ಗರ್ಭಪಾತ ಮಾಡಿಸಿಕೊಳ್ಳಲು 75 ಲಕ್ಷ ಡಿಮ್ಯಾಂಡ್ ಮಾಡಿದ್ರಾ ರಮ್ಯಾ ಕೃಷ್ಣ?
ಕೆಲ ದಶಕಗಳವರೆಗೆ ಚಿತ್ರರಂಗವನ್ನು ಆಳಿರುವ ಬಹುಭಾಷಾ ತಾರೆ ರಮ್ಯಾ ಕೃಷ್ಣಾ ಅವರ ಖಾಸಗಿ ಬದುಕಿನ ಭಯಾನಕ ರಹಸ್ಯವೊಂದು ಬಯಲಿಗೆ ಬಂದಿದೆ, ಏನದು?
1990ರಿಂದ ಹಿಡಿದು 2-3 ದಶಕ ಸಿನಿರಂಗವನ್ನು ಆಳಿದ ನಟಿ ರಮ್ಯಾ ಕೃಷ್ಣನ್ (Ramya Krishan). ಈಗ ವಯಸ್ಸು 52 ಆದರೂ ಆ ತೇಜಸ್ಸಿಗೆ ಏನೂ ಕೊರತೆಯಿಲ್ಲ. ಬ್ಲ್ಯಾಕ್ ಆ್ಯಂಡ್ ಚಿತ್ರದಿಂದ ಹಿಡಿದು ಇತ್ತೀಚಿನ ಚಿತ್ರಗಳವರೆಗೂ ನಾಯಕಿಯಾಗಿ ನಟಿಸುತ್ತಲೇ ವರ್ಚಸ್ಸನ್ನು ಉಳಿಸಿಕೊಂಡಿರುವ ಬೆಡಗಿ ರಮ್ಯಾ. ಚೆನ್ನೈ ಮೂಲದ ರಮ್ಯಾ, ತೆಲುಗು , ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ನಾಲ್ಕು ಫಿಲ್ಮ್ಫೇರ್ (Film Fare) ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಮೂರು ನ೦ದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ರಮ್ಯಾ ಕೃಷ್ಣ ಎಂಬ ಹೆಸರಿನಿಂದ ಇವರು ಫೇಮಸ್. ಮೋಡಿ ಮಾಡುವ ಅಭಿನಯ, ನೃತ್ಯದ ಮೂಲಕ ಎಲ್ಲರ ಹೃದಯ ಗೆದ್ದಿರುವ ನಟಿ ಭರತನಾಟ್ಯ,ಕೂಚಿಪೂಡಿಯಂಥ ಶಾಸ್ತ್ರೀಯ ನೃತ್ಯಗಳಲ್ಲಿಯೂ ಎತ್ತಿದ ಕೈ. ‘ಬಾಹುಬಲಿ’ ಚಿತ್ರದಲ್ಲಿ ಶಿವಗಾಮಿ (ದೇವಸೇನಾ) ಪಾತ್ರದಲ್ಲಿ ನಟಿಸಿದ್ದ ‘ಬಾಹುಬಲಿ’ ತಾಯಿ ರಮ್ಯಾ ಕೃಷ್ಣನ್ ಈ ಚಿತ್ರದಲ್ಲಿ ರಮ್ಯಾ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಲ್ಲದೆ, ಚಿತ್ರದಲ್ಲಿನ ಅವರ ಸಂಭಾಷಣೆಗಳಿಗೆ ಅಭಿಮಾನಿಗಳು ಶಿಳ್ಳೆಯ ಮೇಲೆ ಶಿಳ್ಳೆ ಹೊಡೆದಿದ್ದರು.
ಇಷ್ಟೆಲ್ಲಾ ಪ್ರತಿಭಾನ್ವಿತೆಯಾಗಿರುವ ರಮ್ಯಾ ಕೃಷ್ಣ ಅವರ ಖಾಸಗಿ ಜೀವನದ ಗುಟ್ಟೊಂದು ಈಗ ಬಹಿರಂಗಗೊಂಡಿದೆ. ರಮ್ಯಾ ರವರು ತೆಲುಗು ಚಲನಚಿತ್ರದ ನಿರ್ದೇಶಕ ಕೃಷ್ಣ ವ೦ಶಿಯವರನ್ನು (Krishna Vansi) 2003ರ ಜೂನ್ ತಿಂಗಳಿನಲ್ಲಿ ಮದುವೆಯಾದರು. ಆದರೆ ಇವರು ಈ ಮದುವೆಗೂ ಮುನ್ನ ಖ್ಯಾತ ನಿರ್ದೇಶಕ ಕೆ ಎಸ್ ರವಿಕುಮಾರ್ (KS Ravikumar) ಅವರನ್ನು ಪ್ರೀತಿಸುತ್ತಿದ್ದರು ಎಂಬ ಸುದ್ದಿ ಭಾರಿ ಸದ್ದು ಮಾಡಿತ್ತು. ರಮ್ಯಾ ಹಲವಾರು ಚಿತ್ರಗಳಲ್ಲಿ ಚಲನಚಿತ್ರ ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರೊಂದಿಗೆ ಬ್ಯಾಕ್ ಟು ಬ್ಯಾಕ್ ಕೆಲಸ ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ರವಿಕುಮಾರ್ ಅವರೊಂದಿಗೆ ಈ ಚಿತ್ರಗಳಲ್ಲಿ ಕೆಲಸ ಮಾಡುವಾಗ ಇಬ್ಬರೂ ಪರಸ್ಪರ ಹತ್ತಿರವಾಗಿದ್ದರು. ಪರಸ್ಪರ ಡೇಟಿಂಗ್ ಕೂಡ ಆರಂಭಿಸಿದರು. ವಿಶೇಷವೆಂದರೆ ರವಿಕುಮಾರ್ ಅವರಿಗೆ ಆಗಲೇ ಮದುವೆಯಾಗಿತ್ತು. ರಮ್ಯಾ ಜೊತೆ ರವಿಕುಮಾರ್ ಅವರ ಡೇಟಿಂಗ್ ರವಿಕುಮಾರ್ ಪತ್ನಿಗೂ ತಿಳಿದಿತ್ತು ಎನ್ನಲಾಗಿದೆ. ಅವರು ನಟಿ ರಮ್ಯಕೃಷ್ಣ ಅವರಿಗೆ ಬೆದರಿಕೆ ಕೂಡ ಹಾಕಿದ್ದರು ಎಂಬುದಾಗಿ ತಿಳಿದು ಬಂದಿದೆ.
Sandalwood Cinderella ರಾಧಿಕಾ ಪಂಡಿತ್ ಟೀಚರ್ ಬದ್ಲು ನಟಿಯಾಗಿದ್ದು ಹೇಗೆ?
ಈ ನಡುವೆಯೇ ರಮ್ಯಾ ಗರ್ಭಿಣಿಯಾಗಿದ್ದರು (Pregnant). ಈ ವಿಷಯ ಬಹಿರಂಗಗೊಳ್ಳುತ್ತಲೇ ರವಿಕುಮಾರ್ ಅವರ ಮನೆಯ ಒಳಗೆ ಕೂಡ ಪರಿಸ್ಥಿತಿ ಹದಗೆಡಲು ಪ್ರಾರಂಭವಾಗಿತ್ತು. ಇದು ಬಹಳ ಸುದ್ದಿಯಾಗುತ್ತಲೇ ರಮ್ಯಾ ಅವರಿಗೆ ಗರ್ಭಪಾತ ಮಾಡಿಸಿಕೊಳ್ಳಲು ರವಿಕುಮಾರ್ ತಾಕೀತು ಮಾಡಿದ್ದರು. ಇದಕ್ಕಾಗಿ ರಮ್ಯಾ 75 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎನ್ನುವ ಸುದ್ದಿ ಇದೆ. ಆದರೆ ಈ ಸುದ್ದಿಯನ್ನು ರಮ್ಯಾ ನಿರಾಕರಿಸಿದ್ದರು ಕೂಡ. ನಂತರ ಅವರ ಮದುವೆ ತೆಲುಗು ಚಲನಚಿತ್ರದ ನಿರ್ದೇಶಕ ಕೃಷ್ಣ ವ೦ಶಿಯವರ ಜೊತೆ ನಡೆದಿದ್ದು, ಒಬ್ಬ ಪುತ್ರನಿದ್ದಾನೆ.
ಇನ್ನು ರಮ್ಯಾ ವೃತ್ತಿ ಜೀವನದ ಕುರಿತು ಹೇಳುವುದಾದರೆ, ಇವರು 1948ರಲ್ಲಿ ವೈ.ಜಿ ಮಹೇ೦ದ್ರ ರವರ ಜೊತೆ 'ವೆಲ್ಲಿ ಮನಸ್ಸು' ಎ೦ಬ ತಮಿಳು ಚಲನಚಿತ್ರದಲ್ಲಿ 14ನೇ ವಯಸ್ಸಿನಲ್ಲಿ ನಟಿಸಿದ್ದಾರೆ. ಅವರ ಮೊದಲ ತೆಲುಗು ಚಿತ್ರ 1986ರಲ್ಲಿ ಬಿಡುಗಡೆಗೊಂಡ 'ಭಲೆ ಮಿತ್ರುಲು'. ಕಾಶಿನಾಧುನಿ ವಿಶ್ವನಾಥ್ ರವರ ಸೂತ್ರಧಾರುಲು ಚಿತ್ರದಿಂದ ಇವರು ಜನಪ್ರಿಯರಾದರು. 1990ರಲ್ಲಿ ಸೌ೦ದರ್ಯ, ಮೀನಾ, ರೋಜಾ, ನಗ್ಮಾ ಹಾಗೂ ಮು೦ತಾದ ನಟಿಯರೊ೦ದಿಗೆ ತೆಲುಗು ಉದ್ಯಮದಲ್ಲಿ ಪ್ರಮುಖ ನಟಿಯಾಗಿ ಹೊರಹೊಮ್ಮಿದ್ದರು. ಇವರು ಎನ್.ಟಿ ರಾಮ ರಾವ್,ಕೃಷ್ಣ, ಚಿರ೦ಜೀವಿ, ಬಾಲಕೃಷ್ಣ, ವೆ೦ಕಟೇಶ್, ಮೋಹನ್ ಬಾಬು ,ಜಗಪತಿ ಬಾಬು, ರಾಜಶೇಖರ್, ರಜನಿಕಾಂತ್ ಹಾಗೂ ಕನ್ನಡದಲ್ಲಿ ರವಿಚಂದ್ರನ್, ಪುನೀತ್ ರಾಜ್‍ಕುಮಾರ್,ಉಪೇಂದ್ರ (Upendra) ಹಾಗೂ ಮು೦ತಾದ ನಟರ ಜೊತೆ ಚಲನಚಿತ್ರದಲ್ಲಿ ನಟಿಸಿದ್ದಾರೆ. ಉಪೇಂದ್ರ ಅವರ ಜೊತೆ ಮೈಚಳಿ ಬಿಟ್ಟು ನಟಿಸಿದ್ದ ಬಾ ಬಾರೋ ರಸಿಕ ಹಾಡನ್ನು ನೆನಪಿಸಿಕೊಂಡರೆ ಇವರ ಅಭಿಮಾನಿಗಳ ಮೈ ಇನ್ನೂ ರೋಮಾಂಚನಗೊಳ್ಳುತ್ತದೆ.
Rakhi Sawant: ಬಣ್ಣವೆಲ್ಲಾ ಹೊರಟುಹೋಯ್ತು ಎಂದು ಗೋಳೋ ಎಂದ 'ಡ್ರಾಮಾ ಕ್ವೀನ್'!