MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಕೇವಲ 50 ಸೆಕೆಂಡ್ ಜಾಹೀರಾತಿಗೆ ₹5 ಕೋಟಿ ಪಡೆದ ಕನ್ನಡ ಸಿನಿಮಾ ನಟಿ!

ಕೇವಲ 50 ಸೆಕೆಂಡ್ ಜಾಹೀರಾತಿಗೆ ₹5 ಕೋಟಿ ಪಡೆದ ಕನ್ನಡ ಸಿನಿಮಾ ನಟಿ!

ಬಾಲಿವುಡ್ ನಟಿಯರೇ ಹೆಚ್ಚು ಸಂಭಾವನೆ ಪಡೆಯುತ್ತಾರೆ ಅಂತ ಎಲ್ಲರೂ ತಿಳ್ಕೊಂಡಿದ್ರೆ, ಒಬ್ಬ ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಬೇಡಿಕೆಯ ನಟಿ ಕೇವಲ 50 ಸೆಕೆಂಡ್‌ಗಳಿಗೆ 5 ಕೋಟಿ ರೂ. ಪಡೆದಿದ್ದಾರಂತೆ. ಯಾರು ಅಂತ ನೋಡೋಣ ಬನ್ನಿ..

2 Min read
Author : Sathish Kumar KH
| Updated : Jan 12 2025, 04:12 PM IST
Share this Photo Gallery
  • FB
  • TW
  • Linkdin
  • Whatsapp
17

ಕೇರಳ ಮೂಲದ ಈ ನಟಿ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ರಜನಿಕಾಂತ್, ಚಿರಂಜೀವಿ, ರಿಯಲ್ ಸ್ಟಾರ್ ಉಪೇಂದ್ರ, ಬಾಲಿವುಡ್‌ನ ಶಾರುಖ್ ಖಾನ್ ಮತ್ತು ಮೋಹನ್‌ಲಾಲ್‌ರಂತಹ ಭಾರತೀಯ ಸಿನಿಮಾ ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿದ್ದಾರೆ. ತಮಿಳುನಾಡಿನಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

27

ಇವರ ಬಾಲಿವುಡ್ ಚೊಚ್ಚಲ ಚಿತ್ರವು 1000 ಕೋಟಿ ಸಂಗ್ರಹವನ್ನು ಗಳಿಸಿತು. ಇದು ಬೇರೆ ಯಾವ ನಟಿಯೂ ಸಾಧಿಸದ ಸಾಧನೆ. 2018ರಲ್ಲಿ, ಫೋರ್ಬ್ಸ್ ಇಂಡಿಯಾದ ಟಾಪ್ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ದಕ್ಷಿಣ ಭಾರತದ ನಟಿ.

37

ಕಳೆದ 20 ವರ್ಷಗಳಲ್ಲಿ 75ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದ ಇವರಿಗೆ ಆರಂಭದಲ್ಲಿ ನಟನೆಯ ಆಸೆ ಇರಲಿಲ್ಲ. ನಿರೂಪಕಿಯಾಗಿ ಆರಂಭವಾದ ಇವರ ಸಿನಿಮಾ ಪ್ರವೇಶ ಆಕಸ್ಮಿಕವಾಗಿ ಸಿನಿಮಾದೆಡೆಗೆ ವಾಲಿಕೊಂಡಿತು.

47

ಚಿತ್ರರಂಗದಲ್ಲಿ ವೈಯಕ್ತಿಕ ಜೀವನದ ವಿಚಾರಕ್ಕೆ ಎರಡು ದೊಡ್ಡ ಆಘಾತಗಳನ್ನು ಎದುರಿಸಿದ ಇವರು ಚಿತ್ರರಂಗವನ್ನು ತೊರೆಯುವ ಬಗ್ಗೆ ಯೋಚಿಸಿದ್ದರು. ಆದರೆ ಮತ್ತೆ ಪ್ರಮುಖ ನಟಿಯಾಗಿ ಮರಳಿದರು. ಒಬ್ಬ ನಿರ್ದೇಶಕರನ್ನು ವಿವಾಹವಾದ ಈ ನಟಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡಿದ್ದಾರೆ.

57

ಈ ನಟಿಗೆ ಖ್ಯಾತಿಯಷ್ಟೇ ವಿವಾದಗಳೂ ಇವರನ್ನು ಸುತ್ತುವರೆದಿವೆ. ಇವರು ಬೇರೆ ಯಾರೂ ಅಲ್ಲ, ಲೇಡಿ ಸೂಪರ್‌ಸ್ಟಾರ್ ನಯನತಾರಾ. 40೦ರ ವಯಸ್ಸಿನಲ್ಲೂ, ಅವರು ತಮಿಳು ಚಿತ್ರರಂಗದ ಟಾಪ್ ನಟಿಯಾಗಿದ್ದು, ಪ್ರತಿ ಚಿತ್ರಕ್ಕೆ 12-15 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

67

ನಟನೆಯನ್ನು ಹೊರತುಪಡಿಸಿ, ಅವರು ರೌಡಿ ಪಿಕ್ಚರ್ಸ್ ಸಂಸ್ಥೆ ಎಂಬುದನ್ನು ನಡೆಸುತ್ತಿದ್ದಾರೆ. ಇದು ಹಲವಾರು ಬ್ಲಾಕ್‌ಬಸ್ಟರ್‌ಗಳನ್ನು ನಿರ್ಮಿಸಿದೆ. ಇವರು ಕೇವಲ 50 ಸೆಕೆಂಡುಗಳ ಜಾಹೀರಾತಿಗೆ ಬರೋಬ್ಬರಿ 5 ಕೋಟಿ ರೂ. ಪಡೆದು ಇತ್ತೀಚೆಗೆ ಎಲ್ಲರನ್ನೂ ಅಚ್ಚರಿಗೊಳಿಸಿದರು. ಇದು ಭಾರತದಲ್ಲಿ ಇದುವರೆಗಿನ ಅತಿಹೆಚ್ಚಿನ ಸಂಭಾವನೆ ಆಗಿದೆ.

77

ಅಷ್ಟಕ್ಕೂ ಕೇವಲ 50 ಸೆಕೆಂಡಿನ ವಿಡಿಯೋಗೆ 5 ಕೋಟಿ ರೂ. ಸಂಭಾವನೆ ಕೊಟ್ಟ ಜಾಹೀರಾತು ಯಾವುದೆಂದರೆ ಅದು ಟಾಟಾ ಸ್ಕೈ ಜಾಹೀರಾತು ವಿಡಿಯೋ. ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗಿನ ತಮ್ಮ ಮದುವೆಯನ್ನು ದಾಖಲಿಸುವ ಮೂಲಕ 25 ಕೋಟಿ ರೂ. ಗಳಿಸಿದರು. ಅವರು ಖಾಸಗಿ ಜೆಟ್ ಅನ್ನು ಸಹ ಹೊಂದಿದ್ದಾರೆ ಎಂದು ವರದಿಯಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ನಯನತಾರ

Latest Videos
Recommended Stories
Recommended image1
ವಿಜಯ್​ ಎದುರೇ ರಶ್ಮಿಕಾ ಮಂದಣ್ಣಗೆ, ರಕ್ಷಿತ್​ ಶೆಟ್ಟಿ ಬಗ್ಗೆ ಕನ್ನಡದಲ್ಲಿ ಪ್ರಶ್ನೆ! ನಟಿ ಏನ್​ ಹೇಳಿದ್ರು? ವಿಡಿಯೋ ವೈರಲ್​
Recommended image2
ರಶ್ಮಿಕಾ-ವಿಜಯ್ ಮದುವೆಯಾಗುತ್ತಿರುವ ಹೊಟೇಲ್ ರೂಮಿನ ಒಂದು ದಿನದ ಬಾಡಿಗೆ ಇಷ್ಟೊಂದಾ?
Recommended image3
ಅಯ್ಯಪ್ಪ ಮಾಲೆ ಧರಿಸಿ ಎಣ್ಣೆ ಪಾರ್ಟಿಗೆ ಬಂದ ರಾಮ್‌ ಚರಣ್‌ ತೇಜ, ನೆಟ್ಟಿಗರ ಟ್ರೋಲ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved