ಧನುಷ್‌ ಬಳಿಕ ಚಂದ್ರಮುಖಿ ನಿರ್ಮಾಪಕರಿಂದ ನಯನತಾರಾಗೆ ನೋಟಿಸ್‌, 5 ಕೋಟಿಗೆ ಬೇಡಿಕೆ!

ನಯನತಾರಾ ಅವರ ನೆಟ್‌ಫ್ಲಿಕ್ಸ್‌ ಡಾಕ್ಯುಮೆಂಟರಿ 'ನಯನತಾರಾ: ಬಿಯಾಂಡ್‌ ದ ಫೇರಿಟೇಲ್‌' ಚಂದ್ರಮುಖಿ ಸಿನಿಮಾದ ಕ್ಲಿಪ್‌ಗಳನ್ನು ಅನಧಿಕೃತವಾಗಿ ಬಳಸಿಕೊಂಡಿದ್ದಕ್ಕಾಗಿ ಕಾನೂನು ಸಮಸ್ಯೆ ಎದುರಿಸುತ್ತಿದೆ. ಚಂದ್ರಮುಖಿ ಸಿನಿಮಾ ನಿರ್ಮಾಪಕರು ಕ್ಲಿಪ್‌ಗಳನ್ನು ತೆಗೆದುಹಾಕುವಂತೆ ಲೀಗಲ್‌ ನೋಟಿಸ್‌ ನೀಡಿದ್ದಾರೆ.

Nayanthara Gets More Legal Trouble For documentary Chandramukhi makers sue for Rs 5 crore san

ಲೇಡಿ ಸೂಪರ್‌ಸ್ಟಾರ್‌ ನಯನತಾರಾ ಪಾಲಿಗೆ ಕಾನೂನು ಸಮರ ತಿಳಿಯಾಗಗುವ ಲಕ್ಷಣ ಕಾಣುತ್ತಿಲ್ಲ. ತಮ್ಮ ನೆಟ್‌ಫ್ಲಿಕ್ಸ್‌ ಡಾಕ್ಯುಮೆಂಟರಿ ನಯನತಾರಾ: ಬಿಯಾಂಡ್‌ ದ ಫೇರಿಟೇಲ್‌ ವಿಚಾರದಲ್ಲಿ ದಿನಕ್ಕೊಂದು ಕಾನೂನು ಸಮರದಲ್ಲಿ ಅವರು ಭಾಗಿಯಾಗುತ್ತಿದ್ದಾರೆ. ಈ ಡಾಕ್ಯುಮೆಂಟರಿಯಲ್ಲಿ ಬಳಸಿಕೊಂಡ ವಿಡಿಯೋಗಾಗಿ ತಮಿಳು ನಟ, ನಿರ್ಮಾಪಕ ಧನುಷ್‌ರಿಂದ ಲೀಗಲ್‌ ನೋಟಿಸ್‌ ಎದುರಿಸಿ ಆ ಬಳಿಕ ಅದು ದೊಡ್ಡ ವಿವಾದವಾಗಿರುವ ವಿಚಾರ ತಣ್ಣಗಾಗಿರುವ ಹೊತ್ತಿನಲ್ಲಿಯೇ ನಯನತಾರಾಗೆ ಇದೇ ವಿಚಾರವಾಗಿ ಚಂದ್ರಮುಖಿ ಸಿನಿಮಾದ ನಿರ್ಮಾಪಕರಿಂದ ನೋಟಿಸ್‌ ಜಾರಿಯಾಗಿದೆ. ಚಂದ್ರಮುಖಿ ಸಿನಿಮಾದ ಕ್ಲಿಪ್‌ಗಳನ್ನು ಅನಧಿಕೃತವಾಗಿ ಬಳಕೆ ಮಾಡಿಕೊಂಡಿದ್ದ ಕಾರಣಕ್ಕಾಗಿ ನಯನತಾರಾ ವಿರುದ್ಧ ನಿರ್ಮಾಪಕರು ಕೋರ್ಟ್‌ನಲ್ಲಿ ಕೇಸ್‌ ಹಾಕಿದ್ದಾರೆ.

ಚಂದ್ರಮುಖಿ ಸಿನಿಮಾಗಳ ಕ್ಲಿಪ್‌ಗಳನ್ನು ಬಳಸಿಕೊಂಡಿರುವುದು ಕಾಪಿರೈಟ್‌ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಲೀಗಲ್‌ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇವುಗಳನ್ನು ತಕ್ಷಣವೇ ಡಾಕ್ಯುಮೆಂಟರಿಯಿಂದ ತೆಗೆದುಹಾಕಬೇಕು ಎಂದು ನಾವು ಬಯಸಿದ್ದೇವೆ ಎಂದು ಸಿನಿಮಾ ನಿರ್ಮಾಪಕರು ತಿಳಿಸಿದ್ದಾರೆ.  ನಯನತಾರಾ ಅವರ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನವನ್ನು ಒಳಗೊಳ್ಳುವ ಸಾಕ್ಷ್ಯಚಿತ್ರವು ಕಾನೂನು ಕ್ರಮದ ನಂತರ ವಿವಾದವನ್ನು ಹುಟ್ಟುಹಾಕಿದೆ.

ಯೂಟ್ಯೂಬ್‌ನಲ್ಲಿ ಸಿನಿಮಾಗಳ ಕುರಿತಾದ ಅಪ್‌ಡೇಟ್‌ ನೀಡುವ ಚಿತ್ರಾ ಲಕ್ಷ್ಮಣ್‌ ಈ ಮಾಹಿತಿ ನೀಡಿದ್ದಾರೆ. ಚಿತ್ರಾ ಲಕ್ಷ್ಮಣ್‌ ಹೇಳಿರುವ ಮಾಹಿತಿಯ ಪ್ರಕಾರ, ಚಂದ್ರಮುಖಿ ಸಿನಿಮಾದ ನಿರ್ಮಾಪಕರು, ಆ ಸಿನಿಮಾದ ಕೆಲವೊಂದು ಪ್ರಮುಖ ದೃಶ್ಯಗಳು ಡಾಕ್ಯುಮೆಂಟರಿಯಲ್ಲಿ ಬಳಸಿಕೊಂಡಿದ್ದರಿಂದ ಬೇಸರವಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಡಾಕ್ಯುಮೆಂಟರಿ ಈಗ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ.

ಚಂದ್ರಮುಖಿ ಸಿನಿಮಾದ ನಿರ್ಮಾಪಕರು ನಯನತಾರಾ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗೆ ಚಿತ್ರದ ದೃಶ್ಯವನ್ನು ಬಳಸಲು ಸರಿಯಾದ ಅನುಮತಿಯನ್ನು ಪಡೆಯದ ಕಾರಣಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಹೇಳಿಕೆಗಳನ್ನು ನಿರಾಕರಿಸಿರುವ ಚಿತ್ರತಂಡ, ನಯನತಾರಾ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಹೇಳಿದೆ.  ದೃಶ್ಯಗಳನ್ನು ಬಳಸಲು ನಟಿಗೆ ಈಗಾಗಲೇ ಅನುಮತಿ ನೀಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಟಿ ನಯನತಾರ ತನ್ನ ಅವಳಿ ಮಕ್ಕಳಿಗೆ ಪ್ರತೀದಿನ ಹೇಳೋ ಸೀಕ್ರೆಟ್!

ಇದಕ್ಕೂ ಮುನ್ನ ನಿರ್ಮಾಪಕ ಹಾಗೂ ನಟ ಧನುಷ್‌ ತಮ್ಮ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗಿದ್ದ ನಾನುಮ್‌ ರೌಡಿ ಧಾನ್‌ ಸಿನಿಮಾದ ಕೆಲವು ಕ್ಲಿಪ್‌ಗಳನ್ನು ಬಳಸಿಕೊಂಡ ಕಾರಣಕ್ಕೆ ನಯನತಾರಾ ಹಾಗೂ ಆಕೆಯ ಪತಿ ವಿಘ್ನೇಶ್‌ ಶಿವನ್‌ ವಿರುದ್ಧ ಕೇಸ್‌ ದಾಖಲು ಮಾಡಿದ್ದರು. ಇದು ದೊಡ್ಡ ವಿವಾದವಾಗಿ ಮಾರ್ಪಟ್ಟಿತ್ತು.

ಕ್ರಿಸ್‌ಮಸ್ ಹಬ್ಬದ ಖುಷಿಯಲ್ಲಿ ನಟಿ ನಯನತಾರಾ ದಂಪತಿ: ಕ್ಯೂಟ್​ ಮಕ್ಕಳು ಪ್ಯಾರಿಸ್‌ನಲ್ಲಿ ಏನ್ಮಾಡಿದ್ರು?

Latest Videos
Follow Us:
Download App:
  • android
  • ios