Asianet Suvarna News Asianet Suvarna News

ಅವಳಿ ಕಂದಮ್ಮಗಳ ಜೊತೆ ರಸ್ತೆಗೆ ಬಂದ ನಯನತಾರಾ-ವಿಘ್ನೇಶ್​ ದಂಪತಿ... ಆದರೆ...?

ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿರುವ ನಯನತಾರಾ ಹಾಗೂ ವಿಘ್ನೇಶ್​ ಶಿವನ್​ ದಂಪತಿ ಅವಳಿ ಮಕ್ಕಳನ್ನು ತಂದರೂ ಮುಖ ನೋಡುವ ಭಾಗ್ಯ ಸಿಗಲಿಲ್ಲ, ಕಾರಣವೇನು?
 

Nayantara and Vignesh Sivan fans did not get the chance to see children
Author
First Published Mar 8, 2023, 6:10 PM IST | Last Updated Mar 8, 2023, 6:10 PM IST

ಕಾಲಿವುಡ್‌ನ ಕ್ಯೂಟ್ ಕಪಲ್ ನಯನತಾರಾ (Nayanatara) ಮತ್ತು ವಿಘ್ನೇಶ್ ಶಿವನ್ (Vignesh Shivan) ಕ್ಯೂಟ್​ ದಂಪತಿ ಸೃಷ್ಟಿಸಿದ್ದ ವಿವಾದ ಅಷ್ಟಿಷ್ಟಲ್ಲ. ಈ ವರ್ಷ ಜೂನ್ 9 ರಂದು ನಯನತಾರಾ ಮತ್ತು ವಿಘ್ನೇಶ್ ಶಿವನ್ ಚೆನ್ನೈನಲ್ಲಿ ವಿವಾಹವಾದರು. ನಂತರ  ಮದುವೆಯಾದ ನಾಲ್ಕೇ ತಿಂಗಳಿಗೆ ತಾವು ಅಪ್ಪ-ಅಮ್ಮ ಆಗುತ್ತಿರುವುದಾಗಿ ಘೋಷಿಸಿ ಭಾರಿ ಅಚ್ಚರಿ ಮೂಡಿಸಿದ್ದರು. ಮದುವೆಯ ವೇಳೆ ಗರ್ಭಿಣಿಯಿಲ್ಲದ ನಯನತಾರಾ ಅಷ್ಟು ಬೇಗ ಹೇಗೆ ಅಮ್ಮನಾದರು ಎಂಬ ಬಗ್ಗೆ ಕುತೂಲಹ ಮನೆ ಮಾಡಿತ್ತು. ನಂತರ ಅವರು ಸರೋಗಸಿ (ಬಾಡಿಗೆ ತಾಯ್ತನ-Surrogate Mother) ಮೂಲಕ ಮಗುವನ್ನು ಪಡೆಯುತ್ತಿದ್ದಾರೆ ಎನ್ನುವುದು ತಿಳಿಯಿತು. ಇದಾಗುತ್ತಲೇ  ನಯನತಾರಾ ದಂಪತಿಗೆ ವಿವಾದವೊಂದು ಸುತ್ತಿಕೊಂಡಿತು. ನಂತರ ಈ ದಂಪತಿಯ ವಿರುದ್ಧ ದೂರು ಕೂಡ ದಾಖಲಾಯಿತು. ಇದಕ್ಕೆ ಕಾರಣ ಭಾರತದಲ್ಲಿ ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದಂತೆ ಕೆಲವೊಂದು ಕಾನೂನುಗಳು ಇದ್ದು ಅವುಗಳನ್ನು ಇವರು ಪಾಲನೆ ಮಾಡಿಲ್ಲ ಎನ್ನುವುದು. ಆದರೆ ಎಲ್ಲವನ್ನೂ ಕಾನೂನು ಪ್ರಕಾರವೇ ಮಾಡಿರುವುದಾಗಿ ದಂಪತಿ ದಾಖಲೆ ಸಲ್ಲಿಸಿದ್ದರು.

ನಯನತಾರಾ ದಂಪತಿಗಳು ಆರು ವರ್ಷಗಳ ಹಿಂದೆಯೇ ರಿಜಿಸ್ಟ್ರಾರ್‌ ಮದುವೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಕಾನೂನಾತ್ಮಕ ದಾಖಲೆಗಳನ್ನು ಸಲ್ಲಿಸಿದರು.  2021ರಲ್ಲೇ ಬಾಡಿಗೆ ತಾಯ್ತನದ(Surrogate Mother) ಒಪ್ಪಂದಕ್ಕೆ ದಂಪತಿ ಸಹಿ ಹಾಕಿರುವುದಕ್ಕೆ ಸಂಬಂಧಿಸಿದ ದಾಖಲೆ (Documners) ಕೂಡ ಸಲ್ಲಿಸಿದರು. ಆದ್ದರಿಂದ ಅಲ್ಲಿಗೆ ವಿವಾದಕ್ಕೆ ತೆರೆ ಬಿತ್ತು. ಆದರೆ ನಯನತಾರಾ ಮತ್ತೊಂದು ವಿವಾದಲ್ಲಿ ಸಿಲುಕಿದರು. ಅದೇನೆಂದರೆ, ಮದುವೆಯ ಪ್ರಯುಕ್ತ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಇಂದು 18 ಸಾವಿರ ಮಕ್ಕಳಿಗೆ ಅನ್ನದಾನ ಮಾಡಿದ್ದರು. ಮದುವೆ ಬಳಿಕ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡಿದ್ದ ಈ ಜೋಡಿ ಇನ್ನೊಂದು ವಿವಾದದಲ್ಲಿ ಸಿಕ್ಕಿಹಾಕಿಕೊಂಡಿತ್ತು. ದೇವಸ್ಥಾನದ ಆವರಣದಲ್ಲಿ ನಯನತಾರಾ ಅವರು ಚಪ್ಪಲಿ ಹಾಕಿಕೊಂಡಿದ್ದಲ್ಲದೆ, ಫೋಟೋಶೂಟ್ (Photoshoot) ಕೂಡ ಮಾಡಿಸಿಕೊಂಡಿದ್ದರು.

ಗರ್ಭಪಾತ ಮಾಡಿಸಿಕೊಳ್ಳಲು 75 ಲಕ್ಷ ಡಿಮ್ಯಾಂಡ್ ಮಾಡಿದ್ರಾ ರಮ್ಯಾ ಕೃಷ್ಣ?

ಇವೆಲ್ಲ ವಿವಾದಗಳ ನಡುವೆಯೇ,  ಅವಳಿ ಮಕ್ಕಳನ್ನು ಪಡೆದಿರುವ ಬಗ್ಗೆ ದಂಪತಿ ಸಾಮಾಜಿಕ ಜಾಲತಾಣದಲ್ಲಿ  ಫೋಟೋಗಳನ್ನು   ಶೇರ್​ ಮಾಡಿಕೊಂಡರು.  ಅಂದಹಾಗೆ ಇವರು ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಬಗ್ಗೆ ಮೊದಲೇ ಗಾಳಿ ಸುದ್ದಿ ಹರಡಿತ್ತು. ಏಕೆಂದರೆ ಹಲವು ವರ್ಷಗಳ ಕಾಲ ಪರಸ್ಪರ ಇವರು ಡೇಟಿಂಗ್​ನಲ್ಲಿ ಇರುವ ವಿಷಯ ತಿಳಿದಿತ್ತು.  ನಟಿಯಾಗಿರೋ ನಯನತಾರಾ ಹಾಗೂ ನಿರ್ದೇಶಕರಾಗಿರೋ ವಿಘ್ನೇಶ್​ ಶಿವನ್​ ಅವರು ಆರು ವರ್ಷಗಳ ಮೊದಲೇ ಮದುವೆಯಾಗಿರುವುದಾಗಿ ಅಚ್ಚರಿ ಮೂಡಿಸಿದ್ದರೂ, ಅವರ ಸಂಬಂಧದ ಕುರಿತು ಭಾರಿ ಸುದ್ದಿಯಾಗಿತ್ತು.

ಆದರೆ ಎಲ್ಲಾ ಗುಸುಗುಸು ಸುದ್ದಿಗಳಿಗೂ ಫುಲ್​ಸ್ಟಾಪ್​ (Fullstop) ಹಾಕಿದ ದಂಪತಿ, ಅವಳಿ ಮಕ್ಕಳು ಹುಟ್ಟಿದ ತಕ್ಷಣ ಫೋಟೋ ಶೇರ್​ ಮಾಡಿಕೊಂಡರು. ಆದರೆ  ಅವರು ಹಂಚಿಕೊಂಡಿರುವ ಫೋಟೋದಲ್ಲಿ ಮಕ್ಕಳ ಮುಖ ತೋರಿಸಿರಲಿಲ್ಲ. ತಮ್ಮ ಅವಳಿ ಮಕ್ಕಳ ಪಾದಕ್ಕೆ ಪತಿ-ಪತ್ನಿ ಮುತ್ತಿಡುತ್ತಿರುವ ಕ್ಷಣ ಈ ಫೋಟೋದಲ್ಲಿ ಸೆರೆ ಆಗಿದೆ. ಈ ಕ್ಯೂಟ್​ ಫೋಟೋ ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಅವಳಿ ಮಕ್ಕಳ ಮುಖ ತೋರಿಸಿ ಎಂದು ಅನೇಕರು ಮನವಿ ಮಾಡುತ್ತಿದ್ದರೂ, ಇದುವರೆಗೆ ಮಕ್ಕಳ ಮುಖವನ್ನು ದಂಪತಿ ರಿವೀಲ್​ ಮಾಡಲಿಲ್ಲ. ಆದರೆ ಇವರಿಬ್ಬರೂ ಅವಳಿ ಗಂಡು ಮಕ್ಕಳಾಗಿದ್ದು, ಮಕ್ಕಳಿಗೆ  ಉಯಿರ್​ ಮತ್ತು ಉಳಗಂ ಎಂದು ಹೆಸರು ಇಡಲಾಗಿದೆ. ‘ನಯನ್​ ಮತ್ತು ನಾನು ಅಪ್ಪ-ಅಮ್ಮ ಆಗಿದ್ದೇವೆ. ನಮಗೆ ಅವಳಿ ಗಂಡು ಮಕ್ಕಳು ಜನಿಸಿದ್ದಾರೆ. ನಮ್ಮ ಪ್ರಾರ್ಥನೆ, ಹಿರಿಯರ ಆಶೀರ್ವಾದವು ಈ ಮಕ್ಕಳ ರೂಪದಲ್ಲಿ ಸಿಕ್ಕಿದೆ. ನಮ್ಮ ಉಯಿರ್​ ಮತ್ತು ಉಳಗಂ ಮೇಲೆ ನಿಮ್ಮ ಆಶೀರ್ವಾದ ಇರಲಿ’ ಎಂದು ವಿಘ್ನೇಶ್​ ಶಿವನ್​ ಪೋಸ್ಟ್​ ಮಾಡಿ ಮಕ್ಕಳ ಮುಖವನ್ನು ರಿವೀಲ್​ ಮಾಡಿರಲಿಲ್ಲ.
  
ಇವರ ಮಕ್ಕಳ ಮುಖವನ್ನು ನೋಡಲು ಅಭಿಮಾನಿಗಳು ಕಾತರರಾಗಿರುವ ನಡುವೆಯೇ ದಂಪತಿ ಮಕ್ಕಳನ್ನು ಕರೆದುಕೊಂಡು ರಸ್ತೆಗೆ ಬಂದಿದ್ದಾರೆ. ಈಗಲಾದರೂ ಮಕ್ಕಳ ಮುಖವನ್ನು ನೋಡಬಹುದೇ ಎಂದು ಕಾತರರಾಗಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ಇದಕ್ಕೆ  ಕಾರಣ, ಮುಖ ಮುಚ್ಚಿಕೊಂಡು ಅವಳಿ ಮಕ್ಕಳನ್ನು ಎತ್ತುಕೊಂಡು ಈ ದಂಪತಿ ಬಂದಿದ್ದಾರೆ. ಅಲ್ಲಿದ್ದವರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ದಂಪತಿ ಸ್ಮೈಲ್​ (Smile) ಮಾಡಿದ್ದಾರೆ ಬಿಟ್ಟರೆ ಮಕ್ಕಳ ಮುಖವನ್ನು ತೋರಿಸಲೇ ಇಲ್ಲ. ನಯನತಾರಾ ಒಂದು ಮಗುವನ್ನು ಹಾಗೂ ವಿಘ್ನೇಶ್ ಇನ್ನೊಂದು ಮಗುವನ್ನು ಹಿಡಿದುಕೊಂಡು ಮಕ್ಕಳ ಮುಖ ಯಾವುದೇ ಕಾರಣಕ್ಕೂ ಕಾಣಬಾರದು ಎಂಬ ಪಣತೊಟ್ಟವರಂತೆ ಬಿಗಿಯಾಗಿ ಅಪ್ಪಿಕೊಂಡು ಹೋಗಿದ್ದಾರೆ. 

ನಯನತಾರಾ ಮನೆಗೆ ಶಾರುಖ್ ದಿಢೀರ್ ಭೇಟಿ ; ಸೌತ್ ಸ್ಟಾರ್‌ಗೆ ಕಿಸ್ ಮಾಡಿ ಹೊರಟ ಕಿಂಗ್ ಖಾನ್

 

Latest Videos
Follow Us:
Download App:
  • android
  • ios