'ಬಿಗಿಲ್‌'ನ ರಾಣಿ  ನಯನತಾರಾ ಟಾಲಿವುಡ್‌- ಕಾಲಿವುಡ್‌ ಚಿತ್ರರಂಗ ಲೇಡಿ ಸೂಪರ್‌ ಸ್ಟಾರ್ ಎಂದು ಗುರುತಿಸಿಕೊಂಡಿದ್ದಾರೆ. ಯಾವ ಪಾತ್ರಕೊಟ್ಟರೂ ಸೈ ಎನ್ನುವ  ನಯನತಾರಾ ವೈಯಕ್ತಿಕ ಜೀವನ ಮಾತ್ರ  ಏನಾಗಿದೆ ಎಂದು ಯಾರಿಗೂ ತಿಳಿಯದಂತಾಗಿದೆ.

'ವಲ್ಲವನ್‌' ಚಿತ್ರದ ನಂತರ ಸಿಂಬು ಅಲಿಯಾಸ್‌ ಸಿಲಂಬರಸನ್‌ ಮತ್ತು ನಯನತಾರಾ ನಡುವೆ ಕುಚ್ ಕುಚ್‌ ಶುರುವಾಯ್ತು. ಹೆಚ್ಚಾಗಿ ಮಾಧ್ಯಮಗಳ ಎದುರು ಕಾಣಿಸಿಕೊಳ್ಳದಿದ್ದರೂ ಅವರ ನಡುವೆ ಏನೋ ನಡೆಯುತ್ತಿದೆ ಎಂದು ಚಿತ್ರರಂಗದಲ್ಲಿ ಹಾಟ್‌ ಟಾಕ್‌  ವಿಚಾರವಾಗಿತ್ತು. ಆದರೆ ಆ ಒಂದು ದಿನ ರಿವೀಲ್‌ ಆಗಿದ್ದ ಫೋಟೋ ಇವರ ಲೈಫ್‌ಗೆ  ಮುಳುವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಕೊನೆಗೂ ಲವ್‌ ಬ್ರೇಕಪ್‌ ಬಗ್ಗೆ ಸತ್ಯ ಬಿಚಿಟ್ಟ ನಯನತಾರ;'No trust No love'!

ಹೌದು! ನಯನತಾರಾ ಹಾಗೂ ಸಿಂಬು ಕಿಸ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಲು ಶುರುವಾಯ್ತು. ದಿನದಿಂದ ದಿನಕ್ಕೆ ಅವರ ಸಂಬಂಧ ಈ ಫೋಟೋದಿಂದ ಹಳಸತೊಡಗಿತು. ನನ್ನ ಖಾಸಗಿ ಬದುಕಿನ ಫೋಟೋಗಳನ್ನು ರಿವೀಲ್‌ ಮಾಡಿದ್ದು , ವೃತ್ತಿ ಜೀವನಕ್ಕೆ ಕಪ್ಪು ಚುಕ್ಕೆ  ತಂದಿದ್ದು ಸಿಂಬು ಎಂದು ಹೇಳಿ ನಯನತಾರಾ ಬ್ರೇಕಪ್‌ ಮಾಡಿಕೊಂಡರು.

ನಯನತಾರಾ ನಂತರ ಸ್ಪಷ್ಟನೇ ನೀಡದ ಸಿಂಬು, ಹೊಸ ಕ್ಯಾಮೆರಾದಲ್ಲಿ ಕ್ಲಾರಿಟಿ ಚೆಕ್‌ ಮಾಡುವ ಸಲುವಾಗಿಯಷ್ಟೆ ಫೋಟೋ ತೆಗೆಯಲಾಗಿತ್ತು ಆದರೆ ಅದು ಬೇಕೆಂದು ಲೀಕ್‌ ಮಾಡಿರುವುದಲ್ಲ ಎಂದು ಹೇಳಿದರು.  ಬ್ರೇಕಪ್‌ ಆದ ಬಳಿಕ ಸಿನಿಮಾದಲ್ಲಿ ತೊಡಗಿಸಿಕೊಂಡ ನಯನತಾರಾ ಪ್ರಭುದೇವ್‌ರನ್ನು ಪ್ರೀತಿಸಲು ಆರಂಭಿಸಿದರು. ಆದರೆ ಇದೆಲ್ಲದರ ನಡುವೆ ನಯನತಾರಾನೇ ನನ್ನ ಪ್ರಭುದೇವ್‌ ನಡುವೆ ಒಂದು  ಸಂಬಂಧ ಹಾಳು ಮಾಡಿದ್ದು  ಎಂದು ಮಾಜಿ ಪತ್ನಿ ಕೂಡ ಆರೋಪ ಮಾಡಿದರು.

ನಯನತಾರಾ ಎಂದು ಹೆಸರಿಟ್ಟವರು ಯಾರು? ಶುರುವಾಯ್ತು ನಿರ್ದೇಶಕರ ವಾರ್!

ಇದಕ್ಕೆಲ್ಲಾ ಫುಲ್‌ಸ್ಟಾಪ್‌ ಇಟ್ಟು ನಯನತಾರಾ ಈಗ  ನಿರ್ದೇಶಕ ವಿಘ್ನೇಶ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ತೀರ್ಮಾನ ಮಾಡಿದ್ದಾರೆ.  ಅವರ ಮದುವೆ ಯಾವಾಗ, ಅದು ಪ್ರೈವೇಟ್‌ ಆಗಿರುತ್ತಾ ಎಂದು ಕಾದು ನೋಡಬೇಕಿದೆ.