕಳು ಮತ್ತು ಗಂಡನ ಜೊತೆ ಸಂತೋಷದ ಜೀವನ ನಡೆಸ್ತಿದ್ದಾರೆ. ಆದರೆ, ಆಗಾಗ್ಗೆ ವಿವಾದಗಳಲ್ಲೂ ಸಿಲುಕಿಕೊಳ್ಳುತ್ತಾರೆ. ಈಗ ಮದುವೆ ಡಾಕ್ಯುಮೆಂಟರಿ ವಿಚಾರದಲ್ಲಿ ನಟ ಧನುಷ್ ಜೊತೆ ಸಮಸ್ಯೆ ಮತ್ತು ಕೇಸ್ ನಡೀತಿದೆ. ಈ ನಡುವೆ ನಯನತಾರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗ್ತಿದೆ. 

ಫೆಮಿ 9 ಅನ್ನೋ ನಯನತಾರ ಅವರ ಬಿಸಿನೆಸ್ ಸಂಸ್ಥೆ ಕಾರ್ಯಕ್ರಮಕ್ಕೆ ಬೆಳಿಗ್ಗೆ 9 ಗಂಟೆಗೆ ಬರ್ತೀನಿ ಅಂತ ಹೇಳಿದ್ದರು. ಆದರೆ, ಈ ಕಾರ್ಯಕ್ರಮಕ್ಕೆ ಸಭಿಕರೆಲ್ಲಾ ಬಂದು ಕುಳಿತು ನಯನತಾರಾ ಅವರಿಗಾಗಿ ಕಾಯುತ್ತಿದ್ದಾರೆ. ಆದರೆಮ ಬೆಳಗ್ಗೆ 9 ಗಂಟೆಗೆ ಬರಬೇಕಾದಾ ನಯನತಾರಾ 6 ಗಂಟೆಗಳ ಕಾಲ ತಡವಾಗಿ ಗಂಡ ವಿಘ್ನೇಶ್ ಶಿವನ್ ಅವರೊಂದಿಗೆ ಬಂದಿದ್ದಾರೆ. ಅಂದರೆ ಬೆಳಗ್ಗೆ 9 ಗಂಟೆಗೆ ಬದಲಾಗಿ ಮಧ್ಯಾಹ್ನ 2 ಗಂಟೆಗೆ ಬಂದಿದ್ದಾರೆ. ಇನ್ನು ಮಧ್ಯಾಹ್ನ 1 ಗಂಟೆಗೆ ಮುಗಿಯಬೇಕಿದ್ದ ಕಾರ್ಯಕ್ರಮ ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ. ಇದರಿಂದ ಕಾರ್ಯಕ್ರಮಕ್ಕೆ ಬಂದಿದ್ದ ಪತ್ರಕರ್ತರು, ಕ್ಯಾಮೆರಾ, ವಿಡಿಯೋ ಗ್ರಾಫರ್ ಹಾಗೂ ಸಾರ್ವಜನಿಕರಿಗೆ ಭಾರೀ ತೊಂದರೆ ಉಂಟಾಯಿತು ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. 

ಫೆಮಿ 9ರ ಫೋಟೋಗಳನ್ನ ನಯನತಾರ ಶೇರ್ ಮಾಡಿದ್ದರು. ಈ ಪೋಸ್ಟ್‌ಗೂ ಭಾರೀ ಟೀಕೆ ಬಂದಿದೆ. 'ಈ ಪ್ರೀತಿ ಸಾಕು. ನಮ್ಮ ಫೆಮಿ 9 ಕುಟುಂಬ ದೊಡ್ಡದಾಗ್ತಿದೆ, ಇದಕ್ಕಿಂತ ಸಂತೋಷ ಇನ್ನೇನು ಬೇಕು. ಈ ಜೀವನಕ್ಕೆ ಧನ್ಯವಾದಗಳು..' ಅಂತ ಫೋಟೋಗಳ ಜೊತೆ ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ಭಾರೀ ಟೀಕೆಗಳು ಬಂದಿವೆ. ನೀವು ಖಾಸಗಿ ಕಾರ್ಯಕ್ರಮಕ್ಕೆ ಬರೋಬ್ಬರಿ 6 ಗಂಟೆಗಳ ಕಾಲ ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೇಳದೇ ಇದ್ದದ್ದು, ಫೋಟೋ ತೆಗೆಸಿಕೊಳ್ಳೋಕೆ ಬಂದಿದ್ದ ಪುಟ್ಟ ಮಕ್ಕಳಿಗೂ ಅವಕಾಶ ಕೊಡದೇ ಇದ್ದದ್ದಕ್ಕೆ ನಿಮಗೆ ನಾಚಿಕೆ ಆಗಲ್ವಾ ಎಂದು ಕಾಮೆಂಟ್ ಮಾಡಿ ಟೀಕಿಸಿದ್ದಾರೆ.

ಇದನ್ನೂ ಓದಿ: ಕೇವಲ 50 ಸೆಕೆಂಡ್ ಜಾಹೀರಾತಿಗೆ ₹5 ಕೋಟಿ ಪಡೆದ ಕನ್ನಡ ಸಿನಿಮಾ ನಟಿ!

ನಿಮ್ಮ ಕಾರ್ಯಕ್ರಮಕ್ಕೆ ಬೆಳಗ್ಗೆ ನಿಗದಿಯಾಗಿದ್ದಂತೆ ಸರಿಯಾದ ಸಮಯಕ್ಕೆ ಬಂದ ನಾವು 'ಮೂರ್ಖರಾ' ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ನಿಮ್ಮ ಫೋಟೋಗ್ರಾಫರ್ ಮಾತ್ರ ಸರಿಯಾಗಿ ಕೆಲಸ ಮಾಡಿದ್ದಾರೆ ಅಂತ ಅಣಕಿಸಿದ್ದಾರೆ. ಈ ಬಗ್ಗೆ ನಯನತಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.  ಇದೀಗ ನಟಿ ನಯನತಾರಾ ಅವರು 'ರಕ್ಕಾಯಿ' ಎನ್ನುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸೆಂಥಿಲ್ ನಲ್ಲಸಾಮಿ ನಿರ್ದೇಶನದ ಈ ಚಿತ್ರದಲ್ಲಿ ನಯನತಾರ ಪ್ರಬಲ ಮಹಿಳಾ ಪಾತ್ರ ಮಾಡುತ್ತಿದ್ದಾರೆ. ಅನ್ನಪೂರ್ಣ ಅನ್ನೋದು ನಯನತಾರ ಅಭಿನಯದ ಇತ್ತೀಚಿನ ಚಿತ್ರವಾಗಿದೆ.

ಇದನ್ನೂ ಓದಿ: ಧನುಷ್‌ ಬಳಿಕ ಚಂದ್ರಮುಖಿ ನಿರ್ಮಾಪಕರಿಂದ ನಯನತಾರಾಗೆ ನೋಟಿಸ್‌, 5 ಕೋಟಿಗೆ ಬೇಡಿಕೆ!

Latest Videos
Follow Us:
Download App:
  • android
  • ios